Friday, March 29, 2013

ಸಾಯಿನಗರ ಶಿರಡಿ ರೈಲು ನಿಲ್ದಾಣದಿಂದ ಹತ್ತು ರೈಲುಗಳ ಸಂಚಾರ - ಕೃಪೆ: ಸಾಯಿಅಮೃತಧಾರಾ.ಕಾಂ

ರೈಲ್ವೇ ಇಲಾಖೆಯು ಸಾಯಿನಗರ ಶಿರಡಿ ರೈಲು ನಿಲ್ದಾಣದಿಂದ ಹತ್ತು ರೈಲುಗಳ ಸಂಚಾರವನ್ನು ಪ್ರಾರಂಭಿಸಿರುವುದರಿಂದ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನ ಸಾಯಿಭಕ್ತರಿಗೆ ಬಹಳ ಅನುಕೂಲವಾಗಿದೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಲಯದಿಂದ ಇದೇ ತಿಂಗಳ 29ನೇ ಮಾರ್ಚ್ 2013 ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಸಾಯಿನಗರ ರೈಲು ನಿಲ್ದಾಣವು ಮನಮಾಡ-ಅಹಮದ್ ನಗರ ಹೆದ್ದಾರಿಯಲ್ಲಿದ್ದು ಶಿರಡಿ ಸಾಯಿಬಾಬಾ ಸಂಸ್ಥಾನದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿದೆ. ಪ್ರಸ್ತುತ ಸಾಯಿನಗರ-ಮುಂಬೈ ಫಾಸ್ಟ್ ಪ್ಯಾಸೆಂಜರ್ (ರೈಲು ಸಂಖ್ಯೆ: 51034) ಪ್ರತಿದಿನ 16.40 ಕ್ಕೆ ಹೊರಡುತ್ತದೆ. ಸಾಯಿನಗರ-ದಾದರ್ (ರೈಲು ಸಂಖ್ಯೆ:12132) ಪ್ರತಿ ಮಂಗಳವಾರ, ಗುರುವಾರ ಹಾಗೂ ಭಾನುವಾರಗಳಂದು 22.25 ಕ್ಕೆ ಹೊರಡುತ್ತದೆ. ಸಾಯಿನಗರ-ಪಂಢರಾಪುರ ಎಕ್ಶ್ಪ್ರೆಸ್ (ರೈಲು ಸಂಖ್ಯೆ:11001) ಪ್ರತಿ ಮಂಗಳವಾರ, ಗುರುವಾರ ಹಾಗೂ ಭಾನುವಾರಗಳಂದು ಬೆಳಿಗ್ಗೆ 05.00 ಕ್ಕೆ ಹೊರಡುತ್ತದೆ.

ಸಾಯಿನಗರ-ಸಿಕಂದರಾಬಾದ್ ಎಕ್ಶ್ಪ್ರೆಸ್  (ರೈಲು ಸಂಖ್ಯೆ: 17001) ಪ್ರತಿ ಸೋಮವಾರ ಹಾಗೂ ಶನಿವಾರಗಳಂದು 17.10 ಕ್ಕೆ ಹೊರಡುತ್ತದೆ. ಸಾಯಿನಗರ-ಕಾಕಿನಾಡ ಎಕ್ಶ್ಪ್ರೆಸ್  (ರೈಲು ಸಂಖ್ಯೆ: 17205) ಪ್ರತಿ ಮಂಗಳವಾರ, ಗುರುವಾರ ಹಾಗೂ ಭಾನುವಾರಗಳಂದು 17.10 ಕ್ಕೆ ಹೊರಡುತ್ತದೆ. ಸಾಯಿನಗರ-ವಿಜಯವಾಡ ಎಕ್ಶ್ಪ್ರೆಸ್  (ರೈಲು ಸಂಖ್ಯೆ: 17207)ಪ್ರತಿ ಬುಧವಾರ 17.10 ಕ್ಕೆ ಹೊರಡುತ್ತದೆ. ಸಾಯಿನಗರ-ಹೌರಾ ಎಕ್ಶ್ಪ್ರೆಸ್  (ರೈಲು ಸಂಖ್ಯೆ: 22893) ಪ್ರತಿ ಶನಿವಾರ 13.55 ಕ್ಕೆ ಹೊರಡುತ್ತದೆ. ಸಾಯಿನಗರ-ಚನ್ನೈ ಎಕ್ಶ್ಪ್ರೆಸ್  (ರೈಲು ಸಂಖ್ಯೆ: 22602) ಪ್ರತಿ ಶುಕ್ರವಾರ ಬೆಳಿಗ್ಗೆ 8.25 ಕ್ಕೆ ಹೊರಡುತ್ತದೆ. ಸಾಯಿನಗರ-ವಿಶಾಖಪಟ್ಟಣ ಎಕ್ಶ್ಪ್ರೆಸ್  (ರೈಲು ಸಂಖ್ಯೆ: 22802) ಪ್ರತಿ ಶುಕ್ರವಾರ 19.10 ಕ್ಕೆ ಹೊರಡುತ್ತದೆ. ಸಾಯಿನಗರ-ಮೈಸೂರು ಎಕ್ಶ್ಪ್ರೆಸ್  (ರೈಲು ಸಂಖ್ಯೆ: 16218) ಪ್ರತಿ ಮಂಗಳವಾರ 23.55 ಕ್ಕೆ ಹೊರಡುತ್ತದೆ.

ಸಾಯಿನಗರ ಶಿರಡಿ ರೈಲು ನಿಲ್ದಾಣದಿಂದ ಹತ್ತು ರೈಲುಗಳ ಸಂಚಾರವನ್ನು ಪ್ರಾರಂಭಿಸಿರುವುದಕ್ಕಾಗಿ ಹಲವಾರು ಸಾಯಿಭಕ್ತರು ತಮ್ಮ ಕೃತಜ್ಞತೆಯನ್ನು ರೈಲ್ವೇ ಇಲಾಖೆಗೆ ಸಲ್ಲಿಸಿದ್ದಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment