Monday, March 4, 2013

ಚಿಕ್ಕಮಗಳೂರು ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶಿರಡಿ ಶ್ರೀ ಸಾಯಿಬಾಬಾ ಸೇವಾ ಟ್ರಸ್ಟ್ (ನೋಂದಣಿ), ಪಂಚಮುಖಿ ಗಣಪತಿ ದೇವಾಲಯದ ಹಿಂಭಾಗ, ನಂ.20, MIG-I, 3ನೇ ಹಂತ, ಹೌಸಿಂಗ್ ಬೋರ್ಡ್ ಕಾಲೋನಿ, ಚಿಕ್ಕಮಗಳೂರು-577 102, ಕರ್ನಾಟಕ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಹಾಗೂ ನಗರದ ಹೌಸಿಂಗ ಬೋರ್ಡ್ ಕಾಲೋನಿಯಲ್ಲಿರುವ ಪಂಚಮುಖಿ ಗಣಪತಿ ದೇವಾಲಯದ ಹಿಂಭಾಗದಲ್ಲಿ ಇರುತ್ತದೆ. ದೇವಾಲಯವನ್ನು 1925 ಚದರ ಅಡಿ ವಿಸ್ತಾರವಾದ ಸ್ವಂತ ಸ್ಥಳದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಟ್ರಸ್ಟ್ ಅನ್ನು ನೋಂದಣಿ ಸಂಖ್ಯೆ: CKM-4-00006 ಯ ಅಡಿಯಲ್ಲಿ 20ನೇ ಡಿಸೆಂಬರ್ 2012 ರಂದು ನೋಂದಣಿ ಮಾಡಲಾಗಿರುತ್ತದೆ.

ದೇವಾಲಯದ ಭೂಮಿಪೂಜೆಯನ್ನು 5ನೇ ಏಪ್ರಿಲ್ 2011 ರಂದು ನೆರವೇರಿಸಲಾಯಿತು.

ದೇವಾಲಯದ ಉದ್ಘಾಟನೆಯನ್ನು 26ನೇ ಸೆಪ್ಟೆಂಬರ್ 2012 ರಂದು ಕರ್ನಾಟಕದ ಸುಪ್ರಸಿದ್ಧ ದೇವಾಲಯವಾದ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿಗಳಾದ ಡಾ.ಭೀಮೇಶ್ವರ ಜೋಯಿಸ್ ರವರು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ಜಿ.ಎನ್.ಆನಂದ್ ರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಮೊದಲನೇ ಮಹಡಿಯಲ್ಲಿರುವ ಗರ್ಭಗುಡಿಯಲ್ಲಿ  ಬೆಂಗಳೂರಿನ ಸಮೃದ್ಧಿ ಗ್ರೂಪ್ ನ ಕಾರ್ಯಕಾರಿ ನಿರ್ದೇಶಕರಾದ ಶ್ರೀ.ರವೀಂದ್ರ ಮಸೂಡಿಯವರು ದಾನವಾಗಿ ನೀಡಿರುವ 5.8  ಅಡಿ ಎತ್ತರದ ಸುಂದರ ಇಟಾಲಿಯನ್ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಪಂಚಲೋಹದ ಸಾಯಿಬಾಬಾರವರ ವಿಗ್ರಹ ಮತ್ತು ಅಮೃತಶಿಲೆಯ ಪಾದುಕೆಗಳನ್ನು ಕೂಡ ದೇವಾಲಯದಲ್ಲಿ ಸ್ಥಾಪಿಸಲಾಗಿದೆ.








ದೇವಾಲಯ ಉದ್ಘಾಟನೆಯ ವೀಡಿಯೋಗಳು:




ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:


ದೇವಾಲಯದ ಸಮಯ:

ಬೆಳಿಗ್ಗೆ : 6:30 ರಿಂದ 1:00.
ಸಂಜೆ : 4:30 ರಿಂದ 9:00.

ಆರತಿಯ ಸಮಯ:

ಕಾಕಡಾ ಆರತಿ : 06:55 ಗಂಟೆ
ಮಧ್ಯಾನ್ಹ ಆರತಿ:12:15 ಗಂಟೆ
ಧೂಪಾರತಿ     : 06:30 ಗಂಟೆ
ಶೇಜಾರತಿ      : 08:30 ಗಂಟೆ


ಪ್ರತಿದಿನ ಬೆಳಿಗ್ಗೆ 7:30 ಕ್ಕೆ ಸಾಯಿಬಾಬಾರವರ ಪಂಚಲೋಹ ಹಾಗೂ ಅಮೃತಶಿಲೆಯ ವಿಗ್ರಹಗಳಿಗೆ ಕ್ಷೀರಾಭಿಷೇಕವನ್ನು ಮಾಡಲಾಗುತ್ತದೆ.

ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಬೆಳಿಗ್ಗೆ 7:30 ಕ್ಕೆ ಮಾಡಲಾಗುತ್ತದೆ. ಸೇವಾಶುಲ್ಕ 501/- ರೂಪಾಯಿಗಳು.

ಪ್ರತಿ ಗುರುವಾರದಂದು ಪ್ರಸಾದ ವಿನಿಯೋಗ ಸೇವೆಯನ್ನು ಮಾಡಲಾಗುತ್ತದೆ. ಸೇವಾಶುಲ್ಕ 1001/- ರೂಪಾಯಿಗಳು.

ಪ್ರತಿ ಹುಣ್ಣಿಮೆಯ ದಿನಗಳಂದು ಸಂಜೆ 6:00 ಗಂಟೆಯಿಂದ 8:00 ಗಂಟೆಯವರೆಗೆ ಸತ್ಯನಾರಾಯಣ ಪೂಜೆಯನ್ನು  ಆಚರಿಸಲಾಗುತ್ತದೆ.ಸಾಮೊಹಿಕ ಪೂಜೆಗೆ 25/-,  ದಂಪತಿಗಳಿಗೆ ಪ್ರತ್ಯೇಕವಾಗಿ 1000/- ಹಾಗೂ ಸಾಮೊಹಿಕ ಪೂಜೆಗೆ ವಾರ್ಷಿಕ 300/- ರೂಪಾಯಿಗಳ ಸೇವಾಶುಲ್ಕವನ್ನು ನಿಗದಿಪಡಿಸಲಾಗಿದೆ.  


ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷದ 26ನೇ ಸೆಪ್ಟೆಂಬರ್ ದೇವಾಲಯದ ವಾರ್ಷಿಕೋತ್ಸವ.
ಶ್ರೀರಾಮನವಮಿ.
ಗುರುಪೂರ್ಣಿಮೆ.
ವಿಜಯದಶಮಿ.
ದೀಪಾವಳಿ.
ಶಿವರಾತ್ರಿ.

ಸಾಮಾಜಿಕ ಕಾರ್ಯಚಟುವಟಿಕೆಗಳು:

ಪ್ರತಿ ಗುರುವಾರ ಹಾಗೂ ವಿಶೇಷ ಉತ್ಸವದ ದಿನಗಳಂದು ದೇವಾಲಯಕ್ಕೆ ಬರುವ ಎಲ್ಲಾ ಸಾಯಿಭಕ್ತರಿಗೂ ಮಹಾಪ್ರಸಾದದ ವಿತರಣೆಯನ್ನು ಮಾಡಲಾಗುತ್ತಿದೆ.

ಹಲವಾರು ಬಡಜನರ ಮದುವೆಯ ಸಂದರ್ಭಗಳಲ್ಲಿ ಉಚಿತವಾಗಿ ಚಿನ್ನದ ಮಾಂಗಲ್ಯವನ್ನು ದಾನವಾಗಿ ನೀಡಲಾಗುತ್ತಿದೆ.

ಹಲವಾರು ಬಡಜನರ ವೈದ್ಯಕೀಯ ಹಾಗೂ ಶೈಕ್ಷಣಿಕ ವೆಚ್ಚವನ್ನು ದೇವಾಲಯದ ವತಿಯಿಂದ ಭರಿಸಲಾಗುತ್ತಿದೆ.

ಕರ್ನಾಟಕ ಹೌಸಿಂಗ್ ಬೋರ್ಡ್ ನಲ್ಲಿ ಕೆಟ್ಟಿರುವ ರಸ್ತೆಯ ವಿದ್ಯುತ್ ದೀಪಗಳನ್ನು ಬದಲಿಸುವ ಅತ್ಯುತ್ತಮ ಕೆಲಸವನ್ನು ಟ್ರಸ್ಟ್ ನ ವತಿಯಿಂದ ಮಾಡಲಾಗುತ್ತಿದೆ.

ದೇಣಿಗೆಗೆ ಮನವಿ:

ದೇವಾಲಯದ ದಿನಿನಿತ್ಯದ ಆಗುಹೋಗುಗಳಿಗಾಗಿ, ಸಾಮಾಜಿಕ ಕಾರ್ಯಚಟುವಟಿಕೆಗಳಿಗಾಗಿ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ   ದೇಣಿಗೆಯನ್ನು ಸ್ವೀಕರಿಸಲಾಗುತ್ತದೆ. ದೇಣಿಗೆಯನ್ನು ನೀಡಲು ಬಯಸುವ ಸಾಯಿಭಕ್ತರು "ಶಿರಡಿ ಶ್ರೀ ಸಾಯಿಬಾಬಾ ಸೇವಾ ಟ್ರಸ್ಟ್ (ನೋಂದಣಿ)", ಭಾರತೀಯ ಸ್ಟೇಟ್ ಬ್ಯಾಂಕ್, ರತ್ನಗಿರಿ ರಸ್ತೆ, ಚಿಕ್ಕಮಗಳೂರು-577 101, ಉಳಿತಾಯ ಖಾತೆ ಸಂಖ್ಯೆ: 32419598724 ಇವರಿಗೆ ಸಂದಾಯವಾಗುವಂತೆ ಹಣವನ್ನು ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರವಾಗಿ ಕಳುಹಿಸಬಹುದಾಗಿದೆ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಪಂಚಮುಖಿ ಗಣಪತಿ ದೇವಾಲಯದ ಹಿಂಭಾಗ, ಹೌಸಿಂಗ್ ಬೋರ್ಡ್ ಕಾಲೋನಿ, ಚಿಕ್ಕಮಗಳೂರು.


ವಿಳಾಸ:
ಶಿರಡಿ ಶ್ರೀ ಸಾಯಿಬಾಬಾ ಸೇವಾ ಟ್ರಸ್ಟ್ (ನೋಂದಣಿ),
ಪಂಚಮುಖಿ ಗಣಪತಿ ದೇವಾಲಯದ ಹಿಂಭಾಗ,
ನಂ.20, MIG-I, 3ನೇ ಹಂತ,
ಹೌಸಿಂಗ್ ಬೋರ್ಡ್ ಕಾಲೋನಿ,
ಚಿಕ್ಕಮಗಳೂರು-577 102,
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಜಿ.ಎನ್.ಆನಂದ್ - ಅಧ್ಯಕ್ಷರು / ಶ್ರೀಮತಿ.ಹೇಮಾ.

ದೂರವಾಣಿ ಸಂಖ್ಯೆಗಳು:
+91 99802 64991/+91 77604 93352

ಇ-ಮೈಲ್ ವಿಳಾಸ:
hemanandgn@gmail.com

ಮಾರ್ಗಸೂಚಿ:
ದೇವಾಲಯವು ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಪಂಚಮುಖಿ ಗಣಪತಿ ದೇವಾಲಯದ ಹಿಂಭಾಗದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment