Friday, July 20, 2012

ಶಿರಡಿ ಸಾಯಿಬಾಬಾ ಆರತಿಯ ಹರಿಕಾರ ಮತ್ತು  ಬಹುಮುಖ ಪ್ರತಿಭೆಯ ಸಾಯಿಬಂಧು - ಶ್ರೀ.ಪ್ರಮೋದ್ ಮೇಧಿ- ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀ.ಪ್ರಮೋದ್ ಮೇಧಿ ಬಹುಮುಖ ಪ್ರತಿಭೆಯ ಸಾಯಿಬಂಧು. ಇವರು ಪ್ರಪಂಚದಾದ್ಯಂತ ಇರುವ ಶಿರಡಿ ಸಾಯಿಬಾಬಾ ಭಕ್ತವೃಂದಕ್ಕೆ ಚಿರಪರಿಚಿತರು. ಪ್ರಪಂಚದಾದ್ಯಂತ ಇರುವ ಸಾಯಿಭಕ್ತರು ಪ್ರತಿದಿನ ಬೆಳಿಗ್ಗೆ ತಮ್ಮ ತಮ್ಮ ಮನೆಗಳಲ್ಲಿ ಇವರು ಹಾಡಿರುವ "ಆರತಿ" ಯ ಧ್ವನಿಸುರುಳಿಯನ್ನು ಹಾಕುವ ಪರಿಪಾಠವನ್ನು ಇಟ್ಟುಕೊಂಡಿರುವುದು ಇವರ ಜನಪ್ರಿಯತೆಗೆ ಸಾಕ್ಷಿ.  ಇವರು ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಧಾನ ಪುರೋಹಿತರಾಗಿ, ಬೋಧಕರಾಗಿ ಹಾಗೂ ಪ್ರಖ್ಯಾತ ಸಾಯಿಭಜನ ಗಾಯಕರಾಗಿ ಪ್ರಪಂಚದಾದ್ಯಂತ ಮನೆ ಮಾತಾಗಿದ್ದಾರೆ.

ಇವರು 15ನೇ ಅಕ್ಟೋಬರ್ 1960 ರ ಪವಿತ್ರ ವಿಜಯದಶಮಿಯ ದಿನ ಮಧ್ಯಾನ್ಹ 2:45 ಕ್ಕೆ ಮಹಾರಾಷ್ಟ್ರದ  ಪುಣೆ ಜಿಲ್ಲೆಯ ನಂಗಾವ್ ನಲ್ಲಿ ಜನಿಸಿದರು. ಇವರು ಜನಿಸಿದ ದಿನ, ತಿಂಗಳು, ಮತ್ತು ಸಮಯವು ಶಿರಡಿ ಸಾಯಿಬಾಬಾರವರ ಮಹಾಸಮಾಧಿಯ ದಿನಕ್ಕೆ ತಾಳೆಯಾಗುವುದು ಒಂದು ವಿಶೇಷವೇ ಸರಿ! 

ಇವರ ತಾಯಿ ಶ್ರೀಮತಿ.ಮಂಜುಳ ಮತ್ತು ತಂದೆ ಶ್ರೀ.ರಂಗನಾಥ್.  ಇವರು ಪುಣೆಯ ಗಂಧರ್ವ ಮಹಾವಿದ್ಯಾಲಯದಿಂದ ಶಾಸ್ತ್ರೀಯ ಸಂಗೀತದ ಅಭ್ಯಾಸವನ್ನು ಮಾಡಿದ್ದಾರೆ.ಇವರ ಧ್ವನಿಯು ಅತ್ಯಂತ ವಿಶಿಷ್ಟವಾಗಿದ್ದು ಭಜನ ಗಾಯನಕ್ಕೆ ಸರಿಹೊಂದುತ್ತದೆ.

ಇವರು 7ನೇ ಅಕ್ಟೋಬರ್ 1985 ರಂದು ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡರು. ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಧಾನ ಪುರೋಹಿತರಾಗಿ ಅನೇಕ ವರ್ಷಗಳ ಕಾಲ ಪ್ರತಿದಿನ ಬೆಳಗಿನ ಕಾಕಡಾ ಆರತಿ ಹಾಗೂ ನಂತರದ ಭಜನೆಯನ್ನು ಹಾಡಿದ್ದಾರೆ. ಪ್ರಪಂಚದಾದ್ಯಂತ ಸಂಚರಿಸಿ ಅನೇಕ ಶಿರಡಿ ಸಾಯಿಬಾಬಾ ದೇವಾಲಯಗಳ ಉದ್ಘಾಟನೆಯನ್ನು ವಿಧ್ಯುಕ್ತವಾಗಿ ನೆರವೇರಿಸಿದ್ದಾರೆ. ಅನೇಕ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾವಿರಾರು ಭಕ್ತರಿಗೆ ಮಾರ್ಗದರ್ಶಕರಾಗಿ ವಿಧ್ಯುಕ್ತವಾಗಿ ಸಾಯಿಬಾಬಾರವರಿಗೆ ಅಭಿಷೇಕ, ಪೂಜೆ, ಅಷ್ಟೋತ್ತರ ಹಾಗೂ ಆರತಿಗಳನ್ನು ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ. ಸಾಯಿಬಾಬಾರವರ ಮತ್ತು ಸಾಯಿತತ್ವಗಳ ಬಗ್ಗೆ ಅನೇಕ ಪ್ರವಚನಗಳನ್ನು ಪ್ರಪಂಚದಾದ್ಯಂತ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಪ್ರಪಂಚದಾದ್ಯಂತ ಸಂಚರಿಸಿ ಹಲವಾರು ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಸಾಯಿ ಭಜನೆಗಳ ಮುಖಾಂತರ ಭಕ್ತರನ್ನು ರಂಜಿಸಿದ್ದಾರೆ.

ಪ್ರಖ್ಯಾತ ಆಡಿಯೋ ಸಂಸ್ಥೆಗಳಾದ T-Series, Venus, Wings, Time Music, HMV ಮತ್ತು Saisha Music Company (ಇವರ ಸ್ವಂತ ಆಡಿಯೋ ಸಂಸ್ಥೆ) ಗಳಿಗೆ ಸಾಯಿ ಭಜನೆಗಳನ್ನು ಹಾಡಿದ್ದಾರೆ. 

ಇವರು ಶ್ರೀಮತಿ.ಜಯಶ್ರೀಯವರನ್ನು ವಿವಾಹವಾಗಿದ್ದಾರೆ ಮತ್ತು ಇವರಿಗೆ ಸಾಯೀಶಾ ಎಂಬ ಒಬ್ಬಳು ಮಗಳಿದ್ದಾಳೆ. ಪ್ರಸ್ತುತ ಇವರು ತಮ್ಮ ಧರ್ಮಪತ್ನಿ ಮತ್ತು ಮಗಳೊಂದಿಗೆ ತಮ್ಮ ಶಿರಡಿಯ ನಿವಾಸದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ.  


ಪ್ರಶಸ್ತಿಗಳು / ಸನ್ಮಾನಗಳು:

ಇವರಿಗೆ ಪ್ರಪಂಚದ ಎಲ್ಲಾ ಕಡೆಗಳಿಂದ ಹಾಗೂ ಸಾಯಿ ಮಂದಿರಗಳಿಂದ ಸಾವಿರಾರು ಪ್ರಶಸ್ತಿಗಳು ಬಂದಿರುತ್ತವೆ.

ಶ್ರೀ.ಪ್ರಮೋದ್ ಮೇಧಿಯವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

ವಿಳಾಸ:
ಸಾಯಿ ಸ್ವರ್ಗ, ಅಹಮದ್ ನಗರ - ಮನಮಾಡ ರಸ್ತೆ,
ಸಾಯಿಬಾಬಾ ನಗರ, ರೈಲು ನಿಲ್ದಾಣದ ಹತ್ತಿರ,  
ಲಕ್ಷ್ಮೀವಾಡಿ ಅಂಚೆ, ನೀಮಗಾವ್,
ಶಿರಡಿ - 423 109,
ರಹತಾ ತಾಲ್ಲೂಕು, ಅಹಮದ್ ನಗರ ಜಿಲ್ಲೆ,
ಮಹಾರಾಷ್ಟ್ರ, ಭಾರತ.


ದೂರವಾಣಿ ಸಂಖ್ಯೆಗಳು:
+91 99758  86067/ +91 88888 88907 / +91 91588 52299

ಇ-ಮೈಲ್ ವಿಳಾಸ:
Pramod.medhi@gmail.com


ಫೇಸ್ ಬುಕ್ ಜೋಡಣೆ:

Pt.Pramod Medhi

ಆಲ್ಬಮ್ ಗಳು:
Sai Meri Raksha Karna, Shirdi Ke Saibaba Mandir Ki Aartiyan (ACD ಮತ್ತು VCD), Mera Sainath Tripurari, Thoda Dhyan Laga, Tu Do Kadam Bado, Aartiyan, Sai Teri Krupa Se, Om Sai Ram ಮತ್ತು ಇನ್ನು ಹಲವಾರು ಆಲ್ಬಮ್ ಗಳು. 

ಭಜನೆಯ ವೀಡಿಯೋಗಳು: 







 ಕನ್ನಡ ಅನುವಾದ ಶ್ರೀಕಂಠ ಶರ್ಮ  

No comments:

Post a Comment