Thursday, July 12, 2012

ಶಿರಡಿಯ ಸುತ್ತ ಮುತ್ತ ನೋಡಬೇಕಾದ ಸ್ಥಳ:    ಕೋಪರಗಾವ್ ನ ಶ್ರೀ ಸಾಯಿಧಾಮ್ ಮಂದಿರ - ಕೃಪೆ: ಸಾಯಿಅಮೃತಧಾರಾ.ಕಾಂ 



ಶ್ರೀ ಸಾಯಿಧಾಮ್ ಮಂದಿರವು ಕೋಪರಗಾವ್ - ಮನಮಾಡ ಹೆದ್ದಾರಿಯಲ್ಲಿದೆ. ಇದು ಕೋಪರಗಾವ್ ರೈಲು ನಿಲ್ದಾಣದಿಂದ ಕೇವಲ 1 ಕಿಲೋಮೀಟರ್ ಗಳ ಅಂತರದಲ್ಲಿದೆ. ಈ ದೇವಾಲಯವನ್ನು 16ನೇ ಜೂನ್ 1999 ರಂದು ದಿವಂಗತ ಶ್ರೀ.ದೋಂಡಿರಾಮ್ ಬಾಬಾ ಚವಾಣ್ ರವರು ದೇವಾಲಯದ ಟ್ರಸ್ಟಿಗಳು ಹಾಗೂ ಹಲವಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ಪ್ರಾರಂಭಿಸಿದರು.




ದೇವಾಲಯದ ಹೊರ ಆವರಣದ ದ್ವಾರದಲ್ಲಿ ಪವಿತ್ರ ಬೇವಿನ ಮರವಿರುತ್ತದೆ.  ಈ ಬೇವಿನ ಮರಕ್ಕೆ "ಮನೋಕಾಮನಾ ವೃಕ್ಷ" ಎಂದು ಕರೆಯುತ್ತಾರೆ. ಈ ಬೇವಿನ ಮರಕ್ಕೆ ಪ್ರತಿ ಗುರುವಾರ ಸಾಯಿಭಕ್ತರು ದಾರವನ್ನು ಕಟ್ಟುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. ಹೀಗೆ ದಾರವನ್ನು ಕಟ್ಟಿದರೆ ತಮ್ಮ ಇಚ್ಛೆಗಳು ಪೂರ್ಣವಾಗುತ್ತವೆ ಎಂಬ ನಂಬಿಕೆ ಸಾಯಿ ಭಕ್ತರಲ್ಲಿದೆ.

ದೇವಾಲಯದ ಹೊರ ಆವರಣದ ದ್ವಾರದಲ್ಲಿರುವ ಪವಿತ್ರ ಬೇವಿನ ಮರದ ಎದುರುಗಡೆ ಇರುವಂತೆ ಪುಣೆಯ ಸುಪ್ರಸಿದ್ಧ ಸಂತರಾದ ಶಂಕರ ಮಹಾರಾಜರ ದೇವಾಲಯವನ್ನು ಸ್ಥಾಪಿಸಲಾಗಿದೆ.




ಶಂಕರ ಮಹಾರಾಜರ ದೇವಾಲಯದ ಎದುರುಗಡೆ ಇರುವಂತೆ ಧ್ಯಾನಮಂದಿರವನ್ನು ಸ್ಥಾಪಿಸಲಾಗಿದೆ. ಈ ಧ್ಯಾನಮಂದಿರದ ಅಮೃತಶಿಲೆಯ ಗೋಡೆಯಲ್ಲಿ ಸಾಯಿಬಾಬಾರವರ ಚಿತ್ರವು ತನ್ನಷ್ಟಕ್ಕೆ ತಾನೇ ರೂಪುಗೊಂಡಿರುತ್ತದೆ. ಧ್ಯಾನಮಂದಿರದಲ್ಲಿ ಸಾಯಿಬಾಬಾರವರು ಭಿಕ್ಷೆಗೆ ಹೋಗುತ್ತಿರುವ ತೈಲಚಿತ್ರವನ್ನು ತೂಗುಹಾಕಲಾಗಿದೆ. ಯಾವ ಕಡೆಯಿಂದ ನೋಡಿದರೂ ನಮ್ಮನ್ನೇ ಹಿಂಬಾಲಿಸುವ ಹಾಗೆ ಈ ಚಿತ್ರವನ್ನು ರಚಿಸಲಾಗಿದೆ.




ಗುರುಸ್ಥಾನದಲ್ಲಿ ಸಾಯಿಬಾಬಾರವರ ಭಾವಚಿತ್ರವನ್ನು ಇರಿಸಲಾಗಿದ್ದು ಅನೇಕ ಭಕ್ತರಿಗೆ ಈ ಭಾವಚಿತ್ರದಲ್ಲಿ ಸಾಯಿಬಾಬಾರವರ ಸಾಕ್ಷಾತ್ಕಾರವಾಗಿದೆ ಎಂದು ಹೇಳಲಾಗುತ್ತದೆ. ಗುರುಸ್ಥಾನದ ನೆಲದಲ್ಲಿ "ಓಂ" ಮತ್ತು "ತ್ರಿಶೂಲ" ವು ತನ್ನಷ್ಟಕ್ಕೆ ತಾನೇ ರೂಪುಗೊಂಡಿರುತ್ತದೆ. ಅಲ್ಲದೆ, ಶಿವಲಿಂಗ ಮತ್ತು ನಂದಿಯ ವಿಗ್ರಹಗಳನ್ನೂ ಕೂಡ ಗುರುಸ್ಥಾನದಲ್ಲಿ ನೋಡಬಹುದಾಗಿದೆ.




ಮುಖ್ಯ ದೇವಾಲಯದಲ್ಲಿ 6 ಅಡಿ ಎತ್ತರದ ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹವಿದೆ.ದೇವಾಲಯದ ಹೊರ ಆವರಣದಲ್ಲಿ ಕಪ್ಪುಶಿಲೆಯ ಶಿವಲಿಂಗ ಹಾಗೂ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ.






ದೇವಾಲಯದ ಬಲಭಾಗದಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ.


25ನೇ ಮೇ 2012 ರಂದು ಸಮಾಧಿಸ್ಥರಾದ ದಿವಂಗತ ಶ್ರೀ.ದೋಂಡಿರಾಮ್ ಬಾಬಾ ಚವಾಣ್ ರವರ ಸಮಾಧಿಯನ್ನು ಮಂದಿರದ ಹೊರ ಆವರಣದಲ್ಲಿರುವ ಸುಂದರ ಹೂತೋಟದಲ್ಲಿ ಮಾಡಲಾಗಿದೆ.

ದೇವಾಲಯದ ಆವರಣದಲ್ಲಿರುವ ತೆಂಗಿನಮರದಲ್ಲಿ ಕ್ಯಾಮರಾ ಕಣ್ಣುಗಳ ಮುಖಾಂತರ ನೋಡಿದಾಗ ಭಕ್ತರಿಗೆ ಸಾಯಿಬಾಬಾರವರ ದರ್ಶನವಾಗುತ್ತದೆ.



ಆರತಿಯ ಸಮಯ:

ಕಾಕಡಾ ಆರತಿ         : 6:00
ಮಧ್ಯಾನ್ಹ ಆರತಿ        :12:00
ಧೂಪಾರತಿ              : ಸೂರ್ಯಾಸ್ತ ಸಮಯಕ್ಕೆ
ಶೇಜಾರತಿ               : 9:00

ಪ್ರತಿದಿನ ಬೆಳಿಗ್ಗೆ 5:00 ಕ್ಕೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:

ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷ 16ನೇ ಜೂನ್.
ಗುರುಪೂರ್ಣಿಮೆ.
ವಿಜಯದಶಮಿ.
ದತ್ತ ಜಯಂತಿ.
ಶ್ರೀರಾಮನವಮಿ.
ದೀಪಾವಳಿ.
ಹನುಮಾನ್ ಜಯಂತಿ.
ಶ್ರೀ.ದೋಂಡಿರಾಮ್ ಬಾಬಾ ಚವಾಣ್ ರವರ ಸಮಾಧಿ ದಿವಸ ಪ್ರತಿ ವರ್ಷ 25ನೇ ಮೇ.

ಪ್ರತಿ ವರ್ಷ 16ನೇ ಜೂನ್ ನಂದು ದೇವಾಲಯದ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಭಜನೆ ಹಾಗೂ ಅನ್ನದಾನವನ್ನು ಹಮ್ಮಿಕೊಳ್ಳಲಾಗುತ್ತದೆ.

ಪ್ರತಿ ವರ್ಷದ ದತ್ತ ಜಯಂತಿಯಂದು ಗುಜರಾತ್ ನಿಂದ ಸುಮಾರು 300 ಕ್ಕೂ ಹೆಚ್ಚು ಸಾಯಿಭಕ್ತರು ಪಲ್ಲಕ್ಕಿಯನ್ನು ಹೊತ್ತುಕೊಂಡು ಬರುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ.

ದೀಪಾವಳಿಯ ಲಕ್ಷ್ಮೀ ಪೂಜೆಯ ದಿನದಂದು ಮಂದಿರದ ಆವರಣದಲ್ಲಿ ವಿಶೇಷ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ.

ಶ್ರೀರಾಮನವಮಿಯ ದಿನದಿಂದ ಗುಡಿ ಪಾಡ್ವದ ವರೆವಿಗೆ ಒಂಬತ್ತು ದಿನಗಳ ಕಾಲ ಸಾಯಿ ಸಚ್ಚರಿತ್ರೆಯ ಪಾರಯಣವನ್ನು ಹಮ್ಮಿಕೊಳ್ಳಲಾಗುತ್ತದೆ.



ದೇವಾಲಯದ ಸಂಪರ್ಕದ ವಿವರಗಳು:

ಶ್ರೀ ಸಾಯಿಧಾಮ ಮಂದಿರ
ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್,
ಅಂಬಿಕಾನಗರ, ಕೋಪರಗಾವ್ - ಮನಮಾಡ ರಸ್ತೆ,
ಕೋಪರಗಾವ್ - 423 601,
ಅಹಮದ್ ನಗರ ಜಿಲ್ಲೆ,
ಮಹಾರಾಷ್ಟ್ರ, ಭಾರತ,
ಸಂಪರ್ಕಿಸಬೇಕಾದ ವ್ಯಕ್ತಿಗಳು: ಶ್ರೀ.ಸುರೇಶ ದೋಂಡಿರಾಮ ಚವಾಣ್ / ಶ್ರೀ.ಏಕನಾಥ ದೋಂಡಿರಾಮ ಚವಾಣ್ / ಶ್ರೀ.ಸಾಯಿನಾಥ್ ಚವಾಣ್
ದೂರವಾಣಿ ಸಂಖ್ಯೆಗಳು: +91 2423 224300 / 221800
ಮೊಬೈಲ್ ಸಂಖ್ಯೆಗಳು: +91 97639 18088 / +91 97304 74646 / /+91 90963 72858
ಇ-ಮೈಲ್ ವಿಳಾಸ: trust@saidhamkopargaon.com / sainath.chavan1@gmail.com
ಅಂತರ್ಜಾಲ ತಾಣ: http://www.saidhamkopargaon.com


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment