Sunday, July 22, 2012


ಸಂಕ್ಷಿಪ್ತ ಕನ್ನಡ ಶ್ರೀ ಸಾಯಿ ಸಚ್ಚರಿತ್ರೆಯ ಅನುವಾದಕರು  - ಶ್ರೀ.ಎನ್.ಎಸ್.ಅನಂತರಾಮು- ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀ.ಎನ್.ಎಸ್.ಅನಂತರಾಮು ಅವರು ಶಿರಡಿ ಸಾಯಿಬಾಬಾ ಸಂಸ್ಥಾನದಿಂದ ಪ್ರಕಟಣೆಯಾಗುತ್ತಿರುವ ಹೇಮಾಡಪಂತರ ಸಮಗ್ರ ಮರಾಠಿ "ಶ್ರೀ ಸಾಯಿ ಸಚ್ಚರಿತೆ" ಯನ್ನು ಕನ್ನಡಕ್ಕೆ ಸಂಕ್ಷಿಪ್ತ ರೂಪದಲ್ಲಿ ಅನುವಾದ ಮಾಡಿರುವ ಲೇಖಕರು. ಇವರು ಅತ್ಯುತ್ತಮ ಲೇಖಕರು ಹಾಗೂ ಸಾಯಿ ಭಕ್ತರು.

ಇವರು 17ನೇ ಜುಲೈ 1930 ರಂದು ಕರ್ನಾಟಕದ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆಯಲ್ಲಿ ಜನಿಸಿದರು. ಇವರ ತಾಯಿ ದಿವಂಗತ ಶ್ರೀಮತಿ.ರಂಗನಾಯಕಿ ಮತ್ತು ತಂದೆ ದಿವಂಗತ ಶ್ರೀ.ಎನ್.ಶ್ರೀನಿವಾಸ ಅಯ್ಯಂಗಾರ್. 

ಇವರು ಮೊದಲಿನಿಂದಲೂ ಓದಿನಲ್ಲಿ ಬಹಳ ಚುರುಕಾಗಿದ್ದು ಹಲವಾರು ಪದವಿಗಳನ್ನು ಸಂಪಾದಿಸಿದ್ದಾರೆ. ಅವುಗಳೆಂದರೆ: Bachelor of Science, Bachelor of Law, D.T.L., M.L., M.H.R., Diploma in Training and Development, Post Graduate Diploma in Foreign Trade, Diploma in Export & Import, Post Graduate Diploma in Environment & Ecology, Diploma in Public Relations, Advance Post Graduate Diploma in Transport, Post Graduate Diploma in Human Resource, Diploma in T.C.H.M ಮತ್ತು Computer Programming Level I, II and III. 

ಇವರು ಸಂತೇಬೆನ್ನೂರಿನ ಜಿಲ್ಲಾ ಬೋರ್ಡ್ ಪ್ರೌಢಶಾಲೆಯಲ್ಲಿ ಕೆಲವು ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ಮಾಡಿದರು. ನಂತರ 1954 ರಲ್ಲಿ ಅಕೌಂಟೆಂಟ್ ಜನರಲ್ಸ್ ಕಛೇರಿಯ  ಕರ್ನಾಟಕ ವೃತ್ತದಲ್ಲಿ ಕೆಲಸಕ್ಕೆ ಸೇರಿ ಅನೇಕ ಹುದ್ದೆಗಳಲ್ಲಿ ದುಡಿದು 1988 ರಲ್ಲಿ ಹಿರಿಯ ಆಡಿಟ್ ಆಫೀಸರ್ ಆಗಿ ನಿವೃತ್ತರಾದರು. ನಿವೃತ್ತರಾದ ಮೇಲೆ 1988 ರಿಂದ ವಕೀಲಿ ವೃತ್ತಿಯನ್ನು ಆರಂಭಿಸಿ ಅಂದಿನಿಂದ ಇಂದಿನವರೆವಿಗೂ Taxation, Company Laws, Management & Investment ವಿಭಾಗದಲ್ಲಿ ಜನರಿಗೆ ಸಲಹೆಗಾರರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರು 1950 ರಲ್ಲಿ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡರು.  1954 ನೇ ಇಸವಿಯಲ್ಲಿ ಸಾಯಿಬಾಬಾರವರ ಆಜ್ಞೆ ಮೇರೆಗೆ ಬೆಂಗಳೂರಿಗೆ ಬಂದು ಶಾಶ್ವತವಾಗಿ ನೆಲೆಸಿದರು. ಅಲ್ಲದೇ, ಹೇಮಾಡಪಂತರ ಸಮಗ್ರ ಮರಾಠಿ ಶ್ರೀ ಸಾಯಿ ಸಚ್ಚರಿತೆಯನ್ನು ಕನ್ನಡಕ್ಕೆ ಸಂಕ್ಷಿಪ್ತ ರೂಪದಲ್ಲಿ ಅನುವಾದ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಶಿರಡಿ ಸಾಯಿಬಾಬಾ ಸಂಸ್ಥಾನವು 1961 ರಲ್ಲಿ ಈ ಸಂಕ್ಷಿಪ್ತ "ಶ್ರೀ ಸಾಯಿ ಸಚ್ಚರಿತ್ರೆ" ಯನ್ನು ಪ್ರಕಟಗೊಳಿಸಿತು.

ಇವರು 1998 ರಲ್ಲಿ ಸಂತ ಕವಿ ದಾಸಗಣು ರವರ "ಶ್ರೀ ಸಾಯಿನಾಥ ಸ್ತವನ ಮಂಜರಿ" ಯನ್ನು ಕನ್ನಡಕ್ಕೆ ಅನುವಾದ ಮಾಡಿದರು. ಈ ಕೃತಿಯನ್ನು ಬೆಂಗಳೂರಿನ ತ್ಯಾಗರಾಜನಗರದ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದವರು ಪ್ರಕಟಗೊಳಿಸಿದರು.

ಇವರು 2008 ರಲ್ಲಿ ಪರಮಪೂಜ್ಯ ಶ್ರೀ.ಬಿ.ವಿ.ನರಸಿಂಹ ಸ್ವಾಮೀಜಿಯವರ “Life of Saibaba” ಕೃತಿಯನ್ನು ಕನ್ನಡಕ್ಕೆ "ಶ್ರೀ ಸಾಯಿಬಾಬಾ ಜೀವನ ಚರಿತೆ" ಎಂಬ ಹೆಸರಿನಲ್ಲಿ ಅನುವಾದ ಮಾಡಿದರು. ಈ ಕೃತಿಯನ್ನು ಸಾಯಿ ಭಕ್ತರಾದ ಶ್ರೀ.ಬಿ.ಕೃಷ್ಣಮುರ್ತಿಯವರು ಬೆಂಗಳೂರಿನ ಅನೇಕ ಸಾಯಿಭಕ್ತರ ನೆರವಿನೊಂದಿಗೆ ಪ್ರಕಟಗೊಳಿಸಿದರು.

ಇವರು ಕನ್ನಡ ಸಂಕ್ಷಿಪ್ತ "ಶ್ರೀ ಸಾಯಿ ಸಚ್ಚರಿತ್ರೆ" ಯ ಆಡಿಯೋ ಧ್ವನಿಸುರಳಿಯ ಲೇಖಕರಾಗಿದ್ದಾರೆ.

ಇವರು 2011 ರಲ್ಲಿ ಕೃ.ಜಾ.ಭೀಷ್ಮರವರ "ಶ್ರೀ ಸಾಯಿ ಸಗುಣೋಪಾಸನ" ಆರತಿಯ ಪುಸ್ತಕವನ್ನು ಕನ್ನಡ ಅರ್ಥಗಳೊಂದಿಗೆ ಅನುವಾದ ಮಾಡಿದರು. ಇದನ್ನು ಮೈಸೂರಿನ ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿಯ ಡಾ.ಸೀತಾಲಕ್ಷ್ಮಿಯವರು ಸಹ ಅನುವಾದಕರಾಗಿ ಪ್ರಕಟಗೊಳಿಸಿದರು.

ಇವರು ಶಿರಡಿ ಸಾಯಿಬಾಬಾರವರ ಬಗ್ಗೆ ಮತ್ತೆ ಎರಡು ಹೊಸ ಪುಸ್ತಕಗಳ ರಚನೆಯಲ್ಲಿ ತೊಡಗಿದ್ದು ಅವುಗಳು ಶೀಘ್ರದಲ್ಲೇ ಪ್ರಕಟಣೆಯಾಗಲಿವೆ.

ಇವರಿಗೆ 1998 ರಲ್ಲಿ ಶಿರಡಿ ಸಾಯಿಬಾಬಾರವರು ಸಾಕ್ಷಾತ್ಕಾರ ನೀಡಿ ಅನುಗ್ರಹಿಸಿದ್ದಾರೆ ಮತ್ತು ಈಗಲೂ ಕೂಡ ಅನುಗ್ರಹಿಸುತ್ತಿದ್ದಾರೆ. ಇವರ ಮನೆಯಾದ "ಶ್ರೀ ಸಾಯಿ ದರ್ಶನ" ದಲ್ಲಿ ಭಕ್ತರು ಇದನ್ನು ಕಣ್ಣಾರೆ ನೋಡಬಹುದು.

ಇವರು ಶ್ರೀಮತಿ.ಎನ್.ಎ.ವಿಜಯಲಕ್ಷ್ಮಿಯವರನ್ನು ವಿವಾಹವಾಗಿದ್ದಾರೆ. ಇವರಿಗೆ ಶ್ರೀ.ಎನ್.ಎ.ಶ್ರೀನಿವಾಸ, ಶ್ರೀ.ಎನ್.ಎ.ಬದರೀನಾಥ, ಶ್ರೀ.ಎನ್.ಎ.ಶ್ರೀಧರ ಮತ್ತು ಶ್ರೀ ಎನ್.ಎ.ನಾಗರಾಜ 4 ಗಂಡು ಮಕ್ಕಳು ಹಾಗೂ ಶ್ರೀಮತಿ.ಎನ್.ಎ.ಸುಧಾ ಎಂಬ ಒಬ್ಬಳು ಮಗಳಿದ್ದಾಳೆ. ಪ್ರಸ್ತುತ ಇವರು ತಮ್ಮ ಧರ್ಮಪತ್ನಿ ಮತ್ತು ಗಂಡು ಮಕ್ಕಳೊಂದಿಗೆ ತಮ್ಮ ಬೆಂಗಳೂರಿನ ನಿವಾಸದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ.  


ಶ್ರೀ.ಎನ್.ಎಸ್.ಅನಂತರಾಮು ಅವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:
ಶ್ರೀ ಸಾಯಿ ದರ್ಶನ, ನಂ.135, 2ನೇ ಮುಖ್ಯರಸ್ತೆ, 
ಏಜೀಸ್ ಕಾಲೋನಿ, ಆನಂದನಗರ, ಹೆಬ್ಬಾಳ,
ಬೆಂಗಳೂರು-560 024,
ಕರ್ನಾಟಕ, ಭಾರತ.

ದೂರವಾಣಿ ಸಂಖ್ಯೆಗಳು:
+91 80 2333 3835/ +91 98863 12692

ಇ-ಮೈಲ್ ವಿಳಾಸ:
saiamrith@yahoo.co.in


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment