Wednesday, December 5, 2012

ಬಹುಮುಖ ಪ್ರತಿಭೆಯ ಸಾಯಿಬಂಧು ಶ್ರೀ.ಎಸ್.ಲಕ್ಷ್ಮೀನರಸಿಂಹನ್ - ಕೃಪೆ: ಸಾಯಿಅಮೃತಧಾರಾ.ಕಾಂ




ಶ್ರೀ.ಎಸ್.ಲಕ್ಷ್ಮೀನರಸಿಂಹನ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು ಹಾಗೂ 2002 ರಲ್ಲಿ ಪ್ರಾರಂಭಿಸಲಾಗಿರುವ ತಮಿಳು ತ್ರೈಮಾಸಿಕ ಪತ್ರಿಕೆಯಾದ "ಶ್ರೀ.ಸಾಯಿ ಮಾರ್ಗಮ್" ನ ಸಂಪಾದಕರು.  ಇವರು ಖ್ಯಾತ ಬರಹಗಾರರಾಗಿದ್ದು ಸಾಯಿಬಾಬಾರವರ ಬಗ್ಗೆ ತಮಿಳಿನಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೇ, ಚನ್ನೈನ "ಸಾಯಿ ಪ್ರಚಾರ ಸೇವಾ ಟ್ರಸ್ಟ್" ಹಾಗೂ "ಶಿರಡಿ ಸಾಯಿ ಲಿಖಿತ ನಾಮಜಪ ಬ್ಯಾಂಕ್" ನ ಸಂಸ್ಥಾಪಕರೂ ಆಗಿದ್ದಾರೆ.


ಶ್ರೀ.ಎಸ್.ಲಕ್ಷ್ಮೀನರಸಿಂಹನ್ ರವರು 17ನೇ ಡಿಸೆಂಬರ್ 1967 ರಂದು ತಮಿಳುನಾಡಿನ ಪುದುಕೋಟೆ ಪಟ್ಟಣ ಹಾಗೂ ಜಿಲ್ಲೆಯಲ್ಲಿ ಶ್ರೀಮತಿ.ಎಸ್.ಸುಬ್ಬಲಕ್ಷ್ಮೀ ಹಾಗೂ ದಿವಂಗತ ಶ್ರೀ.ಆರ್.ಸುಬ್ರಮಣಿಯನ್ ರವರ ಪುತ್ರನಾಗಿ ಜನಿಸಿರುತ್ತಾರೆ. ಇವರ ತಂದೆಯವರು ಪುದುಕೋಟೆಯ ಪೂಜ್ಯ ಶ್ರೀ.ಅಪ್ಪಾ ಗೋಪಾಲಕೃಷ್ಣ ಭಾಗವತರ್ ರವರ ಪುತ್ರ ಪೂಜ್ಯ ಶ್ರೀ.ಸಂಜೀವಿ ಭಾಗವತರ್ ರವರ ಸಮಕಾಲೀನರಾಗಿದ್ದರು.

ಇವರು 1988 ನೇ ಇಸವಿಯಲ್ಲಿ ತಮಿಳುನಾಡಿನ ತಿರುಚಿಯ ಭಾರತೀದಾಸನ್ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಬಿ.ಎ.ಪದವಿಯನ್ನು ಗಳಿಸಿರುತ್ತಾರೆ.


ಇವರು ತಮ್ಮದೇ ಸ್ವಂತ ಪತ್ರಿಕೆಯಾದ ಶ್ರೀ ಸಾಯಿ ಮಾರ್ಗಮ್ ನ ಸಂಪಾದಕರಾಗುವುದಕ್ಕೆ ಪೂರ್ವದಲ್ಲಿ ಹಿರಿಯ ಪತ್ರಕರ್ತರಾಗಿ 15 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ.


ಇವರು ಶಿರಡಿ ಸಾಯಿಬಾಬಾರವರ ಸಮಕಾಲೀನ ಭಕ್ತರುಗಳಾದ ಹೇಮಾಡಪಂತ, ಮಹಾಳಸಾಪತಿ, ಶ್ಯಾಮ, ನಿಮೋಣಕರ್, ತರ್ಕಡ್ ಮತ್ತು ಲಕ್ಷ್ಮೀಬಾಯಿ ಶಿಂಧೆಯ ವಂಶಸ್ಥರನ್ನು ಮುಖತಃ ಭೇಟಿ ಮಾಡಿ ಅವರ ಸಂದರ್ಶನವನ್ನು ಮಾಡಿರುತ್ತಾರೆ. 


ಇವರು ಪ್ರಖ್ಯಾತ ಸಾಯಿ ವ್ಯಕ್ತಿಗಳಾದ ಗುರೂಜಿ ಶ್ರೀ.ಸಿ.ಬಿ.ಸತ್ಪತಿ, ನಾರಾಯಣ ಬಾಬಾ, ಕರೂರು ನರಸಿಂಹ ಬಾಬಾ, ಕುಮಾರ ಬಾಬಾ, ಸಾಯಿಮಾತಾ ಶಿವ ಬೃಂದಾದೇವಿ, ಮಲೇಶಿಯಾ ವಾಸುದೇವನ್ ಮತ್ತು ಸಾಯಿಬಾಬಾ ಸಂಸ್ಥಾನದ ಪದಾಧಿಕಾರಿಗಳನ್ನು ಮುಖತಃ ಭೇಟಿ ಮಾಡಿ ಅವರ ಸಂದರ್ಶನವನ್ನು ಮಾಡಿರುತ್ತಾರೆ. 


ಇವರು ಸಾಯಿಬಾಬಾರವರ ಬಗ್ಗೆ ತಮಿಳಿನಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳೆಂದರೆ: Bayappadadhe Naan Irukkiren, Kadavulidam Pesum Kavidhaihal,Shirdikku Izukkappatta Sittukkuruvihal,Baba Amirtham,Baba Yugam,Sai Madham,Thamizaha Baba Aalayangal,Baba Irukka Bayam Een?,Sainath Bagavatham,Sai Dhyanam ಮತ್ತು Viboothi Baba Parayanam.


ಇವರು ಸಾಯಿಬಾಬಾರವರ ಬಗ್ಗೆ ಅಷ್ಟೇ ಅಲ್ಲದೇ ಇತರ ವಿಷಯಗಳ ಬಗ್ಗೆಯೂ ಅನೇಕ ಪುಸ್ತಕಗಳನ್ನು ಬರಿದಿದ್ದಾರೆ: ಅವುಗಳೆಂದರೆ: Pambu Chuvaduhal - a collection of Poetry,Jayanarasimhan Kathaihal,Ezuththalar Dairy,Penniam Samookam ಮತ್ತು Kelvi Neram.


ಇವರು ಸಾಯಿಬಾಬಾರವರ ಬಗ್ಗೆ ಬರೆಯಲಾದ ಮೂರು ಪುಸ್ತಗಳ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಅವುಗಳೆಂದರೆ: Baba Swami Ponmozihal,Punya Karma by Guruji C.P.Sathpathy ಮತ್ತು Sathguru Charanam.


ಇವರು ತಮ್ಮದೇ ಆದ ಶ್ರೀ ಸಾಯಿ ಮಾರ್ಗಮ್ ಎಂಬ ಹೆಸರಿನ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಮುಖಾಂತರ Sath Sarithiram Kattum Padhai,SaiMananam – B.V.Narasimha Swamiji,Sai Sakthiyum Prabancha Sakthiyum ಮತ್ತು Saibaba Kadhaihal ಎಂಬ ನಾಲ್ಕು ಗ್ರಂಥಗಳನ್ನು ಪ್ರಕಾಶನಗೊಳಿಸಿರುತ್ತಾರೆ.


ಇವರು ಸಾಯಿ ಮಾರ್ಗಮ್ ತ್ರೈಮಾಸಿಕ ಪತ್ರಿಕೆಯ ಅಡಿಯಲ್ಲಿ "Sri Sai Marggam Diwali Malarhal Pathham Aandu Sadhanai Malar" ಎಂಬ ದೀಪಾವಳಿ ವಿಶೇಷ ಸಂಚಿಕೆಯನ್ನು ಹೊರತಂದಿದ್ದಾರೆ.


ಇವರು "ಶಿರಡಿ ಸಾಯಿ ಲಿಖಿತ ನಾಮಜಪ ಬ್ಯಾಂಕ್"  ನ ಅಡಿಯಲ್ಲಿ "Arulum Porulum pera…." ಎಂಬ ಹೆಸರಿನ ನಾಮಜಪ ಬ್ಯಾಂಕ್ ಅನ್ನು ಪ್ರಾರಂಭಿಸಿ ಚನ್ನೈ ನಗರದಲ್ಲಿ ಪ್ರತಿ ವರ್ಷ  "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ವಿಶೇಷ ನಾಮಜಪ ಯಜ್ಞಗಳನ್ನು ನಡೆಸುತ್ತಾ ಬಂದಿದ್ದಾರೆ.


ಇವರು ಪ್ರಖ್ಯಾತ ಗಾಯಕ ಮಲೇಶಿಯಾ ವಾಸುದೇವನ್ ರವರು ಹಾಡಿರುವ ಸಾಯಿಬಾಬಾರವರ ಬಗ್ಗೆ ಹಾಡಿರುವ "ಸಾಯಿ ನವಜ್ಯೋತಿ" ಎಂಬ ಆಡಿಯೋ ಸಿಡಿಯನ್ನು ಹೊರತಂದಿದ್ದಾರೆ.


ಇವರು ತಮ್ಮ "ಸಾಯಿ ಪ್ರಚಾರ ಸೇವಾ ಟ್ರಸ್ಟ್" ನ ಅಡಿಯಲ್ಲಿ ದೇಶದ ವಿವಿಧ ಕಡೆಗಳಲ್ಲಿ ವಿಶೇಷ ಹೋಮಗಳು, ಭಜನೆಗಳು, ಮತ್ತು ಅಭಿಷೇಕಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳುತ್ತಿದ್ದಾರೆ; ಹಲವಾರು ಬಡ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವನ್ನು ಭರಿಸುತ್ತಿದ್ದಾರೆ; ಸಾಯಿಬಾಬಾರವರ ವಿಶೇಷ ಉತ್ಸವದ ಸಂದರ್ಭಗಳಲ್ಲಿ ಅನ್ನದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ; ಹಾಗೂ ಪ್ರತಿ ವರ್ಷ ಹಲವಾರು ಬಾರಿ ಶಿರಡಿ ಯಾತ್ರೆಯನ್ನು ಕೈಗೊಂಡು ಅನೇಕ ಹೊಸ ಸಾಯಿಭಕ್ತರು ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಅತ್ಯುತ್ತಮ ರೀತಿಯಲ್ಲಿ ಸಾಯಿ ಪ್ರಚಾರವನ್ನು ತಮ್ಮದೇ ಆದ ರೀತಿಯಲ್ಲಿ ಮಾಡುತ್ತಾ ಬಂದಿದ್ದಾರೆ.


ಇವರು ಶ್ರೀ ಸಾಯಿ ಮಾರ್ಗಮ್ ಪ್ರಶಸ್ತಿಯನ್ನು ಪ್ರಾರಂಭಿಸಿ ಅದರ ಅಡಿಯಲ್ಲಿ ಅನೇಕ ಪ್ರಸಿದ್ಧ ಸಾಯಿ ವ್ಯಕ್ತಿಗಳ ಸನ್ಮಾನ ಮಾಡಿದ್ದಾರೆ.


ಇವರು ತಮಿಳು ಪತ್ರಿಕಾ ರಂಗಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಗಾಗಿ ಇವರಿಗೆ "Idhazial Chemmal" ಎಂಬ ಪ್ರತಿಷ್ಟಿತ ಪ್ರಶಸ್ತಿ ಲಭಿಸಿರುತ್ತದೆ. ಅಲ್ಲದೇ, ಬೆಂಗಳೂರಿನ ಸಾಯಿ ಮಹಾಭಕ್ತರೂ, ಪರಮಪೂಜ್ಯ ಶ್ರೀ.ಬಿ.ವಿ.ನರಸಿಂಹ ಸ್ವಾಮಿಗಳ ಶಿಷ್ಯರೂ ಹಾಗೂ ಬೆಂಗಳೂರಿನ ತ್ಯಾಗರಾಜ ನಗರದಲ್ಲಿರುವ "ಸಾಯಿ ಆಧ್ಯಾತ್ಮಿಕ ಕೇಂದ್ರ" ದ ಸಂಸ್ಥಾಪಕರೂ ಆದ ಸಾಯಿಪಾದಾನಂದ ಶ್ರೀ.ರಾಧಾಕೃಷ್ಣ ಸ್ವಾಮೀಜಿಯವರ ಶಿಷ್ಯರಾದ ದಿವಂಗತ ಶ್ರೀ.ಸಾಯಿಆನಂದರವರಿಂದ "ಸಾಯಿ ಆತ್ಮ ಸ್ವರೂಪಿ" ಎಂಬ ಬಿರುದಿಗೆ ಭಾಜನರಾಗಿದ್ದಾರೆ. 


ಇವರು ತಮ್ಮ "ಸಾಯಿ ಪ್ರಚಾರ ಸೇವಾ ಟ್ರಸ್ಟ್" ನ ಅಡಿಯಲ್ಲಿ ತಮಿಳುನಾಡಿನ ಚನ್ನೈ ನಗರದ ಸಮೀಪದಲ್ಲಿರುವ ಕಂಚೀಪುರಂ ನಲ್ಲಿ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಪಿರಮಿಡ್ ಆಕಾರದಲ್ಲಿ ಹಸಿರು ಅಮೃತಶಿಲೆಯ ಸಾಯಿಬಾಬಾ ಮಂದಿರವನ್ನು ನಿರ್ಮಾಣ ಮಾಡುತ್ತಿದ್ದಾರೆ.




ಇವರು ಶ್ರೀಮತಿ.ಎಲ್.ಪದ್ಮಪ್ರಭಾರವರನ್ನು ವಿವಾಹವಾಗಿದ್ದು ಇವರಿಗೆ ಶ್ರೀಮತಿ.ಎಲ್.ಸುಹೃದ ಹಾಗೂ ಶ್ರೀಮತಿ.ಎಲ್.ಸಾಯೀಶ್ವರೀ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.


ಪ್ರಸ್ತುತ ಇವರು ಚನ್ನೈ ನಗರದ ಸ್ವಗೃಹದಲ್ಲಿ  ತಮ್ಮ ಧರ್ಮಪತ್ನಿ ಹಾಗೂ ಮಕ್ಕಳೊಂದಿಗೆ ಸುಖೀಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ಎಸ್.ಲಕ್ಷ್ಮೀನರಸಿಂಹನ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:

ಶ್ರೀ.ಎಸ್.ಲಕ್ಷ್ಮೀನರಸಿಂಹನ್
ನಂ.2ಎ/2,  ತಾರಾಚಂದ ನಗರ ಮುಖ್ಯರಸ್ತೆ,
ವಿರುಗಂಬಾಕ್ಕಂ, 
ಚನ್ನೈ - 600 092,, 
ತಮಿಳುನಾಡು, ಭಾರತ

ದೂರವಾಣಿ ಸಂಖ್ಯೆಗಳು:

+91 44 2377 3311 (ಮನೆ)/+91 98403 25245 (ಮೊಬೈಲ್)/+91 44 4255 0604 (ಕಛೇರಿ)

ಇ-ಮೈಲ್ ವಿಳಾಸ:

slnsaimarg@yahoo.com/sailakshminarasimhan@gmail.com


ಅಂತರ್ಜಾಲ ತಾಣ:

http://saimarggam.blogspot.in/


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment