Monday, November 5, 2012


ಶಿರಡಿಯಲ್ಲಿ ಪ್ರಪ್ರಥಮ ಲಕ್ಷ ದೀಪೋತ್ಸವ ಕಾರ್ಯಕ್ರಮ - ಕೃಪೆ:ಸಾಯಿಅಮೃತಧಾರಾ.ಕಾಂ

ದೀಪಾವಳಿಯ ಪರಮ ಪವಿತ್ರ ದಿನದಂದು ಸಾಯಿಬಾಬಾರವರು ಶಿರಡಿಯ ದ್ವಾರಕಾಮಾಯಿಯಲ್ಲಿ ನೀರಿನಿಂದ ದೀಪಗಳನ್ನು  ಬೆಳಗಿಸಿದ ಅದ್ಭುತ ಚಮತ್ಕಾರ ಎಲ್ಲಾ ಸಾಯಿಭಕ್ತರಿಗೂ ತಿಳಿದಿದೆ. ಈ ಅದ್ಭುತ ಚಮತ್ಕಾರದಿಂದ ಪ್ರೇರೇಪಿತರಾದ ಶಿರಡಿಯ ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್, ಇದೇ ತಿಂಗಳ ಲಕ್ಷ್ಮೀ ಕುಬೇರ ಪೂಜೆಯ ಪರಮ ಪವಿತ್ರ ದಿನವಾದ 13ನೇ ನವೆಂಬರ್ 2012, ಮಂಗಳವಾರದಂದು ಸಂಜೆ 7:00 ಗಂಟೆಗೆ ಶಿರಡಿಯ ಬಸ್ ನಿಲ್ದಾಣದ ಎದುರುಗಡೆ ಇರುವ ಸಾಯಿನಗರ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ವಿಶೇಷ ಕಾರ್ಯಕ್ರಮಕ್ಕೆ 2500 ಲೀಟರ್ ಎಣ್ಣೆಯನ್ನು ಬಳಸಲಾಗುತ್ತಿದೆ. ಈ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಗಿನ್ನೀಸ್ ದಾಖಲೆಗೆ ಸೇರಿಸಬೇಕೆಂದು ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್ ಅಂದುಕೊಂಡಿದೆ. ಅದಕ್ಕೆ ಬೇಕಾದ ಎಲ್ಲಾ ಅಗತ್ಯ ದಾಖಲೆಗಳನ್ನು ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್ ಗಿನ್ನೀಸ್  ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿಗಳಿಗೆ ಈಗಾಗಲೇ ನೀಡಿರುತ್ತದೆ.



ಈ ವಿಶೇಷ ಕಾರ್ಯಕ್ರಮದಲ್ಲಿ ಗಿನ್ನೀಸ್  ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನ ಅಧಿಕಾರಿಗಳು, ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳು ಹಾಗೂ ಶಿರಡಿ ನಗರಪಾಲಿಕೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.


ಈ ಅಪರೂಪದ ಹಾಗೂ ಜಗದ್ವಿಖ್ಯಾತ ಕಾರ್ಯಕ್ರಮದಲ್ಲಿ ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್ ನ ಪದಾಧಿಕಾರಿಗಳು ಈ ಮೂಲಕ ಮನವಿ ಮಾಡಿಕೊಳ್ಳುತ್ತಾರೆ.

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಇಚ್ಚಿಸುವ ಸಾಯಿ ಭಕ್ತರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದಾಗಿದೆ.

ಶ್ರೀ.ಅರುಣ್ ಗಾಯಕವಾಡ್ - ಟ್ರಸ್ಟಿ
ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್, ಶಿರಡಿ
ಶ್ರೀ ಶಿರಡಿ ಸಾಯಿ ಡೆವಲಪರ್ಸ್,
ಎಲ್.ಐ.ಸಿ.ಕೌಂಟರ್ ಹತ್ತಿರ, ಸಾಯಿ ಪ್ರಸಾದ ಸಂಕೀರ್ಣ,
ಸಾಯಿ ಸಂಜೀವನಿ ಹೋಟೆಲ್ ಹತ್ತಿರ,
ನ್ಯೂ ಪಿಂಪಲವಾಡಿ ರಸ್ತೆ, ಶಿರಡಿ - 423 109,
ಅಹಮದ್ ನಗರ ಜಿಲ್ಲೆ, ಮಹಾರಾಷ್ಟ್ರ, ಭಾರತ,
ಮೊಬೈಲ್ ಸಂಖ್ಯೆಗಳು: +91 99602 65819 / +91 93703 09888
ಇ ಮೈಲ್ ವಿಳಾಸ: arung_shirdi@yahoo.com
ಫೇಸ್ ಬುಕ್ ವಿಳಾಸ: facebook.com/saibhakta laxmibaishindetrust,shirdi
ಅಂತರ್ಜಾಲ ತಾಣ: www.sai9coins.org

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment