Friday, November 16, 2012

ಹಿರಿಯ ಸಾಯಿಭಕ್ತ - ಶ್ರೀ.ರಾಮಚಂದ್ರ ಎಂ.ಅಡ್ಕರ್ - ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀ.ರಾಮಚಂದ್ರ ಎಂ.ಅಡ್ಕರ್ ರವರು ಪ್ರತಿನಿತ್ಯ ಸಾಯಿಬಾಬಾರವರ ಮಧ್ಯಾನ್ಹ ಹಾಗೂ ಸಂಜೆಯ ಆರತಿಯ ಸಮಯದಲ್ಲಿ  ಹಾಡುವ ಸುಪ್ರಸಿದ್ಧ "ಆರತಿ ಸಾಯಿಬಾಬಾ ಸೌಖ್ಯ ದಾತಾರ ಜೀವ" ದ ರಚನಕಾರರಾದ ಶ್ರೀ.ಮಾಧವ ವಾಮನ ರಾವ್ ಅಡ್ಕರ್ ರವರ ಪುತ್ರರು. ಇವರು 14ನೇ ಮಾರ್ಚ್ 1915 ರಂದು ದಿವಂಗತ ಶ್ರೀಮತಿ.ಗಂಗಾಬಾಯಿ ಅಡ್ಕರ್ ಹಾಗೂ ದಿವಂಗತ ಶ್ರೀ.ಮಾಧವ ವಾಮನ ರಾವ್ ಅಡ್ಕರ್ ವರ ಪುತ್ರನಾಗಿ ಜನಿಸಿದರು. 



ಶ್ರೀ.ರಾಮಚಂದ್ರ ಎಂ.ಅಡ್ಕರ್ ರವರು ಸಾಯಿಬಾಬಾರವರ ದಯೆಯಿಂದ 14ನೇ ಮಾರ್ಚ್ 1915 ರಂದು ಜನಿಸಿದರು. ಅದರ ಸಾರಾಂಶವನ್ನು ಸಾಯಿಭಕ್ತರ ಅವಗಾಹನೆಗಾಗಿ ಈ ಕೆಳಗೆ ಕೊಡಲಾಗಿದೆ:

ಮಾಧವ ರಾವ್ ರವರು ಪ್ರತಿ ವರ್ಷ ಪಂಡರಾಪುರದ ಯಾತ್ರೆಯನ್ನು ಕೈಗೊಳ್ಳುತ್ತಿದ್ದರು. ಒಮ್ಮೆ ಅವರು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸೇವೆಯನ್ನು ಮಾಡುತ್ತಿದ್ದರು. ಒಂದು ದಿನ ಅವರು ದ್ವಾರಕಾಮಾಯಿಯಲ್ಲಿ ಸಾಯಿಬಾಬಾರವರ ಸೇವೆಯನ್ನು ಮಾಡುತ್ತಾ ಕುಳಿತಿದ್ದಾಗ ಸಾಯಿಬಾಬಾರವರು "ಮಾಧವ ರಾವ್, ನಿನ್ನನ್ನು ಮನೆಗೆ ಕರೆದುಕೊಂಡು ಹೋಗಲು ಇಬ್ಬರು ಬರುತ್ತಾರೆ. ನೀನು ಅವರೊಡನೆ ಹೋಗು. ನಿನಗೆ ಅತಿ ಶೀಘ್ರದಲ್ಲೇ ಒಬ್ಬ ಮಗನು ಹುಟ್ಟುತ್ತಾನೆ. ಅವನಿಗೆ ರಾಮ್ ಎಂದು ಹೆಸರಿಡು" ಎಂದು ಭವಿಷ್ಯ ನುಡಿದರು. ಸಾಯಿಬಾಬಾರವರು ಹೀಗೆ ನುಡಿದ ಸ್ವಲ್ಪ ಹೊತ್ತಿನಲ್ಲೇ ಅವರ ತಂದೆ ಹಾಗೂ ಮಾವನವರು ದ್ವಾರಕಾಮಾಯಿಗೆ ಬಂದರು. ಅವರುಗಳು "ಬಾಬಾ, ದಯವಿಟ್ಟು ಈ ಮಾಧವನನ್ನು ಮನೆಗೆ ಕಳುಹಿಸಿಕೊಡಿ. ಇವನಿಗೆ ಮದುವೆಯಾಗಿದ್ದರೂ ಕೊಡ ಸ್ವಲ್ಪವೂ ಜವಾಬ್ದಾರಿಯಿಲ್ಲ" ಎಂದು ಬೇಡಿಕೊಂಡರು. ಅದಕ್ಕೆ ಉತ್ತರವಾಗಿ ಸಾಯಿಬಾಬಾರವರು "ಈ ಮಾಧವ ನಿಮ್ಮೊಂದಿಗೆ ಮನೆಗೆ ಬರುತ್ತಾನೆ" ಎಂದು ನುಡಿದರು. ಸಾಯಿಬಾಬಾರವರ ಆಜ್ಞೆಯಂತೆ ಮಾಧವ ಅವರಿಬ್ಬರ ಜೊತೆಯಲ್ಲಿ ಮನೆಗೆ ವಾಪಾಸಾದನು. ಸಾಯಿಬಾಬಾರವರು ನುಡಿದಂತೆ ಸರಿಯಾಗಿ ಒಂದು ವರ್ಷದ ಒಳಗಾಗಿ ಅವನಿಗೆ ಗಂಡು ಮಗುವಿನ ಜನನವಾಯಿತು. ಅವನಿಗೆ ರಾಮಚಂದ್ರ ಎಂದು ನಾಮಕರಣ ಮಾಡಲಾಯಿತು.

ಶ್ರೀ.ರಾಮಚಂದ್ರ ಎಂ.ಅಡ್ಕರ್ ರವರು 5ನೇ ತರಗತಿಯವರೆಗೂ ಮರಾಠಿ ಮಾಧ್ಯಮದಲ್ಲಿ ಅಭ್ಯಾಸ ಮಾಡಿದರು. ಇವರ ತಂದೆ ಒಳ್ಳೆಯ ಭಾಷಾ ತಜ್ಞರಾಗಿದ್ದರು. ಅವರು ಇವರಿಗೆ ಉರ್ದು ಭಾಷೆಯನ್ನು ಓದಲು ಹಾಗೂ ಬರೆಯಲು ಕಲಿಸಿದರು. ಇವರು ವಿದ್ಯೆಯನ್ನು ಪೂರ್ಣಗೊಳಿಸಿ ಅಧ್ಯಾಪಕ ವೃತ್ತಿಯನ್ನು ಕೈಗೊಳ್ಳಬೇಕೆಂದು ಅಂದುಕೊಂಡಿದ್ದರು. ಆದರೆ ಇವರಿಗೆ ಅದಕ್ಕಿಂತ ಉನ್ನತ ಹುದ್ದೆಯಾದ ಮುಖ್ಯೋಪಾಧ್ಯಾಯರ ಹುದ್ದೆ ದೊರೆಯಿತು. ಇವರು ನಾಲ್ಕು ಶಾಲೆಗಳಿಗೆ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲಸ ದೊರಕಿದ ಮೂರು ತಿಂಗಳಿನಲ್ಲೇ ಇವರು ಶ್ರೀಮತಿ.ಮಥುರಾ ಬಾಯಿ ಕುಲಕರ್ಣಿಯವರನ್ನು ವಿವಾಹವಾದರು. ಇವರು ತಮ್ಮ ತಂದೆಯ ಊರಾದ ಬರ್ಸಿಯಲ್ಲಿ ತಮ್ಮ ತಂದೆಯ ಮನೆಯಲ್ಲಿ ಇದ್ದುಕೊಂಡು ಮುಖ್ಯೋಪಾಧ್ಯಾಯರ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಕಾಲಾನಂತರದಲ್ಲಿ ಇವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಮೂರು ಹೆಣ್ಣು ಮಕ್ಕಳು ಜನಿಸಿದರು. ಇವರು 1972 ನೇ ಇಸವಿಯಲ್ಲಿ ನೌಕರಿಯಿಂದ ನಿವೃತ್ತರಾದರು ಹಾಗೂ 1980 ನೇ ಇಸವಿಯಲ್ಲಿ ಪುಣೆಗೆ ಬಂದು ಶಾಶ್ವತವಾಗಿ ನೆಲೆಸಿದರು. 



ಶ್ರೀ.ರಾಮಚಂದ್ರ ಅಡ್ಕರ್ ರವರಿಗೆ ಈಗ ಬಹಳ ವಯಸ್ಸಾಗಿರುವ ಕಾರಣ ಸಾಯಿಬಾಬಾರವರ ಮುಖ ಸರಿಯಾಗಿ ಜ್ಞಾಪಕಕ್ಕೆ ಬರುತ್ತಿಲ್ಲ. "ಆದರೆ, ಇಂದಿಗೂ ನನಗೆ ಸಾಯಿಬಾಬಾರವರ ಪವಿತ್ರ ಪಾದಗಳ ನೆನಪು ಚೆನ್ನಾಗಿದೆ" ಎಂದು ಅವರನ್ನು ಇತ್ತೀಚೆಗೆ ಭೇಟಿ ಮಾಡಿದ ಪುಣೆಯ ಸಾಯಿ ಭಕ್ತರಾದ ಶ್ರೀ.ನಾಗರಾಜ್ ಅನ್ವೇಕರ್ ರವರಿಗೆ ಸ್ವತಃ ಅವರೇ ಹೇಳಿರುತ್ತಾರೆ.

ಸಾಯಿಬಾಬಾರವರ ದಯೆ ಹಾಗೂ ಆಶೀರ್ವಾದದಿಂದ ಶ್ರೀ.ರಾಮಚಂದ್ರ ಅಡ್ಕರ್ ರವರು ತಮ್ಮ ಧರ್ಮಪತ್ನಿ ಹಾಗೂ ಮಕ್ಕಳೊಂದಿಗೆ ಪುಣೆಯ ತಮ್ಮ ನಿವಾಸದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ರಾಮಚಂದ್ರ ಎಂ.ಅಡ್ಕರ್ ರವರ ಸಂಪರ್ಕದ ವಿವರಗಳನ್ನು  ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

ವಿಳಾಸ:

ಶ್ರೀ.ರಾಮಚಂದ್ರ ಎಂ.ಅಡ್ಕರ್
ಶಾಂತಾ ಸೊಸೈಟಿ, ಸಂತ ಸಂಗ್ ಬಂಗ್ಲೆ,
ಸೇನಾಪತಿ ಬಾಪಟ್ ರಸ್ತೆ,
ಪುಣೆ - 411 016,
ಮಹಾರಾಷ್ಟ್ರ, ಭಾರತ

ಮಾರ್ಗಸೂಚಿ:

ಚತುರಶ್ರೀ ದೇವಸ್ಥಾನದ ಎದುರುಗಡೆ ರಸ್ತೆಯಲ್ಲಿ ನೇರವಾಗಿ ಸ್ವಲ್ಪ ದೂರ ಕ್ರಮಿಸಿದರೆ ಸಿಂಬಯಾಸಿಸ್ ಸಂಸ್ಥೆ ಸಿಗುತ್ತದೆ. ಅಲ್ಲಿಂದ ಸ್ವಲ್ಪವೇ ದೂರದಲ್ಲಿ ದೇನಾ ಬ್ಯಾಂಕ್ ವೃತ್ತ ಸಿಗುತ್ತದೆ. ದೇನಾ ಬ್ಯಾಂಕ್ ವೃತ್ತದಲ್ಲಿ ಎಡಕ್ಕೆ ತಿರುಗಿ ಸ್ವಲ್ಪ ಮುಂದೆ ಹೋಗಿ ಮೊದಲ ಬಲ ತಿರುವಿನಲ್ಲಿ ತಿರುಗಿದರೆ ಶ್ರೀ.ರಾಮಚಂದ್ರ ಅಡ್ಕರ್ ರವರ್ ನಿವಾಸ ಸಿಗುತ್ತದೆ. 

ದೂರವಾಣಿ ಸಂಖ್ಯೆಗಳು:

+91 20 3092 8078 / +91 98220 30201

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment