Sunday, May 31, 2015

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಿವೃತ್ತ ಅಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 31ನೇ ಮೇ 2015, ಭಾನುವಾರ ದಂದು ಇತ್ತೀಚೆಗೆ ನಿವೃತ್ತರಾದ ಸಂಸ್ಥಾನದ ಅಧಿಕಾರಿಗಳಾದ ಶ್ರೀ.ರಾಮರಾವ್ ಶೆಲ್ಕೆ, ಶ್ರೀ.ಸುಧಾಮ್ ಶೆಲ್ಕೆ, ಡಾ.ಭಾಸ್ಕರ ಚಂದಗುಡೆ, ಶ್ರೀ.ಮಚ್ಛೀಂದ್ರ ಧನೇಶ್ವರ್, ಶ್ರೀ.ರಾಯ್ ಬನ್ ಗುಂಜಾಲ್, ಶ್ರೀ.ಭಗವಾನ್ ಜುರಂಗೆ, ಶ್ರೀ.ಬಾವುಸಾಹೇಬ್ ಬೋಡ್ಗೆ, ಶ್ರೀ.ಜಮಾದಾರ್ ಸಯ್ಯದ್, ಶ್ರೀ.ಅರ್ಜುನ್ ಸುಫೇಕರ್ ಮತ್ತು ಶ್ರೀ. ಭಾಸ್ಕರ್ ಕೊಹ್ಲೆಯವರಿಗೆ  ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿತ್ತು. ಈ ಸಮಾರಂಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಮುಖ್ಯ ಲೆಕ್ಕಾಧಿಕಾರಿಗಳಾದ ಶ್ರೀ.ದಿಲೀಪ್ ಜಿರ್ಪೆ, ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ದಿಲೀಪ್ ಉಗಳೆ, ಶ್ರೀ.ಅಶೋಕ್ ಅವುಟಿ ಹಾಗೂ ಎಲ್ಲಾ ವಿಭಾಗೀಯ ಪ್ರಮುಖರು ಉಪಸ್ಥಿತರಿದ್ದರು. 


ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ.ರಾಜೇಂದ್ರ ಜಾಧವ್ ರವರು ಶ್ರೀ ಸಾಯಿಬಾಬಾ ಸಂಸ್ಥಾನದ ಏಳಿಗೆ ಮತ್ತು ಪ್ರಗತಿಯ ನಿಟ್ಟಿನಲ್ಲಿ  ಸಂಸ್ಥಾನದ ಸಿಬ್ಬಂದಿ ವರ್ಗದವರು ಹೆಚ್ಚಿನ ಪರಿಶ್ರಮವಹಿಸಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾದ ಅವಶ್ಯಕತೆಯಿದೆ ಎಂಬುದಾಗಿ ನುಡಿದರು.

ದಿನೇ ದಿನೇ ಸಿಬ್ಬಂದಿ ವರ್ಗದವರ ಮೇಲಿನ ಕೆಲಸದ ಒತ್ತಡ ಬಹಳ ಹೆಚ್ಚಾಗುತ್ತಿದೆ  ಎಂದ ಶ್ರೀ.ರಾಜೇಂದ್ರ ಜಾಧವ್ ರವರು ತಮ್ಮ ಮಾತನ್ನು ಮುಂದುವರೆಸಿ ಭಾರತದ ಎಲ್ಲ ಕಡೆಗಳಿಂದ ಹಾಗೂ ವಿದೇಶಗಳಿಂದ ಹರಿದು ಬರುತ್ತಿರುವ ಭಕ್ತರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಸಂಸ್ಥಾನದ ಸಿಬ್ಬಂದಿಗಳು ಅತ್ಯಂತ ಮುತುವರ್ಜಿ ವಹಿಸಿ ದುಡಿಯುತ್ತಿದ್ದಾರೆ ಎಂದರು. ಹಾಗಾಗಿ, ಪ್ರತಿಯೋರ್ವ ಸಿಬ್ಬಂದಿಯೂ ಸಂಸ್ಥಾನವನ್ನು ತಮ್ಮ ಮನೆಯೆಂದು ತಿಳಿಯಬೇಕಾದ ಅವಶ್ಯಕತೆಯಿದೆ ಎಂದು ನುಡಿದರು. ಅಲ್ಲದೇ ಸಂಸ್ಥಾನದ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಸಂಸ್ಥಾನದ ನಿವೃತ್ತ ನೌಕರರ ಸಲಹೆ ಸೂಚನೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ನೌಕರರ ಪರವಾಗಿ ಮಾತನಾಡಿದ ಶ್ರೀ.ರಾಮರಾವ್ ಶೆಲ್ಕೆ, ಶ್ರೀ.ಸುಧಾಮ್ ಶೆಲ್ಕೆ, ಡಾ.ಭಾಸ್ಕರ ಚಂದಗುಡೆಯವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಅಂತೆಯೇ ಸಂಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ.ಯು.ಪಿ.ಗೋಂಡ್ಕರ್, ಶ್ರೀ.ಸುಭಾಷ್ ಗಾರ್ಕಲ್, ವೈದ್ಯಕೀಯ ಅಧೀಕ್ಷಕರಾದ ಡಾ.ಪ್ರಭಾಕರ್ ರಾವ್, ಉಪಾಧ್ಯಾಯರುಗಳಾದ ಶ್ರೀ.ಪಟಾಣಿ, ಶ್ರೀ.ವಿಷ್ಣು ತೋರಟ್  ರವರುಗಳು ಕೂಡ ಈ ಸಂದರ್ಭದಲ್ಲಿ ಮಾತನಾಡಿದರು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment