Sunday, January 25, 2015

ಜಿಲ್ಲಾವಾರು ಆಶುಭಾಷಣ ಸ್ಪರ್ಧೆಯಲ್ಲಿ ಜಯಗಳಿಸಿದ ಸಾಯಿಬಾಬಾ ಬಾಲಕಿಯರ ಶಾಲೆಯ ಕುಮಾರಿ.ಪೋತೆದಾರ್ ಪೂಜಾ ಶುಭ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಬಳಿಯಿರುವ ಶ್ರೀರಾಮಪುರದ ಡಿ.ಡಿ.ಕಚೋಲೆ ಪ್ರೌಢಶಾಲೆಯು ಇತ್ತೀಚೆಗೆ ಮಾಜಿ ಕೇಂದ್ರ ಕೃಷಿ ಸಚಿವ ಡಾ.ಅಣ್ಣಾಸಾಹೇಬ್ ಶಿಂಧೆಯವರ ಸ್ಮರಣಾರ್ಥವಾಗಿ ಜಿಲ್ಲಾವಾರು ಆಶುಭಾಷಣ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪಧೆಯಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಸಾಯಿಬಾಬಾ ಬಾಲಕಿಯರ ಶಾಲೆಯ ಕುಮಾರಿ.ಪೋತೆದಾರ್ ಪೂಜಾ ಶುಭ ಮೊದಲ ಸ್ಥಾನವನ್ನು ಗಳಿಸಿ 1001/- ರೂಪಾಯಿ ನಗದು ಹಾಗೂ ಪ್ರಶಂಸಾ ಪತ್ರವನ್ನು ತನ್ನದಾಗಿಸಿಕೊಂಡಳು. ಈ ವಿಷಯವನ್ನು 19ನೇ ಜನವರಿ 2015, ಸೋಮವಾರದಂದು ನಡೆದ ಪತ್ರಿಕಾ ಪ್ರಕಟಣೆಯಲ್ಲಿ ಸುದ್ಧಿಗಾರರಿಗೆ ತಿಳಿಸಲಾಯಿತು. 

ಈ ಸ್ಪರ್ಧೆಯನ್ನು 16ನೇ ಜನವರಿ 2015 ರಂದು ಶ್ರೀರಾಮಪುರದ ಡಿ.ಡಿ.ಕಚೋಲೆ ಪ್ರೌಢಶಾಲೆಯು ಹಮ್ಮಿಕೊಂಡಿತ್ತು. ಈ ಸ್ಪರ್ಧೆಯಲ್ಲಿ ಸಾಯಿಬಾಬಾ ಬಾಲಕಿಯರ ಶಾಲೆಯ ಕುಮಾರಿ.ಕಾಳೆ ಪ್ರಾಜಕ್ತಾ, ಕುಮಾರಿ.ಪಾಟೀಲ್ ವೈಷ್ಣವಿ, ಕುಮಾರಿ.ಸನಪ್ ಸಿನ್ಹಾ, ಕುಮಾರಿ. ಪೋತೆದಾರ್ ಪೂಜಾ ಶುಭ ಹಾಗೂ ಸಾಯಿಬಾಬಾ ಆಂಗ್ಲ ಮಾಧ್ಯಮಿಕ ಶಾಲೆಯ  ಕುಮಾರಿ.ವಾಣಿ ಸಾಯಿ ಪ್ರಸಾದ್ ವಸಂತ್ ಹಾಗೂ ಕುಮಾರಿ.ಶೃತಿ ವಸಂತ್ ರವರುಗಳು ಭಾಗವಹಿಸಿದ್ದರು. ಆಶುಭಾಷಣ ಸ್ಪರ್ಧೆಗೆ " “ Save Girl Save Nation“, “ Swatcchhata  Abhiyan” ಹಾಗೂ “contribution in Education field by Karmavir Bhaurao Patil” ವಿಷಯಗಳನ್ನು ವಿದ್ಯಾರ್ಥಿನಿಯರು ಆಯ್ದುಕೊಂಡಿದ್ದರು. ವಿದ್ಯಾರ್ಥಿನಿಯರು ಅತ್ಯುತ್ತಮವಾಗಿ ಮಾತನಾಡಿ ತಮ್ಮ ಆಶುಭಾಷಣ ಪ್ರೌಢಿಮೆಯನ್ನು ಮೆರೆದು ನೆರದಿದ್ದ ಸಭಿಕರ ಹೃದಯಗಳನ್ನು ಸೂರೆಗೊಂಡರು. ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಮತ್ತು ಜಿಲ್ಲಾ ನ್ಯಾಯಾಧೀಶರಾದ ಶ್ರೀ.ವಿನಯ್ ಜೋಶಿ, ಜಿಲ್ಲಾ ಕಲೆಕ್ಟರ್ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಶಿಕ್ಷಣ ವಿಭಾಗದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ದಿಲೀಪ್ ಉಗಳೆ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಿ.ಡಿ.ಸಬಲೆ, ಶ್ರೀ.ಎಸ್.ವಿ.ಗಮೆ, ಶ್ರೀ.ಎಸ್.ಎನ್. ಗಾರ್ಕಲ್,ಶ್ರೀ.ಯು.ಪಿ.ಗೋಂದ್ಕರ್,  ಪ್ರಾಂಶುಪಾಲರಾದ ಶ್ರೀಮತಿ.ನೀತಾ ಚವಂಕೆಯವರುಗಳು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಶುಭಾಶಯ ಕೋರಿದರು. ಈ ವಿದ್ಯಾರ್ಥಿನಿಯರ ಯಶಸ್ಸಿಗೆ ವಿದ್ಯಾರ್ಥಿನಿಯರ ಗುರುಗಳಾದ ಶ್ರೀ.ವಸಂತ್ ಕಿಶನ್ ವಾಣಿಯವರು ಕಾರಣೀಭೂತರಾಗಿರುತ್ತಾರೆ. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment