Thursday, November 28, 2013

ಎಸ್. ಕೆ.ವಿ. ಫಿಲಂಸ್ ನ ವತಿಯಿಂದ ಶಿರಡಿಯಲ್ಲಿ ಹಿಂದಿ ಚಲನಚಿತ್ರ "ಶಿರಡಿ ಜೈ ಸಾಯಿರಾಂ" ನ ಧ್ವನಿಸುರಳಿ ಬಿಡುಗಡೆ ಸಮಾರಂಭದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ


ಎಸ್. ಕೆ.ವಿ. ಫಿಲಂಸ್  ಇದೇ ತಿಂಗಳ 28ನೇ ನವೆಂಬರ್ 2013, ಗುರುವಾರ ದಂದು ಮಧ್ಯಾನ್ಹ 3:30 ಕ್ಕೆ ಶಿರಡಿಯ ಸಮಾಧಿ ಮಂದಿರದ ಆವರಣದಲ್ಲಿ ತನ್ನ ಹೊಸ ಹಿಂದಿ ಚಲನಚಿತ್ರ "ಶಿರಡಿ ಜೈ ಸಾಯಿರಾಂ" ನ ಧ್ವನಿಸುರಳಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದೆ. 

ಚಲನಚಿತ್ರದ ಧ್ವನಿಸುರಳಿಯನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಬಿಡುಗಡೆ ಮಾಡಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ವಹಿಸಲಿದ್ದಾರೆ. 

 
ಚಲನಚಿತ್ರವನ್ನು ಶ್ರೀಮತಿ.ವಿ.ರಾಧಿಕಾ ಹಾಗೂ ಶ್ರೀಮತಿ. ಸಾಯಿ ವೆಂಕಟೇಶ್ವರಮ್ಮ ರವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. 

ಚಲನಚಿತ್ರದಲ್ಲಿ ಶಿರಡಿ ಸಾಯಿಬಾಬಾರವರ ಅವತರಣ ಕಾಲದಲ್ಲಿ ಜರುಗಿದ ಅಪರೂಪದ ಘಟನೆಗಳನ್ನು ಚಿತ್ರಿಸಲಾಗಿದ್ದು ಇದುವರೆಗೂ  ಸಾಯಿಬಾಬಾರವರ ಬಗ್ಗೆ ಬಿಡುಗಡೆಯಾದ ಯಾವ ಚಿತ್ರದಲ್ಲೂ ಈ ದೃಶ್ಯಗಳನ್ನು ಚಿತ್ರಣ ಮಾಡಿರುವುದಿಲ್ಲ ಎಂದು ನಿರ್ಮಾಪಕರು ಪತ್ರಕರ್ತರಿಗೆ ತಿಳಿಸಿದರು. 

ಸಾಯಿಬಾಬಾರವರು ತಮ್ಮ ಸಮಾಧಿಯಾಗುವುದಕ್ಕೆ ಮುಂಚೆ ಭಕ್ತೆ ಲಕ್ಷ್ಮಿಭಾಯಿಗೆ ಒಂಬತ್ತು ರೂಪಾಯಿಗಳನ್ನು ದಾನವಾಗಿ ನೀಡಿದಂತೆ ಈ ಚಲನಚಿತ್ರದಲ್ಲಿ ಒಂಬತ್ತು ಸುಂದರ ಹಾಡುಗಳಿರುತ್ತವೆ

ಸಾಯಿ ಭಕ್ತರಿಗೆಲ್ಲಾ ತಿಳಿದಿರುವಂತೆ ಸಾಯಿಬಾಬಾರವರು ಎಲ್ಲಾ ತರಹದ ಯೋಗಾಸನಗಳಲ್ಲೂ ಪರಿಣತಿಯನ್ನು ಹೊಂದಿದ್ದರು. ಸಾಯಿಬಾಬಾರವರ ಬಗ್ಗೆ ಇದುವರೆಗೂ ಬಿಡುಗಡೆಯಾಗಿರುವ ಯಾವುದೇ ಚಿತ್ರದಲ್ಲೂ ಚಿತ್ರಣ ಮಾಡಿರದ ಖಂಡ ಯೋಗ ದೃಶ್ಯವನ್ನು ಈ ಚಲನಚಿತ್ರದಲ್ಲಿ ಸೇರಿಸಲಾಗಿದೆ ಎಂದು ನಿರ್ಮಾಪಕರು ತಿಳಿಸಿದರು. 

ಚಲನಚಿತ್ರದ ಕಲಾ ನಿರ್ದೇಶಕರಾದ ಪದ್ಮಶ್ರೀ ತೋಟಾ ತರಾಣಿಯವರು ಈ ಚಲನಚಿತ್ರಕ್ಕೆಂದೇ ವಿಶೇಷವಾದ ಸೆಟ್ ಗಳನ್ನು ನಿರ್ಮಾಣ ಮಾಡಿದ್ದು ಸಾಯಿ ಭಕ್ತರನ್ನು ಸಾಯಿಬಾಬಾರವರ ಅವತರಣ ಕಾಲಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನಿರ್ಮಾಪಕಿಯರು ಅಭಿಪ್ರಾಯ ಪಡುತ್ತಾರೆ. 

ಚಲನಚಿತ್ರದಲ್ಲಿ ತಾತಾ ರೆಡ್ಡಿ, ನಾರಾಯಣ ರಾವ್, ರಾಜಕುಮಾರ್, ದಿವಂಗತ ಸುತ್ತಿವೇಲು, ಸೂರ್ಯ ಭಗವಾನ್ ರಾಜ್, ಮುರಳಿ, ಭಾವನಾ, ವಿಜಯ್ ಕುಟ್ಟಿ  ಹಾಗೂ ಇನ್ನೂ ಹಲವಾರು ಕಲಾವಿದರು ಪಾತ್ರವಹಿಸುತ್ತಿದ್ದು ಛಾಯಾಗ್ರಹಣ ಹಾಗೂ ನಿರ್ದೇಶನದ ಹೊಣೆಯನ್ನು ಶ್ರೀ.ಪಿ.ಭಾಸ್ಕರ ಬಾಬಾರವರು ಹೊತ್ತಿದ್ದಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment