Monday, October 11, 2010

ಚಿಕ್ಕಬಳ್ಳಾಪುರ ಜಿಲ್ಲೆಯ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿನಾಥ ಸೇವಾ ಟ್ರಸ್ಟ್ (ರಿ), ಕೆ.ಹೆಚ್.ಬಿ.ಕಾಲೋನಿ, ಬಾಗೇಪಲ್ಲಿ-561 207 - ಕೃಪೆ - ಸಾಯಿಅಮೃತಧಾರಾ.ಕಾಂ

ಈ ಸುಂದರ ಸಾಯಿಬಾಬಾ ಮಂದಿರವು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿದೆ. ಈ ಮಂದಿರವು ಬೆಟ್ಟ ಸಾಲುಗಳ ಶ್ರೇಣಿಯ ನಡುವೆ ನಿರ್ಮಿತವಾಗಿದ್ದು ದೇವಾಲಯದ ಹೊರನೋಟ ಬಹಳ ರಮಣೀಯವಾಗಿದೆ. ಈ ದೇವಾಲಯದ ಪೂರ್ಣ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ದೇವಾಲಯದ ವಿಶೇಷತೆಗಳು:

  • ಈ ದೇವಾಲಯದ ಭೂಮಿಪೂಜೆಯನ್ನು 30 ನೇ ಮಾರ್ಚ್ 2000 ದಂದು ಕೋಲಾರದ ಶ್ರೀ. ಬಾಲಸುಬ್ರಮಣ್ಯಂ ಬಾಬಾರವರು ನೆರವೇರಿಸಿದರು. 
  • ಈ ದೇವಾಲಯವನ್ನು 16 ನೇ ಮೇ 2004 ರಂದು ತಮಿಳುನಾಡಿನ ಕರೂರು ನಿವಾಸಿಗಳಾದ ಅನನ್ಯ ಸಾಯಿಭಕ್ತ ಹಾಗೂ ಅವಧೂತರಾದ ಶ್ರೀ.ಶ್ರೀ.ಶ್ರೀ.ನರಸಿಂಹ ಬಾಬಾರವರು ಉದ್ಘಾಟಿಸಿದರು. ಧಾರ್ಮಿಕ ವಿಧಿಗಳನ್ನು ಆಂಧ್ರಪ್ರದೇಶದ ಅನಂತಪುರದ ನಿವಾಸಿಗಳಾದ ವೇದ ಬ್ರಹ್ಮ ಶ್ರೀ.ಮಲ್ಲಿಕಾರ್ಜುನ ಶಾಸ್ತ್ರಿಗಳು ನೆರವೇರಿಸಿದರು. 
  • 5-1/2 ಅಡಿಯ ಅಮೃತ ಶಿಲೆಯ ಸುಂದರ ಸಾಯಿಬಾಬಾರವರ ವಿಗ್ರಹವು ಮಂದಿರದಲ್ಲಿ ರಾರಾಜಿಸುತ್ತಿದೆ. 
  • ದೇವಾಲಯದ ಹೊರಗಡೆ ಬೇವಿನ ಮರದ ಅಕ್ಕಪಕ್ಕದಲ್ಲಿರುವಂತೆ ಗಣಪತಿ ಮತ್ತು ದತ್ತಾತ್ರೇಯ ದೇವಾಲಯಗಳನ್ನು ನಿರ್ಮಿಸಲಾಗಿದೆ. 
  • ದೇವಾಲಯದ ಹೊರಗಡೆ ಬಹಳ ಸುಂದರವಾಗಿ ಮತ್ತು ದೊಡ್ಡದಾಗಿ ಪವಿತ್ರ ಧುನಿಯನ್ನು ನಿರ್ಮಿಸಲಾಗಿದೆ. 
  • ದೇವಾಲಯದ ಒಳಗಡೆ ಸಾಯಿಬಾಬಾರವರ ವಿಗ್ರಹದ ಮುಂದೆ ನಂದಿಯ ವಿಗ್ರಹವನ್ನು ಶಿರಡಿಯಲ್ಲಿರುವಂತೆಯೇ ನಿರ್ಮಿಸಲಾಗಿದೆ. 
  • 2-1/2 ಅಡಿಗಳ 100 ಕೆಜಿ ತೂಕವಿರುವ ಸುಂದರ ಪಂಚಲೋಹದ ಸಾಯಿಬಾಬಾ ವಿಗ್ರಹವಿದ್ದು ಅದನ್ನು ಉತ್ಸವದ ಸಂದರ್ಭಗಳಲ್ಲಿ ಬಳಸಲಾಗುತ್ತದೆ. 
  • ದೇವಾಲಯದ ಹೊರಗಡೆ ಸಾಯಿಬಾಬಾರವರ ವಿಗ್ರಹಕ್ಕೆ ಎದುರಾಗಿ ಕಾಣುವಂತೆ 38 ಅಡಿಗಳ ಆಳೆತ್ತರದ ಹನುಮಂತನ ವಿಗ್ರಹವು ರಾರಾಜಿಸುತ್ತಿದ್ದು ನೋಡುಗರ ಕಣ್ಮನಗಳು ಸೆಳೆಯುತ್ತವೆ. 
  • ಸುಂದರ ತುಳಸಿ ಬೃಂದಾವನವನ್ನು ದೇವಾಲಯದ ಹೊರಭಾಗದಲ್ಲಿ ಇರಿಸಲಾಗಿದೆ. 

 ದೇವಾಲಯದ ರಾಜಗೋಪುರ 

 ದೇವಾಲಯದ ಹೊರನೋಟ 

 ಸಾಯಿಬಾಬಾರವರ ಸುಂದರ ವಿಗ್ರಹ 

ಬೇವಿನ ಮರದ ಅಕ್ಕಪಕ್ಕದಲ್ಲಿರುವ ಗಣೇಶ ಮತ್ತು ದತ್ತಾತ್ರೇಯರ ದೇವಾಲಯಗಳು 

 ಪವಿತ್ರ ಧುನಿ 

 38 ಅಡಿಗಳ ಭವ್ಯ ಹನುಮಾನ್ ವಿಗ್ರಹ 

 ದೇವಾಲಯದ ಮುಂಭಾಗದಲ್ಲಿರುವ ತುಳಸಿ ಬೃಂದಾವನ 


ದೇವಾಲಯದ ದಿನನಿತ್ಯದ ಕಾರ್ಯಚಟುವಟಿಕೆಗಳು:


ಆರತಿಯ ಸಮಯ

ಆರತಿ
ಸಮಯ
ಕಾಕಡ ಆರತಿ 6:30 am
ಮಧ್ಯಾನ್ಹ ಆರತಿ 12:00 pm
ಧೂಪಾರತಿ 6.00 pm
ಶೇಜಾರತಿ 8:00 pm

ಸಾಯಿಬಾಬಾರವರಿಗೆ ಅರ್ಚನೆಯನ್ನು 5 /- ಗಳಿಗೆ ಮಾಡಲಾಗುತ್ತದೆ.
ಸಾಯಿಬಾಬಾರವರ ಪಂಚಲೋಹದ ವಿಗ್ರಹಕ್ಕೆ ಪ್ರತಿನಿತ್ಯ ಅಭಿಷೇಕ ಮಾಡಲಾಗುತ್ತದೆ. ಸೇವೆಯನ್ನು ಮಾಡಿಸಲು ಇಚ್ಚಿಸುವ ಸಾಯಿಭಕ್ತರು 109 /- ರುಪಾಯಿಗಳನ್ನು ಕೊಟ್ಟು ರಸೀದಿಯನ್ನು ಪಡೆಯತಕ್ಕದ್ದು. 
ಪ್ರತಿ ಗುರುವಾರ ದೇವಾಲಯಕ್ಕೆ ಬರುವ ಎಲ್ಲಾ ಸಾಯಿಭಕ್ತರಿಗೆ ಅನ್ನದಾನ ಮಾಡಲಾಗುತ್ತದೆ. ಸೇವೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಸಾಯಿಭಕ್ತರು 200 /-  ರುಪಾಯಿಗಳನ್ನು ಕೊಟ್ಟು ರಸೀದಿಯನ್ನು ಪಡೆಯತಕ್ಕದ್ದು. 
ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸೇವೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಸಾಯಿಭಕ್ತರು 30 /- ರುಪಾಯಿಗಳನ್ನು ಕೊಟ್ಟು ರಸೀದಿಯನ್ನು ಪಡೆಯತಕ್ಕದ್ದು. 

ದೇವಾಲಯದಲ್ಲಿ ನಡೆಸುವ ಪ್ರಮುಖ ಉತ್ಸವಗಳು : 

1. ಪ್ರತಿ ವರ್ಷದ ಮೇ 16 ರಂದು ದೇವಾಲಯದ ವಾರ್ಷಿಕೋತ್ಸವ.
2 . ಗುರುಪೂರ್ಣಿಮೆ
3 . ಶ್ರೀರಾಮನವಮಿ
4 . ವಿಜಯದಶಮಿ
5 . ದತ್ತ ಜಯಂತಿ

ಸಾಮಾಜಿಕ ಕಾರ್ಯಚಟುವಟಿಕೆಗಳು

  • ಉಚಿತ ಆರೋಗ್ಯ ತಪಾಸಣಾ ಶಿಬಿರಗಳು
  • ಸಾಮುಹಿಕ ವಿವಾಹಗಳು 
  • ಪ್ರತಿ ಗುರುವಾರದ ಅನ್ನದಾನ ಕಾರ್ಯಕ್ರಮ

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ವಿಳಾಸ : 

ಶ್ರೀ ಶಿರಡಿ ಸಾಯಿನಾಥ ಸೇವಾ ಟ್ರಸ್ಟ್ (ರಿ)
ನೋಂದಣಿ ಸಂಖ್ಯೆ : B.K. IV/28/98-99
ಮೊದಲನೇ ವಾರ್ಡ್, ಕರ್ನಾಟಕ ಗೃಹಮಂಡಳಿ ಕಾಲೋನಿ
ನ್ಯಾಷನಲ್ ಕಾಲೇಜು ಎದುರುಗಡೆ
ಬಾಗೇಪಲ್ಲಿ - 561 ೨೦೭.
ಚಿಕ್ಕಬಳ್ಳಾಪುರ ಜಿಲ್ಲೆ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಜಿ.ವಿ.ಬಾಬು ರೆಡ್ಡಿ / ಕೆ.ವಿ.ಪಾಂಡುರಂಗ

ದೂರವಾಣಿ ಸಂಖ್ಯೆಗಳು: 


94484 10555 / 94804 24213 / 08150-28331

ಮಾರ್ಗಸೂಚಿ: 

ಬಾಗೇಪಲ್ಲಿ ಬಸ್ ನಿಲ್ದಾಣದಲ್ಲಿ ಇಳಿದು ಪೂರ್ವ ದಿಕ್ಕಿನಲ್ಲಿ 2 ಕಿಲೋಮೀಟರ್ ನಡೆದರೆ ಸಾಯಿಮಂದಿರ ಸಿಗುತ್ತದೆ. ನ್ಯಾಷನಲ್ ಕಾಲೇಜ್ ಎದುರುಗಡೆ ಈ ಮಂದಿರವಿದೆ.

ಕನ್ನಡ ಅನುವಾದ - ಶ್ರೀಕಂಠ ಶರ್ಮ

No comments:

Post a Comment