ಬೆಂಗಳೂರಿನ ಸಾಯಿಮಂದಿರ - ಶ್ರೀ ಸಾಯಿ ಲಿಂಗೇಶ್ವರ ಆಧ್ಯಾತ್ಮಿಕ ಕೇಂದ್ರ, ಕುಮಾರಗಿರಿ, ಕುಮಾರಸ್ವಾಮಿ ಬಡಾವಣೆ, ಬೆಂಗಳೂರು-560 078 - ಕೃಪೆ - ಸಾಯಿ ಅಮೃತಧಾರಾ.ಕಾಂ
ಈ ದೇವಾಲಯವು ಬೆಂಗಳೂರಿನ ದಕ್ಷಿಣ ಭಾಗದ ಪ್ರತಿಷ್ಟಿತ ಬಡಾವಣೆಗಳಲ್ಲಿ ಒಂದಾದ ಕುಮಾರಸ್ವಾಮಿ ಬಡಾವಣೆಯಲ್ಲಿ ಇದೆ. ಈ ದೇವಾಲಯದ ಸಂಪೂರ್ಣ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
- ಈ ದೇವಾಲಯವನ್ನು ಮಾರ್ಚ್ 1993 ರಲ್ಲಿ ವೇದ ಬ್ರಹ್ಮ ಶ್ರೀ.ನಾಗರಾಜ ಅವಧಾನಿಗಳು ಉದ್ಘಾಟಿಸಿದರು.
- ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಅಮೃತ ಶಿಲೆಯ ಒಂದು ಸಣ್ಣ ವಿಗ್ರಹ ಮತ್ತು ಪಂಚಲೋಹದ ವಿಗ್ರಹಗಳಿವೆ.
- ಈ ದೇವಾಲಯದ ಒಳಗಡೆ ಇರುವ ಸಣ್ಣ ಬಂಡೆಯ ಮೇಲೆ ಸಾಯಿಬಾಬಾರವರ ಚಿತ್ರ ಉದ್ಭವವಾಗಿದ್ದು ಅದನ್ನು ಸಾಯಿಲಿಂಗೇಶ್ವರ ಎಂದು ಭಾವಿಸಿ ಪೂಜಿಸಲಾಗುತ್ತಿದೆ.
- ಈ ಬಂಡೆಯ ಬಲಗಡೆಯಲ್ಲಿ ಮತ್ತೊಂದು ಸಣ್ಣ ಬಂಡೆಯಿದ್ದು, ಆ ಬಂಡೆಯ ಮೇಲೆ ಉತ್ತರಾಭಿಮುಖವಾಗಿ ಶಿರಡಿ ಸಾಯಿಬಾಬಾರವರು ಕುಳಿತು ಸಾಯಿಭಕ್ತರೊಬ್ಬರಿಗೆ ದರ್ಶನ ನೀಡಿದರೆಂದು ಹೇಳಲಾಗಿದ್ದು ಆ ಬಂಡೆಯನ್ನು ಇಂದಿಗೂ ಪೂಜಿಸಲಾಗುತ್ತಿದೆ.
- ದೇವಾಲಯದ ಎಡಭಾಗದಲ್ಲಿ ಸಾಯಿಯವರ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ.
- ಸಾಯಿಬಾಬಾ ದೇವಾಲಯದ ಪ್ರಕಾರದ ಹಿಂಭಾಗದಲ್ಲಿ ಔದುಂಬರ ವೃಕ್ಷ, ಶ್ರೀಗಂಧದ ಮರ ಮತ್ತು ಹೊಂಗೆಯ ಮರಗಳಿವೆ.
- ದೇವಾಲಯದ ಮುಂಭಾಗದಲ್ಲಿ ಪವಿತ್ರ ಬೇವಿನ ಮರ ಮತ್ತು ಅಶ್ವತ್ಥ ವೃಕ್ಷಗಳಿವೆ.
- ಔದುಂಬರ ವೃಕ್ಷದ ಪಕ್ಕದಲ್ಲಿ ಒಂದು ನಾಗರ ಹುತ್ತವಿದೆ.
- ಬಂಡೆಯ ಬಳಿ ಸದಾಕಾಲ ಕುಳಿತುಕೊಳ್ಳುತ್ತಿದ್ದ ಒಂದು ನಾಯಿಯ ಸಮಾಧಿಯನ್ನು ಔದುಂಬರ ವೃಕ್ಷದ ಪಕ್ಕದಲ್ಲಿ ಮಾಡಲಾಗಿದೆ.
ಬಂಡೆಯಲ್ಲಿ ಉದ್ಭವವಾಗಿರುವ ಸಾಯಿಲಿಂಗೇಶ್ವರನ ಚಿತ್ರ
ಭಕ್ತರೊಬ್ಬರಿಗೆ ಸಾಯಿಯವರು ಕುಳಿತು ದರ್ಶನ ನೀಡಿದರೆಂದು ಹೇಳಲಾಗುವ ಬಂಡೆ
ದೇವಾಲಯದ ಹೊರನೋಟ
ಗುರುಪೂರ್ಣಿಮೆಯಂದು ನಡೆಸುವ ಸಾಯಿಬಾಬಾರವರ ಫೋಟೋ ಮೆರವಣಿಗೆ
ದೇವಾಲಯದಲ್ಲಿ ದಿನನಿತ್ಯ ನಡೆಯುವ ಕಾರ್ಯಕ್ರಮಗಳು:
ಆರತಿಯ ಸಮಯ
ಆರತಿ
|
ಸಮಯ
|
ಕಾಕಡ ಆರತಿ | 6:00 am |
ಮಧ್ಯಾಹ್ನ ಆರತಿ | 12:00 pm |
ಧೂಪಾರತಿ | 6.00 pm |
ಶೇಜಾರತಿ | 8:30 pm |
ಪ್ರತಿನಿತ್ಯ ಪಂಚಲೋಹದ ಸಾಯಿಬಾಬಾರವರ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವೆಯನ್ನು ಮಾಡಿಸಲು ಇಚ್ಚಿಸುವ ಸಾಯಿಭಕ್ತರು 51 /- ರುಪಾಯಿಗಳನ್ನು ಕೊಟ್ಟು ರಸೀದಿಯನ್ನು ಪಡೆಯತಕ್ಕದ್ದು.
ಪ್ರತಿ ಹುಣ್ಣಿಮೆಯ ದಿನದಂದು ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸೇವೆಯನ್ನು ಮಾಡಿಸಲು ಇಚ್ಚಿಸುವ ಸಾಯಿಭಕ್ತರು 25 /- ರುಪಾಯಿಗಳನ್ನು ಕೊಟ್ಟು ರಸೀದಿಯನ್ನು ಪಡೆಯತಕ್ಕದ್ದು.
ವಿಶೇಷ ಉತ್ಸವದ ದಿನಗಳು
- ದೇವಾಲಯದ ವಾರ್ಷಿಕೋತ್ಸವ ಪ್ರತಿವರ್ಷದ ರಥ ಸಪ್ತಮಿಯಂದು.
- ರಾಮನವಮಿ
- ಶಿವರಾತ್ರಿ
- ಗುರುಪೂರ್ಣಿಮೆ (ಹೂವುಗಳಿಂದ ಅಲಂಕೃತವಾದ ಸಾಯಿಬಾಬಾ ಫೋಟೋವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ).
- ವಿಜಯದಶಮಿ
- ಸಣ್ಣ ಮಕ್ಕಳಿಗೆ ಸಂಸ್ಕೃತ ಶ್ಲೋಕದ ತರಗತಿಗಳು.
- ಪ್ರತಿನಿತ್ಯ ಪ್ರಸಾದ ವಿತರಣೆ ವ್ಯವಸ್ಥೆ
- ಸರ್ಕಾರಿ ಶಾಲೆಗಳಲ್ಲಿ ಓದುವ ಸುಮಾರು 200 ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ಪೆನ್ಸಿಲ್ ವಿತರಣೆ.
ಸ್ಥಳದ ವಿವರ:
ಸಾಗರ್ ಆಸ್ಪತ್ರೆಯ ಬಳಿ ಮತ್ತು ಕುಮಾರಸ್ವಾಮಿ ಬಡಾವಣೆಯ ದೂರವಾಣಿ ವಿನಿಮಯ ಕೇಂದ್ರದ ಹಿಂಭಾಗದಲ್ಲಿ ಈ ಮಂದಿರವಿದೆ.
ವಿಳಾಸ:
ಕುಮಾರ ಗಿರಿ, ಕುಮಾರಸ್ವಾಮಿ ದೇವಾಲಯದ ಆವರಣ, ಕುಮಾರಸ್ವಾಮಿ ಬಡಾವಣೆ, ಬೆಂಗಳೂರು-560 078 .
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀಮತಿ.ಸುಶೀಲಮ್ಮ / ಶ್ರೀಮತಿ.ಹೊನ್ನಮ್ಮ / ಶ್ರೀ.ರಾಜು / ಶ್ರೀಮತಿ.ಶ್ರೀದೇವಿ / ಶ್ರೀಮತಿ.ಲಲಿತಮ್ಮ / ಶ್ರೀಮತಿ. ರತ್ನಮ್ಮ.
ದೂರವಾಣಿ ಸಂಖ್ಯೆಗಳು:
94485 11898/ 92430 61314/98452 19404
ಈ ಮೇಲ್ ವಿಳಾಸ:
Sumangali_ashram@rediffmail.com
ಮಾರ್ಗಸೂಚಿ:
ದಯಾನಂದ ಸಾಗರ ಕಾಲೇಜ್ ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ಕುಮಾರಸ್ವಾಮಿ ಬಡಾವಣೆಯ ದೂರವಾಣಿ ವಿನಿಮಯ ಕೇಂದ್ರದ ಹಿಂಭಾಗದಲ್ಲಿ ಈ ಮಂದಿರವಿದೆ.
ಕನ್ನಡ ಅನುವಾದ - ಶ್ರೀ.ಶ್ರೀಕಂಠ ಶರ್ಮ
No comments:
Post a Comment