ಚಿತ್ತೂರಿನ ಸಾಯಿಬಾಬಾ ಮಂದಿರ - ಶಿರಡಿ ಸಾಯಿ ಧ್ಯಾನ ಮಂದಿರ - ರಂಗಾಚಾರಿ ರಸ್ತೆ, ಚಿತ್ತೂರು, ಆಂಧ್ರಪ್ರದೇಶ - ಕೃಪೆ : ಸಾಯಿಅಮೃತಧಾರಾ.ಕಾಂ
ಈ ಸಾಯಿಮಂದಿರವನ್ನು ಹೊಸದಾಗಿ ನಿರ್ಮಿಸಲಾಗಿದ್ದು ಚಿತ್ತೂರಿನ ರಂಗಾಚಾರಿ ರಸ್ತೆಯಲ್ಲಿರುವ ಲಕ್ಷ್ಮೀ ಚಿತ್ರಮಂದಿರದ ಪಕ್ಕದಲ್ಲಿರುತ್ತದೆ. ಪ್ರಸ್ತುತ ಸಣ್ಣ ಬಾಬಾ ವಿಗ್ರಹವಿದ್ದು ಮುಂದೆ ದೊಡ್ಡ ಸಾಯಿಬಾಬಾನ ವಿಗ್ರಹವನ್ನು ಪ್ರತಿಷ್ಠಾಪಿಸುವ ಯೋಜನೆಯನ್ನು ಮಂದಿರದ ಆಡಳಿತ ಮಂಡಳಿ ಹೊಂದಿದೆ. ಈ ದೇವಾಲಯದ ಸಮಗ್ರ ಮಾಹಿತಿಯನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
ಸಾಯಿಬಾಬಾರವರ ವಿಗ್ರಹ
ಬಾಬಾರವರ ಭಾವಚಿತ್ರ
ಸಾಯಿಬಾಬಾರವರ ಪಲ್ಲಕ್ಕಿ
ಅಮೃತ ಶಿಲೆಯ ಪಾದುಕೆಗಳು
- ಈ ಧ್ಯಾನ ಮಂದಿರದ ಭೂಮಿ ಪೂಜೆಯನ್ನು 23 ನೇ ಆಗಸ್ಟ್ 2010 ರಂದು ನೆರವೇರಿಸಲಾಯಿತು.
- ಈ ಧ್ಯಾನ ಮಂದಿರವನ್ನು 23 ನೇ ಆಗಸ್ಟ್ 2010 ರಂದು ಶ್ರೀಮತಿ.ಸಿ.ಮಾಧವಿಯವರು ಉದ್ಘಾಟಿಸಿದರು.
- ಧ್ಯಾನ ಮಂದಿರದಲ್ಲಿ ಪ್ರಸ್ತುತ ಸಣ್ಣ ಅಮೃತಶಿಲೆಯ ಸಾಯಿಬಾಬಾ ವಿಗ್ರಹವಿದ್ದು ಮುಂದಿನ ದಿನಗಳಲ್ಲಿ ದೊಡ್ಡ ವಿಗ್ರಹವನ್ನು ಪ್ರತಿಷ್ಠಾಪಿಸುವ ಯೋಜನೆಯನ್ನು ಮಂದಿರದ ಆಡಳಿತ ಮಂಡಳಿ ಹೊಂದಿದೆ.
- ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರವನ್ನು ಮಂದಿರದಲ್ಲಿ ಇಡಲಾಗಿದೆ.
- ಸುಂದರವಾದ ಮರದ ಪಲ್ಲಕ್ಕಿಯು ಮಂದಿರದಲ್ಲಿದ್ದು ಪ್ರತಿ ಗುರುವಾರದ ಪಲ್ಲಕ್ಕಿ ಉತ್ಸವಕ್ಕೆ ಬಳಸಲಾಗುತ್ತದೆ.
- ಸಾಯಿಬಾಬಾರವರ ವಿಗ್ರಹದ ಮುಂದೆ ಅಮೃತಶಿಲೆಯ ಸುಂದರ ಪಾದುಕೆಗಳಿವೆ.
ದೇವಾಲಯದ ಕಾರ್ಯಚಟುವಟಿಕೆಗಳು :
ದಿನನಿತ್ಯದ ಕಾರ್ಯಕ್ರಮಗಳು
ಆರತಿಯ ಸಮಯ
Aarti
|
Timings
|
ಕಾಕಡ ಆರತಿ | 6:00am |
ಮಧ್ಯಾನ್ಹ ಆರತಿ | 12:00pm |
ಧೂಪಾರತಿ | 6.00pm |
ಶೇಜಾರತಿ | 8:30pm |
ವಿಶೇಷ ಕಾರ್ಯಕ್ರಮಗಳು:
- ಪ್ರತಿನಿತ್ಯ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಅಭಿಷೇಕ ಕಾರ್ಯಕ್ರಮವಿರುತ್ತದೆ.
- ಪ್ರತಿ ಗುರುವಾರದಂದು ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಮಹಾಭಿಷೇಕ ಕಾರ್ಯಕ್ರಮವಿರುತ್ತದೆ.
- ಪ್ರತಿ ಗುರುವಾರದಂದು ಮತ್ತು ಎಲ್ಲಾ ವಿಶೇಷ ಉತ್ಸವದ ದಿನಗಳಂದು ಪಲ್ಲಕ್ಕಿ ಉತ್ಸವ ನಡೆಯುತ್ತದೆ.
ವಿಶೇಷ ಉತ್ಸವದ ದಿನಗಳು:
- ಶ್ರೀರಾಮನವಮಿ
- ಗುರುಪೂರ್ಣಿಮೆ
- ವಿಜಯದಶಮಿ
- ಪ್ರತಿವರ್ಷದ 23 ನೇ ಆಗಸ್ಟ್ ರಂದು ಧ್ಯಾನಮಂದಿರದ ವಾರ್ಷಿಕೋತ್ಸವ
ಧ್ಯಾನಮಂದಿರದ ವಿಳಾಸ ಮತ್ತು ಮಾರ್ಗಸೂಚಿ:
ವಿಳಾಸ:
ಶಿರಡಿ ಸಾಯಿ ಧ್ಯಾನ ಮಂದಿರ
ನಂ.8-293/1 , ರಂಗಾಚಾರಿ ರಸ್ತೆ, ಲಕ್ಷ್ಮೀ ಚಿತ್ರಮಂದಿರದ ಪಕ್ಕ
ಚಿತ್ತೂರು, ಆಂಧ್ರಪ್ರದೇಶ.
ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀಮತಿ.ಸಿ.ಮಾಧವಿ
ದೂರವಾಣಿ ಸಂಖ್ಯೆಗಳು:
08572 - 245502 / 09440294301
ಮಾರ್ಗಸೂಚಿ:
ಕಾಣಿಪಾಕ್ಕಂ ರಸ್ತೆಯಲ್ಲಿರುವ ಲಕ್ಷ್ಮೀ ಚಿತ್ರಮಂದಿರದ ಬಸ್ ನಿಲ್ದಾಣದಲ್ಲಿ ಇಳಿಯುವುದು. ಚಿತ್ರಮಂದಿರದ ಪಕ್ಕದಲ್ಲಿ ಈ ಧ್ಯಾನಮಂದಿರವಿದೆ.
No comments:
Post a Comment