Monday, October 11, 2010

ಸಾಯಿ ಭಜನ ಗಾಯಕಿ - ಶ್ರೀಮತಿ.ಕೆ.ಎಂ.ಕುಸುಮ- ಕೃಪೆ - ಸಾಯಿಅಮೃತಧಾರಾ.ಕಾಂ 

ಖ್ಯಾತ ಗಾಯಕಿ ಕುಸುಮ ಕೆ. ಎಂ. 
ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತೆಯಾದ ಶ್ರೀಮತಿ.ಕೆ.ಎಂ.ಕುಸುಮ ರವರು 9 ನೇ ಸೆಪ್ಟೆಂಬರ್ 1966 ರಂದು ನವದೆಹಲಿಯಲ್ಲಿ ಜನಿಸಿದರು. ಇವರು ಕಳೆದ 2 ದಶಕಗಳಿಗೂ ಹೆಚ್ಚು ಕಾಲದಿಂದ ಕನ್ನಡಿಗರ ಮನೆ ಮಾತಾಗಿದ್ದಾರೆ. ಇವರು ತಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು 13 ವರ್ಷಗಳ ಕಾಲ ಪ್ರಸಿದ್ದ ಗುರುಗಳಾದ ಶ್ರೀಮತಿ.ಲಲಿತಾ ಪಂತುಲು, ಶ್ರೀಮತಿ.ಗ್ಯಾನಂ ಸುಬ್ರಮಣ್ಯಮ್ ಮತ್ತು ಶ್ರೀ.ವಿ.ಎಸ್.ಕೆ.ಚಕ್ರಪಾಣಿ ಅವರುಗಳಿಂದ ಕಲಿತರು.

ಕುಸುಮ ಅವರು ಪಾರ್ವತಮ್ಮ ರಾಜ್ ಕುಮಾರ್ ರವರೊಂದಿಗೆ ಇರುವ ದೃಶ್ಯ

ಇವರು ಸುಪ್ರಸಿದ್ದ ಸಿನಿಮಾ ಗಾಯಕರಾಗಿದ್ದು 100 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಕಳೆದ 22 ವರ್ಷಗಳಿಂದ ಹಾಡುತ್ತಾ ಬಂದಿದ್ದಾರೆ. ಇವರು ಭಾರತದಾದ್ಯಂತ 3000 ಕ್ಕೂ ಹೆಚ್ಚು ಸಾರ್ವಜನಿಕ ಕಾರ್ಯಕ್ರಮಗಳನ್ನು 7 ಬೇರೆ ಬೇರೆ ಭಾಷೆಗಲ್ಲಿ ನೀಡಿದ್ದು ಸಾವಿರಾರು ಸುಗಮ ಸಂಗೀತ, ದಾಸವಾಣಿ ಮತ್ತು ಭಜನೆಗಳನ್ನು ಹಾಡಿ ಜನರನ್ನು ರಂಜಿಸಿದ್ದಾರೆ. ದಾಸವಾಣಿ, ಭಕ್ತಿ ಗೀತೆ ಹಾಗೂ ಸಾಯಿಬಾಬಾ ಭಜನೆಗಳ ಅನೇಕ ಧ್ವನಿಸುರಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಇವರು 13 ಸಂಗೀತದ ಆಲ್ಬಮ್ ಗಳನ್ನು ಹೊರತಂದಿದ್ದಾರೆ. ಇವರು 700 ಕ್ಕೂ ಹೆಚ್ಚು ದಾಸವಾಣಿ, ಭಕ್ತಿಗೀತೆಗಳು ಮತ್ತು ಸುಗಮ ಸಂಗೀತದ ಕ್ಯಾಸೆಟ್ / ಸಿಡಿ ಗಳಲ್ಲಿ ಹಾಡಿದ್ದಾರೆ. ಇವರು ಆಕಾಶವಾಣಿ ಮತ್ತು ದೂರದರ್ಶನದ "ಬಿ ಹೈ" ದರ್ಜೆಯ ಕಲಾವಿದರಾಗಿದ್ದಾರೆ.


ಪುತ್ತೂರು ನರಸಿಂಹ ನಾಯಕರೊಂದಿಗೆ ಕುಸುಮರವರು ನವದೆಹಲಿಯ ಕಾರ್ಯಕ್ರಮವೊಂದರಲ್ಲಿ 

ತಮ್ಮ ವೈವಿಧ್ಯತೆಗೆ  ಹೆಸರಾದ, ಹಸನ್ಮುಖಿಯಾದ ಮತ್ತು ಜನಾನುರಾಗಿಯಾದ ಶ್ರೀಮತಿ.ಕೆ.ಎಂ.ಕುಸುಮಾ ರವರು ಸುಗಮ ಸಂಗೀತ ಮತ್ತು ಭಜನೆಗಳನ್ನು ಅತ್ಯಂತ ಸುಶ್ರಾವ್ಯವಾಗಿ ಮತ್ತು ನಿರರ್ಗಳವಾಗಿ ಹಾಡಬಲ್ಲ ಜಾಣ್ಮೆಯನ್ನು ಹೊಂದಿದ್ದಾರೆ. ಇವರು ತಮ್ಮ ಸುಮಧುರವಾದ ಗಾನದಿಂದ  ಜನರನ್ನು ಅತ್ಯಂತ ವೇಗವಾಗಿ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀಮತಿ.ಕೆ.ಎಂ.ಕುಸುಮ ರವರ ಸಾಧನೆಯ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:

ಸಾರ್ವಜನಿಕ ಕಾರ್ಯಕ್ರಮಗಳು:

  • ಇವರು ದೇಶದಾದ್ಯಂತ 3000 ಕ್ಕೂ ಹೆಚ್ಚು ಸಾರ್ವಜನಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. 
  • ಇವರು ಸುಗಮ ಸಂಗೀತ ಸಮ್ಮೇಳನಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. 
  • ಇವರು ಮೈಸೂರು ದಸರಾ ಉತ್ಸವದಲ್ಲಿ, ಹಾಸನದ ಹೊಯ್ಸಳ ಉತ್ಸವದಲ್ಲಿ, ಬಂಗಾರಪೇಟೆಯ,ಜೈಪುರದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮತ್ತು ಹಂಪೆಯ ಉತ್ಸವದಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. 
  • ದೆಹಲಿಯ ಸಪ್ರೂ ಭವನದಲ್ಲಿ, ಮುಂಬೈನ ಶಣ್ಮುಖಾನಂದ ಹಾಲ್, ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ, ಬೆಂಗಳೂರಿನ ಇಸ್ಕಾನ್ ದೇವಾಲಯ, ಮಂಗಳೂರಿನ ಪುರಭವನ ಮತ್ತು ವೈಟ್ ಫೀಲ್ಡ್  ನ ಬೃಂದಾವನದಲ್ಲಿ ಸುಗಮ ಸಂಗೀತ ಮತ್ತು ದಾಸವಾಣಿ ಕಾರ್ಯಕ್ರಮ ನೀಡಿದ್ದಾರೆ. 
  • ಬೆಂಗಳೂರಿನ ಪ್ರಮುಖ ಸಂಗೀತ ಭವನಗಳು ಹಾಗೂ ಸಭಾಂಗಣಗಳಾದ ರವೀಂದ್ರ ಕಲಾಕ್ಷೇತ್ರ, ಹೆಚ್.ಎನ್.ಕಲಾಕ್ಷೇತ್ರ, ಚಿತ್ರಕಲಾ ಪರಿಷತ್, ಪುರಭವನ, ಚೌಡಯ್ಯ ಭವನ ಹಾಗೂ ಇನ್ನು ಹಲವಾರು ಕಡೆಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. 
  • ಕರ್ನಾಟಕದ ಪ್ರಸಿದ್ದ ದೇವಸ್ಥಾನಗಳಾದ ಶೃಂಗೇರಿ, ಹೊರನಾಡು, ನಿಮಿಷಾಂಬ, ಕೊಲ್ಲೂರು, ಉಡುಪಿ ಕೃಷ್ಣ ಮಠ, ಬೆಂಗಳೂರಿನ ಕೆ.ಆರ್.ರಸ್ತೆಯಲ್ಲಿರುವ ಉಮಾ ಮಹೇಶ್ವರ ದೇವಾಲಯ, ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ವೆಂಕಟೇಶ್ವರ ದೇವಾಲಯ ಮತ್ತು ಅನೇಕ ಸಾಯಿಬಾಬಾ ಮಂದಿರಗಳಲ್ಲಿ ತಮ್ಮ ಭಕ್ತಿ ಗೀತೆಗಳ ಸುಧೆಯನ್ನು ಹರಿಸಿದ್ದಾರೆ. 

ಭಾವಗೀತೆಗಳು ಮತ್ತು ಲಘು ಶಾಸ್ತ್ರೀಯ ಸಂಗೀತದ ಧ್ವನಿಸುರಳಿಗಳು:

    • ಭಾರತದ ಹಲವು ಭಾಷೆಗಳಾದ ಕನ್ನಡ, ಹಿಂದಿ, ತಮಿಳು, ತೆಲುಗು, ಒರಿಯಾ, ಕೊಂಕಣಿ, ತುಳು ಮತ್ತಿತರ ಪ್ರಾಂತೀಯ ಭಾಷೆಗಳಲ್ಲಿ 700 ಕ್ಕೂ ಹೆಚ್ಚು ಧ್ವನಿ ಸುರಳಿಗಳಲ್ಲಿ ಹಾಡಿದ್ದಾರೆ. ಅದರಲ್ಲಿ ಕೆಲವು ಪ್ರಮುಖವಾದವುಗಳು ಶ್ರೀ ವಿಠಲ ಅಮೃತವಾಹಿನಿ, ಶ್ರಾವಣ ಮಾಸದ ಹಾಡುಗಳು, ಹರಿದಾಸವಾಹಿನಿ ಮತ್ತು ಇನ್ನು ಹಲವಾರು ಧ್ವನಿಸುರಳಿಗಳಿವೆ. 
    • ಕ್ಯಾಸೆಟ್ ಜಗತ್ತಿನ ಸುಪ್ರಸಿದ್ದ ಸಂಗೀತ ನಿರ್ದೇಶಕರುಗಳಾದ ಸಿ.ಅಶ್ವಥ್, ಪುತ್ತೂರು ನರಸಿಂಹ ನಾಯಕ್, ಶ್ರೀಮತಿ.ಶ್ಯಾಮಲಾ ಭಾವೆ, ಹೆಚ್.ಕೆ.ನಾರಾಯಣ ಮತ್ತು ಇನ್ನು ಹತ್ತು ಹಲವು ಸಂಗೀತ ನಿರ್ದೇಶಕರುಗಳಿಗೆ ಹಾಡಿದ ಕೀರ್ತಿ ಇವರದು. 
    • ದಾಸವಾಣಿ, ಭಕ್ತಿ ಗೀತೆಗಳು ಮತ್ತು ಸಾಯಿ ಭಜನೆಗಳ ಹಲವಾರು ಧ್ವನಿಸುರಳಿಗಳನ್ನು ಬಿಡುಗಡೆ ಮಾಡಿದ್ದಾರೆ. ವೆಂಕಟೇಶ ದಯಮಾಡೋ, ದೀಪಾರಾಧನೆ, ಓಂ ನಮಃ ಶಿವಾಯ, ಶ್ರೀ ಸಾಯಿಬಾಬಾ ಭಕ್ತಿ ಕುಸುಮಾಂಜಲಿ, ದಯಕರೋ ಬಾಬಾ, ಡಿವೈನ್ ಎಕ್ಸ್ಟಸಿ ಇದರಲ್ಲಿ ಪ್ರಮುಖವಾದವುಗಳು. 

    ಆಕಾಶವಾಣಿ, ದೂರದರ್ಶನ ಹಾಗೂ ಖಾಸಗಿ ವಾಹಿನಿಗಳು ಮತ್ತು ಸಂಗೀತ ಕಾರ್ಯಾಗಾರಗಳು:

    • ಕರ್ನಾಟಕದ ಪ್ರಸಿದ್ದ ವಾಹಿನಿಗಳಾದ ದೂರದರ್ಶನ, ಉದಯ ಟಿವಿ (ಕುಹೂ ಕುಹೂ ಕಾರ್ಯಕ್ರಮ), ಈ-ಟಿವಿ (ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಎಸ್.ಪಿ.ಬಾಲಸುಬ್ರಮಣ್ಯಂ ಅವರೊಡನೆ), ಸುಪ್ರಭಾತ ಚಾನೆಲ್ ಮತ್ತು ಜೀ-ಕನ್ನಡ ಚಾನೆಲ್. 
    • ಪ್ರಸಿದ್ದ ಕಾರ್ಯಕ್ರಮಗಳಾದ ಈ-ಟಿವಿಯ ಎಸ್.ಪಿ.ಬಾಲಸುಬ್ರಮಣ್ಯಂ ಸಾರಥ್ಯದ ಎದೆ ತುಂಬಿ ಹಾಡುವೆನು, ಉದಯ ಟಿವಿಯ ಕುಹೂ ಕುಹೂ ಮತ್ತು ಜೀ-ಕನ್ನಡ ಚಾನೆಲ್ ನ ಕಾವ್ಯ ಧಾರೆ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. 
    • ಬೆಂಗಳೂರು ಆಕಾಶವಾಣಿಯ "ಬಿ ಹೈ" ಶ್ರೇಣಿಯ ಸುಗಮ ಸಂಗೀತ ಕಲಾವಿದೆ.
    • ಮಂಗಳೂರು, ಧಾರವಾಡ, ಮಂಡ್ಯ ಮತ್ತು ಮಡಿಕೇರಿ ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ.
    • ಕನ್ನಡದ ಮೇರು ನಟರಾದ ಶ್ರೀ.ರಾಮಕೃಷ್ಣ ಅವರೊಂದಿಗೆ ಕನ್ನಡ ದೂರದರ್ಶನದ ಪ್ರಸಿದ್ದ ಸಂಗೀತ ಕಾರ್ಯಕ್ರಮವಾದ "ಗೀತ ಸಂಗಮ" ನಡೆಸಿಕೊಟ್ಟಿದ್ದಾರೆ. 
    • ಸುಗಮ ಸಂಗೀತ ಮತ್ತು ಭಜನೆಯ ಹಾಡುಗಾರಿಕೆ ಬಗ್ಗೆ ಅನೇಕ ಕಾರ್ಯಾಗಾರಗಳನ್ನು ನಡೆಸಿದ್ದಾರೆ. 
    • ಜೀ-ಕನ್ನಡದ ಪ್ರತಿಷ್ಟಿತ ಕಾರ್ಯಕ್ರಮವಾದ "ಸರಿಗಮಪ ಲಿಟಲ್ ಚಾಂಪ್ಸ್ - 4 ನೇ ಆವೃತ್ತಿ (ಅಗಸ್ಟ್ 2008) ಯಲ್ಲಿ ಗುರುಕುಲವನ್ನು ನಡೆಸಿ ಮಕ್ಕಳಿಗೆ ಮಾರ್ಗದರ್ಶನ ಮಾಡಿದ್ದಾರೆ. 
    • ಜೀ-ಕನ್ನಡದ ಪ್ರಸಿದ್ದ ಕಾರ್ಯಕ್ರಮ ಜೀ ಲಿಟಲ್ ಚಾಂಪ್ಸ್- 8 ನೇ ಆವೃತ್ತಿ (2010) ಕಾರ್ಯಕ್ರಮಕ್ಕಾಗಿ ಕರ್ನಾಟಕ ರಾಜ್ಯದಾದ್ಯಂತ ತೆರಳಿ ಅಲ್ಲಿ ಮಕ್ಕಳ ಆಯ್ಕೆಯ ಪ್ರಕ್ರಿಯೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ.
    ಕನ್ನಡ ಚಲನಚಿತ್ರಗಳು:

    • ನೂರಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಹಾಡಿದ್ದಾರೆ. ಅವುಗಳಲ್ಲಿ  ನಮ್ಮುರ ಮಂದಾರ ಹೂವೇ (ಸಂಗೀತ ನಿರ್ದೇಶಕ -ಇಳಯರಾಜ), ಮಿಥಿಲೆಯ ಸೀತೆಯರು (ಸಂಗೀತ ನಿರ್ದೇಶಕ-ವಿಜಯ ಭಾಸ್ಕರ್), ಕಿರಾತಕ (ಸಂಗೀತ ನಿರ್ದೇಶಕ-ಹಂಸಲೇಖ), ಬಾಳಹೊಂಬಾಳೆ (ಸಂಗೀತ ನಿರ್ದೇಶಕ-ಉಪೇಂದ್ರ ಕುಮಾರ್), ಶಾಂಭವಿ (ಸಂಗೀತ ನಿರ್ದೇಶಕ-ಶಂಕರ್ ಮತ್ತು ಗಣೇಶ್), ಅಮೃತವರ್ಷಿಣಿ (ಸಂಗೀತ ನಿರ್ದೇಶಕ-ದೇವಾ), ಕಾನೂರು ಹೆಗ್ಗಡತಿ (ಸಂಗೀತ ನಿರ್ದೇಶಕ-ಬಿ.ವಿ.ಕಾರಂತ್), ಯಾರಿಗೂ ಹೇಳ್ಬೇಡಿ (ಸಂಗೀತ ನಿರ್ದೇಶಕ-ರಾಜನ್ ಮತ್ತು ನಾಗೇಂದ್ರ) ಪ್ರಮುಖವಾದ ಚಲನಚಿತ್ರಗಳು.
    • ಹೆತ್ತ ಕರುಳು (ಸಂಗೀತ ನಿರ್ದೇಶಕ-ಉಪೇಂದ್ರ ಕುಮಾರ್) ಚಿತ್ರದ "ಒಂದೇ ಒಂದು ತುತ್ತು" ಹಾಡನ್ನು ಮಗುವಿನ ಧ್ವನಿಯಲ್ಲಿ ಹಾಡಿದ್ದಕ್ಕಾಗಿ 1994 ರಲ್ಲಿ ಆರ್ಯಭಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. 
    • ಖ್ಯಾತ ಬಾಲನಟಿ ಬೇಬಿ ಶ್ಯಾಮಿಲಿಯ ಚಿತ್ರಗಳ ಪ್ರಸಿದ್ದ "ಓ ಚಿಟ್ಟೆ ಬಣ್ಣದ ಚಿಟ್ಟೆ" ಮತ್ತು "ಕಲ್ಕತ್ತದಲ್ಲಿ ಪಾನ್ ಮಸಾಲಾ" (ಸಂಗೀತ ನಿರ್ದೇಶಕ-ಶಂಕರ್ ಮತ್ತು ಗಣೇಶ್) ಹಾಡುಗಳನ್ನು ಮಗುವಿನ ಧ್ವನಿಯಲ್ಲಿ ಹಾಡಿ ಕರ್ನಾಟಕದಾದ್ಯಂತ ಪ್ರಸಿದ್ದರಾಗಿದ್ದಾರೆ. 
    • ಚಲನಚಿತ್ರ ಜಗತ್ತಿನ ಇನ್ನಿತರ ಪ್ರಸಿದ್ದ ಸಂಗೀತ ನಿರ್ದೇಶಕರಾದ ಕೆ.ವಿ.ಮಹಾದೇವನ್, ಕೀರವಾಣಿ, ರಾಜ್ ಕೋಟಿ, ಸಾಧು ಕೋಕಿಲಾ, ರವಿ ಶೆಣೈ ಮತ್ತಿತರ ಚಿತ್ರಗಳಲ್ಲಿ ಹಾಡಿದ್ದಾರೆ.

     ದೂರಧರ್ಶನ ಮತ್ತು ಆಕಾಶವಾಣಿಯ ಜಾಹಿರಾತುಗಳು: 
    •  ಭಾರತದ ವಿವಿಧ ಭಾಷೆಗಳಾದ ಕನ್ನಡ,ಹಿಂದಿ,ತೆಲುಗು,ತಮಿಳು,ಮಲಯಾಳಂ,ಕೊಂಕಣಿ,ತುಳು,ಮರಾಟಿ ಯಲ್ಲಿ 1000 ಕ್ಕೂ ಹೆಚ್ಚು ಜಾಹೀರಾತುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.
    • ಸುಪ್ರಸಿದ್ದ ಕಂಪನಿಗಳ ಉತ್ಪಾದನೆಗಳಾದ ಲಿಪ್ಟನ್ ಚಹಾ, ನ್ಯೂಟ್ರಿನ್ ಚಾಕಲೇಟ್, ರೆಡ್ ರೋಜ್ ಚಹಾ ಮತ್ತಿತರ ಜಾಹಿರಾತುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

    ಸಂಗೀತ ಶಾಲೆ:
    • ಪ್ರಸ್ತುತ ಸುಗಮ ಸಂಗೀತ ಮತ್ತು ಚಲನಚಿತ್ರ ಗೀತೆಗಳ ಶಾಲೆ "ಭಕ್ತಿ ಗಾನ ಸುಧಾ (ಬಿ.ಜಿ.ಎಸ್) ವನ್ನು ನಡೆಸುತ್ತಿದ್ದಾರೆ.
    • ಭಕ್ತಿ ಗಾನ ಸುಧಾ ಶಾಲೆಯ ಪ್ರಾಯೋಜಿತ ಕಾರ್ಯಕ್ರಮವಾದ "ಸುರ ಸಿಂಗಾರ್" ಕಾರ್ಯಕ್ರಮವನ್ನು ನವೆಂಬರ್ 2008 ರಲ್ಲಿ ವೈಎಂಸಿಎ ಸಭಾಂಗಣದಲ್ಲಿ ನಡೆಸಿ ಹಳೆಯ ಹಿಂದಿ ಚಿತ್ರ ಗೀತೆಗಳನ್ನು ಹಾಡಿ ಹಿಂದಿಯ ಪ್ರಸಿದ್ದ ಗಾಯಕರುಗಳಿಗೆ ತಮ್ಮ ನಮನವನ್ನು ಸಲ್ಲಿಸಿದ್ದಾರೆ. 
    • ಭಕ್ತಿ ಗಾನ ಸುಧಾ ಶಾಲೆಯ ಹಲವು ವಿದ್ಯಾರ್ಥಿಗಳು ಪ್ರಸಿದ್ದ ಖಾಸಗಿ ವಾಹಿನಿಗಳಾದ ಈ-ಟಿವಿ, ಜೀ-ಟಿವಿ (ಕನ್ನಡ ಮತ್ತು ತಮಿಳು), ಉದಯ ಟಿವಿ, ಕಸ್ತೂರಿ ಟಿವಿ ಗಳ ಹಲವು ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 
    • ಭಕ್ತಿ ಗಾನ ಸುಧಾ ಶಾಲೆಯ ಹಲವು ವಿದ್ಯಾರ್ಥಿಗಳು ಅನೇಕ ಚಲನಚಿತ್ರಗಳಲ್ಲಿ ಮತ್ತು ಸೀರಿಯಲ್ ಗಳಲ್ಲಿ ಹಾಡಿದ್ದಾರೆ.
    ಸಾಯಿ ಭಜನೆಯ ಕಾರ್ಯಕ್ರಮಗಳು:
    • ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಾರ್ವಜನಿಕ ನೇರ ಪ್ರಸಾರದ ಭಜನೆಯ ಕಾರ್ಯಕ್ರಮವಾದ "ಸಾಯಿ ಅಮೃತಂ" ನಲ್ಲಿ ಭಾಗವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 
    • ಕರ್ನಾಟಕದ ಅನೇಕ ಸಾಯಿಬಾಬಾ ಮಂದಿರಗಳಲ್ಲಿ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಅವುಗಳಲ್ಲಿ ಸಾಯಿ ಆಶ್ರಯಧಾಮ, ಕಾಡುಗೋಡಿ ವೈಟ್ ಫೀಲ್ಡ್, ಮುದ್ದೇನಹಳ್ಳಿ ಕಾರ್ಯಕ್ರಮಗಳು ಪ್ರಮುಖವಾದವುಗಳು.
    • ಅನೇಕ ಅಖಂಡ ಸಾಯಿಭಜನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
    • ಪ್ರಮುಖ ಸರ್ಕಾರಿ ಸ್ಥಳಗಳಾದ ಭಾರತೀಯ ವಿದ್ಯಾ ಭವನ, ಪಿ.ಡಬ್ಲ್ಯೂ.ಡಿ ಇಲಾಖೆಗಳಲ್ಲಿ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.
    • ಶಿರಡಿ ಸಾಯಿಬಾಬಾರವರ ಮೇಲೆ ಹಿಂದಿ ಭಜನೆಯ ಅಲ್ಬಮ್ ನ್ನು ಮುಂಬೈನಲ್ಲಿ ಬಿಡುಗಡೆ ಮಾಡಿದ್ದಾರೆ. 
    • ಸಾಯಿ ಭಜನೆಯ ಧ್ವನಿಸುರಳಿಗಳಾದ  "ಸಾಯಿ ಅಮೃತಂ" ಮತ್ತು "ಓಂ ಶ್ರೀ ಸಾಯಿ ನಾರಾಯಣ" ಗಳನ್ನು ಬಿಡುಗಡೆ ಮಾಡಿದ್ದಾರೆ.

     ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:


    ವಿಳಾಸ: 
    ಭಕ್ತಿ ಗಾನ ಸುಧಾ, ನಂ.757/18, 8ನೇ ಅಡ್ಡರಸ್ತೆ,
    5ನೇ ಮುಖ್ಯರಸ್ತೆ, ಎಂ.ಸಿ.ಬಡಾವಣೆ, 
    ವಿಜಯನಗರ, ಬೆಂಗಳೂರು-560 040. ಕರ್ನಾಟಕ.

    ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 
    +91 80 2350 5317 / +91 97314-66221 / +91 98452-93062

    ಈ ಮೇಲ್ ವಿಳಾಸ: 

    ಅಂತರ್ಜಾಲ ತಾಣ:
    http://www.kmkusuma.com


    ಸಾಯಿ ಭಜನೆಯ ಆಲ್ಬಮ್ ಗಳು:
    ಸಾಯಿ ಅಮೃತಂ, ಓಂ ಶ್ರೀ ಸಾಯಿ ನಾರಾಯಣ, ಶ್ರೀ ಸಾಯಿ ಬಾಬಾ ಭಕ್ತಿ ಕುಸುಮಾಂಜಲಿ,  ದಯಾ ಕರೋ ಬಾಬಾ ಮತ್ತು ಇನ್ನಿತರ ಅಲ್ಬಮ್ ಗಳು.

    ಭಜನೆಯ ವೀಡಿಯೋಗಳು: 




     
    ಕನ್ನಡ ಅನುವಾದ - ಶ್ರೀಕಂಠ ಶರ್ಮ 

      No comments:

      Post a Comment