"ಮಾಲಿಕ್ ಏಕ್ " ಚಲನಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭ - ಕೃಪೆ - ಸಾಯಿಅಮೃತಧಾರಾ.ಕಾಂ
ಧ್ವನಿಸುರಳಿ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದ ದಿವ್ಯಾ ದತ್ತಾ, ಕಿಶೋರಿ ಸಹಾನೆ ವಿಜ್, ಅನುಪ್ ಜಲೋಟ, ನಿಶಾ ಸುಮನ್ ಜೈನ್, ದೀಪಕ್ ವಿಜ್, ಜಗಜಿತ್ ಸಿಂಗ್ ಮತ್ತು ಶೈಲಾ ಚಡ್ಡಾ
ವಿಶ್ವದ ಅತ್ಯಂತ ಪ್ರಸಿದ್ದ ಪವಾಡ ಪುರುಷ, ಸಂತ ಶಿರೋಮಣಿ, ಶಿವಸ್ವರೂಪಿ ಶಿರಡಿ ಸಾಯಿಬಾಬಾರವರ ಜೀವನ, ತತ್ವ ಮತ್ತು ಉಪದೇಶಗಳನ್ನು ಆಧರಿಸಿದ ಹಾಗೂ ಜಾಕಿ ಶ್ರಾಫ್ ಶಿರಡಿ ಸಾಯಿಬಾಬಾರವರ ಪಾತ್ರದಲ್ಲಿ ಅಭಿನಯಿಸಿರುವ "ಮಾಲಿಕ್ ಏಕ್" ಚಲನಚಿತ್ರದ ಧ್ವನಿಸುರಳಿಯ ಬಿಡುಗಡೆಯ ಸಮಾರಂಭವು ಇದೇ ತಿಂಗಳ 14 ನೇ ಅಕ್ಟೋಬರ್ 2010, ಗುರುವಾರದಂದು ಮುಂಬೈನ ಪ್ರತಿಷ್ಟಿತ ಪಂಚತಾರಾ ಹೋಟೆಲ್ ನಲ್ಲಿ ನಡೆಯಿತು.
ಚಿತ್ರದಲ್ಲಿ ಜಾಕಿ ಶ್ರಾಫ್ ಬೀಸುವ ಕಲ್ಲಿನಲ್ಲಿ ಗೋಧಿ ಹಿಟ್ಟನ್ನು ಪುಡಿ ಮಾಡುತ್ತಿರುವ ದೃಶ್ಯ
ಖ್ಯಾತ ಸಾಯಿ ಭಜನ ಗಾಯಕ ಹಾಗೂ "ಭಜನ ಸಾಮ್ರಾಟ್" ಎಂದು ಪ್ರಖ್ಯಾತರಾದ ಶ್ರೀ.ಅನುಪ್ ಜಲೋಟ ರವರು ಸಂಗೀತ ನೀಡಿರುವ ಮತ್ತು ಟಿ-ಸೀರಿಸ್ ಸಂಸ್ಥೆಯ ಹಂಚಿಕೆಯಿರುವ ಈ ಧ್ವನಿಸುರಳಿಯನ್ನು ಖ್ಯಾತ ಗಜಲ್ ಮತ್ತು ಭಜನ ಗಾಯಕ ಶ್ರೀ.ಜಗಜಿತ್ ಸಿಂಗ್ ಮತ್ತು ಚಿತ್ರದ ನಾಯಕ ಜಾಕಿ ಶ್ರಾಫ್ ಬಿಡುಗಡೆ ಮಾಡಿದರು.
ಧ್ವನಿಸುರಳಿ ಬಿಡುಗಡೆ ಸಮಾರಂಭದಲ್ಲಿ ಇಡೀ ಚಿತ್ರ ತಂಡವೇ ಹಾಜರಾಗಿತ್ತು. ಜಾಕಿ ಶ್ರಾಫ್, ದಿವ್ಯಾದತ್ತಾ, ಶಕ್ತಿ ಕಪೂರ್, ವಿದ್ಯಾ ಸಿನ್ಹಾ, ಅನುಪ್ ಜಲೋಟ, ಚಿತ್ರದ ನಿರ್ಮಾಪಕಿ ಕಿಶೋರಿ ಸಹಾನೆ ವಿಜ್, ನಿಶಾ ಸುಮನ್ ಜೈನ್, ಚಿತ್ರದ ನಿರ್ದೇಶಕ ದೀಪಕ್ ಬಲರಾಜ್ ವಿಜ್ ಮತ್ತಿತರ ಚಿತ್ರದ ತಂತ್ರಜ್ಞರು ಸಮಾರಂಭದಲ್ಲಿ ಹಾಜರಿದ್ದು ಶೋಭೆಯನ್ನು ತಂದರು.
ಅನುಪ್ ಜಲೋಟರವರು ಚಿತ್ರದ ಹಾಡುಗಳನ್ನು ಹಾಡಿ ನೆರೆದಿದ್ದ ಎಲ್ಲಾ ಗಣ್ಯರನ್ನು ರಂಜಿಸಿದರು. ಚಿತ್ರದ ಬಿಡುಗಡೆ ಸಮಾರಂಭವು ಅಲ್ಲಿ ನೆರೆದಿದ್ದ ಎಲ್ಲಾ ಪ್ರೇಕ್ಷಕರ ಮನ ಸೆಳೆಯಿತು. ಚಿತ್ರದ ನಾಯಕ ಜಾಕಿ ಶ್ರಾಫ್ ಪತ್ರಕರ್ತ ಮಿತ್ರರೊಂದಿಗೆ ತಾವು ಚಿತ್ರದಲ್ಲಿ ಅಭಿನಯಿಸಿದ ಸಾಯಿಬಾಬಾರವರ ಪಾತ್ರದ ಬಗ್ಗೆ ಮಾಹಿತಿ ನೀಡಿದರು ಮತ್ತು ತಮ್ಮ ವಿಶೇಷ ಅನುಭವಗಳನ್ನು ಹಂಚಿಕೊಂಡರು. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಜಾಕಿ ಶ್ರಾಫ್ ರವರು ಚಿತ್ರದಲ್ಲಿ "ಸಾಯಿಬಾಬಾ ಅಚ್ಚೇ" ಎಂಬ ಗೀತೆಯನ್ನು ತಾವೇ ಹಾಡಿದ್ದಾರೆ.
ಜಾಕಿ ಶ್ರಾಫ್ ಮತ್ತು ಶಕ್ತಿ ಕಪೂರ್ ರವರು ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು ಹೀಗೆ .......
ಈ ಚಿತ್ರವನ್ನು ಬೆಳ್ಳಿ ತೆರೆಯ ಮೇಲೆ ತರಲು ಸಾಯಿಬಾಬಾರವರ ಬಗ್ಗೆ ಎರಡು ವರ್ಷಗಳ ಆಳವಾದ ಅಧ್ಯಯನವನ್ನು ಚಿತ್ರ ತಂಡ ಮಾಡಿದೆ. ಚಿತ್ರದ ನಾಯಕ ಜಾಕಿ ಶ್ರಾಫ್ 8 ತಿಂಗಳ ಕಾಲ ಸಾಕಷ್ಟು ಅಧ್ಯಯನ ನಡೆಸಿರುವುದೇ ಆಲ್ಲದೇ ತಮ್ಮ ಪಾತ್ರಕ್ಕೆ ಒಪ್ಪುವಂತೆ ತಮ್ಮ ದೇಹದ ತೂಕವನ್ನು ಕೂಡ ಇಳಿಸಿಕೊಂಡಿರುವುದು ಮತ್ತೊಂದು ವಿಶೇಷ.ಇಷ್ಟೇ ಸಾಲದೆಂಬಂತೆ ಅನುಪ್ ಜಲೋಟ ರವರು ಈ ಚಲನಚಿತ್ರದಲ್ಲಿ "ದಾಸ ಗಣು" ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿರುವುದು ಚಿತ್ರಕ್ಕೆ ಮತ್ತಷ್ಟು ಮೆರುಗು ತಂದಿದೆ ಎಂದೇ ಹೇಳಬಹುದು.
ಚಿತ್ರದ ಫೋಟೋ ಆಲ್ಬಮ್ / ಹಾಡುಗಳು ಮತ್ತು ಇನ್ನಿತರ ಯಾವುದೇ ಮಾಹಿತಿಗಾಗಿ www.maalikek.com ನ್ನು ಕ್ಲಿಕ್ಕಿಸಿ.
ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವ್ಯಕ್ತಿಗಳನ್ನು ಸಂಪರ್ಕಿಸಿ:
ಶ್ರೀ. ಶೈಲೇಶ್ - ದೂರವಾಣಿ ಸಂಖ್ಯೆ - +919867394114 ಈ ಮೇಲ್ - shailesh.gowda@smartprofit.in
ಅಂಕಿತ - +919819854402 ಈ ಮೇಲ್ - Ankita@smartprofit.in
ಕನ್ನಡ ಅನುವಾದ : ಶ್ರೀಕಂಠ ಶರ್ಮ
No comments:
Post a Comment