"ಸಾಯಿ ಜೀವಿ" ದಿವಂಗತ ಶ್ರೀ.ರಾಧಾಕೃಷ್ಣ ಅಯ್ಯರ್
ಅಖಂಡ ಸಾಯಿ ನಾಮ ಸಪ್ತಾಹ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಶ್ರೀ.ಆರ್.ರಾಧಾಕೃಷ್ಣ ಅಯ್ಯರ್ ರವರು 15 ನೇ ಜುಲೈ 2010 ರಂದು ಚೆನ್ನೈ ನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.ಇವರಿಗೆ 94 ವರ್ಷ ವಯಸ್ಸಾಗಿತ್ತು. ಮೃತರು ತಮ್ಮ ಧರ್ಮಪತ್ನಿ ಶ್ರೀಮತಿ.ಸುಬ್ಬಲಕ್ಷ್ಮಿ , ಒಬ್ಬ ಮಗ, 3 ಹೆಣ್ಣು ಮಕ್ಕಳು ಮತ್ತು 7 ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಇವರು ಶಿರಡಿ ಸಾಯಿಬಾಬಾರವರ ಪ್ರಚಾರ ಕಾರ್ಯದಲ್ಲಿ ಕಳೆದ 40 ವರ್ಷಗಳಿಂದ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಇವರ ಅನವರತ ಸಾಯಿ ಸೇವೆಯನ್ನು ಗುರುತಿಸಿ ಸಾಯಿಬಂಧುಗಳು ಇವರನ್ನು ಪ್ರೀತಿಯಿಂದ "ಸಾಯಿ ಜೀವಿ" ಎಂದು ಕರೆಯುತ್ತಿದ್ದರು.
ಇವರ ತಂದೆ ಶ್ರೀ.ರಂಗನಾಥ ಅಯ್ಯರ್ ರವರು ಕಂಚಿ ಕಾಮಕೋಟಿ ಪೀಠದ ಪರಮಾಚಾರ್ಯರಾದ ಶ್ರೀ.ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳ ಸಹಪಾಟಿಯಾಗಿದ್ದರು. ಆಲ್ಲದೇ, ಇವರು ಭಗವಾನ್ ರಮಣ ಮಹರ್ಷಿ, ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ.ರಾಧಾಕೃಷ್ಣ ಸ್ವಾಮೀಜಿಯವರ ನಿಕಟವರ್ತಿಗಳಾಗಿದ್ದರು.
ಸಾಯಿ ಪ್ರಚಾರಕ್ಕೆ ಶ್ರೀ.ರಾಧಾಕೃಷ್ಣ ಅಯ್ಯರ್ ರವರು ನೀಡಿದ ಪ್ರಮುಖ ಕೊಡುಗೆಯೆಂದರೆ ಅಖಂಡ ಸಾಯಿ ನಾಮ ಜಪವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಯನ್ನು ಪ್ರಪ್ರಥಮವಾಗಿ ಪ್ರಾರಂಭಿಸಿದ್ದು. ಈ ಒಂದು ಮಹೋನ್ನತ ಕಾರ್ಯವನ್ನು ಶ್ರೀ.ರಾಧಾಕೃಷ್ಣ ಅಯ್ಯರ್ ರವರು 1980 ರಲ್ಲಿ ದೇಶದ ಉದ್ದಗಲಕ್ಕೂ ಸಂಚಾರ ಮಾಡಿ ಪ್ರಾರಂಭಿಸಿದರು. ವಿಜಯವಾಡದಲ್ಲಿ 7 ವಾರಗಳ ಕಾಲ ಸತತವಾಗಿ "ಸಾಯಿ ನಾಮ ಜಪ" ವನ್ನು 1984 ರಲ್ಲಿ ನಡೆಸಿದರು. ಬೆಂಗಳೂರಿನ ತ್ಯಾಗರಾಜನಗರದ ಪ್ರತಿಷ್ಟಿತ ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ 1989 ರಲ್ಲಿ "ಸಾಯಿ ನಾಮ ಜಪ" ವನ್ನು ನಡೆಸಿದರು. ಶಿರಡಿ ಸಾಯಿಬಾಬಾರವರ 90ನೇ ಮಹಾಸಮಾಧಿ ಉತ್ಸವದ ಅಂಗವಾಗಿ ದೇಶದಾದ್ಯಂತ 90 ಕಡೆಗಳಲ್ಲಿ "ಸಾಯಿ ನಾಮ ಜಪ" ವನ್ನು ನಡೆಸಿ ಅದನ್ನು 1998 ರಲ್ಲಿ ಶಿರಡಿಯಲ್ಲಿ ಪೂರ್ಣಗೊಳಿಸಿದ ಹೆಗ್ಗಳಿಕೆ ಇವರದು. ಇವರ ಕೊನೆಯ ಉಸಿರಿನ ತನಕ ಇವರು ದೇಶದಾದ್ಯಂತ ಸಂಚಾರ ಮಾಡುತ್ತಾ "ಸಾಯಿ ನಾಮ ಜಪ" ವನ್ನು ನಡೆಸಿದರು. ಆದ ಕಾರಣ ಇವರ ನಿಕಟವರ್ತಿಗಳಾದ ಸಾಯಿ ಭಕ್ತರು ಇವರಿಗೆ "ಸಾಯಿ ಜೀವಿ" ಎಂದು ಬಿರುದು ನೀಡಿ ಗೌರವಿಸಿದ್ದರು.
ಸಾಯಿಅಮೃತಧಾರಾ.ಕಾಂ ಅಗಲಿದ ಈ ಮಹಾನ್ ಚೇತನಕ್ಕೆ ತನ್ನ ಅಶ್ರುತರ್ಪಣವನ್ನು ಸಲ್ಲಿಸುತ್ತದೆ. ಆಲ್ಲದೇ ಇವರ ಮನೆಯವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಸಾಯಿ ಸಮರ್ಥರು ನೀಡಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತದೆ.
ಕನ್ನಡ ಅನುವಾದ : ಶ್ರೀಕಂಠ ಶರ್ಮ
"ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ"
ReplyDeleteದತ್ತ ಸಾಯಿ ಮಂದಿರ, ಮೇಟಿ ಪಾಳ್ಯ
ಸರ್ವರಿಗೂ ಆದರಪೂರ್ವಕ ಸುಸ್ವಾಗತ
ಅಖಂಡ ಸಾಯಿ ನಾಮ ಜಪ ಯಜ್ಞ ನವ ಸಪ್ತಾಹ, ಆಚರಣೆಗಳು-2013
26-10-2013 ರಿಂದ 29-12-2013 ರವರೆಗೆ
ಅಖಂಡ ಸಾಯಿ ನಾಮ ಜಪ ಯಜ್ಞ ನವ ಸಪ್ತಾಹ ಉದ್ಘಾಟನೆ
(27-10-2013.ಬೆಳಿಗ್ಗೆ 11.00 ರಿಂದ 15-12-2013 ಬೆಳಿಗ್ಗೆ 11.00 ವರೆಗೆ )
ನಿರಂತರವಾಗಿ 63ದಿನಗಳು (1512 ಗಂಟೆಗಳ) ಕಾಲ ಸಾಯಿ ನಾಮ ತಾರಕ ಮಂತ್ರ ಜಪ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ"
ದೈವದತ್ತ ಆಚರಣೆಗಳಲ್ಲಿ ಭಾಗವಹಿಸಿ, ಶಿರಡಿ ಸಾಯಿ ಬಾಬಾರವರ ಆಶೀರ್ವಾದದಿಂದ ಅನಂತ ಪರಮಾನಂದವನ್ನು ಅನುಭವಿಸಿ. ಮನವಿ: ದೇವಾಲಯದ ಎಲ್ಲಾ ಅಭಿವೃದ್ಧಿಕಾರ್ಯಗಳನ್ನು ಸ್ಥಳೀಯರ ನೆರವಿನಿಂದ ಮಾತ್ರವೇ ನಡೆಸುವುದು ಕಸ್ಟಸಾಧ್ಯವಾಗಿರುವುದರಿಂದ ಭಕ್ತರಾದ ನೀವೆಲ್ಲರೂ ತಮಗೆ ಸಾದ್ಯವಾದಸ್ಟು ತನು,ಮನ,ದನ ಸಹಕಾರ ನೀಡಿ ಅಥವಾ ವಿಧದ ಉದಾರ ದೇಣಿಗೆಯಿಂದ, ಆಶ್ರಮದ ಆಧ್ಯಾತ್ಮಿಕ ಚಟುವಟಿಕೆಗಳನ್ನು ಬೆಂಬಲಿಸಿ. ವಿವರಗಳಿಗಾಗಿ ಸಂಪರ್ಕಿಸಿ: ಧರ್ಮದರ್ಶಿ, ಸಾಯಿ ಮಂದಿರ, ಸಂಚಾರಿ ದೂರವಾಣಿ ಸಂಖ್ಯೆ: 9141278067,
ಹೆಚ್ಚಿನ ವಿವರಗಳಿಗಾಗಿ :ದತ್ತ ಸಾಯಿ ಮಂದಿರ, ಸಾಯಿ ವೃಂದಾವನ, ಮೇಟಿ ಪಾಳ್ಯ, ಸೊಂಡೇಕೊಪ್ಪ ರಸ್ತೆ, ತಾವರೆಕೆರೆ (ಮಾಗಡಿ ರಸ್ತೆ) ಬೆಂಗಳೂರು ಉತ್ತರ ತಾಲುಕು
ನಿತ್ಯ ಅನ್ನಧಾನ