Tuesday, October 12, 2010

ಶ್ರೀ ಶಿರಡಿ ಸಾಯಿಬಾಬಾರವರ 92 ನೇ ಪುಣ್ಯತಿಥಿ ಉತ್ಸವದ ಪತ್ರಿಕಾ ಪ್ರಕಟಣೆ - 12 ನೇ ಅಕ್ಟೋಬರ್ 2010 - ಕೃಪೆ - ಸಾಯಿಅಮೃತಧಾರಾ.ಕಾಂ 

ಸಂತರ ಪುಣ್ಯತಿಥಿಯ ಆಚರಣೆ ಒಂದು ಪವಿತ್ರವಾದ ಕಾರ್ಯ. ಸಂತರು ತಮ್ಮ ಸ್ವಇಚ್ಛೆಯಿಂದ ದೇಹತ್ಯಾಗ ಮಾಡಿದ ನಂತರ ಅವರನ್ನು ನೆನಪು ಮಾಡಿಕೊಡು ಅವರ ಸ್ಮರಣಾರ್ಥವಾಗಿ ಆಚರಿಸುವ ಒಂದು ಪವಿತ್ರ ಉತ್ಸವ. ಪ್ರಪಂಚದಾದ್ಯಂತ ಲಕ್ಷಾಂತರ ಸಾಯಿ ಭಕ್ತರಿದ್ದಾರೆ. ಅಂತಹ ಸಾಯಿಭಕ್ತರು ಸಾಯಿಯವರ ಪುಣ್ಯತಿಥಿಯ ದಿವಸ ಶಿರಡಿಗೆ ಬಂದು ಸಾಯಿಯವರ ಆಶೀರ್ವಾದ ಪಡೆದುಕೊಂಡು ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರೆ. ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್,ಶಿರಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾಯಿಯವರ 92 ನೇ ಪುಣ್ಯತಿಥಿಯನ್ನು 16 ನೇ ಅಕ್ಟೋಬರ್ 2010 ರಿಂದ 19 ನೇ ಅಕ್ಟೋಬರ್ 2010 ರ ವರೆಗೆ ನಡೆಸಲು ತೀರ್ಮಾನ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾಯಿಬಾಬಾ ಸಂಸ್ಥಾನ ಹಮ್ಮಿಕೊಂಡಿದೆ ಎಂದು ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 


16 ನೇ  ಅಕ್ಟೋಬರ್ 2010 ರಂದು ಉತ್ಸವದ ಮೊದಲನೇ ದಿನವಾಗಿದ್ದು ಬೆಳಗಿನ ಜಾವ 4:30 ಕ್ಕೆ ಕಾಕಡಾ ಆರತಿಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯುತ್ತದೆ. ಸಾಯಿಯವರ ಭಾವಚಿತ್ರವನ್ನು ಹಾಗೂ ಸಾಯಿ ಸಚ್ಚರಿತೆಯನ್ನು ಮೆರವಣಿಗೆಯಲ್ಲಿ 5 ಘಂಟೆಗೆ ಕೊಂಡೊಯ್ಯಲಾಗುತ್ತದೆ. ಸಾಯಿ ಸಚ್ಚರಿತೆಯ ಅಖಂಡ ಪಾರಾಯಣವನ್ನು ಬೆಳಗ್ಗೆ 5:15 ಕ್ಕೆ ದ್ವಾರಕಾಮಾಯಿಯಲ್ಲಿ ಪ್ರಾರಂಭಿಸಲಾಗುತ್ತದೆ. ಸಾಯಿಯವರ ಮಂಗಳ ಸ್ನಾನವನ್ನು 5:30 ಕ್ಕೆ ಮತ್ತು ಮಧ್ಯಾನ್ಹ ಆರತಿಯನ್ನು 12:30 ಕ್ಕೆ ನಡೆಸಲಾಗುತ್ತದೆ. ಆರತಿಯ ನಂತರ ತೀರ್ಥ ಪ್ರಸಾದ ವಿತರಣೆಯಾಗುತ್ತದೆ. ಸಂಜೆ 4 ರಿಂದ 6 ಘಂಟೆಯವರೆಗೆ ಸಮಾಧಿ ಮಂದಿರದ ಪ್ರಾಂಗಣದಲ್ಲಿ ನಿರ್ಮಿತವಾಗಿರುವ ವೇದಿಕೆಯಲ್ಲಿ ನಂದೆಡದ ಹೆಚ್.ಬಿ.ಪಿ.ಶರದ್ ನೆರಳಕರ್ ರವರಿಂದ ಕೀರ್ತನೆ ಕಾರ್ಯಕ್ರಮವಿರುತ್ತದೆ. ಸಂಜೆ 6 ಘಂಟೆಗೆ ಧೂಪಾರತಿ ನಡೆಯುತ್ತದೆ. ರಾತ್ರಿ 7 :30 ರಿಂದ 10:30 ರ ವರೆಗೆ ಸಾಯಿನಗರದ ಕ್ರೀಡಾಂಗಣದಲ್ಲಿ ನಿರ್ಮಿಸಲಾಗುವ ವಿಶೇಷ ವೇದಿಕೆಯಲ್ಲಿ ಏವಾಲದ ಶ್ರುತಿಕಣ್ಟನ್ ಸಂಗೀತ ವಿದ್ಯಾಲಯದ ಶ್ರೀ.ರವಿಂದ್ರ ಪಿಂಗಳೆಯವರಿಂದ ಸಂಗೀತ ಕಾರ್ಯಕ್ರಮವಿರುತ್ತದೆ. ಶಿರಡಿ ಗ್ರಾಮದ ಸುತ್ತಾ ಪಲ್ಲಕ್ಕಿಯ ಮೆರವಣಿಗೆ ರಾತ್ರಿ 9 :15 ಕ್ಕೆ ನಡೆಯುತ್ತದೆ. ರಾತ್ರಿ 10:30 ಕ್ಕೆ ಶೇಜಾರತಿ ಕಾರ್ಯಕ್ರಮವಿರುತ್ತದೆ. ಅಖಂಡ ಪಾರಾಯಣ ಮಾಡಲು ಅನುಕೂಲವಾಗುವಂತೆ ದ್ವಾರಕಾಮಾಯಿಯು ರಾತ್ರಿಯಿಡಿ ತೆರೆದಿಡಲಾಗುತ್ತದೆ. 

ಉತ್ಸವದ ಮುಖ್ಯ ದಿವಸವಾದ 17 ನೇ ಅಕ್ಟೋಬರ್ 2010, ಭಾನುವಾರದಂದು ಬೆಳಗಿನ ಜಾವ 4:30 ಕ್ಕೆ ಕಾಕಡಾ ಆರತಿ ನಡೆಯುತ್ತದೆ. ಅಖಂಡ ಪಾರಾಯಣ 5 ಘಂಟೆಗೆ ಮುಕ್ತಾಯವಾಗುತ್ತದೆ. 5:30 ಕ್ಕೆ ಮಂಗಳ ಸ್ನಾನವಾದ ನಂತರ ಸಾಯಿಯವರ ದರ್ಶನಕ್ಕೆ ಭಕ್ತರನ್ನು ಬಿಡಲಾಗುತ್ತದೆ. ಬೆಳಿಗ್ಗೆ 9 ಘಂಟೆಗೆ ಭಿಕ್ಷಾ ಜೋಳಿ ಕಾರ್ಯಕ್ರಮವಿರುತ್ತದೆ. 10 ಘಂಟೆಗೆ ಹೆಚ್.ಬಿ.ಪಿ.ಶರದ್ ನೆರಳಕರ್ ರವರಿಂದ ಕೀರ್ತನೆ ಕಾರ್ಯಕ್ರಮವಿರುತ್ತದೆ. 10:45 ಕ್ಕೆ ಆರಾಧನಾ ವಿಧಿಗಳು ನಡೆದು ಮಧ್ಯಾನ್ಹ ಆರತಿಯನ್ನು 12:30 ಕ್ಕೆ ನಡೆಸಲಾಗುತ್ತದೆ. ಆರತಿಯ ನಂತರ ತೀರ್ಥ ಪ್ರಸಾದ ವಿತರಣೆಯಾಗುತ್ತದೆ. ಸಂಜೆ 5 ಘಂಟೆಗೆ ಸೀಮೋಲಂಘನ ಮತ್ತು ಮೆರವಣಿಗೆ ಕಾರ್ಯಕ್ರಮ ಖಂಡೋಬ ಮಂದಿರದಲ್ಲಿ ನಡೆಯುತ್ತದೆ. ಸಂಜೆ 6 ಘಂಟೆಗೆ ಧೂಪಾರತಿ ನಡೆಯುತ್ತದೆ. ರಾತ್ರಿ 7 :30 ರಿಂದ 9 ಘಂಟೆಯವರೆಗೆ ಸಮಾಧಿ ಮಂದಿರದ  ಪ್ರಾಂಗಣದಲ್ಲಿ ನಿರ್ಮಿತವಾಗಿರುವ ವೇದಿಕೆಯಲ್ಲಿ ದೆಹಲಿಯ ಪ್ರಖ್ಯಾತ ಸರೋದ್ ವಾದಕ ಉಸ್ತಾದ್ ಅಮ್ಜದ್ ಆಲಿ ಖಾನ್ ರವರ ಸರೋದ್ ವಾದನ ಕಾರ್ಯಕ್ರಮವಿರುತ್ತದೆ. ಇಷ್ಟೇ ಆಲ್ಲದೇ ರಾತ್ರಿ 9:30 ಕ್ಕೆ ಸಾಯಿನಗರದ ಕ್ರೀಡಾಂಗಣದಲ್ಲಿ ನಿರ್ಮಿಸಲಾಗುವ ವಿಶೇಷ ವೇದಿಕೆಯಲ್ಲಿ ಮುಂಬೈನ ರವಿರಾಜ್ ನಸೇರಿಯವರಿಂದ ಸಾಯಿ ಭಜನ ಸಂಧ್ಯಾ ಸಂಗೀತ ಕಾರ್ಯಕ್ರಮವಿರುತ್ತದೆ. ಶಿರಡಿ ಗ್ರಾಮದ ಸುತ್ತಾ ಸಾಯಿಬಾಬಾರವರ ರಥದ  ಮೆರವಣಿಗೆ ರಾತ್ರಿ 9 :15 ಕ್ಕೆ ನಡೆಯುತ್ತದೆ. ಸಮಾಧಿ ಮಂದಿರವನ್ನು ರಾತ್ರಿಯಿಡಿ ಸಾಯಿಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ರಾತ್ರಿ 11 ರಿಂದ ಮಾರನೇ ದಿನ ಬೆಳಗಿನ ಜಾವ 5 ಘಂಟೆಯವರೆಗೆ ಅನೇಕ ಕಲಾವಿದರು ತಮ್ಮ ಪ್ರತಿಭೆಯನ್ನು ಸಮಾಧಿ ಮಂದಿರದ ಪ್ರಾಂಗಣದ ಮುಂದಿರುವ ವೇದಿಕೆಯಲ್ಲಿ ಪ್ರದರ್ಶಿಸುತ್ತಾರೆ. 

ಉತ್ಸವದ 3 ನೇ ದಿನವಾದ 18 ನೇ ಅಕ್ಟೋಬರ್ 2010, ಸೋಮವಾರದಂದು ಬೆಳಗ್ಗೆ 5:05 ಕ್ಕೆ ಸಾಯಿಬಾಬಾರವರ ಮಂಗಳ ಸ್ನಾನದೊಂದಿಗೆ ಕಾರ್ಯಕ್ರಮಗಳು ಆರಂಭವಾಗುತ್ತದೆ. ಮಂಗಳ ಸ್ನಾನದ ನಂತರ ಭಕ್ತರನ್ನು ದರ್ಶನಕ್ಕೆ ಬಿಡಲಾಗುತ್ತದೆ. ಮಧ್ಯಾನ್ಹ ಆರತಿಯನ್ನು 12:30 ಕ್ಕೆ ನಡೆಸಲಾಗುತ್ತದೆ. ಆರತಿಯ ನಂತರ ತೀರ್ಥ ಪ್ರಸಾದ ವಿತರಣೆಯಾಗುತ್ತದೆ. ಸಂಜೆ 6 ಘಂಟೆಗೆ ಧೂಪಾರತಿ ನಡೆಯುತ್ತದೆ.ಪ್ರಖ್ಯಾತ ಟಿವಿ ಕಾರ್ಯಕ್ರಮವಾದ "ಸರಿಗಮಪ" ಖ್ಯಾತಿಯ ಬಾಲ ಪ್ರತಿಭೆಗಳಾದ ಮುಗ್ಧಾ ವೈಶಂಪಾಯನ, ಆರ್ಯ ಅಂಬೆಕರ್, ಕಾರ್ತೀಕ್ ಗಾಯಕ್ವಾಡ್, ಪ್ರಥಮೇಶ್ ಲಗಾಟೆ ಮತ್ತು ರೋಹಿತ್ ರಾವತ್ ರವರ ಗಾಯನ ಕಾರ್ಯಕ್ರಮ ಸಾಯಿನಗರದ ಕ್ರೀಡಾಂಗಣದಲ್ಲಿ ನಿರ್ಮಿಸಲಾಗುವ ವಿಶೇಷ ವೇದಿಕೆಯಲ್ಲಿ ರಾತ್ರಿ 7:30 ರಿಂದ 10:30 ರವರೆಗೆ ನಡೆಯುತ್ತದೆ. ರಾತ್ರಿ 8:30 ರಿಂದ ಸಮಾಧಿ ಮಂದಿರದ ಪ್ರಾಂಗಣದಲ್ಲಿ ನಿರ್ಮಿತವಾಗಿರುವ ವೇದಿಕೆಯಲ್ಲಿ ನಂದೆಡದ ಹೆಚ್.ಬಿ.ಪಿ.ಶರದ್ ನೆರಳಕರ್ ರವರಿಂದ ಕೀರ್ತನೆ ಕಾರ್ಯಕ್ರಮವಿರುತ್ತದೆ. ರಾತ್ರಿ 10:30 ಕ್ಕೆ ಶೇಜಾರತಿ ಕಾರ್ಯಕ್ರಮವಿರುತ್ತದೆ. 

ಉತ್ಸವದ ಕಡೆಯ ದಿನವಾದ 19 ನೇ ಅಕ್ಟೋಬರ್ 2010, ಮಂಗಳವಾರದಂದು ಬೆಳಿಗ್ಗೆ 4:30 ಕ್ಕೆ ಕಾಕಡಾ ಆರತಿ ನಡೆಯುತ್ತದೆ. ಬೆಳಗ್ಗೆ 5:05 ಕ್ಕೆ ಸಾಯಿಬಾಬಾರವರ ಮಂಗಳ ಸ್ನಾನದೊಂದಿಗೆ ಕಾರ್ಯಕ್ರಮಗಳು ಆರಂಭವಾಗುತ್ತದೆ. ಮಂಗಳ ಸ್ನಾನದ ನಂತರ ಭಕ್ತರನ್ನು ದರ್ಶನಕ್ಕೆ ಬಿಡಲಾಗುತ್ತದೆ.6:45 ಕ್ಕೆ ಗುರುಸ್ಥಾನದಲ್ಲಿ ರುದ್ರ ಪಠಣ ಕಾರ್ಯಕ್ರಮ ನಡೆಯುತ್ತದೆ. ನಂತರ ಹೆಚ್.ಬಿ.ಪಿ.ಶರದ್ ನೆರಳಕರ್ ರವರು ತಮ್ಮ ಕೀರ್ತನೆ ಕಾರ್ಯಕ್ರಮ ಪೂರ್ಣಗೊಳಿಸುತ್ತಾರೆ. ನಂತರ ದಹಿ ಹಂಡಿ (ಮೊಸರಿನ ಗಡಿಗೆ ಒಡೆಯುವ ಸಂಪ್ರದಾಯ) ಕಾರ್ಯಕ್ರಮವಿರುತ್ತದೆ. ಮಧ್ಯಾನ್ಹ ಆರತಿಯನ್ನು 12:30 ಕ್ಕೆ ನಡೆಸಲಾಗುತ್ತದೆ. ಆರತಿಯ ನಂತರ ತೀರ್ಥ ಪ್ರಸಾದ ವಿತರಣೆಯಾಗುತ್ತದೆ. ಸಂಜೆ 6 ಘಂಟೆಗೆ ಧೂಪಾರತಿ ನಡೆಯುತ್ತದೆ. ಕಾನ್ಪುರದ ಶುಭರಾಮ್ ಬೆಹಲ್ ರವರ ಭಜನ ಸಂಧ್ಯಾ ಕಾರ್ಯಕ್ರಮವು ಸಾಯಿನಗರದ ಕ್ರೀಡಾಂಗಣದಲ್ಲಿ ನಿರ್ಮಿಸಲಾಗುವ ವಿಶೇಷ ವೇದಿಕೆಯಲ್ಲಿ ರಾತ್ರಿ 7:30 ರಿಂದ 10:30 ರವರೆಗೆ ನಡೆಯುತ್ತದೆ. ಶೇಜಾರತಿ ಕಾರ್ಯಕ್ರಮವು ರಾತ್ರಿ 10:30 ಕ್ಕೆ ನಡೆಯುತ್ತದೆ. ಪ್ರತಿ ವರ್ಷದ ವಾಡಿಕೆಯಂತೆ ಬೆಳಿಗ್ಗೆ 10 ಘಂಟೆಯಿಂದ ರಾತ್ರಿ 10:30 ರ ವರೆಗೆ ಪ್ರಸಾದಾಲಯದಲ್ಲಿ ಉಚಿತವಾಗಿ ಶಿರಡಿಯ ಎಲ್ಲಾ ನಿವಾಸಿಗಳಿಗೆ ಮತ್ತು ಎಲ್ಲಾ ಸಾಯಿಭಕ್ತರಿಗೆ ಭೋಜನ ವ್ಯವಸ್ಥೆ ಇರುತ್ತದೆ. ಶ್ರೀಯುತ.ಜಯಂತ್ ಸಾಸನೆಯವರು ಎಲ್ಲಾ ಭಕ್ತರು ಈ ಉತ್ಸವದಲ್ಲಿ ಭಾಗವಹಿಸುವಂತೆ ಸಾಯಿಬಾಬಾ ಸಂಸ್ಥಾನದ ಪರವಾಗಿ ಕೇಳಿಕೊಂಡಿರುತ್ತಾರೆ. 

ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯಾಧಿಕಾರಿ ಶ್ರೀ.ಕಿಶೋರ್ ಮೋರೆ, ಉಪಕಾರ್ಯಾಧಿಕಾರಿ ಶ್ರೀ.ಯಶವಂತ್ ಮಾನೆ, ಸಾಯಿಬಾಬಾ ಸಂಸ್ಥಾನದ ಎಲ್ಲಾ ಪದಾಧಿಕಾರಿಗಳು, ಎಲ್ಲಾ ವಿಭಾಗದ ಮುಖ್ಯಸ್ಥರು, ಸಂಸ್ಥಾನದ ಉದ್ಯೋಗಿಗಳು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್, ಸಂಸ್ಥಾನದ ಉಪಾಧ್ಯಕ್ಷ ಶ್ರೀ.ಶಂಕರ ರಾವ್ ಕೊಲ್ಹೆ ಮತ್ತು ಸಂಸ್ಥಾನದ ಟ್ರಸ್ಟೀಗಳ ಮಾರ್ಗದರ್ಶನದಲ್ಲಿ ಉತ್ಸವ ಯಶಸ್ವಿಯಾಗಲು ಹಗಲಿರುಳು ಶ್ರಮಿಸುತ್ತಿದ್ದಾರೆ. 

ಸಾಯಿಭಕ್ತರಿಗೆ ವಿಶೇಷ ಸೂಚನೆ : ವಿ.ಐ.ಪಿ.ದರ್ಶನ / ಆರತಿಯ ಪಾಸುಗಳು, ಸಾಯಿ ಸತ್ಯನಾರಾಯಣ ವ್ರತ ಮತ್ತು ಅಭಿಷೇಕ ಪೂಜೆಗಳು ದಿನಾಂಕ 16.10.2010 ರಿಂದ 19.10.2010 ರ ವರೆಗೆ ಸಾಯಿಯವರ ಪುಣ್ಯತಿಥಿಯ ಪ್ರಯುಕ್ತ ಇರುವುದಿಲ್ಲ.

ಕನ್ನಡ ಅನುವಾದ - ಶ್ರೀಕಂಠ ಶರ್ಮ

No comments:

Post a Comment