ಸಾಯಿ ಭಜನ ಗಾಯಕಿ - ಶ್ರೀಮತಿ.ವಿ. ಪ್ರೇಮ - ಕೃಪೆ : ಸಾಯಿಅಮೃತಧಾರಾ.ಕಾಂ
ಸಾಯಿಬಾಬಾರವರ ಅನನ್ಯ ಭಕ್ತೆಯಾದ ಶ್ರೀಮತಿ.ವಿ ಪ್ರೇಮ ಅವರು 10 ನೇ ಫೆಬ್ರವರಿ ೧೯೬೬ ರಂದು ಜನಿಸಿದರು. ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಮತ್ತು ಬಿ.ಎಡ್ ಪದವಿಯನ್ನು ಪಡೆದಿರುತ್ತಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ತಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ ಶಿಕ್ಷಣವನ್ನು ಶ್ರೀಮತಿ.ಕಸ್ತೂರಿ ಶ್ರೀಧರ್ ರವರ ಬಳಿ ಮತ್ತು ಸುಗಮ ಸಂಗೀತ ಶಿಕ್ಷಣವನ್ನು ಶ್ರೀ.ಕೆ.ರಾಧಕೃಷ್ಣ ರಾವ್ ರವರ ಬಳಿ ಪಡೆದಿರುತ್ತಾರೆ.
ಇವರ ಕೆಲವು ಮೈಲಿಗಲ್ಲುಗಳು:
- ಇವರು ಆಕಾಶವಾಣಿಯ ಸುಗಮ ಸಂಗೀತ ಕಲಾವಿದರು.
- ಇವರು ಅನೇಕ ಗೀತೆಗಳನ್ನು ರಚಿಸಿದ್ದಾರೆ ಮತ್ತು ಅನೇಕ ಅಲ್ಬಮ್ ಗಳಿಗೆ ಹಾಡಿದ್ದಾರೆ.
- ಇವರು ಭಕ್ತಿ ಗೀತೆಗಳ ಮತ್ತು ಚಲನಚಿತ್ರ ಗೀತೆಗಳ ಹಲವಾರು ಕಾರ್ಯಕ್ರಮಗಳನ್ನು ಪ್ರತಿಷ್ಟಿತ ಕನ್ನಡ ಚಾನೆಲ್ ಗಳಾದ ಚಂದನ, ಕಸ್ತೂರಿ ಮತ್ತು ಸುವರ್ಣ ವಾಹಿನಿಗಳಲ್ಲಿ ನೀಡಿರುತ್ತಾರೆ.
- ಇವರು ಸುಗಮ ಸಂಗೀತ, ಚಲನಚಿತ್ರ ಮತ್ತು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ಕರ್ನಾಟಕ ರಾಜ್ಯಾದ್ಯಂತ ನೀಡಿದ್ದಾರೆ.
- ಇವರು ಎಳೆಯ ಮಕ್ಕಳಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಶಾಸ್ತ್ರೀಯ, ಲಘು ಶಾಸ್ತ್ರೀಯ ಮತ್ತು ಸುಗಮ ಸಂಗೀತ ಶಿಕ್ಷಣವನ್ನು ನೀಡುತ್ತಿದ್ದಾರೆ.
- ದಿವ್ಯ ಚೇತನ - ಸಂಗೀತ ನಿರ್ದೇಶನ ಮತ್ತು ಹಾಡುಗಾರಿಕೆ.
- ಕೃಷ್ಣ ಗಾನಾಮೃತ - ಸಂಗೀತ ನಿರ್ದೇಶನ ಮತ್ತು ಹಾಡುಗಾರಿಕೆ.
- ಗೀತ ಪುಷ್ಪ - ಹಾಡುಗಾರಿಕೆ.
- ಪೂಲನ್ಗುಟ್ಟಿ (ಕೊಡವ ಭಾಷೆ) - ಸಂಗೀತ ನಿರ್ದೇಶನ ಮತ್ತು ಹಾಡುಗಾರಿಕೆ.
- ಶಿವಲೋಕಾಮೃತ - ಹಾಡುಗಾರಿಕೆ.
- ದೇವಲಪಲ್ಲಿ ಆಂಜನೇಯ ಸುಪ್ರಭಾತ - ಸಂಗೀತ ನಿರ್ದೇಶನ ಮತ್ತು ಹಾಡುಗಾರಿಕೆ.
- ದ್ವಾರಕಾಮಾಯಿ ಶ್ರೀ ಶಿರಡಿ ಸಾಯಿ (ಕನ್ನಡ) - ಹಾಡುಗಾರಿಕೆ (3 ಹಾಡುಗಳು)
- ದ್ವಾರಕಾಮಾಯಿ ಶ್ರೀ ಶಿರಡಿ ಸಾಯಿ (ತೆಲುಗು) - ಕನ್ನಡದಿಂದ ತೆಲುಗಿಗೆ ಹಾಡುಗಳ ತರ್ಜುಮೆ ಮತ್ತು ಹಾಡುಗಾರಿಕೆ (3 ಹಾಡುಗಳು).
- ಕಾಗಿನೆಲೆ ಮಠ ನೀಡುವ ಪ್ರತಿಷ್ಟಿತ "ಗಾನ ಸರಸ್ವತಿ" ಬಿರುದು.
- ಕೆ.ಆರ್.ನಾರಾಯಣ್ ಸ್ಮಾರಕ ಟ್ರಸ್ಟ್ ನೀಡುವ ಪ್ರತಿಷ್ಟಿತ "ಸುವರ್ಣ ಶ್ರೀ" ಪ್ರಶಸ್ತಿ.
- ಕರ್ನಾಟಕ ನಾಗರೀಕ ವೇದಿಕೆ ನೀಡುವ ಪ್ರತಿಷ್ಟಿತ "ಕರ್ನಾಟಕ ಭೂಷಣ" ಪ್ರಶಸ್ತಿ.
- ಕೋಲಾರ ಸಾಂಸ್ಕೃತಿಕ ರಂಗ ನೀಡುವ "ಅತ್ಯುತ್ತಮ ಗಾಯಕಿ" ಪ್ರಶಸ್ತಿ.
ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:
ವಿಳಾಸ : ನಂ.210, "ಶ್ರೀದಾಹ", 2ನೇ ಅಡ್ಡ ರಸ್ತೆ, ಗಂಗೋತ್ರಿ ರೋಡ್, ಕೃಷ್ಣರಾಜಪುರಂ ಹೊಸ ಬಡಾವಣೆ, ಬೆಂಗಳೂರು-560 036.
ಮೊಬೈಲ್ ಸಂಖ್ಯೆ : 98456-31047
ಈ ಮೇಲ್ : Premav66@gmail.com
ಆಲ್ಬಮ್ ಗಳು : ದ್ವಾರಕಾಮಾಯಿ ಶ್ರೀ ಶಿರಡಿ ಸಾಯಿ (ಕನ್ನಡ ಮತ್ತು ತೆಲುಗು)
No comments:
Post a Comment