ಬೆಂಗಳೂರಿನ ಕೋರಮಂಗಲ ಬಡಾವಣೆಯ ಶ್ರೀ.ಶಿರಡಿ ಸಾಯಿ ಭಕ್ತ ಮಂಡಳಿ ಟ್ರಸ್ಟ್ ರವರು ಆಯೋಜಿಸಿದ್ದ ಮತ್ತು ಶಿರಡಿಯ ಬಳಿಯ ಶ್ರೀರಾಮಪುರದ ಶ್ರೀ.ಬಬ್ಲು ದುಗ್ಗಾಲ್ ಮತ್ತು ತಂಡ ಅಭಿನಯಿಸಿದ ಹಿಂದಿ ನಾಟಕ "ಏಕ್ ಶಾಮ್ ಸಾಯಿ ಕೆ ನಾಮ್" ನಾಟಕವು ಇದೇ ತಿಂಗಳ 24 ನೇ ಅಕ್ಟೋಬರ್ 2010, ಭಾನುವಾರದಂದು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಈ ನಾಟಕವನ್ನು ಹೇಮಾಡಪಂತರ ಸಾಯಿ ಸಚ್ಚರಿತೆಯನ್ನು ಆಧಾರವಾಗಿಟ್ಟುಕೊಂಡು ಮಾಡಲಾಗಿತ್ತು.
ಅಂಬೇಡ್ಕರ್ ಭವನದ ಮುಂದೆ ಲಗತ್ತಿಸಿದ್ದ ಕಾರ್ಯಕ್ರಮದ ನಾಮಫಲಕ
ಸುಂದರ ಹೂವುಗಳಿಂದ ಅಲಂಕರಿಸಲ್ಪಟ್ಟ ಅಂಬೇಡ್ಕರ್ ಭವನದ ಹೊರ ದ್ವಾರ
ಶ್ರೀ.ಶಿರಡಿ ಸಾಯಿ ಭಕ್ತ ಮಂಡಳಿಯವರ ಮುಖ್ಯ ಉದ್ದೇಶ ಸಾಯಿಬಾಬಾರವರೇ ಸ್ವತಃ ಹೇಳಿ ಬರೆಸಿದ ಹೇಮಾಡಪಂತರ ಸಾಯಿ ಸಚ್ಚರಿತೆಯಲ್ಲಿ ಸಾಯಿ ಬಾಬಾರವರು ಹೇಳಿರುವ ತತ್ವಗಳನ್ನು ದೇಶದಾದ್ಯಂತ ಪ್ರಚಾರ ಪಡಿಸುವುದು.
ನಾಟಕದ ಒಂದು ಸುಂದರ ದೃಶ್ಯ
ಈ ಕಾರ್ಯಕ್ರಮವು ಸಂಜೆ 5 ಘಂಟೆಗೆ ಶಿರಡಿಯ ಶ್ರೀ.ಸಂದೀಪ್ ಸೋನವಾನೆ, ಶ್ರೀ.ಬಬ್ಲು ದುಗ್ಗಾಲ್ ಮತ್ತು ಶ್ರೀ.ಶಿರಡಿ ಸಾಯಿ ಭಕ್ತ ಮಂಡಳಿ ಟ್ರಸ್ಟೀಗಳು ದೀಪವನ್ನು ಬೆಳಗುವುದರೊಂದಿಗೆ ಆರಂಭವಾಯಿತು.
ನಾಟಕ ವೀಕ್ಷಿಸಿದ ಗಣ್ಯ ಅತಿಥಿಗಳಾದ ಡಾ.ದತ್ತಾ ಮತ್ತು ಶ್ರೀ.ಸಂದೀಪ್ ಸೋನಾವಾನೆ
ನಾಟಕವು ಸಂಜೆ ಸುಮಾರು 5:30 ರ ವೇಳೆಗೆ ಆರಂಭವಾಗಿ ರಾತ್ರಿ 10 ಘಂಟೆಯವರೆಗೆ ನಡೆಯಿತು. ಅಂಬೇಡ್ಕರ್ ಭವನದಲ್ಲಿ ಸೇರಿದ್ದ ಎಲ್ಲಾ ಸಾಯಿಭಕ್ತರು ಸಾಯಿ ಭಜನೆಗಳು ಮತ್ತು ಸಾಯಿ ನಾಮ ಸ್ಮರಣೆಯಲ್ಲಿ ಮಿಂದು ಪುನೀತರಾದರು. ಶ್ರೀ.ಬಬ್ಲು ದುಗ್ಗಾಲ್ ರವರು ನಾಟಕದ ಘಟನಾವಳಿಗಳಿಗೆ ತಕ್ಕಂತೆ ಹಾಡುಗಳನ್ನು ಸಂಯೋಜನೆ ಮಾಡಿ ಸಾಯಿಸಚ್ಚರಿತೆಯ ಘಟನಾವಳಿಗಳನ್ನು ನಿರೂಪಣೆ ಮಾಡುತ್ತಾ ಮತ್ತು ಹಾಡುಗಳನ್ನು ಹಾಡುತ್ತಾ ನೆರೆದಿದ್ದ ಎಲ್ಲಾ ಸಾಯಿಭಕ್ತರು ಮೈಮರೆತು ಕುಣಿಯುವಂತೆ ಮಾಡಿದರು. ಶ್ರೀ.ಬಬ್ಲು ದುಗ್ಗಾಲ್ ರವರು ಸತತ 4 ಘಂಟೆಗಳ ಕಾಲ ತಮ್ಮ ಅತ್ಯುತ್ತಮ ನಿರೂಪಣೆ ಹಾಗೂ ಗಾಯನದಿಂದ ನೆರೆದಿದ್ದ ಎಲ್ಲಾ ಸಾಯಿಭಕ್ತರು ಅಚ್ಚರಿ ಪಡುವಂತೆ ಮಾಡಿದರು. ನಾಟಕದಲ್ಲಿ ಪಾತ್ರ ವಹಿಸಿದ್ದ ಎಲ್ಲಾ ಕಲಾವಿದರು ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದರು.
ನಾಟಕವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿ, ಉತ್ತಮ ಹಾಡುಗಳನ್ನು ಹಾಡಿ ರಂಜಿಸಿದ ಶ್ರೀ.ಬಬ್ಲು ದುಗ್ಗಾಲ್
ಇಡೀ ಕಾರ್ಯಕ್ರಮದ ವಿಶೇಷತೆ ಏನೆಂದರೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಯಾರ ಹೆಸರನ್ನು ಕೂಡ ಸೂಚಿಸದೆ ಕೇವಲ "ಶಿರಡಿ ಸಾಯಿಬಾಬಾರವರೇ ನಮ್ಮ ಕಾರ್ಯಕ್ರಮದ ಮುಖ್ಯ ಅತಿಥಿ" ಎಂದು ಘೋಷಣೆ ಮಾಡಿದುದು. ಈ ಘೋಷಣೆ ಕೇಳುತ್ತಿದ್ದಂತೆ ನೆರೆದಿದ್ದ ಎಲ್ಲಾ ಸಾಯಿಭಕ್ತರು ಏಕಕಂಠದಿಂದ ಸಾಯಿನಾಥರಿಗೆ ಜಯಕಾರಗಳನ್ನು ಹಾಕುವುದನ್ನು ಮರೆಯಲಿಲ್ಲ. ಟ್ರಸ್ಟ್ ನ ಪದಾಧಿಕಾರಿಗಳಾದ ಶ್ರೀ.ಚಂದ್ರಕಾಂತ್ ಜಾಧವ್, ಶ್ರೀ.ಅಜಯ್ ಶರ್ಮ, ಶ್ರೀ.ಮುಕೇಶ್ ಅಗರವಾಲ್, ಶ್ರೀ.ರಾಜೇಂದ್ರ ಕುಮಾರ್ ಬೇಯ್ದ್ ರವರು ವೇದಿಕೆಯನ್ನು ಅಲಂಕರಿಸದೆ ಹಿಂದೆ ನಿಂತುಕೊಂಡು ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಂಡರು. ಶಿರಡಿ ಸಾಯಿಬಾಬಾರವರ ಎರಡು ಮುದ್ದಾದ ಭಾವ ಚಿತ್ರಗಳು ಮುಖ್ಯ ಭೂಮಿಕೆಯನ್ನು ಅಲಂಕರಿಸಿದ್ದವು.
ಕಾರ್ಯಕ್ರಮದಲ್ಲಿ ಶಿರಡಿಯ ಶ್ರೀ.ಸಂದೀಪ್ ಸೋನಾವಾನೆ, ಡಾ.ದತ್ತಾ ಮತ್ತು ಕನ್ನಡಕ್ಕೆ ಸಾಯಿ ಸಚ್ಚರಿತೆಯನ್ನು ತರ್ಜುಮೆ ಮಾಡಿದ ಶ್ರೀ.ಏನ್.ಎಸ್.ಅನಂತರಾಮು ರವರು ಉಪಸ್ಥಿತರಿದ್ದರು. ಟ್ರಸ್ಟ್ ನ ಪದಾಧಿಕಾರಿಗಳು ಶ್ರೀ.ಸಂದೀಪ್ ಸೋನಾವಾನೆ, ಡಾ.ದತ್ತಾ, ಶ್ರೀ.ಬಬ್ಲು ದುಗ್ಗಾಲ್ ಮತ್ತು ಶ್ರೀ.ಏನ್.ಎಸ್.ಅನಂತರಾಮು ರವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ವತಿಯಿಂದ ಸನ್ಮಾನಿತರಾದ ಸಾಯಿ ಸಚ್ಚರಿತೆ (ಕನ್ನಡ) ದ ಲೇಖಕ ಶ್ರೀ.ಅನಂತರಾಮು
ನಾಟಕವು ಸಾಯಿಬಾಬಾರವರ ಆರತಿಯೊಂದಿಗೆ ಪ್ರಾರಂಭವಾಗಿ ಆರತಿಯೊಂದಿಗೆ ಮುಕ್ತಾಯವಾಯಿತು. ಕಾರ್ಯಕ್ರಮಕ್ಕೆ ಬಂದ ಎಲ್ಲಾ ಸಾಯಿಭಕ್ತರಿಗೂ ಕೂಡ ಮಂಡಳಿಯವರು ಮಹಾಪ್ರಸಾದದ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದರು.
ನಾಟಕ ವೀಕ್ಷಣೆಯಲ್ಲಿ ತಲ್ಲೀನರಾಗಿರುವ ಸಭಿಕರು
ಬೆಂಗಳೂರಿನ ಅನೇಕ ಸಾಯಿಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು.
ಕಾರ್ಯಕ್ರಮ ಯಶಸ್ವಿಯಾಗಲು ಶ್ರಮವಹಿಸಿ ದುಡಿದ ಟ್ರಸ್ಟ್ ನ ಸದಸ್ಯರುಗಳು
ಸಾಯಿ ಭಕ್ತ ಮಂಡಳಿ ಟ್ರಸ್ಟ್ ನ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.
ಶ್ರೀ.ಚಂದ್ರಕಾಂತ್ ಜಾಧವ್
ಶ್ರೀ.ಶಿರಡಿ ಸಾಯಿ ಭಕ್ತ ಮಂಡಳಿ ಟ್ರಸ್ಟ್
ನಂ.310/8, ಮೊದಲನೇ ಮಹಡಿ, 17ನೇ ಮುಖ್ಯ ರಸ್ತೆ,
ಕೃಷ್ಣ ಕೇಬಲ್ ರಸ್ತೆ, 5ನೇ ಬ್ಲಾಕ್, ಕೋರಮಂಗಲ
ಬೆಂಗಳೂರು-560 095.
ದೂರವಾಣಿ : 98453 52984
ಇ ಮೇಲ್ ವಿಳಾಸ: chandu_jadhav76@yahoo.com
ಕನ್ನಡ ಅನುವಾದ : ಶ್ರೀಕಂಠ ಶರ್ಮ
No comments:
Post a Comment