ಚಿತ್ತೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಕುಮಾರ ರಸ್ತೆ, ಚಿತ್ತೂರು - ಕೃಪೆ : ಸಾಯಿಅಮೃತಧಾರಾ.ಕಾಂ
ಈ ಮಂದಿರವು ಚಿತ್ತೂರಿನ ಎಂ.ಎಸ್.ಆರ್ ಚಿತ್ರಮಂದಿರದ ಬಳಿ ಇದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
ದೇವಾಲಯದ ವಿಶೇಷತೆಗಳು:
- ಈ ಮಂದಿರದ ಭೂಮಿಪೂಜೆಯನ್ನು 15ನೇ ಸೆಪ್ಟೆಂಬರ್ 1997 ರಂದು ನೆರವೇರಿಸಲಾಯಿತು.
- ಈ ಮಂದಿರವನ್ನು ಕಂಚಿ ಮಠದ ಅಂದಿನ ಸ್ವಾಮಿಗಳು 3ನೇ ಮೇ 1999 ರಂದು ನೆರವೇರಿಸಿದರು.
- ಈ ಮಂದಿರದಲ್ಲಿ ಸಾಯಿಬಾಬಾನ ಸುಂದರ ಅಮೃತ ಶಿಲೆಯ ವಿಗ್ರಹವಿದೆ.
- ಸಾಯಿಬಾಬಾ ಮಂದಿರದ ಹಿಂಭಾಗದ ಜಾಗದಲ್ಲಿ ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರವಿದೆ.
- ಪವಿತ್ರ ಧುನಿಯನ್ನು ದೇವಾಲಯದ ಆವರಣದ ಮುಂಭಾಗದಲ್ಲಿ ಸ್ಥಾಪಿಸಲಾಗಿದೆ.
- ಸಾಯಿಬಾಬಾರವರ ವಿಗ್ರಹದ ಮುಂಭಾಗದಲ್ಲಿ ಸುಂದರವಾದ ಬೆಳ್ಳಿಯ ಮತ್ತು ಅಮೃತಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.
ದೇವಾಲಯದ ರಾಜಗೋಪುರ
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ
ಆರತಿ
|
ಸಮಯ
|
ಕಾಕಡ ಆರತಿ | 5:30am |
ಮಧ್ಯಾನ್ಹ ಆರತಿ | 12:00pm |
ಧೂಪಾರತಿ | 6.00pm |
ಶೇಜಾರತಿ | 9:00pm |
ವಿಶೇಷ ಕಾರ್ಯಕ್ರಮಗಳು:
- ದೇವಾಲಯದ ಅಮೃತ ಶಿಲೆಯ ವಿಗ್ರಹಕ್ಕೆ ಸಾಯಿಭಕ್ತರಿಂದ ಅಭಿಷೇಕ ಪ್ರತಿದಿನ ಬೆಳಗ್ಗೆ 6:00 ಘಂಟೆಗೆ. ಸೇವಾಶುಲ್ಕ 400/- ರೂಪಾಯಿಗಳು.
- ಲಕ್ಷ್ಮೀ ಪೂಜೆಯನ್ನು ಮಾಡಿಸಲು ಇಚ್ಚಿಸುವ ಸಾಯಿಭಕ್ತರು 30/- ರುಪಾಯಿಗಳ ಸೇವಾಶುಲ್ಕ ಕೊಟ್ಟು ಸೇವೆ ಮಾಡಿಸಬಹುದು.
- ಗಣಪತಿ ಪೂಜೆಯನ್ನು ಮಾಡಿಸಲು ಇಚ್ಚಿಸುವ ಸಾಯಿಭಕ್ತರು 30/- ರುಪಾಯಿಗಳ ಸೇವಾಶುಲ್ಕ ಕೊಟ್ಟು ಸೇವೆ ಮಾಡಿಸಬಹುದು.
- ಸತ್ಯನಾರಾಯಣ ಪೂಜೆಯನ್ನು ಪ್ರತಿ ತಿಂಗಳ ಹುಣ್ಣಿಮೆಯಂದು ಏರ್ಪಡಿಸಲಾಗಿದೆ. ಸೇವೆ ಮಾಡಿಸಲು ಇಚ್ಚಿಸುವ ಸಾಯಿಭಕ್ತರು 250/- ರುಪಾಯಿಗಳ ಸೇವಾಶುಲ್ಕವನ್ನು ಕೊಟ್ಟು ಸೇವೆಯಲ್ಲಿ ಭಾಗವಹಿಸಬಹುದು.
- ಶ್ರೀರಾಮನವಮಿ
- ಗುರುಪೂರ್ಣಿಮೆ
- ದತ್ತ ಜಯಂತಿ
- ವಿಜಯದಶಮಿ
- ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 3ನೇ ಮೇ
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ವಿಳಾಸ :
ಶ್ರೀ ಶಿರಡಿ ಸಾಯಿಬಾಬಾ ಮಂದಿರ
ಕುಮಾರ ರಸ್ತೆ, ಚಿತ್ತೂರು-517 001.
ಆಂಧ್ರ ಪ್ರದೇಶ.
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಎನ್.ಸುರೇಶ ಬಾಬು / ಜಿ.ತುಳಸಿರಾಮ್ / ಪಿ. ಬಾಬು
ದೂರವಾಣಿ ಸಂಖ್ಯೆಗಳು:
098493 13434 / 099086 33232 / 094401 41999
ಮಾರ್ಗಸೂಚಿ:
ಹಳೆ ಬಸ್ ನಿಲ್ದಾಣದ ಬಳಿ ಇಳಿಯುವುದು. ಈ ದೇವಾಲಯವು ಎಂ.ಎಸ್.ಆರ್.ಚಿತ್ರಮಂದಿರದ ಬಳಿ ಇದೆ.
ಕನ್ನಡ ಅನುವಾದ : ಶ್ರೀಕಂಠ ಶರ್ಮ
No comments:
Post a Comment