ಶಿರಡಿ ದೇವಾಲಯದ ಪ್ರಾಂಗಣದಲ್ಲಿ ನೋಡಬೇಕಾದ ಸ್ಥಳ - ತಕಿಯಾ ಆಲಿಯಾಸ್ ಅಸೂಲ್ ಘರ್ - ಕೃಪೆ - ಸಾಯಿಅಮೃತಧಾರಾ.ಕಾಂ
ಗುರುಸ್ಥಾನದ ಪಕ್ಕದಲ್ಲಿ ಮತ್ತು ದೀಕ್ಷಿತ್ ವಾಡಾದ ಪೂರ್ವಕ್ಕೆ ಬೇವಿನ ಮರವಿರುವ ಜಾಗದಲ್ಲಿ ಈಗ ಖಾಲಿ ರಂಗಮಂದಿರ (ಓಪನ್ ಏರ್ ಥಿಯೇಟರ್) ಇರುವ ಸ್ಥಳದಲ್ಲಿ ಮೊದಲು ತಕಿಯಾ ಅಥವಾ ಪುಟ್ಟದಾದ ಒಂದು ಕೊಟ್ಟಿಗೆಯಿತ್ತು. ಆ ಸ್ಥಳವು ಶಿರಡಿಗೆ ಬರುವ ಫಕೀರರ ತಂಗುದಾಣವಾಗಿತ್ತು. ಸಾಯಿಬಾಬಾರವರು ಮೊದಲು ಶಿರಡಿಗೆ ಬಂದಾಗ ಇದೇ ಸ್ಥಳದಲ್ಲಿ ಕೆಲವು ರಾತ್ರಿ ವಿಶ್ರಮಿಸುತ್ತಿದ್ದರು.
ಈ ಕೋಣೆಯನ್ನು ಕೆಲವು ಕಾಲ ಸಾಯಿಬಾಬಾರವರ ಪವಿತ್ರ ಉಧಿಯನ್ನು ನೀಡುವ ಕೋಣೆಯನ್ನಾಗಿ ಉಪಯೋಗಿಸುತ್ತಿದ್ದರು. ಕಾಕಡಾ ಆರತಿಯ ನಂತರ ಬಾಬಾರವರ ಅಭಿಷೇಕ ತೀರ್ಥ ಮತ್ತು ಪ್ರಸಾದವನ್ನು ನೀಡಲು ಈ ಕೋಣೆಯನ್ನು ಬಳಸುತ್ತಿದ್ದರು. ಈಗ ಸಾಯಿಬಾಬಾ ಸಂಸ್ಥಾನದವರು ಈ ಕೋಣೆಯನ್ನು ಪ್ರಕಟಣಾ ವಿಭಾಗವಾಗಿ ಬಳಸುತ್ತಿದ್ದಾರೆ.

ಸಾಯಿಬಾಬಾರವರಿಗೆ ಸಂಗೀತ ಮತ್ತು ನೃತ್ಯವೆಂದರೆ ಬಹಳ ಪ್ರೀತಿ. ಇವರು ಶಿರಡಿಗೆ ಬಂದ ಪ್ರಾರಂಭದಲ್ಲಿ ಆಗ್ಗಾಗ್ಗೆ ತಕಿಯಾಗೆ ತೆರಳಿ ಅಲ್ಲಿ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಮಧುರವಾಗಿ ಭಜನೆಗಳನ್ನು ಹಾಡುತ್ತಿದ್ದರು ಅಥವಾ ಕಬೀರರ ಹಿಂದಿ ದೋಹಾಗಳನ್ನು ಹಾಡುತ್ತಿದ್ದರು. ಅವರ ಧ್ವನಿಯು ಬಹಳ ಮಧುರವಾಗಿದ್ದು ಸಾಯಿಭಕ್ತರನ್ನು ಆಕರ್ಷಿಸುತ್ತಿತ್ತು ಎಂದು ಹೇಳಲಾಗುತ್ತದೆ. ಕೆಲವು ವೇಳೆ ಕಾಲಿಗೆ ಗೆಜ್ಜೆಗಳನ್ನು ಕಟ್ಟಿ ಆನಂದದಿಂದ ಹಾಡುತ್ತ ಕುಣಿಯುತ್ತಿದ್ದರೆಂದು ಮತ್ತು ಅಲ್ಲಿದ್ದ ಫಕೀರರು ಕೂಡ ಅವರೊಂದಿಗೆ ಹಾಡಿ ಕುಣಿಯುತ್ತಿದ್ದರು ಎಂದು ಅದನ್ನು ಕಣ್ಣಾರೆ ಕಂಡವರು ಹೇಳಿದ್ದಾರೆ. ಈಗ ಶಿರಡಿಗೆ ಸಾಯಿಭಕ್ತರು ಹೋದರೆ ತಕಿಯಾ ನೋಡಲು ಆಗದಿದ್ದರೂ ಕೂಡ ಅಲ್ಲಿ ಸಾಯಿಬಾಬಾರವರು ಇದ್ದಾಗ ರಾತ್ರಿಯ ವೇಳೆ ನಡೆಯುತ್ತಿದ್ದ ಹಾಡು,ನೃತ್ಯಗಳನ್ನು ನೆನೆಪಿಸಿಕೊಂಡು ಆನಂದಪಡಬಹುದು.
ಕನ್ನಡ ಅನುವಾದ:ಶ್ರೀಕಂಠ ಶರ್ಮ
No comments:
Post a Comment