ಶಿರಡಿಯಲ್ಲಿ ನೋಡಬೇಕಾದ ಸ್ಥಳ - ಶ್ರೀ ಸಾಯಿಬಾಬಾ ತಪೋಭೂಮಿ ಮಂದಿರ - ಕೃಪೆ - ಸಾಯಿ ಅಮೃತಧಾರಾ.ಕಾಂ
ಶ್ರೀ ಸಾಯಿ ತಪೋಭೂಮಿ ಮಂದಿರದ ಹೊರನೋಟ
ತಪೋಭೂಮಿ ಮಂದಿರದ ಹೊರಗಿನ ನಾಮಫಲಕ
ಈ ಮಂದಿರವು ಗೋದಾವರಿ ನದಿಯ ತೀರದಲ್ಲಿದೆ. ಮನ್ಮಾಡ್ ರೈಲ್ವೆ ನಿಲ್ದಾಣದಿಂದ ಈ ಸ್ಥಳವು ೪೦ ಕಿಲೋಮೀಟರು ದೂರದಲ್ಲಿದೆ ಮತ್ತು ಶಿರಡಿಯ ಸಾಯಿಬಾಬಾ ಮಂದಿರದಿಂದ ೧೪ ಕಿಲೋಮೀಟರು ದೂರದಲ್ಲಿದೆ. ಇದು ಸಾಯಿಬಾಬಾರವರು ಶಿರಡಿಗೆ ಬಂದು ನೆಲೆಸುವ ಮೊದಲು ತಪಸ್ಸು ಮಾಡಿದ ಸ್ಥಳವಾಗಿರುತ್ತದೆ.
ಶ್ರೀ ಸಾಯಿ ತಪೋಭೂಮಿ ಮಂದಿರದ ಹೆಬ್ಬಾಗಿಲು
ತಪೋಭೂಮಿ ಮಂದಿರದಲ್ಲಿರುವ ಸಾಯಿಯವರ ವಿಗ್ರಹ
ನಂದಿಯ ಮುಂದುಗಡೆ ಇರುವ ಶಿವಲಿಂಗ
ಸಾಯಿಬಾಬಾರವರ ಎದುರುಗಡೆ ಇರುವ ನಂದಿಯ ವಿಗ್ರಹ
ಈ ಮಂದಿರದ ಮೇಲ್ವಿಚಾರಣೆಯನ್ನು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥನದವರೇ ವಹಿಸಿಕೊಂಡಿರುತ್ತಾರೆ. ಶಿರಡಿಯ ಸಮಾಧಿ ಮಂದಿರದಲ್ಲಿ ನಡೆಯುವಂತೆ ಇಲ್ಲಿಯೂ ಕೂಡ ಪ್ರತಿದಿನ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನ ಮತ್ತು ೪ ಬಾರಿ ಆರತಿ ತಪ್ಪದೆ ನಡೆಯುತ್ತದೆ.
ಇದರ ವಿಳಾಸ ಹೀಗಿರುತ್ತದೆ:
ಶ್ರೀ ಸಾಯಿಬಾಬಾ ತಪೋಭೂಮಿ ಮಂದಿರ
ತಕ್ಲಿ ರಸ್ತೆ, ವಡಂಗೆ ವಸ್ತಿ
ಕೊಪರ್ಗಾವ್, ಅಹ್ಮದ್ ನಗರ ಜಿಲ್ಲೆ
ಮಹಾರಾಷ್ಟ್ರ - ೪೨೩ ೬೦೧.
No comments:
Post a Comment