ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ದ್ವಾರಕಾಮಾಯಿ ಸೇವಾ ಚಾರಿಟಬಲ್ ಟ್ರಸ್ಟ್, ಶಿರಡಿ ಸಾಯಿಬಾಬಾ ಲೇಔಟ್, ಕುಲುಮೆಪಾಳ್ಯ, ಶ್ಯಾನುಭೋಗನಹಳ್ಳಿ ಬಸ್ ನಿಲ್ದಾಣದ ಹತ್ತಿರ, ಬನ್ನೇರುಘಟ್ಟ ರಸ್ತೆ, ಬೆಂಗಳೂರು - ಕೃಪೆ - ಸಾಯಿಅಮೃತಧಾರಾ.ಕಾಂ
ಶ್ರೀ ದ್ವಾರಕಾಮಾಯಿ ಸೇವಾ ಚಾರಿಟಬಲ್ ಟ್ರಸ್ಟ್, ಬೆಂಗಳೂರು ಸಮಾಜದಲ್ಲಿರುವ ಬಡ ಜನರ ಯೋಗಕ್ಷೇಮಕ್ಕಾಗಿ, ಅವರ ಒಳಿತಿಗಾಗಿ ಶಿರಡಿ ಸಾಯಿಬಾಬಾರವರು ತೋರಿಸಿದ ಮಾರ್ಗದಲ್ಲಿ ನಡೆಯುತ್ತಾ ಬಡ ಜನರ ಮಕ್ಕಳ ಓದು-ಬರಹಕ್ಕೆ ಸಹಾಯ ಮಾಡಲು, ಅವರ ವೈದ್ಯಕೀಯ ಖರ್ಚಿಗೆ ಸಹಾಯವನ್ನು ಮಾಡುವ, ವೃದ್ದರ ವೈದ್ಯಕೀಯ ಖರ್ಚುಗಳಿಗೆ ಸಹಾಯವನ್ನು ಮಾಡುವ ಉನ್ನತ ಧ್ಯೇಯವನ್ನು ಹೊಂದಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯ ಟ್ರಸ್ಟ್ ನಲ್ಲಿ ಅನೇಕ ಯುವಕರು ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದು ಸೇವಾ ಮನೋಭಾವವನ್ನು ಹೊಂದಿದ್ದಾರೆ.
ಈ ಟ್ರಸ್ಟ್ ನ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳು ಈ ಕೆಳಕಂಡಂತೆ ಇವೆ.
ಈ ಟ್ರಸ್ಟ್ ನ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳು ಈ ಕೆಳಕಂಡಂತೆ ಇವೆ.
- ಶ್ರೀ.ದ್ವಾರಕಾಮಾಯಿ ಸೇವಾ ಚಾರಿಟಬಲ್ ಟ್ರಸ್ಟ್ 7ನೇ ಜುಲೈ 2009 ರ ಪವಿತ್ರ ಗುರುಪೂರ್ಣಿಮೆಯಂದು ಪ್ರಾರಂಭವಾಯಿತು.
- ಈ ಟ್ರಸ್ಟ್ ಅನ್ನು ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಆಗಿ 27ನೇ ಆಗಸ್ಟ್ 2009 ರಂದು ನೋಂದಣಿ ಮಾಡಲಾಯಿತು.
- ಈ ಟ್ರಸ್ಟ್ ನಲ್ಲಿರುವ ದ್ವಾರಕಾಮಾಯಿ ಸಾಯಿಬಾಬಾರವರ ವಿಗ್ರಹವನ್ನು ಶಿರಡಿಯ ಸಮಾಧಿ ಮಂದಿರ, ದ್ವಾರಕಾಮಾಯಿ ಹಾಗೂ ಚಾವಡಿಯಲ್ಲಿ ಪೂಜೆ ಮಾಡಿಸಿ ನಂತರ ತಂದು ವಿಧಿವತ್ತಾಗಿ ಪ್ರತಿಷ್ಟಾಪಿಸಲಾಯಿತು.
- ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹವನ್ನು ನಿತ್ಯ ಪೂಜೆ ಮತ್ತು ಅಭಿಷೇಕಗಳಿಗೆ ಬಳಸಲಾಗುತ್ತಿದೆ.
- ಪ್ರತಿ ಗುರುವಾರ ಸಂಜೆ ಭಜನೆಯ ಕಾರ್ಯಕ್ರಮವನ್ನು ಸಂಜೆ 6:30 ರಿಂದ 8:30 ರ ವರೆಗೆ ನಡೆಸಲಾಗುತ್ತಿದೆ.
- ಟ್ರಸ್ಟ್ ನ ಸದಸ್ಯರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
![]() |
ಟ್ರಸ್ಟ್ ನಲ್ಲಿರುವ ಸಾಯಿಬಾಬಾರವರ ವಿಗ್ರಹ ಮತ್ತು ಪಾದುಕೆಗಳು
ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ವಸ್ತ್ರವನ್ನು ನೀಡುತ್ತಿರುವ ದೃಶ್ಯ
ವೃದ್ಧಾಶ್ರಮದ ವೃದ್ಧರಿಗೆ ಔಷಧ ನೀಡುತ್ತಿರುವ ದೃಶ್ಯ
ವೃದ್ಧಾಶ್ರಮದ ನಿವಾಸಿಗಳಿಗೆ ಭೋಜನ ನೀಡುತ್ತಿರುವ ದೃಶ್ಯ
ಟ್ರಸ್ಟ್ ನ ಧ್ಯೇಯ ಮತ್ತು ಉದ್ದೇಶಗಳು
- ಶಿರಡಿ ಸಾಯಿಬಾಬಾರವರು ಮತ್ತು ಅವರ ಅಂಕಿತ ಶಿಷ್ಯರುಗಳಾದ ಶ್ರೀ.ರಾಧಾಕೃಷ್ಣ ಸ್ವಾಮೀಜಿ ಹಾಗೂ ಶ್ರೀ.ನರಸಿಂಹ ಸ್ವಾಮೀಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದು ಮತ್ತು ಪ್ರಪಂಚದ ಎಲ್ಲಾ ಜನರ ನಡುವೆ ಸೋದರ ಭಾವನೆಯನ್ನು ಇನ್ನಷ್ಟು ಹೆಚ್ಚಿಸುವುದು.
- ಸಾಯಿ ಭಜನೆಗಳು, ಸತ್ಸಂಗಗಳು, ಹೆಸರಾಂತ ವೇದಾಂತ ಪಂಡಿತರಿಂದ ಪ್ರವಚನಗಳನ್ನು ಏರ್ಪಡಿಸುವುದರ ಮುಖೇನ ಎಲ್ಲೆಡೆಯಲ್ಲಿ ಸಾಯಿಬಾಬಾರವರ ಪ್ರಚಾರವನ್ನು ಮತ್ತು ಅವರ ಸಿದ್ದಾಂತವನ್ನು ಪ್ರಚಾರ ಮಾಡುವುದು.
- ಬೆಂಗಳೂರಿನ ಯಾವ ಪ್ರದೇಶದಲ್ಲಿ ಸಾಯಿ ಮಂದಿರವಿಲ್ಲವೋ ಅಲ್ಲಿ ಸಾಯಿಬಾಬಾರವರ ಮಂದಿರವನ್ನು ಕಟ್ಟಿ ಅದನ್ನು ಉತ್ತಮವಾಗಿ ನಡೆಸುವುದು ಮತ್ತು ಅಲ್ಲಿನ ಜನರಿಗೆ ಸಾಯಿಬಾಬಾರವರ ದರ್ಶನ ಮತ್ತು ಆಶೀರ್ವಾದ ಲಭಿಸುವಂತೆ ಮಾಡುವುದು.
- ಸಾಯಿಬಾಬಾರವರ ಪ್ರಮುಖ ಧ್ಯೇಯವಾದ ಅನ್ನದಾನವನ್ನು ಬೆಂಗಳೂರಿನ ಪ್ರಮುಖ ವೃದ್ಧಾಶ್ರಮಗಳು, ಶಾಲೆಗಳು, ಅಂಗವಿಕಲರ ಸಂಸ್ಥೆಗಳು, ಆಶ್ರಮಗಳಲ್ಲಿ ನಿಯಮಿತವಾಗಿ ನಡೆಸುವುದು ಮತ್ತು ಅಲ್ಲಿರುವ ಜನರ ಯೋಗಕ್ಷೇಮವನ್ನು ಆಗಾಗ್ಗೆ ವಿಚಾರಿಸಿ ಕೈಲಾದ ಸಹಾಯವನ್ನು ಮಾಡುವುದು.
- ಸಮಾಜದ ಹಿಂದುಳಿದ ಮತ್ತು ಬಡ ಜನರ ಶಸ್ತ್ರಚಿಕಿತ್ಸೆ, ಔಷಧಗಳಿಗೆ ಹಣಕಾಸಿನ ಸಹಾಯವನ್ನು ಮಾಡುವುದು.
- ಟ್ರಸ್ಟ್ ನ ಧ್ಯೇಯ ಮತ್ತು ಉದ್ದೇಶಗಳನ್ನು ತಿಳಿಸುವ ಭಿತ್ತಿ ಪತ್ರಗಳನ್ನು ಜನರಿಗೆ ನೀಡಿ ಟ್ರಸ್ಟ್ ನ ಧ್ಯೇಯಗಳನ್ನು ತಿಳಿಯಪಡಿಸಿ ಟ್ರಸ್ಟ್ ನ ಸದುದ್ದೇಶಗಳಿಗೆ ಬಳಸಲು ಹಣವನ್ನು ಸಂಗ್ರಹ ಮಾಡುವುದು.
- ಟ್ರಸ್ಟ್ ನ ಇನ್ನಿತರ ಯಾವುದೇ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಬೇಕಾಗುವ ಎಲ್ಲಾ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳುವುದು.
ಟ್ರಸ್ಟ್ ನ ವತಿಯಿಂದ ಬೆಂಗಳೂರಿನ ಪ್ರಪ್ರಥಮ ದ್ವಾರಕಾಮಾಯಿ ಸಾಯಿಬಾಬಾ ಮಂದಿರದ ನಿರ್ಮಾಣ:
ಟ್ರಸ್ಟ್ ಬೆಂಗಳೂರಿನ ಪ್ರಪ್ರಥಮ ದ್ವಾರಕಾಮಾಯಿ ಸಾಯಿಬಾಬಾ ಮಂದಿರವನ್ನು ಬೆಂಗಳೂರು ದಕ್ಷಿಣ ಭಾಗದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕುಲುಮೆಪಾಳ್ಯದಲ್ಲಿ ನಿರ್ಮಾಣ ಮಾಡುತ್ತಿದ್ದು ಅದಕ್ಕೆ ಸರಿಸುಮಾರು 80 ಲಕ್ಷ ರೂಪಾಯಿಗಳ ವೆಚ್ಚ ತಗಲುತ್ತದೆ ಎಂದು ಅಂದಾಜು ಮಾಡಲಾಗಿದೆ.
ಈ ದೇವಾಲಯದ ರೂಪುರೇಷೆ ಹಾಗೂ ಮನವಿ ಪತ್ರವನ್ನು ಸಾಯಿಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ:
ಟ್ರಸ್ಟ್ ನ ಕಾರ್ಯಕಾರಿ ಸಮಿತಿ ಸದಸ್ಯರು
1.ಶ್ರೀ.ಕೆ.ಗೋವಿಂದರಾಜ್ - ಅಧ್ಯಕ್ಷರು
2. ಶ್ರಿ.ರಾಘವೇಂದ್ರ ಶೆಟ್ಟಿ - ಉಪಾಧ್ಯಕ್ಷರು
3. ಶ್ರಿ.ಶ್ರೀ.ಹೆಚ್.ಎನ್.ರಾಜೇಶ್ – ಸಾಮಾನ್ಯ ಕಾರ್ಯದರ್ಶಿ
4. ಶ್ರೀ. ಅಚ್ಯುತ ರಾವ್ – ಜಂಟಿ ಕಾರ್ಯದರ್ಶಿ
5. ಶ್ರಿ. ಕೆ.ಎಸ್.ವೇಣುಗೋಪಾಲ್ - ಖಚಾಂಚಿ
6. ಶ್ರಿ.ಬಿ.ಅರ್.ನಾರಾಯಣ - ಸದಸ್ಯರು
7. ಶ್ರೀ.ಹೇಮಂತ್ ಕೊಲೇಕರ್ - ಸದಸ್ಯರು
8.ಶ್ರೀ.ಬಿ. ಆನಂದ ಸಿಂಗ್ - ಸದಸ್ಯರು
9. ಶ್ರಿ.ಬಿ.ಸಿ.ಪ್ರವೀಣ್ - ಸದಸ್ಯರು
ಟ್ರಸ್ಟ್ ನ ಕಾರ್ಯ ಚಟುವಟಿಕೆಗಳು
- ವೃದ್ಧಾಶ್ರಮ ಹಾಗೂ ಅಂಧರ ಶಾಲೆಗಳಲ್ಲಿ ಅನ್ನದಾನ ಕಾರ್ಯಕ್ರಮಗಳು.
- ವೃದ್ಧಾಶ್ರಮದ ವೃದ್ಧರಿಗೆ ಉಚಿತವಾಗಿ ಔಷಧಗಳನ್ನು ನೀಡುವ ಕಾರ್ಯಕ್ರಮ.
- ಅನಾಥಾಶ್ರಮದ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಶಾಲಾ ಬ್ಯಾಗ್ ಗಳು ಮತ್ತು ತಟ್ಟೆಗಳನ್ನು ನೀಡುವ ಕಾರ್ಯಕ್ರಮ.
- ಬಡ ಜನರಿಗೆ ಮತ್ತು ಅಶಕ್ತರಿಗೆ ವೈದ್ಯಕೀಯ ಸಹಾಯವನ್ನು ಮಾಡುವ ಕಾರ್ಯಕ್ರಮ.
- ನಿಯಮಿತವಾಗಿ ಪ್ರತಿ ವರ್ಷ ಶಿರಡಿ ಯಾತ್ರೆಯನ್ನು ಕೈಗೊಳ್ಳುವುದು.
1 . ಗುರು ಪೂರ್ಣಿಮೆ
2 . ರಾಮನವಮಿ
3 . ವಿಜಯದಶಮಿ
4 .ದತ್ತ ಜಯಂತಿ
ದೇಣಿಗೆಗೆ ಮನವಿ:
ಟ್ರಸ್ಟ್ ನಿರ್ಮಿಸುತ್ತಿರುವ ಬೆಂಗಳೂರಿನ ಪ್ರಪ್ರಥಮ ದ್ವಾರಕಾಮಾಯಿ ಸಾಯಿಬಾಬಾ ಮಂದಿರದ ಖರ್ಚುಗಳಿಗಾಗಿ ಹಾಗೂ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯ ಚಟುವಟಿಕೆಗಳಿಗಾಗಿ ದೇಣಿಗೆ ನೀಡಲು ಇಚ್ಚಿಸುವ ಸಾಯಿ ಬಂಧುಗಳು ಹಣವನ್ನು ನಗದು/ಚೆಕ್/ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರವಾಗಿ "ಶ್ರೀ ದ್ವಾರಕಾಮಾಯಿ ಸೇವಾ ಚಾರಿಟಬಲ್ ಟ್ರಸ್ಟ್, ಬೆಂಗಳೂರು" ಈ ಹೆಸರಿಗೆ ಸಂದಾಯವಾಗುವಂತೆ ನೀಡಬಹುದು. ಟ್ರಸ್ಟ್ ನ ಬ್ಯಾಂಕ್ ಖಾತೆಯ ವಿವರಗಳು ಈ ಕೆಳಕಂಡಂತೆ ಇವೆ:
ಖಾತೆ ಸಂಖ್ಯೆ: 2698101011164, - ಕೆನರಾ ಬ್ಯಾಂಕ್, ಡಾ.ರಾಜಕುಮಾರ್ ರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-21, ಐ.ಎಫ್.ಎಸ್.ಸಿ.ಸಂಖ್ಯೆ: CNRB0002698.
ಟ್ರಸ್ಟ್ ಗೆ ನೀಡುವ ಎಲ್ಲಾ ದೇಣಿಗೆಗೆ ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 80-G ಅನ್ವಯವಾಗುವಂತೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ.
ಟ್ರಸ್ಟ್ ನ ಸಂಪರ್ಕದ ವಿವರಗಳು ಟ್ರಸ್ಟ್ ಗೆ ನೀಡುವ ಎಲ್ಲಾ ದೇಣಿಗೆಗೆ ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 80-G ಅನ್ವಯವಾಗುವಂತೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ.
ಸ್ಥಳ:
ಶ್ಯಾನುಭೋಗನಹಳ್ಳಿ ಬಸ್ ನಿಲ್ದಾಣದ ಹತ್ತಿರ, ಶಿರಡಿ ಸಾಯಿಬಾಬಾ ಲೇ ಔಟ್, ಕುಲುಮೆ ಪಾಳ್ಯ
ವಿಳಾಸ:
ಶ್ರೀ ದ್ವಾರಕಾಮಾಯಿ ಸೇವಾ ಚಾರಿಟಬಲ್ ಟ್ರಸ್ಟ್,
ಶಿರಡಿ ಸಾಯಿಬಾಬಾ ಲೇಔಟ್, ಕುಲುಮೆಪಾಳ್ಯ, ಶ್ಯಾನುಭೋಗನಹಳ್ಳಿ ಬಸ್ ನಿಲ್ದಾಣದ ಹತ್ತಿರ,
ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಶ್ಯಾನುಭೋಗನಹಳ್ಳಿ ಬಸ್ ನಿಲ್ದಾಣದ ಹತ್ತಿರ, ಶಿರಡಿ ಸಾಯಿಬಾಬಾ ಲೇ ಔಟ್, ಕುಲುಮೆ ಪಾಳ್ಯ
ವಿಳಾಸ:
ಶ್ರೀ ದ್ವಾರಕಾಮಾಯಿ ಸೇವಾ ಚಾರಿಟಬಲ್ ಟ್ರಸ್ಟ್,
ಶಿರಡಿ ಸಾಯಿಬಾಬಾ ಲೇಔಟ್, ಕುಲುಮೆಪಾಳ್ಯ, ಶ್ಯಾನುಭೋಗನಹಳ್ಳಿ ಬಸ್ ನಿಲ್ದಾಣದ ಹತ್ತಿರ,
ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರಿ. ವೇಣುಗೋಪಾಲ್ /ಶ್ರಿ.ರಾಜೇಶ್/ಶ್ರಿ.ಪ್ರವೀಣ್/ಶ್ರಿ.ಅಚ್ಯುತ ರಾವ್/ಶ್ರಿ.ಗೋವಿಂದ ರಾಜ್/
ದೂರವಾಣಿ ಸಂಖ್ಯೆಗಳು:
+91 99805 26642 /+91 94483 62411/+91 90355 56381/+91 99453 73737/+91 99860 32187/+91 94490 64951
ಇ-ಮೈಲ್ ವಿಳಾಸ:
sdstblr@gmail.com
ಅಂತರ್ಜಾಲ ತಾಣ:
http://shridwarakamaisevacharitabletrust.webs.com/
ಮಾರ್ಗಸೂಚಿ:
ಶ್ಯಾನುಭೋಗನ ಹಳ್ಳಿ ಬಸ್ ನಿಲ್ದಾಣದಲ್ಲಿ ಇಳಿಯುವುದು. ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ದೇವಾಲಯವು ಬನ್ನೇರುಘಟ್ಟ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಲೇಔಟ್, ಕುಲುಮೆಪಾಳ್ಯದಲ್ಲಿ ಇರುತ್ತದೆ. ಮೆಜಿಸ್ಟಿಕ್ ಹಾಗೂ ಮಾರುಕಟ್ಟೆಯಿಂದ ದೇವಾಲಯಕ್ಕೆ ಹೇರಳವಾಗಿ ಬಸ್ ಗಳು ದೊರೆಯುತ್ತವೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment