Saturday, July 31, 2010

ಬೆಂಗಳೂರಿನ ಶಿರಡಿ ಸಾಯಿಬಾಬಾ ಧ್ಯಾನ ಮಂದಿರ - ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರ, ೯ ನೇ ಬಡಾವಣೆ, ರಾಗಿಗುಡ್ಡ ದೇವಸ್ಥಾನದ ಹತ್ತಿರ, ಜಯನಗರ, ಬೆಂಗಳೂರು - ಕೃಪೆ - ಶ್ರೀ.ಆರ್.ಸತೀಶ್

ಧ್ಯಾನ ಮಂದಿರದ ವಿಶೇಷತೆಗಳು
  • ಧ್ಯಾನ ಮಂದಿರದ ಭೂಮಿ ಪೂಜೆಯನ್ನು ೨೨ ನೇ ಜೂನ್ ೨೦೦೭ ರಂದು ಮಾಡಲಾಯಿತು.
  • ಸಾಯಿಬಾಬಾ ಧ್ಯಾನ ಮಂದಿರವು ೧೮ ನೇ ಮಾರ್ಚ್ ೨೦೧೦ ರಂದು ಪರಮ ಪೂಜ್ಯ ಶ್ರೀ.ಶ್ರೀ. ವಿದ್ಯಾ ನಾರಾಯಣ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು.
  • ಈ ಧ್ಯಾನಮಂದಿರವನ್ನು ಶ್ರೀ.ಆರ್.ಸತೀಶ್ ರವರು ಸಾಯಿಬಾಬಾರವರ ಆಶೀರ್ವಾದದಿಂದ ನಿರ್ಮಿಸಿರುತ್ತಾರೆ.
  • ಧ್ಯಾನಮಂದಿರದಲ್ಲಿ ಆಳೆತ್ತರದ ಕಲ್ಲಿನ ಮೇಲೆ ಕುಳಿತಿರುವ ಸುಂದರ ಸಾಯಿಬಾಬಾರವರ ವಿಗ್ರಹವಿದ್ದು ಧ್ಯಾನ ಮಾಡಲು ಬಹಳ ಪ್ರಶಸ್ತವಾಗಿದೆ.
  • ಧ್ಯಾನ ಮಂದಿರದ ಗೋಡೆಗಳ ಮೇಲೆ ಸುತ್ತಲೂ ಸಾಯಿಬಾಬಾರವರ ಜೊತೆಗಿದ್ದ ೫೨ ಸಾಯಿ ಮಹಾಭಕ್ತರ ಚಿತ್ರಗಳಿವೆ.
  • ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತೆಲುಗು, ತಮಿಳು, ಮರಾಟಿ, ಗುಜರಾತಿ, ಬೆಂಗಾಲಿ, ಪಂಜಾಬಿ, ಮತ್ತು ಸಿಂಧಿ ಸೇರಿದಂತೆ ೧೧ ಭಾಷೆಯ ಸಾಯಿ ಸಚ್ಚರಿತೆಯನ್ನು ಸಾಯಿಭಕ್ತರು ಪಾರಾಯಣ ಮಾಡಲು ಅನುಕೂಲವಾಗುವಂತೆ ಇಡಲಾಗಿದೆ.
  • ಸಣ್ಣ ಮಕ್ಕಳಿಗಾಗಿ ಮಕ್ಕಳ ಸಾಯಿಬಾಬಾ ಪುಸ್ತಕವನ್ನು ಇರಿಸಲಾಗಿದೆ.
  • ಸಾಯಿ ಸಚ್ಚರಿತೆಯ ೫೨ ಅಧ್ಯಾಯಗಳನ್ನು ಒಂದೆಡೆ ಬಿಂಬಿಸುವ ಚಿತ್ರಗಳನ್ನು ಸುಂದರವಾಗಿ ಜೋಡಿಸಿಡಲಾಗಿದೆ.
  • ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಕುರಾನ್ ಗ್ರಂಥವನ್ನು ಪಾರಾಯಣಕ್ಕೆ ಇಡಲಾಗಿದೆ.
  • ಸಾಯಿಬಾಬಾರವರ ೧೧ ಅಭಿವಚನಗಳನ್ನು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಧ್ಯಾನ ಮಂದಿರದಲ್ಲಿರುವ ೩ ಕಂಭಗಳ ಮೇಲೆ ಸುಂದರವಾಗಿ ಕೆತ್ತಲಾಗಿದೆ.
ಶಿರಡಿ ಸಾಯಿಬಾಬಾರವರು ಕಲ್ಲಿನ ಮೇಲೆ ಕುಳಿತಿರುವ ಆಳೆತ್ತರದ ಚಿತ್ರಪಟ

ಧ್ಯಾನಮಂದಿರದಲ್ಲಿರುವ ವಿವಿಧ ಭಾಷೆಯ ಸಾಯಿ ಸಚ್ಚರಿತೆ ಪುಸ್ತಕಗಳು

ಸಾಯಿಯವರ ಪೂರ್ಣ ಸಚ್ಚರಿತೆ ಚಿತ್ರರೂಪದಲ್ಲಿ

ಧ್ಯಾನ ಮಂದಿರದ ಕಾರ್ಯ ಚಟುವಟಿಕೆಗಳು

ದಿನನಿತ್ಯದ ಕಾರ್ಯಕ್ರಮಗಳು

ಧ್ಯಾನ ಮಂದಿರದ ಸಮಯ
ಪ್ರತಿದಿನ ಬೆಳಗ್ಗೆ ೯:೦೦ ಘಂಟೆಯಿಂದ ೧:೦೦ ಘಂಟೆಯವರೆಗೆ
ಸಂಜೆ ೫:೦೦ ಘಂಟೆಯಿಂದ ರಾತ್ರಿ ೮:೦೦ ಘಂಟೆಯವರೆಗೆ

ವಿಶೇಷ ಉತ್ಸವಗಳು ಮತ್ತು ಹಬ್ಬಗಳು

೧. ಧ್ಯಾನ ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷ ೧೮ ನೇ ಮಾರ್ಚ್.
೨. ಶ್ರೀ ರಾಮನವಮಿ.
೩. ಗುರು ಪೌರ್ಣಮಿ.
೪. ವಿಜಯ ದಶಮಿ ( ಸಾಯಿಬಾಬಾ ಸಮಾಧಿ ದಿವಸ)
೫. ದತ್ತ ಜಯಂತಿ

ಧ್ಯಾನ ಮಂದಿರದ ವಿಳಾಸ ಮತ್ತು ಮಾರ್ಗಸೂಚಿ

ವಿಳಾಸ:

ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನಮಂದಿರ
ಶ್ರೀ ಸಾಯಿ ಅಮೃತಂ, ೩ ನೇ ಮಹಡಿ (ಕೆಫೆ ಕಾಫಿ ಡೇ ಮೇಲೆ)
ನಂ. ೧೪೮೧, ಸೌತ್ ಎಂಡ್ "ಬಿ" ಅಡ್ಡ ರಸ್ತೆ, ೨೮ ನೇ ಮುಖ್ಯ ರಸ್ತೆ,
ರಾಗಿಗುಡ್ಡ ದೇವಸ್ತಾನದ ಹತ್ತಿರ, ೯ ನೇ ಬಡಾವಣೆ, ಜಯನಗರ
ಬೆಂಗಳೂರು-೫೬೦ ೦೬೯.

ಸಂಪರ್ಕಿಸಬೇಕಾದ ವ್ಯಕ್ತಿ:

ಶ್ರೀ. ಆರ್. ಸತೀಶ್

ದೂರವಾಣಿ ಸಂಖ್ಯೆ:

೯೩೪೧೨ ೬೪೬೯೬

ಮಾರ್ಗಸೂಚಿ:

ಜಯನಗರ ಈಸ್ಟ್ ಎಂಡ್ ವೃತ್ತದ ಬಳಿಯ ಬಸ್ ನಿಲ್ದಾಣದಲ್ಲಿ ಇಳಿದು ೨ ನಿಮಿಷ ಹಿಂದೆ ನಡೆದರೆ ಸಾಯಿ ಧ್ಯಾನ ಮಂದಿರ ಸಿಗುತ್ತದೆ. 

No comments:

Post a Comment