ಬೆಂಗಳೂರಿನ ಸಾಯಿ ಮಂದಿರ - ಶ್ರೀ.ಶಿವಶಕ್ತಿ ಶಿರಡಿ ಸಾಯಿಬಾಬಾ ಮಂದಿರ, ಪುಟ್ಟೇನಹಳ್ಳಿ ಪಾಳ್ಯ, ಜೆ.ಪಿ.ನಗರ, ಬೆಂಗಳೂರು - ಕೃಪೆ - ಶ್ರೀ.ಗುರುಮುರ್ತಿ
- ದೇವಾಲಯದ ಹೊರಭಾಗದಲ್ಲಿ ಗಣೇಶನ ಸುಂದರ ವಿಗ್ರಹವಿದೆ.
- ದೇವಾಲಯದ ಪ್ರವೇಶ ದ್ವಾರದ ಬಲಭಾಗದಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ.
- ಅಮೃತ ಶಿಲೆಯ ಸುಂದರ ಸಾಯಿಬಾಬಾರವರ ವಿಗ್ರಹವನ್ನು ದೇವಾಲಯದಲ್ಲಿ ಸಾಯಿಭಕ್ತರು ನೋಡಬಹುದು.
- ಶಿವ ಶಕ್ತಿ ಸ್ವರೂಪಿಣಿ ದುರ್ಗಾ ದೇವಿಯ ವಿಗ್ರಹವು ಸಾಯಿಬಾಬಾರವರ ವಿಗ್ರಹದ ಎಡಭಾಗದಲ್ಲಿ ಪ್ರತಿಷ್ಟಾಪಿಸಲಾಗಿದೆ.
- ಶಿರಡಿಯಲ್ಲಿರುವಂತೆ ಸಾಯಿಬಾಬಾರವರ ಎದುರಿಗೆ ನಂದಿಯನ್ನು ಪ್ರತಿಷ್ಟಾಪಿಸಲಾಗಿದೆ.
- ದೇವಾಲಯದ ಎರಡನೇ ಮಹಡಿಯಲ್ಲಿ ಪ್ರತಿ ಗುರುವಾರ ಅನ್ನದಾನ ಕಾರ್ಯಕ್ರಮ ನಡೆಯುತ್ತದೆ.
- ಪ್ರತಿ ಗುರುವಾರ ರಾತ್ರಿ ೮ ಘಂಟೆಗೆ ಪಲ್ಲಕ್ಕಿ ಉತ್ಸವ ನಡಯುತ್ತದೆ.
- ಮೊದಲನೇ ಮಹಡಿಯಲ್ಲಿ ಧ್ಯಾನ ಮಂದಿರವನ್ನು ಸ್ಥಾಪಿಸಲಾಗಿದೆ.
- ಪ್ರತಿ ಗುರುವಾರ ಬೆಳಗ್ಗೆ ೬:೩೦ ಕ್ಕೆ ಸಾಯಿಬಾಬಾರವರಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಎಲ್ಲಾ ಸಾಯಿಭಕ್ತರು ಇದರಲ್ಲಿ ಪಾಲ್ಗೊಂಡು ತಾವೇ ಸ್ವತಃ ಸಾಯಿಬಾಬಾರವರ ವಿಗ್ರಹಕ್ಕೆ ಅಭಿಷೇಕ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಸಾಯಿಬಾಬಾರವರ ವಿಗ್ರಹ
ದುರ್ಗಾದೇವಿಯ ವಿಗ್ರಹ
ಗುರುವಾರದ ಅನ್ನದಾನದ ದೃಶ್ಯ
ದಿನನಿತ್ಯ ನಡೆಯುವ ಕಾರ್ಯಕ್ರಮಗಳು
ಆರತಿಯ ಸಮಯ
ಆರತಿ | ಸಮಯ |
ಕಾಕಡ ಆರತಿ | ೬:೩೦ ಬೆಳಗ್ಗೆ |
ಮಹಾಮಂಗಳಾರತಿ | ೯:೩೦ ಬೆಳಗ್ಗೆ |
ಮಧ್ಯಾನ್ಹ ಆರತಿ | ೧೨:೦೦ |
ಧೂಪಾರತಿ | ೬:೩೦ ಸಂಜೆ |
ಶೇಜಾರತಿ | ೯:೩೦ ರಾತ್ರಿ |
ವಿಶೇಷ ಕಾರ್ಯಕ್ರಮಗಳು
ಪ್ರತಿ ಹುಣ್ಣಿಮೆಯ ದಿನ ಸಂಜೆ ೭:೦೦ ಘಂಟೆಯಿಂದ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.
ವಿಶೇಷ ಉತ್ಸವಗಳು ಮತ್ತು ಹಬ್ಬಗಳು
೧. ಹೊಸ ವರ್ಷದ ಆಚರಣೆ
೨. ಶ್ರೀರಾಮನವಮಿ
೩. ಗುರುಪೌರ್ಣಮಿ
೪. ನವರಾತ್ರಿ ಉತ್ಸವಗಳು
೫. ದತ್ತಾತ್ರೇಯ ಜಯಂತಿ
ದೇವಾಲಯವಿರುವ ಸ್ಥಳದ ವಿವರಗಳು
ವಿಳಾಸ :ನಂ.೫೩, ೧೩ ನೇ ಮುಖ್ಯ ರಸ್ತೆ, ಪುಟ್ಟೇನಹಳ್ಳಿ ಪಾಳ್ಯ, ಪುಟ್ಟೇನಹಳ್ಳಿ ಮುಖ್ಯ ರಸ್ತೆ, ಜೆ.ಪಿ.ನಗರ, ೭ ನೇ ಹಂತ, ಬೆಂಗಳೂರು-೭೮.
ಸಂಪರ್ಕಿಸಬೇಕಾದ ವ್ಯಕ್ತಿ : ಶ್ರೀ. ಗುರುಮುರ್ತಿ ಗುರೂಜಿ
ದೂರವಾಣಿ ಸಂಖ್ಯೆಗಳು : ೯೮೪೫೬೮೪೭೮೩ / ೯೬೮೬೬೮೧೨೩೩ / ೯೬೮೬೬೮೧೨೩೨
ಈ ಮೇಲ್ ವಿಳಾಸ : jaiguru6@gmail.com, gmurthy06@gmail.com
ಮಾರ್ಗ ಸೂಚಿ : ಪುಟ್ಟೇನಹಳ್ಳಿ ಪಾಳ್ಯ ಬಸ್ ನಿಲ್ದಾಣದಿಂದ ೨ ನಿಮಿಷ ನಡೆದರೆ ಸಾಯಿಮಂದಿರ ಸಿಕ್ಕುತ್ತದೆ.
No comments:
Post a Comment