ಬೆಂಗಳೂರಿನ ಸಾಯಿ ಮಂದಿರ - ಶ್ರೀ ನಾಗಸಾಯಿ ಮಂದಿರ, ರಾಮಾಂಜನಪ್ಪ ಲೇಔಟ್, ಆಕಾಶ ನಗರ, ಎ.ನಾರಾಯಣಪುರ, ಬೆಂಗಳೂರು - ಕೃಪೆ - ಪಿ.ವೆಂಕಟರಮಣ ರೆಡ್ಡಿ
ದೇವಾಲಯದ ವಿಶೇಷತೆಗಳು
- ದೇವಾಲಯದ ಭೂಮಿ ಪೂಜೆಯನ್ನು ೧೮ ನೇ ನವೆಂಬರ್ ೨೦೦೨ ರಂದು ಮಾಡಲಾಯಿತು.
- ಸಾಯಿಬಾಬಾ ಮಂದಿರವು ೨೨ ನೇ ನವೆಂಬರ್ ೨೦೦೯ ರಂದು ಶ್ರೀ.ಅಮ್ಮುಲ ಸಾಂಭಶಿವ ರಾವ್ ರವರಿಂದ ಉದ್ಘಾಟನೆಗೊಂಡಿತು.
- ಈ ದೇವಾಲಯವನ್ನು ಸಾರ್ವಜನಿಕರ ಸಹಕಾರದಿಂದ ಶ್ರೀ. ಶಿರಡಿ ಸಾಯಿಬಾಬಾ ಸೇವಾ ಸಮಿತಿ (ರಿ) ನಿರ್ಮಿಸಿದರು.
- ದತ್ತಾತ್ರೇಯ ದೇವರ ವಿಗ್ರಹವು ಸಾಯಿಬಾಬಾ ಮಂದಿರದ ಎದುರುಗಡೆ ಇದೆ.
- ಶಿರಡಿಯಲ್ಲಿರುವಂತೆ ನಂದಿಯ ವಿಗ್ರಹವನ್ನು ಸಾಯಿಬಾಬಾ ಮಂದಿರದ ಹೊರಗಡೆ ಪ್ರತಿಷ್ಟಾಪಿಸಲಾಗಿದೆ.
- ಧುನಿಯನ್ನು ಸಾಯಿಬಾಬಾ ಮಂದಿರದ ಬಲಭಾಗದಲ್ಲಿ ಪ್ರತಿಷ್ಟಾಪಿಸಲಾಗಿದೆ. ಪವಿತ್ರ ಅಗ್ನಿಯನ್ನು ಬಿ.ಟಿ.ಎಂ. ಲೇಔಟ್, ಸಾಯಿಬಾಬಾ ಮಂದಿರದಿಂದ ತಂದು ಪ್ರತಿಷ್ಟಾಪಿಸಲಾಗಿದೆ.
- ಸಾಯಿಬಾಬಾ ಮಂದಿರದ ಕೆಳ ಅಂತಸ್ತಿನಲ್ಲಿ ಧ್ಯಾನ ಮಂದಿರವನ್ನು ಸ್ಥಾಪಿಸಲಾಗಿದ್ದು ಅಲ್ಲಿ ನಂದಾದೀಪವನ್ನು ಕೂಡ ಸ್ಥಾಪಿಸಲಾಗಿದೆ.
- ಸಾಯಿಬಾಬಾ ಮಂದಿರದ ಹಿಂಭಾಗದಲ್ಲಿ ಒಂದು ನಾಗರ ಹುತ್ತ ಇದೆ.
ಸಾಯಿಬಾಬಾ ವಿಗ್ರಹ
ಧ್ಯಾನ ಮಂದಿರ
ಪವಿತ್ರ ಧುನಿ ಮಾ
ನಾಗರ ಹುತ್ತ
ದೇವಾಲಯದ ಹೊರನೋಟ
ದೇವಾಲಯದ ಕಾರ್ಯಚಟುವಟಿಕೆಗಳು
ದಿನನಿತ್ಯದ ಕಾರ್ಯಕ್ರಮಗಳು
ಆರತಿಯ ಸಮಯ
ಕಾಕಡ ಆರತಿ - ಪ್ರತಿದಿನ ಬೆಳಿಗ್ಗೆ ೬:೩೦ ಕ್ಕೆ
ಛೋಟಾ ಆರತಿ - ಪ್ರತಿದಿನ ಬೆಳಿಗ್ಗೆ ೮:೩೦ ಕ್ಕೆ
ಮಧ್ಯಾನ್ಹ ಆರತಿ - ಪ್ರತಿದಿನ ಮಧ್ಯಾನ್ಹ ೧೨:೦೦ ಘಂಟೆಗೆ
ಧೂಪಾರತಿ - ಪ್ರತಿದಿನ ಸಂಜೆ ೬:೧೫ ಕ್ಕೆ
ಶೇಜಾರತಿ - ಪ್ರತಿದಿನ ರಾತ್ರಿ ೮:೧೫ ಕ್ಕೆ ಮತ್ತು ಗುರುವಾರದಂದು ೮:೩೦ ಕ್ಕೆ
ಪ್ರತಿ ಗುರುವಾರದಂದು ಬೆಳಿಗ್ಗೆ ೭:೦೦ ಘಂಟೆಯಿಂದ ೮:೦೦ ಘಂಟೆಯವರೆಗೆ ಮಾತ್ರ ಸಾಯಿಬಾಬಾ ವಿಗ್ರಹಕ್ಕೆ ಅಭಿಷೇಕ ಕಾರ್ಯಕ್ರಮವಿರುತ್ತದೆ. ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ೨೫೧/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆಯತಕ್ಕದ್ದು. ಸಾಯಿಭಕ್ತರು ಯಾವುದೇ ಪೂಜಾ ಸಾಮಗ್ರಿ ತರುವ ಅವಶ್ಯಕತೆಯಿಲ್ಲ.
ತಿಂಗಳ ಯಾವುದೇ ದಿನ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ವಿಶೇಷ ಅಭಿಷೇಕ ಸೇವೆಯಿರುತ್ತದೆ. ಅದರ ಸೇವಾ ಶುಲ್ಕ ೧೦೦೧/- ರುಪಾಯಿಗಳಾಗಿದ್ದು, ಅಭಿಷೇಕ ಮಾಡಿಸಲು ಇಚ್ಚಿಸುವ ಸಾಯಿಭಕ್ತರು ಮುಂಚಿತವಾಗಿ ಹಣವನ್ನು ಸಂದಾಯ ಮಾಡಿ ರಶೀದಿಯನ್ನು ಪಡೆಯತಕ್ಕದ್ದು. ಸಾಯಿಭಕ್ತರು ಯಾವುದೇ ಪೂಜಾ ಸಾಮಗ್ರಿ ತರುವ ಅವಶ್ಯಕತೆಯಿಲ್ಲ.
ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ವ್ರತವನ್ನು ಬೆಳಿಗ್ಗೆ ೯:೦೦ ರಿಂದ ೧೨:೦೦ ಘಂಟೆಯವರೆಗೆ ಹಮ್ಮಿಕೊಳ್ಳಲಾಗುತ್ತದೆ. ಇದರ ಸೇವಾ ಶುಲ್ಕ ೫೧/- ರುಪಾಯಿಗಳಾಗಿದ್ದು ಪೂಜೆಯನ್ನು ಮಾಡಿಸಲು ಇಚ್ಚಿಸುವ ಸಾಯಿಭಕ್ತರು ಮುಂಚಿತವಾಗಿ ಹಣವನ್ನು ಸಂದಾಯ ಮಾಡಿ ರಶೀದಿಯನ್ನು ಪಡೆಯತಕ್ಕದ್ದು. ಸಾಯಿಭಕ್ತರು ಯಾವುದೇ ಪೂಜಾ ಸಾಮಗ್ರಿ ತರುವ ಅವಶ್ಯಕತೆಯಿಲ್ಲ.
ವಿಶೇಷ ಉತ್ಸವಗಳು ಮತ್ತು ಹಬ್ಬಗಳು
- ಶ್ರೀ ರಾಮನವಮಿ
- ಗುರು ಪೂರ್ಣಿಮೆ
- ವಿಜಯ ದಶಮಿ (ಸಾಯಿಬಾಬಾ ಸಮಾಧಿ ದಿವಸ)
- ದತ್ತ ಜಯಂತಿ
- ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ ೨೨ ನೇ ನವೆಂಬರ್.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ
ವಿಳಾಸ:
ಶ್ರೀ ನಾಗಸಾಯಿ ಮಂದಿರ
ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಮಿತಿ ಟ್ರಸ್ಟ್ (ರಿ)
ನಂ.೧೫-೧, ರಾಮಾಂಜನಪ್ಪ ಲೇಔಟ್, ಆಕಾಶ ನಗರ,
ಎ.ನಾರಾಯಣಪುರ, ದೂರವಾಣಿನಗರ ಅಂಚೆ,
ಬೆಂಗಳೂರು-೫೬೦ ೦೧೬.
ಸಂಪರ್ಕಿಸಬೇಕಾದ ವ್ಯಕ್ತಿ:
ಪಿ. ವೆಂಕಟರಮಣ ರೆಡ್ಡಿ - ದೇವಾಲಯದ ಮ್ಯಾನೇಜರ್
ದೂರವಾಣಿ ಸಂಖ್ಯೆಗಳು:
೦೮೦-೨೮೫೧ ೨೨೯೯ / ೯೯೦೦೩, ೧೮೨೩೬
ಮಾರ್ಗಸೂಚಿ:
ಕೆ. ಆರ್.ಪುರಂ ರೈಲ್ವೆ ನಿಲ್ದಾಣದಿಂದ ೨೫ ನಿಮಿಷದ ನಡಿಗೆ, ಪಿ. ಡಬ್ಲ್ಯು.ಡಿ. ಮುಖ್ಯ ರಸ್ತೆಯ ಹತ್ತಿರ.
No comments:
Post a Comment