ಹಾಲಿನಲ್ಲಿ ಅಂಜೂರದ ಹಣ್ಣುಗಳು ಇರುವಂತೆ ಮಾಡಿದ ಅತ್ಯಾಶ್ಚರ್ಯಕರ ಸಾಯಿ ಲೀಲೆ - ಕೃಪೆ - ಶ್ರೀಮತಿ.ಗಿರಿಜಾ ಶಾಸ್ತ್ರಿ
ಸುಮಾರು ೨೦ ವರ್ಷಗಳ ಹಿಂದೆ ನಾವುಗಳು ಚಂಡೀಘಡದಲ್ಲಿ ವಾಸ ಮಾಡುತ್ತಿದ್ದೆವು. ಒಬ್ಬ ಅನನ್ಯ ಸಾಯಿ ಭಕ್ತರ ಮನೆಯಲ್ಲಿ ಪ್ರತಿ ಗುರುವಾರ ಸಾಯಿ ಭಜನೆಯ ಕಾರ್ಯಕ್ರಮ ನಡೆಯುತ್ತಿತ್ತು. ಒಂದು ಗುರುವಾರ ಆ ಮನೆಯ ಒಡತಿಗೆ ಹುಷಾರಿಲ್ಲದ ಕಾರಣ ನನಗೆ ಸಾಯಿಬಾಬಾರವರಿಗೆ ಹಾಲನ್ನು ನೈವೇದ್ಯಕ್ಕೆ ಇಡಲು ಹೇಳಿದರು. ಆಗ ತಾನೇ ಭಜನೆ ಶುರುವಾಗುವುದರಲ್ಲಿತ್ತು. ನಾನು ಅಡಿಗೆ ಮನೆಯೊಳಗೆ ಓಡಿ ಹೋಗಿ ಒಂದು ಲೋಟದಲ್ಲಿ ಹಾಲನ್ನು ಹಾಕಿ ಅದಕ್ಕೆ ಸಕ್ಕರೆಯನ್ನು ಬೆರೆಸಿ ಒಂದು ಚಮಚವನ್ನು ಅದರಲ್ಲಿ ಇಟ್ಟು ಸಾಯಿಬಾಬಾರವರ ಪಟದ ಮುಂದೆ ನೈವೇದ್ಯಕ್ಕೆ ಇಟ್ಟೆ. ಭಜನೆ ಮುಗಿಯುವುದರ ಒಳಗಾಗಿ ಸಕ್ಕರೆ ಕರಗಿ ಸಿಹಿಯಾಗುತ್ತದೆ ಎಂದು ಭಾವಿಸಿ ನಾನು ಸಕ್ಕರೆಯನ್ನು ಕಲಕದೆ ಹಾಲಿನ ಲೋಟವನ್ನು ಹಾಗೆಯೇ ಇಟ್ಟುಬಿಟ್ಟೆ. ಭಜನೆಯು ಮುಗಿದ ನಂತರ ನಾನು ಹಾಲಿನ ಲೋಟವನ್ನು ತೆಗೆದುಕೊಂಡು ಸಕ್ಕರೆಯನ್ನು ಕರಗಿಸುವ ಸಲುವಾಗಿ ಕಲಕೋಣ ಎಂದು ನೋಡಿದಾಗ ನಮಗೆಲ್ಲ ಒಂದು ಆಶ್ಚರ್ಯ ಕಾದಿತ್ತು. ಹಾಲಿನ ಲೋಟದಲ್ಲಿದ್ದ ಚಮಚ ಸ್ವಲ್ಪವೂ ಅಲುಗಾಡದೆ ಗಟ್ಟಿಯಾಗಿ ಹಿಡಿದುಕೊಂಡಂತೆ ಇತ್ತು. ಒಳಗಡೆ ಏನು ಸೇರಿಕೊಂಡಿದೆ ಎಂದು ಕೈಹಾಕಿ ನೋಡಿದಾಗ ಅದರಲ್ಲಿ ಒಂದು ೩.೫ ಇಂಚು ಉದ್ದದ ಅಂಜೂರದ ಹಣ್ಣು ಸೇರಿಕೊಂಡಿತ್ತು. ಅಷ್ಟು ದೊಡ್ಡ ಅಂಜೂರದ ಹಣ್ಣನ್ನು ನಾನು ನನ್ನ ಜೀವಮಾನದಲ್ಲೇ ನೋಡಿರಲಿಲ್ಲ. ಆ ಹಣ್ಣನ್ನು ಮತ್ತೊಂದು ಸಾಯಿ ಭಕ್ತೆಗೆ ತೋರಿಸಿದೆ. ಆಕೆಯು ಅದನ್ನು ನೋಡಿ "ಈ ತರಹದ ಹಣ್ಣುಗಳು ಬಲುಚಿಸ್ತಾನದಲ್ಲಿ ಮಾತ್ರ ಸಿಕ್ಕುತ್ತದೆ. ಇಲ್ಲೆಲ್ಲೂ ಸಿಗುವುದಿಲ್ಲ" ಎಂದಳು. ನಂತರ ನಾನು ಆ ಹಣ್ಣನ್ನು ಚೂರು ಚೂರಾಗಿ ಮಾಡಿ ಹಾಲಿಗೆ ಬೆರೆಸಿ ಅಂದು ಅಲ್ಲಿ ನರೆದಿದ್ದ ಎಲ್ಲ ಸಾಯಿ ಭಕ್ತರಿಗೂ ಒಂದು ಚೂರು ಹಣ್ಣಿನ ಜೊತೆ ಹಾಲನ್ನು ಸೇರಿಸಿ ತೀರ್ಥವನ್ನು ನೀಡಿದೆ.
ಸಾಯಿ ಭಕ್ತರೇ ! ಇದಲ್ಲವೇ ಶಿರಡಿ ಸಾಯಿಬಾಬಾರವರ ಲೀಲೆ. ಇಂತಹ ಅನೇಕ ಲೀಲೆಗಳನ್ನು ಸಾಯಿಬಾಬಾರವರು ಮಾಡುತ್ತಿದ್ದರು ಮತ್ತು ಈಗಲೂ ಸಾಯಿಭಕ್ತರು ಇಂತಹ ಆಶ್ಚರ್ಯಕರ ಲೀಲೆಗಳನ್ನು ತಮ್ಮ ಜೀವನದಲ್ಲಿ ಪ್ರತಿನಿತ್ಯ ನೋಡುತ್ತಿದ್ದಾರೆ.
-ಶ್ರೀಮತಿ. ಗಿರಿಜಾ ಶಾಸ್ತ್ರಿಯವರು ಹೇಳಿದಂತೆ
No comments:
Post a Comment