ಶಿರಡಿಯಲ್ಲಿ ನೋಡಬೇಕಾದ ಸ್ಥಳ - ಪಂಚಮುಖಿ ವಿನಾಯಕ ಮಂದಿರ - ಕೃಪೆ - ಸಾಯಿ ಅಮೃತಧಾರಾ.ಕಾಂ
ಪಂಚಮುಖಿ ವಿಷ್ಣು ಗಣಪತಿಯ ಸುಂದರ ವಿಗ್ರಹ
ಈ ಸುಪ್ರಸಿದ್ದ ಪಂಚಮುಖಿ ವಿಷ್ಣು ಗಣಪತಿ ಮಂದಿರವು ಶಿರಡಿ ಸಾಯಿಬಾಬಾ ಸಂಸ್ಥಾನದಿಂದ ಸುಮಾರು ೨ ಕಿಲೋಮೀಟರು ದೂರದಲ್ಲಿದೆ. ಈ ಮಂದಿರದಲ್ಲಿ ಸುಂದರವಾದ ಪಂಚಮುಖಿ ವಿಷ್ಣು ಗಣಪತಿಯ ವಿಗ್ರಹವಿದೆ. ಈ ವಿಗ್ರಹವನ್ನು ಭಾರತದ ಸುಪ್ರಸಿದ್ದ ಜ್ಯೋತಿಷಿಯಾದ ಶ್ರೀ.ಬೇಜಾನ್ ದಾರೂವಾಲರವರು ೧೩ ನೇ ಜೂನ್ ೨೦೦೨ ರಂದು ತಮ್ಮ ೭೦ ನೇ ಇಳಿವಯಸ್ಸಿನಲ್ಲಿ ಪ್ರತಿಷ್ಟಾಪನೆ ಮಾಡಿರುತ್ತಾರೆ.
ದೇವಾಲಯದ ಹೊರನೋಟ
ಈ ದೇವಾಲಯದ ಪಕ್ಕದಲ್ಲಿ ಶಿರಡಿ ಸಾಯಿಬಾಬಾ ಮತ್ತು ಜಗನ್ಮಾತೆ ಅನ್ನಪೂರ್ಣೆಶ್ವರಿಯ ದೇವಾಲಯವಿದೆ.
ಸಾಯಿಬಾಬಾ ಮತ್ತು ಅನ್ನಪೂರ್ಣೆಶ್ವರಿಯ ವಿಗ್ರಹಗಳು
ಅಷ್ಟೇ ಆಲ್ಲದೇ, ಪಂಚಮುಖಿ ವಿಷ್ಣು ಗಣಪತಿಯ ದೇವಾಲಯದ ಹಿಂಭಾಗದಲ್ಲಿ ಹನುಮಾನ್ ಮಂದಿರವಿದೆ. ಈ ಮಂದಿರದಲ್ಲಿ ಆಳೆತ್ತರದ ಹನುಮಂತನ ಸುಂದರ ವಿಗ್ರಹವನ್ನು ಹೊಸದಾಗಿ ನಿರ್ಮಿಸಲಾಗಿದೆ.
ಹನುಮಂತನ ವಿಗ್ರಹ
ಪ್ರತಿನಿತ್ಯ ಬೆಳಗಿನ ಜಾವ ಎಲ್ಲ ದೇವರುಗಳಿಗೆ ಅಭಿಷೇಕ, ಅರ್ಚನೆ ಮತ್ತು ಮಂಗಳಾರತಿಯನ್ನು ದಕ್ಷಿಣ ಭಾರತದ ವೈದಿಕ ಪದ್ದತಿಯ ಪ್ರಕಾರ ನಡೆಸಲಾಗುತ್ತಿದೆ.
ದೇವಾಲಯದ ಪಕ್ಕದ ೨ ಎಕರೆ ಪ್ರದೇಶದಲ್ಲಿ ಬಡವರಿಗೆ ನಿತ್ಯ ಅನ್ನದಾನ, ವೃದ್ದಾಶ್ರಮ, ಮದುವೆಯ ಛತ್ರ ಮತ್ತು ಬಂದ ಭಕ್ತರಿಗೆ ಉಳಿದುಕೊಳ್ಳಲು ಸುಮಾರು ೪೦ ರೂಮುಗಳನ್ನು ಕಟ್ಟುವ ಉದ್ದೇಶವನ್ನು ಪಂಚಮುಖಿ ಗಣಪತಿ ಟ್ರಸ್ಟ್ ನವರು ಹೊಂದಿದ್ದಾರೆ.
No comments:
Post a Comment