ಬೆಂಗಳೂರಿನ ಸಾಯಿ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಸೇವಾ ಕೇಂದ್ರ, ಬೂದಿಗೆರೆ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು - ಕೃಪೆ - ಶ್ರೀ. ಎ. ಕೃಷ್ಣಮುರ್ತಿ
ದೇವಾಲಯದ ವಿಶೇಷತೆಗಳು
ದೇವಾಲಯದ ಭೂಮಿ ಪೂಜೆಯನ್ನು ೧೩ ನೇ ಫೆಬ್ರವರಿ ೧೯೯೨ ರಂದು ನೆರವೇರಿಸಲಾಯಿತು. ದೇವಾಲಯವು ೨೦೦೧ ರಲ್ಲಿ ಉದ್ಘಾಟನೆಗೊಂಡಿತು. ದ್ವಾರಕಾಮಾಯಿಯು ೧೧ ನೇ ಮೇ ೨೦೦೫ ರಂದು ಉದ್ಘಾಟನೆಗೊಂಡಿತು.
ಈ ಮಂದಿರವನ್ನು ಜನರ ಸಹಾಯದಿಂದ ಶ್ರೀ.ಕೃಷ್ಣಮುರ್ತಿಯವರು ಕಟ್ಟಿದರು.
ಈಗ ಚಿಕ್ಕದಾದ ಮತ್ತು ಸುಂದರವಾದ ಸಾಯಿಬಾಬಾರವರ ವಿಗ್ರಹವನ್ನು ಸದ್ಯಕ್ಕೆ ಪ್ರತಿಷ್ಟಾಪಿಸಲಾಗಿದೆ. ಮುಂದೆ ದೊಡ್ಡ ಸಾಯಿಬಾಬಾರವರ ವಿಗ್ರಹವನ್ನು ದೊಡ್ಡದಾದ ಸಾಯಿಮಂದಿರ ನಿರ್ಮಾಣ ಮಾಡಿದ ಮೇಲೆ ಪ್ರತಿಷ್ಠಾಪಿಸಲು ಯೋಚಿಸಲಾಗಿದೆ.
ಶಿರಡಿಯಲ್ಲಿರುವಂತೆ ನಂದಿಯ ವಿಗ್ರಹವನ್ನು ಸಾಯಿ ಮಂದಿರದ ಹೊರಗಡೆಯಲ್ಲಿ ಪ್ರತಿಷ್ಟಾಪಿಸಲಾಗಿದೆ.
ಗುರುಸ್ಥಾನದಲ್ಲಿ ಸಾಯಿಬಾಬಾ, ದತ್ತಾತ್ರೇಯ, ಬಾಣಲಿಂಗ ಮತ್ತು ನಂದಾದೀಪವನ್ನು ಪ್ರತಿಷ್ಟಾಪಿಸಲಾಗಿದೆ. ಗುರುಸ್ಥಾನವು ೨೯ ನೇ ಸೆಪ್ಟೆಂಬರ್ ೨೦೦೯ ರಂದು ಉದ್ಘಾಟನೆಗೊಂಡಿತು.
ಚಾವಡಿಯನ್ನು ೨೯ ನೇ ಸೆಪ್ಟೆಂಬರ್ ೨೦೦೯ ರಂದು ಉದ್ಘಾಟಿಸಲಾಯಿತು. ಇದರಲ್ಲಿ ಭಾರತದ ಅನೇಕ ಸಾಧು-ಸಂತರ ಚಿತ್ರಪಟಗಳನ್ನು ತೂಗುಹಾಕಲಾಗಿದೆ.
ಸಾಯಿಬಾಬಾರವರ ವಿಗ್ರಹ
ಪವಿತ್ರ ಧುನಿ ಮಾ
ಶ್ರೀಯವರ ಚಾವಡಿ
ದತ್ತಾತ್ರೇಯ ವಿಗ್ರಹ
ಬಾಣಲಿಂಗ
ಪವಿತ್ರ ಬೇವಿನ ಮರ
ದಿನನಿತ್ಯದ ಕಾರ್ಯಕ್ರಮಗಳು
ಆರತಿಯ ಸಮಯ
ಕಾಕಡ ಆರತಿ - ಪ್ರತಿದಿನ ಬೆಳಗ್ಗೆ ೬:೩೦ ಕ್ಕೆ ಮತ್ತು ಗುರುವಾರ ೬:೦೦ ಘಂಟೆಗೆ
ಛೋಟಾ ಆರತಿ - ಪ್ರತಿದಿನ ಬೆಳಗ್ಗೆ ೯:೩೦ ಕ್ಕೆ
ಮದ್ಯಾನ್ಹ ಆರತಿ - ಪ್ರತಿದಿನ ಮದ್ಯಾನ್ಹ ೧೨:೦೦ ಕ್ಕೆ ಮತ್ತು ಗುರುವಾರ ಮದ್ಯಾನ್ಹ ೧೨:೩೦ ಕ್ಕೆ
ಧೂಪಾರತಿ - ಪ್ರತಿದಿನ ಸಂಜೆ ೬:೦೦ ಕ್ಕೆ
ಶೇಜಾರತಿ - ಪ್ರತಿದಿನ ರಾತ್ರಿ ೮:೦೦ ಕ್ಕೆ ಮತ್ತು ಗುರುವಾರ ರಾತ್ರಿ ೮:೩೦ ಕ್ಕೆ
ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪ್ರತಿದಿನ ಬೆಳಗ್ಗೆ ೭:೩೦ ರಿಂದ ೮:೩೦ ರವರೆಗೆ ಅಭಿಷೇಕವನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾಯಿಭಕ್ತರು ೧೦೧/- ರುಪಾಯಿಗಳನ್ನು ಮುಂಚಿತವಾಗಿ ಕೊಟ್ಟು ರಶೀದಿಯನ್ನು ಪಡೆದು ಅಭಿಷೇಕ ಸೇವೆಯಲ್ಲಿ ಭಾಗವಹಿಸಬಹುದು. ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆಯಿರುವುದಿಲ್ಲ.
ಧುನಿ ಪೂಜೆಯನ್ನು ಪ್ರತಿದಿನ ಮಾಡಲಾಗುತ್ತದೆ. ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ೨೫/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆಯಬಹುದು. ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆಯಿರುವುದಿಲ್ಲ.
ಪ್ರತಿ ಗುರುವಾರ ಅನ್ನದಾನ ಸೇವೆಯಲ್ಲಿ ಸಾಯಿಭಕ್ತರು ಭಾಗವಹಿಸಬಹುದು. ಸೇವೆಯಲ್ಲಿ ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ೬೫೦೦/- ರುಪಾಯಿಗಳನ್ನು (ಪ್ರತ್ಯೇಕವಾಗಿ) ಅಥವಾ ೭೫೧/- ರುಪಾಯಿಗಳನ್ನು (ಎಲ್ಲರೊಡಗೂಡಿ) ಕೊಟ್ಟು ರಶೀದಿಯನ್ನು ಪಡೆದು ಸೇವೆಯಲ್ಲಿ ಭಾಗವಹಿಸಬಹುದು.
ವಿಶೇಷ ದಿವಸಗಳು
ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಬೆಳಗ್ಗೆ ೧೧:೦೦ ಘಂಟೆಯಿಂದ ಮದ್ಯಾನ್ಹ ೧:೦೦ ಘಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಸೇವೆಯಲ್ಲಿ ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ೫೧/- ರುಪಾಯಿಗಳನ್ನು ಕೊಟ್ಟು ರಶೀದಿಯನ್ನು ಪಡೆದು ಸೇವೆಯಲ್ಲಿ ಭಾಗವಹಿಸಬಹುದು. ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆಯಿರುವುದಿಲ್ಲ.
ವಿಶೇಷ ಉತ್ಸವಗಳು ಮತ್ತು ಹಬ್ಬದ ದಿನಗಳು
೧. ಅಕ್ಷಯ ತೃತೀಯ
೨. ಶ್ರೀ ರಾಮನವಮಿ
೩. ಗುರುಪೂರ್ಣಿಮೆ
೪. ವಿಜಯದಶಮಿ (ಸಾಯಿಬಾಬಾ ಸಮಾಧಿ ದಿವಸ)
೫. ದತ್ತ ಜಯಂತಿ.
೬. ಬಲಿಪಾಡ್ಯಮಿ (ಲಕ್ಷದೀಪೋತ್ಸವ)
೭. ದೇಸನಾರಾಯಣ ಸ್ವಾಮಿ ಬ್ರಹ್ಮ ರಥೋತ್ಸವ ಪ್ರತಿ ಹೋಳಿ ಹುಣ್ಣಿಮೆಯಂದು. ದಿನಪೂರ್ತಿ ಅನ್ನದಾನ ಕಾರ್ಯಕ್ರಮ.
೮. ಶಿವರಾತ್ರಿ ದಿವಸ - ಲಿಂಗೋದ್ಭವ ಪೂಜೆಯನ್ನು ಮಾಡಲಾಗುತ್ತದೆ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ
ವಿಳಾಸ :
ಶ್ರೀ ಶಿರಡಿ ಸಾಯಿಬಾಬಾ ಸೇವಾ ಕೇಂದ್ರ, ಬೂದಿಗೆರೆ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು-೫೬೦ ೧೨೯.
ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ. ಎ. ಕೃಷ್ಣಮುರ್ತಿ
ದೂರವಾಣಿ ಸಂಖ್ಯೆಗಳು:
೯೯೪೫೫ ೭೭೫೨೭ / ೯೯೮೬೯ ೨೩೮೮೧
ಮಾರ್ಗಸೂಚಿ:
ಬೆಂಗಳೂರು-ಚೆನ್ನೈ (ಎನ್.ಹೆಚ್.೪) ಹೆದ್ದಾರಿಯಲ್ಲಿ ೧೧ ಕಿಲೋಮೀಟರು ಕ್ರಮಿಸಿದರೆ ಬೂದಿಗೆರೆ ಕ್ರಾಸ್ ಸಿಗುತ್ತದೆ. ಬೂದಿಗೆರೆ ಕ್ರಾಸ್ ಬಳಿಯೇ ಸಾಯಿಮಂದಿರವನ್ನು ನೋಡಬಹುದು.
ಮಾರುಕಟ್ಟೆಯಿಂದ ೩೧೬, ೩೧೬ ಎ, ೩೧೬ ಡಿ, ೩೧೬ ಕ್ಯು, ೩೧೬ ಕೆ ಮತ್ತು ೩೧೬ ಟಿ ಬೆಂಗಳೂರು ಬಸ್ ನಿಲ್ಧಾಣದಿಂದ ೩೧೬ ಬಿ, ೩೧೬ ಎಂ - ಈ ಬಸ್ಸುಗಳಿಗೆ ಬೂದಿಗೆರೆ ಕ್ರಾಸ್ ಬಳಿ ನಿಲುಗಡೆ ನೀಡಲಾಗುತ್ತದೆ.
No comments:
Post a Comment