ಬೆಂಗಳೂರಿನ ಶಿರಡಿ ಸಾಯಿಬಾಬಾ ಧ್ಯಾನ ಮಂದಿರ - ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರ, ೯ ನೇ ಬಡಾವಣೆ, ರಾಗಿಗುಡ್ಡ ದೇವಸ್ಥಾನದ ಹತ್ತಿರ, ಜಯನಗರ, ಬೆಂಗಳೂರು - ಕೃಪೆ - ಶ್ರೀ.ಆರ್.ಸತೀಶ್
ಧ್ಯಾನ ಮಂದಿರದ ವಿಶೇಷತೆಗಳು
- ಧ್ಯಾನ ಮಂದಿರದ ಭೂಮಿ ಪೂಜೆಯನ್ನು ೨೨ ನೇ ಜೂನ್ ೨೦೦೭ ರಂದು ಮಾಡಲಾಯಿತು.
- ಸಾಯಿಬಾಬಾ ಧ್ಯಾನ ಮಂದಿರವು ೧೮ ನೇ ಮಾರ್ಚ್ ೨೦೧೦ ರಂದು ಪರಮ ಪೂಜ್ಯ ಶ್ರೀ.ಶ್ರೀ. ವಿದ್ಯಾ ನಾರಾಯಣ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು.
- ಈ ಧ್ಯಾನಮಂದಿರವನ್ನು ಶ್ರೀ.ಆರ್.ಸತೀಶ್ ರವರು ಸಾಯಿಬಾಬಾರವರ ಆಶೀರ್ವಾದದಿಂದ ನಿರ್ಮಿಸಿರುತ್ತಾರೆ.
- ಧ್ಯಾನಮಂದಿರದಲ್ಲಿ ಆಳೆತ್ತರದ ಕಲ್ಲಿನ ಮೇಲೆ ಕುಳಿತಿರುವ ಸುಂದರ ಸಾಯಿಬಾಬಾರವರ ವಿಗ್ರಹವಿದ್ದು ಧ್ಯಾನ ಮಾಡಲು ಬಹಳ ಪ್ರಶಸ್ತವಾಗಿದೆ.
- ಧ್ಯಾನ ಮಂದಿರದ ಗೋಡೆಗಳ ಮೇಲೆ ಸುತ್ತಲೂ ಸಾಯಿಬಾಬಾರವರ ಜೊತೆಗಿದ್ದ ೫೨ ಸಾಯಿ ಮಹಾಭಕ್ತರ ಚಿತ್ರಗಳಿವೆ.
- ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ತೆಲುಗು, ತಮಿಳು, ಮರಾಟಿ, ಗುಜರಾತಿ, ಬೆಂಗಾಲಿ, ಪಂಜಾಬಿ, ಮತ್ತು ಸಿಂಧಿ ಸೇರಿದಂತೆ ೧೧ ಭಾಷೆಯ ಸಾಯಿ ಸಚ್ಚರಿತೆಯನ್ನು ಸಾಯಿಭಕ್ತರು ಪಾರಾಯಣ ಮಾಡಲು ಅನುಕೂಲವಾಗುವಂತೆ ಇಡಲಾಗಿದೆ.
- ಸಣ್ಣ ಮಕ್ಕಳಿಗಾಗಿ ಮಕ್ಕಳ ಸಾಯಿಬಾಬಾ ಪುಸ್ತಕವನ್ನು ಇರಿಸಲಾಗಿದೆ.
- ಸಾಯಿ ಸಚ್ಚರಿತೆಯ ೫೨ ಅಧ್ಯಾಯಗಳನ್ನು ಒಂದೆಡೆ ಬಿಂಬಿಸುವ ಚಿತ್ರಗಳನ್ನು ಸುಂದರವಾಗಿ ಜೋಡಿಸಿಡಲಾಗಿದೆ.
- ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಕುರಾನ್ ಗ್ರಂಥವನ್ನು ಪಾರಾಯಣಕ್ಕೆ ಇಡಲಾಗಿದೆ.
- ಸಾಯಿಬಾಬಾರವರ ೧೧ ಅಭಿವಚನಗಳನ್ನು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಧ್ಯಾನ ಮಂದಿರದಲ್ಲಿರುವ ೩ ಕಂಭಗಳ ಮೇಲೆ ಸುಂದರವಾಗಿ ಕೆತ್ತಲಾಗಿದೆ.
ಶಿರಡಿ ಸಾಯಿಬಾಬಾರವರು ಕಲ್ಲಿನ ಮೇಲೆ ಕುಳಿತಿರುವ ಆಳೆತ್ತರದ ಚಿತ್ರಪಟ
ಧ್ಯಾನಮಂದಿರದಲ್ಲಿರುವ ವಿವಿಧ ಭಾಷೆಯ ಸಾಯಿ ಸಚ್ಚರಿತೆ ಪುಸ್ತಕಗಳು
ಸಾಯಿಯವರ ಪೂರ್ಣ ಸಚ್ಚರಿತೆ ಚಿತ್ರರೂಪದಲ್ಲಿ
ದಿನನಿತ್ಯದ ಕಾರ್ಯಕ್ರಮಗಳು
ಧ್ಯಾನ ಮಂದಿರದ ಸಮಯ
ಪ್ರತಿದಿನ ಬೆಳಗ್ಗೆ ೯:೦೦ ಘಂಟೆಯಿಂದ ೧:೦೦ ಘಂಟೆಯವರೆಗೆ
ಸಂಜೆ ೫:೦೦ ಘಂಟೆಯಿಂದ ರಾತ್ರಿ ೮:೦೦ ಘಂಟೆಯವರೆಗೆ
ವಿಶೇಷ ಉತ್ಸವಗಳು ಮತ್ತು ಹಬ್ಬಗಳು
೧. ಧ್ಯಾನ ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷ ೧೮ ನೇ ಮಾರ್ಚ್.
೨. ಶ್ರೀ ರಾಮನವಮಿ.
೩. ಗುರು ಪೌರ್ಣಮಿ.
೪. ವಿಜಯ ದಶಮಿ ( ಸಾಯಿಬಾಬಾ ಸಮಾಧಿ ದಿವಸ)
೫. ದತ್ತ ಜಯಂತಿ
ಧ್ಯಾನ ಮಂದಿರದ ವಿಳಾಸ ಮತ್ತು ಮಾರ್ಗಸೂಚಿ
ವಿಳಾಸ:
ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನಮಂದಿರ
ಶ್ರೀ ಸಾಯಿ ಅಮೃತಂ, ೩ ನೇ ಮಹಡಿ (ಕೆಫೆ ಕಾಫಿ ಡೇ ಮೇಲೆ)
ನಂ. ೧೪೮೧, ಸೌತ್ ಎಂಡ್ "ಬಿ" ಅಡ್ಡ ರಸ್ತೆ, ೨೮ ನೇ ಮುಖ್ಯ ರಸ್ತೆ,
ರಾಗಿಗುಡ್ಡ ದೇವಸ್ತಾನದ ಹತ್ತಿರ, ೯ ನೇ ಬಡಾವಣೆ, ಜಯನಗರ
ಬೆಂಗಳೂರು-೫೬೦ ೦೬೯.
ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ. ಆರ್. ಸತೀಶ್
ದೂರವಾಣಿ ಸಂಖ್ಯೆ:
೯೩೪೧೨ ೬೪೬೯೬
ಮಾರ್ಗಸೂಚಿ:
ಜಯನಗರ ಈಸ್ಟ್ ಎಂಡ್ ವೃತ್ತದ ಬಳಿಯ ಬಸ್ ನಿಲ್ದಾಣದಲ್ಲಿ ಇಳಿದು ೨ ನಿಮಿಷ ಹಿಂದೆ ನಡೆದರೆ ಸಾಯಿ ಧ್ಯಾನ ಮಂದಿರ ಸಿಗುತ್ತದೆ.