Monday, August 1, 2011

ಬಹುಮುಖ ಪ್ರತಿಭೆಯ ಮನಕ್ಕೆ ಮುದ ನೀಡುವ ಖ್ಯಾತ ಸಾಯಿ ಭಜನ ಗಾಯಕ ಶ್ರೀ.ಕೈಲಾಶ್ ಹರೇಕೃಷ್ಣ  ದಾಸ್ (ಟೈಡಿ)  - ಕೃಪೆ: ಸಾಯಿಅಮೃತಧಾರಾ.ಕಾಂ  

ಶ್ರೀ.ಕೈಲಾಶ್ ಹರೇಕೃಷ್ಣ ದಾಸ್ ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ 
"ಟೈಡಿ" ಎಂಬ ಅಡ್ಡ ಹೆಸರಿನಿಂದ ಪ್ರಸಿದ್ದರಾದ ಶ್ರೀ.ಕೈಲಾಶ್ ಹರೇಕೃಷ್ಣ  ದಾಸ್ ರವರು ಪ್ರಖ್ಯಾತ ಗೀತ ರಚನಕಾರ, ಗಾಯಕ, ಮತ್ತು ಸಂಗೀತ ಸಂಯೋಜಕರಾಗಿರುತ್ತಾರೆ. ಇವರು ಮಹಾರಾಷ್ಟ್ರದ ನಾಗಪುರದವರು. ಇವರು 1ನೇ ಮೇ 1973 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದರು. ಇವರ ತಂದೆಯವರು ಶ್ರೀ.ಲಕ್ಷ್ಮಣ ಬಕ್ಷಿ ಮತ್ತು ತಾಯಿಯವರು ಶ್ರೀಮತಿ.ಯಶೋದ. ಇವರು ಸಂಗೀತಗಾರರ ವಂಶದಲ್ಲಿ ಜನಿಸಿದರು. ಇವರ ತಂದೆ ಶ್ರೀ.ಲಕ್ಷ್ಮಣ ಬಕ್ಷಿಯವರು ನಾಗಪುರದಲ್ಲಿ ಪ್ರಖ್ಯಾತ ಸಂಗೀತ ಶಿಕ್ಷಕರಾಗಿರುತ್ತಾರೆ. 

ರಾಮ್ಟೆಕ್ ನ ಸ್ವಾಮಿ ಸಿದ್ಧಾನಂದಜಿ ಮಹಾರಾಜ್ ರವರಿಂದ ಆಶೀರ್ವಚನ ಪಡೆಯುತ್ತಿರುವ ಕೈಲಾಶ್

ಶ್ರೀ.ಕೈಲಾಶ್ ಹರೇಕೃಷ್ಣ  ದಾಸ್ ರವರು ಬಿ.ಎ.ಪದವೀಧರರಾಗಿರುತ್ತಾರೆ. ಇವರು ತಮ್ಮ ಎಲ್ಲಾ ಸಾಯಿ ಭಜನೆಯ ಆಲ್ಬಮ್ ಗಳಿಗೆ ಗೀತ ರಚನೆ, ಸಂಗೀತ ಸಂಯೋಜನೆ ಮತ್ತು ಗಾಯನ ಮಾಡಿ "ಸಂಗೀತ ವಿಶಾರದ" ರೆನಿಸಿರುತ್ತಾರೆ.

 ಸಾಯಿಮಂದಿರದಲ್ಲಿ "ಪರಮ ಪಿತಾ ಸಾಯಿ" ಬಿಡುಗಡೆಗೊಳಿಸುತ್ತಿರುವ ಶಿರಡಿಯ ಕೋತೆ ಪಾಟೀಲ್
 
ಇವರು ಪ್ರಪ್ರಥಮವಾಗಿ ತಮ್ಮ ತಂದೆಯವರಾದ ಶ್ರೀ.ಲಕ್ಷ್ಮಣ ಬಕ್ಷಿಯವರಿಂದ ಶಾಸ್ತ್ರೀಯ ಸಂಗೀತವನ್ನು ಕಲಿತು ನಂತರದ ದಿನಗಳಲ್ಲಿ ಪ್ರಖ್ಯಾತ ಹಿಂದೂಸ್ತಾನಿ ಸಂಗೀತ ವಿದ್ವಾಂಸರಾದ ಬೃಂದಾವನ ಕಿರಾನಾ ಘಾರಾನಾದ ಪಂಡಿತ್ ಘನಶ್ಯಾಂ ರವರ ಬಳಿ ಸಂಗೀತಾಭ್ಯಾಸ ಮಾಡಿರುತ್ತಾರೆ. 

ಖ್ಯಾತ ಬರಹಗಾರ ನಕಾಶ್ ಲಾಲ್ ಪುರಿಯವರೊಂದಿಗೆ ಕೈಲಾಶ್

ಇವರು ಕಳೆದ ಅನೇಕ ವರ್ಷಗಳಿಂದ ಆಕಾಶವಾಣಿಯ ಸುಗಮ ಸಂಗೀತದ "ಬಿ+ ಶ್ರೇಣಿ" ಯ ಮತ್ತು ಮರಾಟಿ ಸುಗಮ ಸಂಗೀತದ "ಬಿ ಶ್ರೇಣಿ" ಕಲಾವಿದರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 

ಖ್ಯಾತ ಸಂಗೀತ ನಿರ್ದೇಶಕ ರವೀಂದ್ರ ಜೈನ್ ರವರೊಂದಿಗೆ ಕೈಲಾಶ್

ಇವರು 1995 ರಲ್ಲಿ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡು ಅಂದಿನಿಂದ ತಮ್ಮ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ಖ್ಯಾತ ದೂರದರ್ಶನ ವಾಹಿನಿಗಳಾದ ಸಹ್ಯಾದ್ರಿ, ಆಸ್ಥಾ ಮತ್ತು ನಾಗಪುರ ದೂರದರ್ಶನಗಳಲ್ಲಿ ನೀಡುತ್ತಾ ಬಂದಿರುತ್ತಾರೆ. ನಾಗಪುರ ಆಕಾಶವಾಣಿಯಲ್ಲಿ ಇವರ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುತ್ತವೆ. 2010 ರಲ್ಲಿ ಶಿರಡಿಯಲ್ಲಿ ನಡೆದ ಗುರುಪೂರ್ಣಿಮೆ ಉತ್ಸವದ ಸಂದರ್ಭದಲ್ಲಿ ಇವರು ತಮ್ಮ ಸಾಯಿ ಭಜನೆಯ ಕಾರ್ಯಕ್ರಮವನ್ನು ನೀಡಿದ್ದಾರೆ. ಭಾರತದಾದ್ಯಂತ ಅನೇಕ ಸ್ಥಳಗಳಲ್ಲಿ ಇವರು ತಮ್ಮ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರ ಸಾಯಿ ಭಜನೆಯ ಸಿಡಿಗಳು ಅಂತರ್ಜಾಲದಲ್ಲಿ, ಟಾಟಾ ಸ್ಕೈ ಆಕ್ಟಿವ್ ದರ್ಶನ್ ನಲ್ಲಿ ಮತ್ತು ಅನೇಕ ಕೇಬಲ್ ಜಾಲಗಳಲ್ಲಿ ಲಭ್ಯವಿರುತ್ತದೆ. ಶಿರಡಿಯ ಸಮಾಧಿ ಮಂದಿರದಲ್ಲಿ ಪ್ರತಿನಿತ್ಯ ಇವರ ಸಾಯಿ ಭಜನೆಯನ್ನು "ಸಮಾಧಿ ಮಂದಿರದ ನೇರ ಪ್ರಸಾರ" ದಲ್ಲಿ ಪ್ರಸಾರ ಮಾಡಲಾಗುತ್ತಿದೆ. 

ಶಿರಡಿ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರೊಂದಿಗೆ ಕೈಲಾಶ್

ಇವರು ಸಾಯಿಭಜನೆಯನ್ನು ರಚಿಸಿ, ಸಂಗೀತ ನಿರ್ದೇಶಿಸಿ ಹಾಡುವುದಷ್ಟೇ ಅಲ್ಲದೇ ಮೌತ್ ಆರ್ಗನ್, ಹಾರ್ಮೋನಿಯಂ, ಕೊಳಲು ವಾದ್ಯಗಳನ್ನು ಕೂಡ ಅಷ್ಟೇ ಲೀಲಾಜಾಲವಾಗಿ ನುಡಿಸಬಲ್ಲವರಾಗಿರುತ್ತಾರೆ.  

ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಅಶೋಕ್ ಕಂಬೇಕರ್ ರವರೊಂದಿಗೆ ಕೈಲಾಶ್

ಇವರು ಸ್ವಭಾವತಃ ಅತ್ಯಂತ ಸಹೃದಯವಂತರಾಗಿದ್ದು ತಮ್ಮ ಸುತ್ತಮುತ್ತಲೂ ಕಷ್ಟದಲ್ಲಿ ಇರುವವರಿಗೆ  ನೆರವಾಗುವ ಒಳ್ಳೆಯ ಗುಣವನ್ನು ಹೊಂದಿದ್ದಾರೆ. 

ಖ್ಯಾತ ಹಿಂದಿ ಚಿತ್ರರಂಗದ ಬರಹಗಾರ ಸಮೀರ್ ರವರೊಂದಿಗೆ ಕೈಲಾಶ್

ಪ್ರಸ್ತುತ ಇವರು ತಮ್ಮ ಪತ್ನಿ ಶ್ರೀಮತಿ.ಲತಾ ಕೈಲಾಶ್ ಮತ್ತು ಮಗ ಮಾಸ್ಟರ್ ಶ್ಯಾಮ್ ಸುಂದರ್ ಹೆಣ್ಣು ಮಕ್ಕಳಾದ ಇಂಜೀನಿಯರಿಂಗ್ ಪದವಿಯನ್ನು ಓದುತ್ತಿರುವ ಕುಮಾರಿ .ಕೋಮಲ್  ಮತ್ತು ಕುಮಾರಿ.ಸ್ವಸ್ತಿಕಾರವರೊಂದಿಗೆ ಮಹಾರಾಷ್ಟ್ರದ ನಾಗಪುರದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಪುತ್ರ ಮಾಸ್ಟರ್ ಶ್ಯಾಮ್ ಸುಂದರ್ ನೊಡನೆ ಕೈಲಾಶ್

ಇವರಿಗೆ ಸಂದ ಪ್ರಶಸ್ತಿಗಳು ಮತ್ತು ಗೌರವಗಳು: 
ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ 2010 ರಲ್ಲಿ ನಡೆದ ಗುರುಪೂರ್ಣಿಮೆ ಉತ್ಸವದ ಸಂದರ್ಭದಲ್ಲಿ ಪುರಸ್ಕೃತರಾಗಿರುತ್ತಾರೆ. 
ಮುಂಬೈನ ಸಿದ್ಧಿ ವಿನಾಯಕ ದೇವಾಲಯದ ವತಿಯಿಂದ 2011 ರಲ್ಲಿ ಪುರಸ್ಕೃತರಾಗಿರುತ್ತಾರೆ. 

"ಸಾಯಿ ಚರಣ ವಂದನ" ಬಿಡುಗಡೆ ಸಮಾರಂಭದಲ್ಲಿ ಅಶೋಕ್ ಕಂಬೇಕರ್ ಮತ್ತು ಕಿಶೋರ್ ಮೋರೆ  

ಶ್ರೀ.ಕೈಲಾಶ್ ಹರೇಕೃಷ್ಣ ದಾಸ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ: 

ವಿಳಾಸ: 
ಸಾಯಿ ಸ್ವಸ್ತಿಕಾ ಆಡಿಯೋ, ನಂ.79, "ಲಕ್ಷ್ಮಣ್ ಕುಟಿ", ಪ್ರಶಾಂತ ನಗರ, ನಾಗಪುರ-440 013, ಮಹಾರಾಷ್ಟ್ರ. 

ದೂರವಾಣಿ ಸಂಖ್ಯೆಗಳು: 
+91 95458 97308 / +91 98237 21563

ಈ ಮೇಲ್ ವಿಳಾಸ: 

ಸಾಯಿ ಭಜನೆಯ ಆಲ್ಬಮ್ ಗಳು: 
1. ಸಾಯಿ ದಯಾಳಂ (ಆಡಿಯೋ ಸಿಡಿ)
2. ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸಾಯಿ ನಾಮ್ (ಆಡಿಯೋ ಸಿಡಿ)
3. ಪರಮ ಪಿತ ಸಾಯಿ (ಆಡಿಯೋ ಸಿಡಿ)
4. ಸಾಯಿ ಚರಣ ವಂದನ (ವೀಡಿಯೋ ಸಿಡಿ)
5. ಸಾಯಿ ಅಮೃತ್ ಧುನ್ (ಶೀಘ್ರದಲ್ಲೇ ಬಿಡುಗಡೆ ಆಗಲಿದೆ)

ಸಾಯಿ ಭಜನೆಯ ವೀಡಿಯೋಗಳು: 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment