ಅನಂತಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಶಿರಡಿ ಸಾಯಿ ಸೇವಾ ಸಮಿತಿ (ನೋಂದಣಿ), ಮೋದ ಚೆಕ್ ಪೋಸ್ಟ್ ನ ಎದುರು, ಮೋದ ಅಂಚೆ-515 212, ಪರಿಗಿ ಮಂಡಲಂ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ - ಕೃಪೆ: ಸಾಯಿಅಮೃತಧಾರಾ.ಕಾಂ
ಈ ದೇವಾಲಯವು ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕಿನ ಮೋದ ಗ್ರಾಮದ ಚೆಕ್ ಪೋಸ್ಟ್ ನ ಎದುರು ಇರುತ್ತದೆ. ಈ ದೇವಾಲಯವು ಹಿಂದೂಪುರ ಬಸ್ ನಿಲ್ದಾಣದಿಂದ 5 ಕಿಲೋಮೀಟರ್ ದೂರದಲ್ಲಿರುತ್ತದೆ. ಹಿಂದೂಪುರ ಬಸ್ ನಿಲ್ದಾಣದಿಂದ ಹೇರಳವಾಗಿ ಬಸ್ ಗಳು ಮತ್ತು ಆಟೋಗಳು ಸಿಗುತ್ತವೆ.
ಈ ದೇವಾಲಯದ ಭೂಮಿ ಪೂಜೆಯನ್ನು 1995 ನೇ ಇಸವಿಯಲ್ಲಿ ನೆರವೇರಿಸಲಾಯಿತು.
ಈ ದೇವಾಲಯದ ಉದ್ಘಾಟನೆಯನ್ನು 27ನೇ ಮಾರ್ಚ್ 2003 ರಂದು ಶ್ರೀ.ಸಾಯಿ ಕಾಳೇಶ್ವರ ಸ್ವಾಮಿಯವರು ನೆರವೇರಿಸಿದರು. ಉದ್ಘಾಟನೆಯ ದಿನ ಸುತ್ತ ಮುತ್ತಲಿನ ಗ್ರಾಮದ 30 ಬಡ ಕುಟುಂಬಗಳಿಗೆ ಸೇರಿದ ಯುವ ಜೋಡಿಗಳಿಗೆ ಮದುವೆಯನ್ನು ಟ್ರಸ್ಟ್ ನ ವತಿಯಿಂದ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಸಾಯಿಭಕ್ತರು ಭಾಗವಹಿಸಿದ್ದರು.
ಸಾಯಿಬಾಬಾ ಮಂದಿರವು ಎರಡು ಎಕರೆ ವಿಶಾಲವಾದ ಪ್ರದೇಶದಲ್ಲಿರುತ್ತದೆ. ಈ ದೇವಾಲಯವನ್ನು ಶ್ರೀ.ಎನ್.ನರಸಿಂಹಪ್ಪನವರು ಸ್ಥಾಪಿಸಿರುತ್ತಾರೆ ಮತ್ತು ಈ ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ದೇವಾಲಯವು ಬೆಳಿಗ್ಗೆ 5:15 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 10:30 ಕ್ಕೆ ಶೇಜಾರತಿಯೊಂದಿಗೆ ಮುಚ್ಚುತ್ತದೆ.
ದೇವಾಲಯದ ಗರ್ಭಗುಡಿಯಲ್ಲಿ 3 1/2 ಅಡಿ ಎತ್ತರದ ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾ ವಿಗ್ರಹದ ಕೆಳಗಡೆ ಕಪ್ಪು ಶಿಲೆಯ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ಅಮೃತ ಶಿಲೆಯ ನಂದಿಯ ವಿಗ್ರಹ ಮತ್ತು ಪಾದುಕೆಗಳನ್ನು ಸಾಯಿಬಾಬಾ ವಿಗ್ರಹದ ಎದುರುಗಡೆ ಇರುವಂತೆ ಸ್ಥಾಪಿಸಲಾಗಿದೆ.
ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾರವರ ಚಿತ್ರಪಟ ಮತ್ತು ದ್ವಾರಕಾಮಾಯಿ ಬಾಬಾರವರ ಚಿತ್ರಪಟವನ್ನು ಮಂದಿರದ ಒಳಗಡೆ ನೋಡಬಹುದು. ಪ್ರತಿ ಗುರುವಾರ ಮತ್ತು ಹಬ್ಬದ ದಿನಗಳಂದು ಕೊಂಡೊಯ್ಯುವ ಮರದ ಪಲ್ಲಕ್ಕಿಯನ್ನು ಕೂಡ ಮಂದಿರದ ಒಳಗಡೆ ನೋಡಬಹುದು.
ಮಂದಿರದ ವಿಶಾಲ ಆವರಣದ ಎಡಭಾಗದಲ್ಲಿ ದ್ವಾರಕಾಮಾಯಿಯನ್ನು ಸ್ಥಾಪಿಸಲಾಗಿದ್ದು ಇದರ ಒಳಗಡೆ ಪವಿತ್ರ ಧುನಿ ಮತ್ತು ಶಿರಡಿ ಸಾಯಿಬಾಬಾರವರ ಅತ್ಯಂತ ಪುರಾತನ ಕಾಲದ ಕಪ್ಪು ಬಿಳುಪು ಚಿತ್ರಪಟವನ್ನು ನೋಡಬಹುದು.
ಕಪ್ಪು ಶಿಲೆಯ ಗಣಪತಿ, ದತ್ತಾತ್ರೇಯ ಮತ್ತು ನಾಗದೇವತೆಗಳ ವಿಗ್ರಹಗಳನ್ನು ದೇವಾಲಯದ ಹೊರ ಆವರಣದ ಹೆಬ್ಬಾಗಿಲಿನ ಬಳಿ ಎಡಭಾಗದಲ್ಲಿ ಸ್ಥಾಪಿಸಲಾಗಿದೆ.
ಕಪ್ಪು ಶಿಲೆಯ ನವಗ್ರಹ ದೇವರುಗಳನ್ನು ದೇವಾಲಯದ ಹೊರ ಆವರಣದ ಹೆಬ್ಬಾಗಿಲಿನ ಬಳಿ ಬಲಭಾಗದಲ್ಲಿ ಸ್ಥಾಪಿಸಲಾಗಿದೆ.
ದಿನನಿತ್ಯದ ಕಾರ್ಯಕ್ರಮಗಳು
ಆರತಿಯ ಸಮಯ:
ಕಾಕಡಾ ಆರತಿ | 5:15 AM |
ಮಧ್ಯಾನ್ಹ ಆರತಿ | 12:00 PM |
ಧೂಪಾರತಿ | 6:15 PM |
ಶೇಜಾರತಿ | 10:00 PM |
ಪ್ರತಿದಿನ ಬೆಳಿಗ್ಗೆ 7 ಘಂಟೆಯಿಂದ 8 ಘಂಟೆಯವರೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ "ಕ್ಷೀರಾಭಿಷೇಕ" ಮಾಡಲಾಗುತ್ತದೆ. ಯಾವುದೇ ಸೇವಾಶುಲ್ಕ ಇರುವುದಿಲ್ಲ.
ಪ್ರತಿ ಗುರುವಾರ ರಾತ್ರಿ 8 ಘಂಟೆಗೆ ಪಲಕ್ಕಿ ಮೆರವಣಿಗೆಯನ್ನು ನಡೆಸಲಾಗುತ್ತದೆ. ನಂತರ 8 ಘಂಟೆಯಿಂದ 10 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ.
ಪ್ರತಿ ಗುರುವಾರ ರಾತ್ರಿ 10:00 ಕ್ಕೆ ಶೇಜಾರತಿಯಾದ ನಂತರ ಮಂದಿರಕ್ಕೆ ಬರುವ ಎಲ್ಲಾ ಸಾಯಿಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ.
ವಿಶೇಷ ಉತ್ಸವದ ದಿನಗಳು:
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 27ನೇ ಮಾರ್ಚ್.
ಗುರುಪೂರ್ಣಿಮೆ.
ವಿಜಯದಶಮಿ.
ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:
ದೇವಾಲಯದ ಆವರಣದಲ್ಲಿ ಒಂದು ಕಲ್ಯಾಣ ಮಂಟಪವನ್ನು ಕಟ್ಟಲಾಗಿದ್ದು ಇದನ್ನು ಸುತ್ತಮುತ್ತಲಿನ ಹಳ್ಳಿಗಳ ಬಡ ಜನರು ಮದುವೆ ಮತ್ತು ಇತರ ಮಂಗಳ ಕಾರ್ಯಗಳನ್ನು ಮಾಡಲು ಅನುಕೂಲವಾಗುವಂತೆ ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ.
ಸ್ಥಳ:
ಮೋದ ಚೆಕ್ ಪೋಸ್ಟ್ ನ ಎದುರು, ಮೋದ ಗ್ರಾಮ, ಪರಿಗಿ ಮಂಡಲಂ, ಹಿಂದೂಪುರ ತಾಲ್ಲೂಕು.
ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಶ್ರೀ ಶಿರಡಿ ಸಾಯಿ ಸೇವಾ ಸಮಿತಿ (ನೋಂದಣಿ),
ಮೋದ ಚೆಕ್ ಪೋಸ್ಟ್ ನ ಎದುರು, ಮೋದ ಗ್ರಾಮ-515 212,
ಪರಿಗಿ ಮಂಡಲಂ, ಹಿಂದೂಪುರ ತಾಲ್ಲೂಕು,
ಅನಂತಪುರ ಜಿಲ್ಲೆ, ಆಂಧ್ರಪ್ರದೇಶ
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಎನ್.ನರಸಿಂಹಪ್ಪ - ಅಧ್ಯಕ್ಷರು
ದೂರವಾಣಿ ಸಂಖ್ಯೆಗಳು:
+ 91 8556 200099 (ಸ್ಥಿರದೂರವಾಣಿ)
ಮಾರ್ಗಸೂಚಿ:
ಹಿಂದೂಪುರ ಬಸ್ ನಿಲ್ದಾಣದಲ್ಲಿ ಇಳಿಯುವುದು. ಅಲ್ಲಿಂದ ಬಸ್ ಅಥವಾ ಆಟೋ ಹಿಡಿದು ಮೋದ ಗ್ರಾಮಕ್ಕೆ ಹೋಗಬಹುದು. ಹಿಂದೂಪುರ ಮಧುಗಿರಿ ರಸ್ತೆಯಲ್ಲಿ ಸೇವಾ ಮಂದಿರ ಮಾರ್ಗವಾಗಿ ಸುಮಾರು 5 ಕಿಲೋಮೀಟರ್ ಕ್ರಮಿಸಿದರೆ ಮೋದ ಗ್ರಾಮ ಸಿಗುತ್ತದೆ. ಮೋದ ಚೆಕ್ ಪೋಸ್ಟ್ ಬಸ್ ನಿಲ್ದಾಣದಲ್ಲಿ ಇಳಿದರೆ ಚೆಕ್ ಪೋಸ್ಟ್ ನ ಎದುರುಗಡೆ ದೇವಾಲಯ ಇರುತ್ತದೆ. ಹಿಂದೂಪುರ ಬಸ್ ನಿಲ್ದಾಣದಿಂದ ಹೇರಳವಾಗಿ ಬಸ್ ಗಳು ಮತ್ತು ಆಟೋಗಳು ಸಿಗುತ್ತವೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment