Thursday, August 11, 2011

ತಿರುಚನಾಪಳ್ಳಿಯ ಶಿರಡಿ ಸಾಯಿಬಾಬಾ ಮಂದಿರ - ಶಿರಡಿ ಸಾಯಿ ಕಮ್ಯುನಿಟಿ ಸೆಂಟರ್, ಶಿರಡಿ ಸಾಯಿ ಟ್ರಸ್ಟ್, ಮೆಕ್ಕುಡಿ ಗ್ರಾಮ, ಮಣಿಕಂಡಂ ಪಂಚಾಯಿತಿ, ಮಧುರೈ ರಸ್ತೆ, ತಿರುಚನಾಪಳ್ಳಿ-620 012, ತಮಿಳುನಾಡು - ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು: 

ಶಿರಡಿ ಸಾಯಿ ಟ್ರಸ್ಟ್ 1996ನೇ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ವೃತ್ತಿಯಲ್ಲಿ ವಕೀಲರಾದ ಶ್ರೀ.ಎಂ.ಮೀನಾಕ್ಷಿ ಸುಂದರಂ ರವರು ತಮ್ಮ ಕುಟುಂಬದೊಂದಿಗೆ 1982 ರಲ್ಲಿ ಪ್ರಪ್ರಥಮ ಬಾರಿಗೆ ಈ ಪುಣ್ಯ ಸ್ಥಳಕ್ಕೆ ಕಾಲಿಟ್ಟರು. ಆಗಿನಿಂದ ಇವರು ಸಾಯಿಬಾಬಾರವರ ಭಕ್ತರಾಗಿ ಪ್ರತಿ ವರ್ಷವೂ ತಪ್ಪದೆ ಶಿರಡಿಗೆ ಹೋಗಿ ಬರುವ ಪರಿಪಾಟವನ್ನು ರೂಢಿಸಿಕೊಂಡರು. 1995 ನೇ ಇಸವಿಯಲ್ಲಿ ಇವರು ಶಿರಡಿಗೆ ಹೋದಾಗ ಸಾಯಿ ಮಹಾಭಕ್ತರಾದ ಶ್ರೀ.ಶಿವನೇಶನ್ ಸ್ವಾಮೀಜಿಯವರು ಇವರಿಗೆ ಸಾಯಿಬಾಬಾರವರ ಚಿತ್ರಪಟವೊಂದನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿ ತಿರುಚನಾಪಳ್ಳಿಯಲ್ಲಿ ಸದ್ಗುರು ಸಾಯಿಬಾಬಾರವರ ಮಂದಿರವನ್ನು ನಿರ್ಮಿಸುವ ಕಾರ್ಯವನ್ನು ಪ್ರಾರಂಭಿಸಲು ಸೂಚನೆ ನೀಡಿದರು. ಈ ರೀತಿಯಲ್ಲಿ ಸ್ವತಃ ಶಿರಡಿ ಸಾಯಿಬಾಬಾರವರೇ ಈ ಸ್ಥಳದಲ್ಲಿ ಬಂದು ಕುಳಿತು ಇಲ್ಲಿ ನಡೆಯಬೇಕಾದ ಎಲ್ಲಾ ಕಾರ್ಯಗಳನ್ನು ನಡೆಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು. 

ದೇವಾಲಯದ ಉತ್ತರ ದಿಕ್ಕಿನಲ್ಲಿ ಗಣಪತಿಯ ಮಂದಿರವಿದೆ. ದಕ್ಷಿಣ ದಿಕ್ಕಿನಲ್ಲಿ ಭೋಜನ ಶಾಲೆಯಿದೆ. ರತ್ನ ಸಾಯಿ ಮಂದಿರ ಮತ್ತು ದ್ವಾರಕಾಮಾಯಿ ಪೂರ್ವ ದಿಕ್ಕಿನಲ್ಲಿ ಇರುತ್ತದೆ. ಗುರುಸ್ಥಾನವು ಪಶ್ಚಿಮ ದಿಕ್ಕಿನಲ್ಲಿದೆ. ನಿರಂತರ ಪ್ರಜ್ವಲಿಸುವ ನಂದಾದೀಪವು ವಾಯುವ್ಯ ದಿಕ್ಕಿನಲ್ಲಿರುತ್ತದೆ. 











ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ: 
ಕಾಕಡಾ ಆರತಿ : ಬೆಳಿಗ್ಗೆ 6 ಘಂಟೆಗೆ  (ಬೆಣ್ಣೆ ಮತ್ತು ಸಕ್ಕರೆ ಪ್ರಸಾದ).
ಮಧ್ಯಾನ್ಹ ಆರತಿ: ಮಧ್ಯಾನ್ಹ 12:30 ಕ್ಕೆ (ಮಿಶ್ರಿತ ಅನ್ನ ಪ್ರಸಾದ).
ಧೂಪಾರತಿ: ಸಂಜೆ 6 ಘಂಟೆಗೆ (ಸಿಹಿ ತಿಂಡಿ ಮತ್ತು ಹಾಲಿನ ಪ್ರಸಾದ). 
ಶೇಜಾರತಿ: ರಾತ್ರಿ 8:30 ಕ್ಕೆ (ಚಪಾತಿ ಪ್ರಸಾದ).

ವಿಶೇಷ ಉತ್ಸವದ ದಿನಗಳು: 

1.ಹೊಸ ವರ್ಷದ ಆಚರಣೆ ಜನವರಿ 1ನೇ ತಾರೀಖಿನಂದು "ಏಕದಿನ ಲಕ್ಷಾರ್ಚನೆ" ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. 
2.ಶಿವನೇಶನ್ ಸ್ವಾಮೀಜಿಯವರ ಪುಣ್ಯತಿಥಿ ಕಾರ್ಯಕ್ರಮ ಪ್ರತಿವರ್ಷ ಫೆಬ್ರವರಿ 12 ರಂದು. 
3.ತಮಿಳು ಹೊಸ ವರ್ಷದ ಆಚರಣೆ, ಶಿರಡಿ ಸಾಯಿಬಾಬಾರವರ ಹುಟ್ಟಿದ ಹಬ್ಬ ಮತ್ತು ಶ್ರೀರಾಮನವಮಿ ಉತ್ಸವದ ಆಚರಣೆ.
4.ಚೈತ್ರ ಮಾಸದ ಹುಣ್ಣಿಮೆಯಂದು ದೀಪೋತ್ಸವ ಕಾರ್ಯಕ್ರಮದ ಆಚರಣೆ.
5.ಗುರುಪೂರ್ಣಿಮೆ - ವ್ಯಾಸ ಪೂಜೆ ಹಾಗೂ ಸತ್ಯನಾರಾಯಣ ಪೂಜೆ.
6.ವಿಜಯದಶಮಿ - ಸಾಯಿಬಾಬಾ ಮಹಾಸಮಾಧಿ ದಿವಸ. 

ಸಾಮಾಜಿಕ ಕಾರ್ಯಚಟುವಟಿಕೆಗಳು: 

ರತ್ನ ಸಾಯಿ ಮಂದಿರಕ್ಕೆ ಪ್ರತಿದಿನ ಬರುವ ಎಲ್ಲ ಬಡವರಿಗೆ, ದೀನ ದಲಿತರಿಗೆ, ಅಂಗವಿಕಲರಿಗೆ ಮತ್ತು ವೃದ್ದರಿಗೆ ಉಚಿತವಾಗಿ ಭೋಜನವನ್ನು ನೀಡಲಾಗುವುದು. 

ಪ್ರತಿ ಶುಕ್ರವಾರ ಬೆಳಿಗ್ಗೆ 10:30 ರಿಂದ ಮಧ್ಯಾನ್ಹ 2:30 ರವರೆಗೆ ಸಂಧು ಕಡೆಯ್ ಬೀದಿಯಲ್ಲಿರುವ ಶ್ರೀ ಕೃಷ್ಣ ದೇವಾಲಯದಲ್ಲಿ  ಉಚಿತವಾಗಿ ಹೋಮಿಯೋಪತಿ ಚಿಕಿತ್ಸೆ ನೀಡಲಾಗುತ್ತಿದೆ. ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಅಲ್ಲದೆ, ಅವಶ್ಯಕತೆಯಿರುವ ಕೆಲವು ರೋಗಿಗಳಿಗೆ ಉಚಿತವಾಗಿ ಊಟವನ್ನು ಕೂಡ ವಿತರಿಸಲಾಗುತ್ತಿದೆ. 

ದೇವಾಲಯದ ವತಿಯಿಂದ ಮಾಧ್ಯಮಿಕ ಶಾಲೆಯನ್ನು ನಡೆಸಲಾಗುತ್ತಿದ್ದು 5ನೇ ತರಗತಿಯವರೆಗೆ ಉಚಿತವಾಗಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುವುದರ ಜೊತೆಗೆ ಮಧ್ಯಾನ್ಹದ ವೇಳೆ ಬಿಸಿ ಊಟವನ್ನು ಕೂಡ ನೀಡಲಾಗುತ್ತಿದೆ. ಟ್ರಸ್ಟ್ ನ ಹಣಕಾಸು ಪರಿಸ್ಥಿತಿಯನ್ನು ನೋಡಿಕೊಂಡು ಅರ್ಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಹಬ್ಬ ಹರಿದಿನಗಳಂದು ಸುತ್ತಮುತ್ತಲಿನ ಬಡ ಜನರಿಗೆ ಉಚಿತವಾಗಿ ವಸ್ತ್ರಗಳನ್ನೂ ಕೂಡ ವಿತರಿಸಲಾಗುತ್ತಿದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಮೆಕ್ಕುಡಿ ಗ್ರಾಮ, ಮಣಿಕಂಡಂ ಪಂಚಾಯಿತಿ, ಮಧುರೈ ರಸ್ತೆ.

ವಿಳಾಸ: 
ಶಿರಡಿ ಸಾಯಿ ಕಮ್ಯುನಿಟಿ ಸೆಂಟರ್, 
ಶಿರಡಿ ಸಾಯಿ ಟ್ರಸ್ಟ್, ಮೆಕ್ಕುಡಿ ಗ್ರಾಮ, 
ಮಣಿಕಂಡಂ ಪಂಚಾಯಿತಿ, ಮಧುರೈ ರಸ್ತೆ, 
ತಿರುಚನಾಪಳ್ಳಿ-620 012, ತಮಿಳುನಾಡು.

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ಎಂ.ಮೀನಾಕ್ಷಿ ಸುಂದರಂ.

ದೂರವಾಣಿ ಸಂಖ್ಯೆಗಳು: 
+ 91 431 2906123 / + 91 431 2740808 / +91 92456 49964 / + 91 94439 79917

ಈ ಮೇಲ್ ವಿಳಾಸ: 
meenakshisundaram@shirdisaitrichy.com, manager@shirdisaitrichy.com

ಅಂತರ್ಜಾಲ ತಾಣ: 


ಮಾರ್ಗಸೂಚಿ: 
ರಾಷ್ಟ್ರೀಯ ಹೆದ್ದಾರಿ 45 ರಲ್ಲಿ ಮಧುರೈಗೆ ತೆರಳುವ ಮಾರ್ಗದಲ್ಲಿ ಮಣಿಕಂಡಂ ಪಂಚಾಯಿತಿಯ ಮೆಕ್ಕುಡಿ ಗ್ರಾಮದ ಬಳಿ ಇಳಿಯುವುದು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment