ಅನಂತಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಶಿರಡಿ ಸಾಯಿ ಆಧ್ಯಾತ್ಮಿಕ ಸೇವಾ ಸಮಿತಿ (ನೋಂದಣಿ), ವಿದ್ಯಾನಗರ ಕಾಲೋನಿ, ಕೋಡಿಗೆನಹಳ್ಳಿ ಅಂಚೆ-515 212, ಪರಿಗಿ ಮಂಡಲಂ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ - ಕೃಪೆ: ಸಾಯಿಅಮೃತಧಾರಾ.ಕಾಂ
ಈ ದೇವಾಲಯವು ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕಿನ ಕೋಡಿಗೆನಹಳ್ಳಿಯಲ್ಲಿ ಇರುತ್ತದೆ. ಈ ದೇವಾಲಯವು ಹಿಂದೂಪುರ ಬಸ್ ನಿಲ್ದಾಣದಿಂದ 5 ಕಿಲೋಮೀಟರ್ ದೂರದಲ್ಲಿರುತ್ತದೆ. ಹಿಂದೂಪುರ ಬಸ್ ನಿಲ್ದಾಣದಿಂದ ಹೇರಳವಾಗಿ ಬಸ್ ಗಳು ಮತ್ತು ಆಟೋಗಳು ಸಿಗುತ್ತವೆ.
ಈ ದೇವಾಲಯದ ಭೂಮಿ ಪೂಜೆಯನ್ನು 26ನೇ ಜನವರಿ 1998 ರಂದು ನೆರವೇರಿಸಲಾಯಿತು.
ಈ ದೇವಾಲಯದ ಉದ್ಘಾಟನೆಯನ್ನು 13ನೇ ಮೇ 2011 ರಂದು ಹಿಂದೂಪುರದ ಖ್ಯಾತ ಸಾಯಿ ಭಕ್ತರಾದ ಶ್ರೀ.ವಿ.ಪಿ.ರಂಗಸ್ವಾಮಿಯವರು ನೆರವೇರಿಸಿದರು.
ಸಾಯಿಬಾಬಾ ಮಂದಿರವು 25 ಸೆಂಟ್ ಪ್ರದೇಶದಲ್ಲಿರುತ್ತದೆ. ಇದರಲ್ಲಿ 10 ಸೆಂಟ್ ಭೂಮಿಯನ್ನು ಶ್ರೀ.ವಿ.ಪಿ.ರಂಗಸ್ವಾಮಿಯವರು ನೀಡಿರುತ್ತಾರೆ. 11 ಸೆಂಟ್ ಭೂಮಿಯನ್ನು ಸ್ಥಳೀಯ ಗ್ರಾಮ ಪಂಚಾಯತಿಯವರು ನೀಡಿರುತ್ತಾರೆ. ಉಳಿದ 4 ಸೆಂಟ್ ಭೂಮಿಯನ್ನು ದೇವಾಲಯದ ಟ್ರಸ್ಟ್ ನ ಸದಸ್ಯರು ಖರೀದಿ ಮಾಡಿರುತ್ತಾರೆ.
ಈ ದೇವಾಲಯವನ್ನು ಶ್ರೀ.ಆರ್.ಪಿ.ಲಿಂಗಾರೆಡ್ಡಿಯವರು ಸ್ಥಳೀಯ ಬಟ್ಟೆ ಗಿರಣಿಯ ಕಾರ್ಮಿಕರ ಸಹಾಯದೊಂದಿಗೆ ಸ್ಥಾಪಿಸಿರುತ್ತಾರೆ ಮತ್ತು ಈ ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ದೇವಾಲಯವು ಬೆಳಿಗ್ಗೆ 5:30 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 9:30 ಕ್ಕೆ ಶೇಜಾರತಿಯೊಂದಿಗೆ ಮುಚ್ಚುತ್ತದೆ.
ದೇವಾಲಯದ ಗರ್ಭಗುಡಿಯಲ್ಲಿ ನಾಲ್ಕೂವರೆ ಅಡಿ ಎತ್ತರದ ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ದೇವಾಲಯದಲ್ಲಿ ಸುಮಾರು 3 1/2 ಅಡಿ ಎತ್ತರದ ಪಂಚಲೋಹದ ಸಾಯಿಬಾಬಾ ವಿಗ್ರಹವಿದ್ದು ಅದನ್ನು ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಂದು ಪಲ್ಲಕ್ಕಿ ಉತ್ಸವಕ್ಕೆ ಬಳಸಲಾಗುತ್ತದೆ. ಸಾಯಿಬಾಬಾರವರ ವಿಗ್ರಹದ ಮುಂಭಾಗದಲ್ಲಿ ಅಮೃತ ಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ.
ಮಂದಿರದ ಮಧ್ಯಭಾಗದ ನೆಲದಲ್ಲಿ ಅಮೃತ ಶಿಲೆಯ ಕೂರ್ಮವನ್ನು ಸಾಯಿಬಾಬಾರವರ ವಿಗ್ರಹಕ್ಕೆ ಎದುರುಗಡೆ ಇರುವಂತೆ ಸ್ಥಾಪಿಸಲಾಗಿದೆ. ಮಂದಿರದ ಹೊರಗಡೆ ಶಿರಡಿಯಲ್ಲಿ ಇರುವಂತೆ ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ.
ಮಂದಿರದ ವಿಶಾಲ ಆವರಣದ ಮಧ್ಯಭಾಗದಲ್ಲಿ "ಹೋಮಕುಂಡ" ವನ್ನು ಸ್ಥಾಪಿಸಲಾಗಿದ್ದು, ವಿಶೇಷ ಉತ್ಸವದ ದಿನಗಳಂದು ಹೋಮವನ್ನು ಮಾಡಲು ಬಳಸಲಾಗುತ್ತದೆ
ಕಪ್ಪು ಶಿಲೆಯ ಗಣಪತಿಯ ವಿಗ್ರಹ ಮತ್ತು ಅಮೃತ ಶಿಲೆಯ ದತ್ತಾತ್ರೇಯರ ವಿಗ್ರಹಗಳನ್ನು ದೇವಾಲಯದ ಹೊರ ಆವರಣದ ಹೆಬ್ಬಾಗಿಲ ಬಳಿ ಸ್ಥಾಪಿಸಲಾಗಿದೆ.
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು
ಆರತಿಯ ಸಮಯ:
ಕಾಕಡಾ ಆರತಿ | 5:30 AM |
ಮಧ್ಯಾನ್ಹ ಆರತಿ | 12:00 PM |
ಧೂಪಾರತಿ | 6:30 PM |
ಶೇಜಾರತಿ | 9:30 PM |
ಪ್ರತಿದಿನ ಬೆಳಿಗ್ಗೆ 6 ಘಂಟೆಯಿಂದ 7 ಘಂಟೆಯವರೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ "ಜಲಾಭಿಷೇಕ" ಮಾಡಲಾಗುತ್ತದೆ.
ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಂದು ಬೆಳಿಗ್ಗೆ 6 ಘಂಟೆಯಿಂದ 7 ಘಂಟೆಯವರೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ "ಪಂಚಾಮೃತ ಅಭಿಷೇಕ" ಮಾಡಲಾಗುತ್ತದೆ. ಸೇವಾ ಶುಲ್ಕ 216/- ರುಪಾಯಿಗಳು.
ಪ್ರತಿ ಗುರುವಾರ ಸಂಜೆ 6:30 ರಿಂದ ರಾತ್ರಿ 8 ಘಂಟೆಯವರೆಗೆ ಪಲಕ್ಕಿ ಮೆರವಣಿಗೆಯನ್ನು ನಡೆಸಲಾಗುತ್ತದೆ. ನಂತರ 8 ಘಂಟೆಯಿಂದ 9 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ.
ಪ್ರತಿ ಗುರುವಾರ ರಾತ್ರಿ 9:30 ಕ್ಕೆ ಶೇಜಾರತಿಯಾದ ನಂತರ ಮಂದಿರಕ್ಕೆ ಬರುವ ಎಲ್ಲಾ ಸಾಯಿಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ.
ವಿಶೇಷ ಉತ್ಸವದ ದಿನಗಳು:
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 13ನೇ ಮೇ ಯಂದು.
ಯುಗಾದಿ- ಸಾಯಿಬಾಬಾರವರ ಉತ್ಸವ ವಿಗ್ರಹದ ಮೆರವಣಿಗೆ ಮತ್ತು ಅನ್ನದಾನ.
ಗುರುಪೂರ್ಣಿಮೆ - ಸಾಯಿಬಾಬಾರವರ ಉತ್ಸವ ವಿಗ್ರಹದ ಮೆರವಣಿಗೆ ಮತ್ತು ಅನ್ನದಾನ.
ವಿಜಯದಶಮಿ - ಉತ್ಸವಕ್ಕೆ ಒಂದು ವಾರದ ಮೊದಲು ಹಳ್ಳಿಯಲ್ಲಿ ಭಿಕ್ಷಾ ಜೋಳಿ ಕಾರ್ಯಕ್ರಮ ಮಾಡಿ ಅದರಿಂದ ಬಂದ ಹಣ ಮತ್ತು ದವಸ ಧಾನ್ಯಗಳನ್ನು ಅನ್ನದಾನಕ್ಕೆ ಬಳಸಲಾಗುತ್ತದೆ. ಪಂಚ ಲೋಹದ ಸಾಯಿಬಾಬಾರವರ ವಿಗ್ರಹವನ್ನು ಹಳ್ಳಿಯ ಹೊರಗಡೆ ಇರುವ ಶಮೀ ವೃಕ್ಷಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಪುನಃ ವಾಪಸ್ ತರಲಾಗುತ್ತದೆ.
ದೇಣಿಗೆಗೆ ಮನವಿ:
ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೊಸ್ಕರ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿಭಕ್ತರು ಚೆಕ್ ಅಥವಾ ಡಿಡಿ ಮುಖಾಂತರ "ಶ್ರೀ ಶಿರಡಿ ಸಾಯಿ ಆಧ್ಯಾತ್ಮಿಕ ಸೇವಾ ಸಮಿತಿ (ನೋಂದಣಿ) , ಸಿಂಡಿಕೇಟ್ ಬ್ಯಾಂಕ್, ಕೋಡಿಗೆನಹಳ್ಳಿ ಶಾಖೆ, ಖಾತೆ ಸಂಖ್ಯೆ: 31382200011408 ಐ.ಎಫ್.ಎಸ್.ಸಂಖ್ಯೆ:SYNB0003138" ಸಂದಾಯವಾಗುವಂತೆ ನೀಡಬಹುದು.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಅಂಧರ ಶಾಲೆಯ ಹತ್ತಿರ, ವಿದ್ಯಾನಗರ ಕಾಲೋನಿ, ಕೋಡಿಗೆನಹಳ್ಳಿ, ಪರಿಗಿ ಮಂಡಲಂ, ಹಿಂದೂಪುರ ತಾಲ್ಲೂಕು.
ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಶ್ರೀ ಶಿರಡಿ ಸಾಯಿ ಆಧ್ಯಾತ್ಮಿಕ ಸೇವಾ ಸಮಿತಿ (ನೋಂದಣಿ),
ವಿದ್ಯಾನಗರ ಕಾಲೋನಿ, ಕೋಡಿಗೆನಹಳ್ಳಿ ಅಂಚೆ-515 212,
ಪರಿಗಿ ಮಂಡಲಂ, ಹಿಂದೂಪುರ ತಾಲ್ಲೂಕು,
ಅನಂತಪುರ ಜಿಲ್ಲೆ, ಆಂಧ್ರಪ್ರದೇಶ
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಆರ್.ಪಿ.ಲಿಂಗಾರೆಡ್ಡಿ - ಅಧ್ಯಕ್ಷರು / ಶ್ರೀ.ವೈ.ನರಸಿಂಹಂ -ಉಪಾಧ್ಯಕ್ಷರು / ಶ್ರೀ.ಹೆಚ್.ಶ್ರೀನಿವಾಸುಲು -ಕಾರ್ಯದರ್ಶಿ.
ದೂರವಾಣಿ ಸಂಖ್ಯೆಗಳು:
+ 91 8556 227599 (ಸ್ಥಿರದೂರವಾಣಿ) / +91 96528 43885 / +91 98667 68411
ಮಾರ್ಗಸೂಚಿ:
ಹಿಂದೂಪುರ ಬಸ್ ನಿಲ್ದಾಣದಲ್ಲಿ ಇಳಿಯುವುದು. ಅಲ್ಲಿಂದ ಬಸ್ ಅಥವಾ ಆಟೋ ಹಿಡಿದು ಕೊಡಿಗೇನಹಳ್ಳಿ ಗ್ರಾಮಕ್ಕೆ ಹೋಗಬಹುದು. ಹಿಂದೂಪುರ ಮಡಗಶಿರ ರಸ್ತೆಯಲ್ಲಿ ಸುಮಾರು 5 ಕಿಲೋಮೀಟರ್ ಕ್ರಮಿಸಿದರೆ ಕೊಡಿಗೇನಹಳ್ಳಿ ಸಿಗುತ್ತದೆ. ಅಲ್ಲಿನ ಅಂಧರ ಶಾಲೆಯ ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ಹಿಂದೂಪುರ ಬಸ್ ನಿಲ್ದಾಣದಿಂದ ಹೇರಳವಾಗಿ ಬಸ್ ಗಳು ಮತ್ತು ಆಟೋಗಳು ಸಿಗುತ್ತವೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment