Tuesday, August 2, 2011

ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮಂದಿರ  -  ಶ್ರೀ.ಶಿರಡಿ ಸಾಯಿಬಾಬಾ ಮಂದಿರ, ಭಗವತಿ ಸಾಯಿ ಸಂಸ್ಥಾನ (ನೋಂದಣಿ) ಮತ್ತು ಶ್ರೀ.ಸಾಯಿ ನಾರಾಯಣ ಬಾಬಾ ಆಶ್ರಮ, ರೈಲ್ವೇ ನಿಲ್ದಾಣದ ಎದುರುಗಡೆ, ಪನ್ವೇಲ್ -410 206, ರಾಯಘಡ ಜಿಲ್ಲೆ, ಮಹಾರಾಷ್ಟ್ರ, ಭಾರತ.

ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ಮಹಾರಾಷ್ಟ್ರದ ರಾಯಘಡ ಜಿಲ್ಲೆಯಲ್ಲಿರುವ ಪನ್ವೇಲ್ ರೈಲ್ವೇ ನಿಲ್ದಾಣದ ಎದುರುಗಡೆ ಇರುತ್ತದೆ. 

ಈ ದೇವಾಲಯದ ಉದ್ಘಾಟನೆಯನ್ನು ಭಗವತಿ ಸಾಯಿ ಸಂಸ್ಥಾನ (ನೋಂದಣಿ) ಮತ್ತು ಶ್ರೀ.ಸಾಯಿ ನಾರಾಯಣ ಬಾಬಾ ಆಶ್ರಮದ ಸಂಸ್ಥಾಪಕ ಶ್ರೀ.ಸಾಯಿ ನಾರಾಯಣ ಬಾಬಾರವರು 1ನೇ ಜನವರಿ 1970 ರಂದು ನೆರವೇರಿಸಿದರು. 

ದೇವಾಲಯದಲ್ಲಿ 5.5 ಅಡಿ ಎತ್ತರದ ಪಂಚಲೋಹದ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ದೊಡ್ಡ ವಿಗ್ರಹದ ಮುಂಭಾಗದಲ್ಲಿ ಅಮೇರಿಕದ ಶ್ರೀ.ವಿಲ್ಲಿಯಮ್ ಸನಿಯವರು ತಮ್ಮ ದಿವಂಗತ ತಂದೆ ಶ್ರೀ.ಹಸ್ಸಾರಾಂ ವಾಧುಮಾಲ್ ಆಸ್ನಾನಿಯವರ ಜ್ಞಾಪಕಾರ್ಥವಾಗಿ ನೀಡಿರುವ 2 ಅಡಿ ಎತ್ತರದ ಕಲ್ಚರ್ಡ್ ಅಮೃತ ಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ಅಮೃತ ಶಿಲೆಯ ಪಾದುಕೆಗಳನ್ನು ದೊಡ್ಡ ವಿಗಹದ ಮುಂಭಾಗದಲ್ಲಿ ಸ್ಥಾಪಿಸಲಾಗಿದೆ. ಶಿರಡಿಯಲ್ಲಿ ಇರುವಂತೆ ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ದೇವಾಲಯದ ಒಳ ಗೋಡೆಗಳ ಮೇಲೆ ಶ್ರೀ.ಸಾಯಿ ನಾರಾಯಣ ಬಾಬಾ ಮತ್ತು ಕಲ್ಲಿನ ಮೇಲೆ ಕುಳಿತ ಸಾಯಿಬಾಬಾರವರ ಚಿತ್ರಪಟಗಳನ್ನು ತೂಗುಹಾಕಲಾಗಿದೆ. 

ದೇವಾಲಯವು ಪ್ರತಿದಿನ ಬೆಳಿಗ್ಗೆ ಭೂಪಾಲಿ ಮತ್ತು ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 8:15 ಕ್ಕೆ  ಶೇಜಾರತಿಯಾದ ನಂತರ ಮುಚ್ಚುತ್ತದೆ. 











ಮಂದಿರದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:
 
ದೇವಾಲಯದ ಸಮಯ
ಬೆಳಿಗ್ಗೆ : 3:15 ರಿಂದ 12:00 ಘಂಟೆಯವರೆಗೆ.
ಸಂಜೆ: 4:30 ರಿಂದ 8:30 ರವರೆಗೆ.
 
ದೇವಾಲಯದ ದಿನನಿತ್ಯದ ಕಾರ್ಯಕ್ರಮಗಳು 
 
ಬೆಳಿಗ್ಗೆ 3:15  - ಭೂಪಾಲಿ ಮತ್ತು ಕಾಕಡಾ ಆರತಿ 
ಬೆಳಿಗ್ಗೆ 4:30 -  ಮಹಾ ಅಭಿಷೇಕ. 
ಬೆಳಿಗ್ಗೆ 6:00 - ಆರತಿ ಮತ್ತು ಮಂತ್ರ ಪುಷ್ಪಾಂಜಲಿ. 
ಬೆಳಿಗ್ಗೆ 11:30 - ಮಧ್ಯಾನ್ಹ ಆರತಿ. 
ಸಂಜೆ 4:30  - ಭಜನೆಗಳು ಮತ್ತು ಶ್ರೀ.ಸಾಯಿ ಮಹಿಮಾ 
ಸಂಜೆ 6:15 -  ಧೂಪಾರತಿ. 
ರಾತ್ರಿ 8:15 - ಶೇಜಾರತಿ  
 
ವಿಶೇಷ ಉತ್ಸವದ ದಿನಗಳು: 

1. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 1ನೇ ಜನವರಿಯಂದು.
2. ಪ್ರತಿ ವರ್ಷದ 20ನೇ ಫೆಬ್ರವರಿ ಶ್ರೀ.ಸಾಯಿ ನಾರಾಯಣ ಬಾಬಾರವರ ಹುಟ್ಟುಹಬ್ಬದ ಆಚರಣೆ. 
3. ಗುರುಪೂರ್ಣಿಮೆ. 
4. ಶ್ರೀಕೃಷ್ಣ ಜನ್ಮಾಷ್ಟಮಿ. 
5. ವಿಜಯದಶಮಿ. 
6. ದೀಪಾವಳಿ. 
7. ನವ ಚಂಡಿ ಯಜ್ಞ ಪ್ರತಿ ವರ್ಷದ 23ನೇ ಡಿಸೆಂಬರ್ ರಂದು. 
 
ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 
 
ಸ್ಥಳ: 
ರೈಲ್ವೇ ನಿಲ್ದಾಣದ ಎದುರು, ಪನ್ವೇಲ್. 
 
ವಿಳಾಸ: 
ಶ್ರೀ.ಶಿರಡಿ ಸಾಯಿಬಾಬಾ ಮಂದಿರ,
ಭಗವತಿ ಸಾಯಿ ಸಂಸ್ಥಾನ (ನೋಂದಣಿ) ಮತ್ತು ಶ್ರೀ.ಸಾಯಿ ನಾರಾಯಣ ಬಾಬಾ ಆಶ್ರಮ, 
ರೈಲ್ವೇ ನಿಲ್ದಾಣದ ಎದುರುಗಡೆ, ಪನ್ವೇಲ್ -410 206, 
ರಾಯಘಡ ಜಿಲ್ಲೆ, ಮಹಾರಾಷ್ಟ್ರ, ಭಾರತ. 
 
ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಮನೋಹರ ಚಂದ್ರ /ಶ್ರೀ.ಅನಂತ ಅಯ್ಯರ್ (ಶ್ರೀ.ಸಾಯಿ ನಾರಾಯಣ ಬಾಬಾರವರ ಸಹೋದರ)

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 
+91 22 2745 1001 / +91 22 2745 3333 / +91 98202 60903 (ಶ್ರೀ.ಮನೋಹರ  ಚಂದ್ರ) / +91 22 2745 3331 (ಫ್ಯಾಕ್ಸ್)

ಈ ಮೇಲ್ ವಿಳಾಸ: 


ಅಂತರ್ಜಾಲ ತಾಣ: 


ಮಾರ್ಗಸೂಚಿ: 
ಪನ್ವೇಲ್ ರೈಲ್ವೇ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಪನ್ವೇಲ್ ರೈಲ್ವೇ ನಿಲ್ದಾಣದ ಎದುರುಗಡೆ ಇರುತ್ತದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ  

No comments:

Post a Comment