Monday, August 8, 2011

ಬಂಗಾರಪೇಟೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ (ನೋಂದಣಿ), ಟ್ಯಾಂಕ್ ರಸ್ತೆ, ಬಂಗಾರಪೇಟೆ-563 114, ಕೋಲಾರ ಜಿಲ್ಲೆ, ಕರ್ನಾಟಕ. 

ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ಬಂಗಾರಪೇಟೆಯ ಟ್ಯಾಂಕ್ ರಸ್ತೆಯಲ್ಲಿರುತ್ತದೆ. ಮಂದಿರವು ಬಂಗಾರಪೇಟೆಯ ಬಸ್ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣದಿಂದ ಕೇವಲ ಹತ್ತು ನಿಮಿಷಗಳ ನಡಿಗೆಯ ಅಂತರದಲ್ಲಿರುತ್ತದೆ.

ಈ ದೇವಾಲಯದ ಭೂಮಿಪೂಜೆಯನ್ನು 2004 ನೇ ಇಸವಿಯಲ್ಲಿ ನೆರವೇರಿಸಲಾಯಿತು.

ಈ ದೇವಾಲಯದ ಉದ್ಘಾಟನೆಯನ್ನು 16ನೇ ಜೂನ್ 2005 ರಂದು ದೇವಾಲಯದ ಟ್ರಸ್ಟ್ ನ ಸದಸ್ಯರುಗಳು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿದರು. ಸಮಾರಂಭದಲ್ಲಿ ರೈಲ್ವೇ ಖಾತೆ ರಾಜ್ಯ ಸಚಿವ ಶ್ರೀ.ಕೆ.ಹೆಚ್.ಮುನಿಯಪ್ಪರವರು ಉಪಸ್ಥಿತರಿದ್ದರು.

ದೇವಾಲಯವು ಬೆಳಿಗ್ಗೆ 6 ಘಂಟೆಗೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ. ಮಧ್ಯಾನ್ಹ 12:30 ಕ್ಕೆ ಮಧ್ಯಾನ್ಹದ ಆರತಿಯೊಂದಿಗೆ ಮುಚ್ಚುತ್ತದೆ. ಪುನಃ ಸಂಜೆ 6 ಘಂಟೆಗೆ ಧೂಪಾರತಿಯೊಂದಿಗೆ ಮಂದಿರ ತೆರೆಯುತ್ತದೆ. ರಾತ್ರಿ 8:30 ಕ್ಕೆ ಶೇಜಾರತಿಯ ನಂತರ ಮುಚ್ಚುತ್ತದೆ

ದೇವಾಲಯದಲ್ಲಿ 4.5 ಅಡಿ ಎತ್ತರದ ಸುಂದರ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ನೋಡಬಹುದು. ಸಾಯಿಬಾಬಾರವರ ವಿಗ್ರಹದ ಮುಂದೆ ಅಮೃತಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ.


ಅಮೃತಶಿಲೆಯ 1.5 ಅಡಿ ಎತ್ತರದ ದತ್ತಾತ್ರೇಯ, ಗಾಯತ್ರಿ ದೇವಿಯ ವಿಗ್ರಹ, ಪಂಚಲೋಹದ 2 ಅಡಿ ಎತ್ತರದ ಸಾಯಿಬಾಬಾರವರ ವಿಗ್ರಹ, ಒಂದು ಬೆಳ್ಳಿಯ ಸಾಯಿಬಾಬಾರವರ ವಿಗ್ರಹ, ಒಂದು ಚಿನ್ನದ ಸಾಯಿಬಾಬಾ ವಿಗ್ರಹ, ಒಂದು ಬೆಳ್ಳಿಯ ಗಣೇಶನ ವಿಗ್ರಹ, ಅಮೃತಶಿಲೆಯ ನಂದಿಯ ವಿಗ್ರಹ, ಗನ್ ಮೆಟಲ್ ನಲ್ಲಿ ಮಾಡಿದ ಸಾಯಿಬಾಬಾ ವಿಗ್ರಹಗಳನ್ನು ಗರ್ಭಗುಡಿಯಲ್ಲಿ ನೋಡಬಹುದು.

ಎಲ್ಲಾ ದೇವಾಲಯಗಳಲ್ಲಿ ಇರುವಂತೆ ನಂದಿಯ ವಿಗ್ರಹ ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರದೇ ಪಕ್ಕದಲ್ಲಿರುವುದು ಈ ದೇವಾಲಯದ ಒಂದು ವಿಶೇಷ ಎಂದೇ ಹೇಳಬಹುದು.

ದೇವಾಲಯದ ಗರ್ಭಗುಡಿಯ ಬಾಗಿಲ ಎರಡೂ ಬದಿಗಳಲ್ಲಿ ಸಾಯಿಬಾಬಾರವರ ಹನ್ನೊಂದು ಅಭಿವಚನಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಕಲ್ಲಿನಲ್ಲಿ ಕೆತ್ತಲಾಗಿದೆ.

"ಕಲ್ಲಿನ ಮೇಲೆ ಕುಳಿತ ಸಾಯಿಬಾಬಾ" ರವರ ಚಿತ್ರಪಟವನ್ನು ದೇವಾಲಯದ ಗೋಡೆಯ ಮೇಲೆ ತೂಗುಹಾಕಲಾಗಿದೆ.


















ದೇವಾಲಯದ ಕಾರ್ಯಚಟುವಟಿಕೆಗಳು: 


ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ: 

ಕಾಕಡಾ ಆರತಿ : ಬೆಳಿಗ್ಗೆ 6 ಘಂಟೆಗೆ
ಛೋಟಾ ಆರತಿ: ಬೆಳಿಗ್ಗೆ 9:30 ಕ್ಕೆ
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ
ಧೂಪಾರತಿ: ಸಂಜೆ 6 ಘಂಟೆಗೆ
ಶೇಜಾರತಿ: ರಾತ್ರಿ 8:30 ಕ್ಕೆ

ಪ್ರತಿದಿನ ಬೆಳಿಗ್ಗೆ 8:30 ರಿಂದ 9:30 ರ ವರೆಗೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 101/- ರುಪಾಯಿಗಳು.

ವಿಶೇಷ ಉತ್ಸವದ ದಿನಗಳು: 

1. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 16ನೇ ಜೂನ್.
2. ಶ್ರೀರಾಮನವಮಿ.
3. ಗುರು ಪೂರ್ಣಿಮೆ.
4. ಗಾಯತ್ರಿ ಜಯಂತಿ.
5. ವಿಜಯದಶಮಿ.
6. ದೀಪಾವಳಿ.
7. ದತ್ತಾತ್ರೇಯ ಜಯಂತಿ.
8. ಹೊಸ ವರ್ಷದ ಆಚರಣೆ  ಪ್ರತಿ ವರ್ಷದ 1ನೇ ಜನವರಿಯಂದು.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಟ್ಯಾಂಕ್ ರಸ್ತೆ, ಬಂಗಾರಪೇಟೆ.

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ (ನೋಂದಣಿ),
ಟ್ಯಾಂಕ್ ರಸ್ತೆ, ಬಂಗಾರಪೇಟೆ-563 114, ಕೋಲಾರ ಜಿಲ್ಲೆ, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಸಾಯಿನಾಥ್ - ಅಧ್ಯಕ್ಷರು, ಶ್ರೀ.ಅನಿಲ್ ಕುಮಾರ್ - ಕಾರ್ಯದರ್ಶಿ.


ದೂರವಾಣಿ ಸಂಖ್ಯೆಗಳು: 
+ 91 94480 49445 / +91 94481 32816


ಮಾರ್ಗಸೂಚಿ:
ಬಂಗಾರಪೇಟೆ ಬಸ್ ನಿಲ್ದಾಣ ಅಥವಾ ರೈಲ್ವೇ ನಿಲ್ದಾಣದಲ್ಲಿ ಇಳಿದು ಹತ್ತು ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ದೇವಾಲಯವು ಟ್ಯಾಂಕ್ ರಸ್ತೆಯಲ್ಲಿರುತ್ತದೆ.


ಕನ್ನಡ ಅನುವಾದ: ಶ್ರೀಕಂಠ ಶರ್ಮ




No comments:

Post a Comment