ಸಾಯಿ ಮಹಾ ಭಕ್ತ - ವಿ. ಪಿ. ಅಯ್ಯರ್ - ಕೃಪೆ: ಸಾಯಿ ಅಮೃತ ಧಾರಾ.ಕಾಂ
ವಿ.ಪಿ.ಅಯ್ಯರ್ ರವರ ಸಮಾಧಿ
ವಿ.
ಪಿ. ಅಯ್ಯರ್ ರವರು ಸಕ್ಕರೆ ತಂತ್ರಜ್ಞರಾಗಿದ್ದು ಅನೇಕ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ
ಮಾಡಿದರು. 1944 ರಲ್ಲಿ ಕೋಪರ್ಗಾವ್ ನ ಲಕ್ಷ್ಮೀ ವಾಡಿ ಸಕ್ಕರೆ ಕಾರ್ಖಾನೆಯಲ್ಲಿ
ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿದರು. ಇವರು ಸಾಯಿಬಾಬಾ ಅವರನ್ನು ಪ್ರತ್ಯಕ್ಷವಾಗಿ
ನೋಡುವ ಭಾಗ್ಯ ಹೊಂದಿರಲಿಲ್ಲ. ಆದರೆ, ಇವರು ಸಾಯಿಬಾಬಾರವರ ಅನನ್ಯ ಭಕ್ತರಾಗಿ ಶಿರಡಿ
ಸಾಯಿಬಾಬಾ ಸಂಸ್ಥಾನಕ್ಕೆ ಬಹಳ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಆಗಾಗ್ಗೆ ಶಿರಡಿಗೆ
ಬಂದು ಹೋಗಿ ಮಾಡುತ್ತಿದ್ದರು. ಶಿರಡಿಯ ಜನರಿಗೆ ಇವರೆಂದರೆ ಬಹಳ ಪ್ರೀತಿ, ವಿಶ್ವಾಸ.
ಶಿರಡಿಗೆ ಒಮ್ಮೆ ಬರುವಾಗ ಇವರ ಆರೋಗ್ಯ ಹದಗೆಟ್ಟಿತು. ಶಿರಡಿಯಲ್ಲಿ ಮೇ ತಿಂಗಳ 27ನೇ
ತಾರೀಕಿನಂದು ಬಾಬಾರವರ ಚಿತ್ರಪಟವನ್ನು ಹಿಡಿದುಕೊಂಡು ಅವರ ನಾಮ ಸ್ಮರಣೆ ಮಾಡುತ್ತಾ ತಮ್ಮ
ಪ್ರಾಣವನ್ನು ಬಿಟ್ಟರು. ಇವರಿಗೆ ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿಯೇ ಸಮಾಧಿ
ಹೊಂದಬೇಕೆಂದು ಆಸೆಯನ್ನು ಸಾಯುವುದಕ್ಕೆ ಮುಂಚೆ ವ್ಯಕ್ತಪಡಿಸಿದ್ದರು. ವಿ. ಪಿ. ಅಯ್ಯರ್
ಅವರ ಇಚ್ಚೆಯಂತೆ ಇವರ ಸಮಾಧಿಯನ್ನು ಸಂಸ್ಥಾನದ ಪ್ರಾಂಗಣದಲ್ಲಿ ಮಾಡಲಾಗಿದೆ. ಇವರ
ಸಮಾಧಿಯು ನಾನಾವಲ್ಲಿಯವರ ಸಮಾಧಿಯ ಪಕ್ಕದಲ್ಲಿದೆ.
No comments:
Post a Comment