Wednesday, November 10, 2010

ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ.ಶಿರಡಿ ಸಾಯಿ ಮಂದಿರ, ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್  (ರಿ), ಶಿರಡಿ ಸಾಯಿನಗರ, ಕುಂದಲಹಳ್ಳಿ ಗೇಟ್, ಮುನ್ನೇಕೊಳಾಳ  , ಬೆಂಗಳೂರು-560 037 - ಕೃಪೆ : ಸಾಯಿ ಅಮೃತಧಾರಾ.ಕಾಂ

ಈ ಮಂದಿರವು ಬೆಂಗಳೂರಿನ ಮಾರತ್ತಹಳ್ಳಿಯ ಪಕ್ಕದ ಕುಂದಲಹಳ್ಳಿ ಗೇಟ್ ಬಳಿಯ ಬಡಾವಣೆಯಾದ ಶಿರಡಿ ಸಾಯಿನಗರದಲ್ಲಿ ಇದೆ. ಈ ದೇವಾಲಯದ ವಿಶೇಷತೆಗಳನ್ನು ಈ ಕೆಳಗೆ ಸಾಯಿಭಕ್ತರ ಅನುಕೂಲಕ್ಕಾಗಿ ಕೊಡಲಾಗಿದೆ. 

ದೇವಾಲಯದ ವಿಶೇಷತೆಗಳು:

ಈ ದೇವಾಲಯದ ಭೂಮಿಪೂಜೆ ಮತ್ತು ಶಂಕುಸ್ಥಾಪನೆಯನ್ನು 13ನೇ ಅಕ್ಟೋಬರ್ 2005 ವಿಜಯದಶಮಿಯಂದು ಶ್ರೀ.ಶಿರಡಿ ಸಾಯಿ ಸೇವಾ ಟ್ರಸ್ಟ್ (ರಿ) ನ ವತಿಯಿಂದ ನೆರವೇರಿಸಲಾಯಿತು. ಶಿರಡಿ ಸಾಯಿಬಾಬಾರವರ ವಿಗ್ರಹವು ರಾಜಸ್ತಾನದ ಜೈಪುರದಿಂದ 2007 ಇಸವಿಯ ವಿಜಯದಶಮಿಯಂದು ಬೆಂಗಳೂರಿಗೆ ಬಂದಿತು. ಭೂಮಿಪೂಜೆಯಿಂದ ಹಿಡಿದು ದೇವಾಲಯದ ಪ್ರಾರಂಭದ ದಿನದವರೆಗೂ ಎಲ್ಲಾ ಶುಭ ಕಾರ್ಯಗಳು ಸಾಯಿಯವರ ಮಹಾಸಮಾಧಿ ದಿನವಾದ ವಿಜಯದಶಮಿಯಂದೇ ನಡೆದಿರುವುದು ಒಂದು ವಿಶೇಷವೇ ಸರಿ. 

ದೇವಾಲಯದ ನಾಮ ಫಲಕ 

ದೇವಾಲಯದ ಹೊರನೋಟ 

ದೇವಾಲಯದ ರಾಜಗೋಪುರ

ಈ ದೇವಾಲಯವು 3 ಅಂತಸ್ತುಗಳನ್ನು ಹೊಂದಿದೆ. ದೇವಾಲಯದ ನೆಲ ಅಂತಸ್ತಿನಲ್ಲಿ ಗಣಪತಿ, ದತ್ತಾತ್ರೇಯ ದೇವಾಲಯಗಳು, ಧ್ಯಾನ ಮಂದಿರ ಮತ್ತು ಧುನಿ (ಪವಿತ್ರ ಅಗ್ನಿಕುಂಡ)ಯು ಇರುವುದಷ್ಟೇ ಆಲ್ಲದೇ "ಸಾಯಿ ಕೋಟಿ" ಯು ಇರುತ್ತದೆ. ಈ ಸಾಯಿ ಕೋಟಿ ಸ್ಥೂಪವನ್ನು ನೆಲಮಹಡಿಯಿಂದ ಹನ್ನೆರಡು ಅಡಿಗಳ ಎತ್ತರದ ಸುತ್ತುವರೆದ ಗೋಡೆಯಿಂದ ನಿರ್ಮಿಸಲಾಗಿದ್ದು ಇದರಲ್ಲಿ ಶಿರಡಿಯಿಂದ ತರಲ್ಪಟ್ಟ ಪವಿತ್ರ ಮಣ್ಣು ಮತ್ತು "ಸಾಯಿರಾಂ" ಎಂದು ಪಂಚಲೋಹ ಹಾಗೂ ಪುಸ್ತಕಗಳಲ್ಲಿ ಬರೆಯಲ್ಪಟ್ಟ ಸಾಯಿಕೋಟಿ ನಾಮದಿಂದ ತುಂಬಿಸಿದ್ದು, ಇದು ನೆಲಮಹಡಿಯಿಂದ ಪ್ರಾರಂಭವಾಗಿ ಮೊದಲ ಮಹಡಿಯನ್ನು ಮುಟ್ಟುವಂತೆ ನಿರ್ಮಿಸಲಾಗಿದೆ. ಈ ಸಾಯಿಕೋಟಿ ಸ್ಥೂಪದ ಮೇಲೆ ಸರಿಯಾಗಿ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದ್ದು, ಶ್ರೀ ಸಾಯಿಬಾಬಾರವರ ಪವಿತ್ರ ಪಾದಗಳನ್ನು ಕೋಟಿ ಸ್ಥೂಪವನ್ನು ತಮ್ಮ ಪಾದಗಳಿಂದ ಸ್ಪರ್ಶಿಸುವಂತೆ ನೆಲಕ್ಕೆ ತಾಕಿಸಲಾಗಿದೆ. ಇದರಿಂದ ಧನಾತ್ಮಕ ಶಕ್ತಿಯನ್ನು ಪಡೆಯಬಹುದಾಗಿದೆ. 

ವಿದ್ಯಾಗಣಪತಿ ದೇವಸ್ಥಾನ

ದತ್ತಾತ್ರೇಯ ದೇವಸ್ಥಾನ 

ದೇವಾಲಯದ ನೆಲಅಂತಸ್ತಿನ ಹೊರನೋಟ 

ಪವಿತ್ರ ಧುನಿ ಮಾ 

ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಚಿತ್ರಪಟ 

ಶ್ರೀ ಸಾಯಿರಾಂ ಚಿತ್ರಪಟ  

ಸಾಯಿ ಕೋಟಿ ಸ್ಥೂಪ  
ಮೊದಲನೆಯ ಮಹಡಿಯು ದೊಡ್ಡದಾದ ಹಜಾರವನ್ನು ಹೊಂದಿದೆ. ಅಲ್ಲಿ ಸುಸಜ್ಜಿತವಾದ 3 ಅಡಿಗಳ ಎತ್ತರದ ವೇದಿಕೆಯನ್ನು ನಿರ್ಮಾಣ ಮಾಡಿ, ಆ ಪವಿತ್ರ ಜಾಗದಲ್ಲಿ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಆಲ್ಲದೇ, ಸಾಯಿಬಾಬಾರವರ ಸಮಾಧಿ ಮತ್ತು ಪಾದುಕೆಗಳ ಮಾದರಿಯನ್ನು ಅಮೃತಶಿಲೆಯಲ್ಲಿ ನಿರ್ಮಿಸಲಾಗಿದೆ. 

ಮೊದಲನೇ ಮಹಡಿಯ ಸಾಯಿಬಾಬಾ ದೇವಾಲಯದ ಹೊರನೋಟ

ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹ, ಮಾದರಿ ಪಾದುಕೆ ಮತ್ತು ಸಮಾಧಿ

ಸಾಯಿಬಾಬಾರವರ ಪಂಚಲೋಹದ ವಿಗ್ರಹ

ಎರಡನೇ ಮಹಡಿಯಲ್ಲಿ 3 ಪೀಠಗಳಿವೆ. 1. ದತ್ತಾತ್ರೇಯ ಪೀಠ (9 ಅಡಿಗಳು) 2. ದಕ್ಷಿಣಾಮುರ್ತಿ ಪೀಠ (18 ಅಡಿಗಳು) ಹಾಗೂ 3. ಶ್ರೀ ಸಾಯಿ ಪೀಠ (36 ಅಡಿಗಳು) ಇರುತ್ತವೆ. ಮೊದಲ ಎರಡು ಪೀಠಗಳಿಗೆ ಎರಡೂವರೆ ಅಡಿಯ ಸುವರ್ಣ ಲೇಪನದ ಕಳಶಗಳನ್ನು ಅಳವಡಿಸಲಾಗಿದೆ ಹಾಗೂ 3 ಅಡಿಯ ಸುವರ್ಣ ಲೇಪನ ಕಳಶವನ್ನು  ಶ್ರೀ ಸಾಯಿ ಪೀಠಕ್ಕೆ ಅಳವಡಿಸಲಾಗಿದೆ. ಭಾರತದಲ್ಲಷ್ಟೇ ಆಲ್ಲದೇ ಪ್ರಪಂಚದಾದ್ಯಂತ ಇನ್ನೇಲ್ಲಿಯು ಸಹ ಈ ರೀತಿ 3 ಪೀಠಗಳನ್ನು ಏಕಕಾಲದಲ್ಲಿ ದರ್ಶನ ಮಾಡುವ ಅವಕಾಶ ಇರುವುದಿಲ್ಲ. 

ಸಾಯಿಬಾಬಾರವರ ಮಂದಿರವನ್ನು 9ನೇ ಅಕ್ಟೋಬರ್ 2008 ರಂದು ಉದ್ಘಾಟನೆ ಮಾಡಿ ಪ್ರಾಣ ಪ್ರತಿಷ್ಟಾಪನೆ ಮಾಡಿ ಗಣಪತಿ, ದತ್ತಾತ್ರೇಯ ಹಾಗೂ ಶ್ರೀ.ಶಿರಡಿ ಸಾಯಿಬಾಬಾರವರ ಕುಂಭಾಭಿಷೇಕವನ್ನು ನೆರವೇರಿಸಲಾಯಿತು. ಕಾಕತಾಳೀಯವೋ, ಸಾಯಿಬಾಬಾರವರ ಕೃಪೆಯೋ ಎಂಬಂತೆ ಶ್ರೀ.ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಠಾಪನಾ ಜಾಗಕ್ಕೆ 6ನೇ ಅಕ್ಟೋಬರ್ 2008 ರಂದು ಕೊಂಡೊಯ್ದು ಇಡಲಾಯಿತು. ಆ ದಿನ ಶುಭ ಶಕುನವೋ ಎಂಬಂತೆ ಇಡೀ ರಾತ್ರಿ ಒಳ್ಳೆಯ ಮಳೆ ಸುರಿಯಿತು. 8ನೇ ಅಕ್ಟೋಬರ್ 2008 ರಂದು ಶ್ರೀ ಸಾಯಿಬಾಬಾ ಕಳಶವನ್ನು ಇಡಲಾಯಿತು. ಆ ದಿನ ಗರುಡ ವಾಹನನು ದೇವಾಲಯದ ಸುತ್ತಾ 3 ಪ್ರದಕ್ಷಿಣೆಯನ್ನು ಮಾಡಿ ಹೋಗಿರುವುದನ್ನು ನೆರೆದಿದ್ದ ಸಾವಿರಾರು ಸಾಯಿಭಕ್ತ ವೃಂದ ಕಣ್ಣಾರೆ ವೀಕ್ಷಿಸಿರುತ್ತದೆ. 9ನೇ ಅಕ್ಟೋಬರ್ 2008 ರಂದು ಶ್ರೀ ಸಾಯಿಬಾಬಾರವರ ಪ್ರಾಣಪ್ರತಿಷ್ಟಾಪನೆ ಆದ ದಿನ ಮಹಾಪ್ರಸಾದವನ್ನೆಲ್ಲ ವಿತರಣೆ ಮಾಡಿದ ಮೇಲೆ ಎರಡು ನಿಮಿಷಗಳ ಕಾಲ "ಪುಷ್ಪ ವೃಷ್ಟಿ" ಯೋ ಎಂಬಂತೆ ಮಳೆ ಸುರಿಯಿತು. ಈ ಎಲ್ಲಾ ವಿಶೇಷಗಳಿಂದ ಈ ಸಾಯಿಬಾಬಾ ಮಂದಿರವು ಬಹಳ ಪವಿತ್ರವಾದ ಹಾಗೂ ಪುಣ್ಯಸ್ಥಳವಾಗಿರುತ್ತದೆ. 

ಈ ಮಂದಿರದಲ್ಲಿರುವ ಪವಿತ್ರ ಸಾಯಿಬಾಬಾರವರ ಧುನಿಯನ್ನು ಬೆಂಗಳೂರಿನ ಬೂದಿಗೆರೆಯ ಸಾಯಿಮಂದಿರದಿಂದ ತಂದ ಪವಿತ್ರ ಅಗ್ನಿಯಿಂದ 8ನೇ ಅಕ್ಟೋಬರ್ 2008 ರಂದು ಪ್ರಾರಂಭಿಸಲಾಯಿತು. 

ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ದರ್ಶನ ಸಮಯ: 

ಪ್ರತಿದಿನ ಗುರುವಾರ ಬಿಟ್ಟು :ಬೆಳಿಗ್ಗೆ 6 ರಿಂದ ಮಧ್ಯಾನ್ಹ 12 ರವರೆಗೆ  ಹಾಗೂ ಸಂಜೆ 5 ರಿಂದ ರಾತ್ರಿ 8 ರವರೆಗೆ.
ಗುರುವಾರ : ಬೆಳಿಗ್ಗೆ 6 ರಿಂದ ಮಧ್ಯಾನ್ಹ 1 ರವರೆಗೆ  ಹಾಗೂ ಸಂಜೆ 4 ರಿಂದ ರಾತ್ರಿ 9 ರವರೆಗೆ.

ಆರತಿಯ ಸಮಯ: 
ಕಾಕಡಾ ಆರತಿ : ಪ್ರತಿದಿನ ಬೆಳಿಗ್ಗೆ 6 ಘಂಟೆಗೆ
ಮಧ್ಯಾನ್ಹ ಆರತಿ: ಪ್ರತಿದಿನ ಬೆಳಿಗ್ಗೆ 12 ಘಂಟೆಗೆ ಮತ್ತು ಗುರುವಾರದಂದು 12:30 ಕ್ಕೆ.
ಧೂಪಾರತಿ: ಪ್ರತಿದಿನ ಸಂಜೆ 7 ಘಂಟೆಗೆ ಮತ್ತು ಗುರುವಾರದಂದು ಸಂಜೆ 6:30 ಕ್ಕೆ.
ಶೇಜಾರತಿ: ಪ್ರತಿದಿನ ರಾತ್ರಿ 8 ಘಂಟೆಗೆ ಮತ್ತು ಗುರುವಾರದಂದು ರಾತ್ರಿ 9 ಘಂಟೆಗೆ.


ವಿಶೇಷ ದಿನಗಳು: 

  • ಪ್ರತಿ ಗುರುವಾರ ಚಾವಡಿ ಉತ್ಸವವನ್ನು ಸಂಜೆ 7:30 ಕ್ಕೆ ನಡೆಸಲಾಗುತ್ತದೆ. 
  • ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ನಡೆಸಲಾಗುತ್ತದೆ. ಸೇವಾಶುಲ್ಕ 100/- ರುಪಾಯಿಗಳು.
  • ಪ್ರತಿ ತಿಂಗಳು ಸಂಕಷ್ಟ ಚತುರ್ಥಿಯನ್ನು ನಡೆಸಲಾಗುತ್ತದೆ. ಸೇವಾಶುಲ್ಕ 100/- ರುಪಾಯಿಗಳು.


ವಿಶೇಷ ಉತ್ಸವದ ದಿನಗಳು: 

  1. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ ವಿಜಯದಶಮಿಯಂದು. 
  2. ಗುರುಪೂರ್ಣಿಮೆ 
  3. ಶ್ರೀರಾಮನವಮಿ 
  4. ಶಿವರಾತ್ರಿ  - 108 ರುದ್ರಾಕ್ಷಿಯೊಂದಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.
  5. ಯುಗಾದಿ 
  6. ಪ್ರತಿ ವರ್ಷದ ಜನವರಿ ತಿಂಗಳಿನಲ್ಲಿ 48 ಘಂಟೆಗಳ ಅಖಂಡ ಸಾಯಿ ನಾಮ ಜಪ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚ:


ವಿಳಾಸ: 

ಶ್ರೀ ಶಿರಡಿ ಸಾಯಿ ಮಂದಿರ
ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್ (ರಿ)
ನಂ.56, ಶಿರಡಿ ಸಾಯಿನಗರ
ಕುಂದಲಹಳ್ಳಿ ಗೇಟ್, ಮುನ್ನೇಕೊಳಾಳ ಗ್ರಾಮ
ಬೆಂಗಳೂರು-560 037.
ಕರ್ನಾಟಕ

ಸಂಪರ್ಕಿಸಬೇಕಾದ ವ್ಯಕ್ತಿಗಳು:

ಶ್ರೀ.ಜೆ.ಎಂ.ರಾಜಣ್ಣ ಶೆಟ್ಟಿ / ಶ್ರೀ.ಟಿ.ಶೇಖರ ರೆಡ್ಡಿ/ಶ್ರೀ.ಶ್ರೀನಿವಾಸ ರೆಡ್ಡಿ/ಶ್ರೀ.ಸುಕೇಶ್ ರೆಡ್ಡಿ/ಶ್ರೀ.ಅರೈಕುಲಂ 

ದೂರವಾಣಿ ಸಂಖ್ಯೆಗಳು:

080-32486743 /92431 06737 / 98450 12809 / 98807 44157 / 98450 50599 /98445 40539

ಮಾರ್ಗಸೂಚಿ:

ಕುಂದಲಹಳ್ಳಿ ಗೇಟ್ ಬಸ್ ನಿಲ್ದಾಣದಲ್ಲಿ ಇಳಿದು 1.5 ಕಿಲೋಮೀಟರ್ ನಷ್ಟು ದೂರ ಕ್ರಮಿಸಿದರೆ ಈ ಮಂದಿರ ಸಿಗುತ್ತದೆ.


ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment