ಚಿತ್ತೂರಿನ ಸಾಯಿಬಾಬಾ ಮಂದಿರ - ಶ್ರೀ. ಶಿರಡಿ ಸಾಯಿಬಾಬಾ ಸೇವಾ ಸಮಿತಿ, ಶೇಷಪಿಳ್ಳರ್ ರಸ್ತೆ, ಕೊಂಗರೆಡ್ಡಿಪಲ್ಲಿ, ಚಿತ್ತೂರು-517 001, ಆಂಧ್ರಪ್ರದೇಶ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
- ಈ ದೇವಾಲಯದ ಭೂಮಿಪೂಜೆಯನ್ನು 1994 ನೇ ಇಸವಿಯಲ್ಲಿ ನೆರವೇರಿಸಲಾಯಿತು.
- ಈ ದೇವಾಲಯವನ್ನು 24ನೇ ಜನವರಿ 2005 ರಂದು ಉದ್ಘಾಟಿಸಲಾಯಿತು.
- ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವು ಮಂದಿರದಲ್ಲಿ ರಾರಾಜಿಸುತ್ತಿದೆ. ಸಾಯಿಬಾಬಾರವರ ವಿಗ್ರಹದ ಹಿಂಭಾಗದ ಗೋಡೆಯಲ್ಲಿ ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಚಿತ್ರಪಟವನ್ನು ತೂಗುಹಾಕಲಾಗಿದೆ.
ದೇವಾಲಯದ ಹೊರನೋಟ
ಸಾಯಿಬಾಬಾರವರ ವಿಗ್ರಹ
ದೇವಾಲಯದ ಕಾರ್ಯಚಟುವಟಿಕೆಗಳು
ಆರತಿಯ ಸಮಯ
ಆರತಿ | ಸಮಯ |
ಕಾಕಡ ಆರತಿ | 6:00 AM |
ಮಧ್ಯಾನ್ಹ ಆರತಿ | 12:00 PM |
ಧೂಪಾರತಿ | 6:00 PM |
ಶೇಜಾರತಿ | 8:00 PM |
ಸಾಯಿಬಾಬಾ ವಿಗ್ರಹಕ್ಕೆ ಪ್ರತಿನಿತ್ಯ ಅಭಿಷೇಕವನ್ನು ಮಾಡಲಾಗುತ್ತದೆ. ಸೇವೆಯನ್ನು ಮಾಡಿಸಲು ಇಚ್ಚಿಸುವ ಸಾಯಿಭಕ್ತರು 150/- ರುಪಾಯಿಗಳನ್ನು ಕೊಟ್ಟು ಸೇವೆಯಲ್ಲಿ ಭಾಗವಹಿಸಬಹುದು.
ಪ್ರತಿ ಗುರುವಾರ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸುಮಾರು 200 ಜನ ಸಾಯಿಭಕ್ತರು ಇದರಲ್ಲಿ ಭಾಗವಹಿಸುತ್ತಾರೆ.
ವಿಶೇಷ ಉತ್ಸವದ ದಿನಗಳು:
- ಶ್ರೀರಾಮನವಮಿ
- ಗುರುಪೂರ್ಣಿಮ
- ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ)
- ಉಗಾದಿ ಹಬ್ಬ
- ವಿನಾಯಕ ಚತುರ್ಥಿ
- ತಮಿಳು ಹೊಸ ವರ್ಷ
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ
ವಿಳಾಸ :
ಶ್ರೀ. ಶಿರಡಿ ಸಾಯಿಬಾಬಾ ಸೇವಾ ಸಮಿತಿ
ಶೇಷಪಿಳ್ಳರ್ ರಸ್ತೆ, ಕೊಂಗರೆಡ್ಡಿಪಲ್ಲಿ,
ಚಿತ್ತೂರು-517 001, ಆಂಧ್ರಪ್ರದೇಶ
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಬಿ.ಶ್ರೀನಿವಾಸಲು ನಾಯ್ಡು
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
093479 99916
ಮಾರ್ಗಸೂಚಿ:
ಶೇಷಪಿಳ್ಳರ್ ರಸ್ತೆ, ಕೊಂಗರೆಡ್ಡಿಪಲ್ಲಿ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment