ರಾಮನಗರ ಜಿಲ್ಲೆಯ ಸಾಯಿಬಾಬಾ ಮಂದಿರ - ಶ್ರೀ ಸಾಯಿಬಾಬಾ ಪ್ರೇಮಮಯಿ ಮಂದಿರ, ನಂ.46, ಮಾರುತಿನಗರ, ಭೀಮನಹಳ್ಳಿ, ಈಗಲ್ ಟನ್ ಗಾಲ್ಫ್ ಕ್ಲಬ್ ಪಕ್ಕ, ಬಿಡದಿ ಹೋಬಳಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ - ಕೃಪೆ: ಸಾಯಿ ಅಮೃತಧಾರಾ.ಕಾಂ
ಈ ಮಂದಿರವು ಬೆಂಗಳೂರಿನಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ "ಕಾಡು ಮನೆ" ಬಸ್ ನಿಲ್ದಾಣದ ನಂತರ ಸಿಗುವ ಎಡ ತಿರುವಿನಲ್ಲಿ ಸುಮಾರು 1.5 ಕಿಲೋಮೀಟರ್ ಕ್ರಮಿಸಿದರೆ ಸಿಗುತ್ತದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
ಮಂದಿರದ ವಿಶೇಷತೆಗಳು:
- ಈ ಮಂದಿರದ ಭೂಮಿಪೂಜೆಯನ್ನು ಮಾರ್ಚ್ 2008 ರಲ್ಲಿ ನೆರವೇರಿಸಲಾಯಿತು.
- ಈ ಮಂದಿರದ ಉದ್ಘಾಟನೆಯನ್ನು 9ನೇ ಅಕ್ಟೋಬರ್ 2008 ರ ವಿಜಯದಶಮಿಯಂದು ನೆರವೇರಿಸಲಾಯಿತು.
- ದೇವಾಲಯದ ಹೊರಭಾಗದ ಎಡಭಾಗದಲ್ಲಿ ಒಂದು ಸುಂದರ ಕಾರಂಜಿಯನ್ನು ನಿರ್ಮಿಸಲಾಗಿದ್ದು ಅದರ ಮೇಲ್ಭಾಗದಲ್ಲಿ ನಿಂತಿರುವ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ.
- ಕಾರಂಜಿಯ ಹಿಂಭಾಗದಲ್ಲಿ ಕಪ್ಪು ಶಿಲೆಯನ್ನು ನೆಡಲಾಗಿದ್ದು ಅದರಲ್ಲಿ ಸಾಯಿಬಾಬಾರವರ ವಚನಗಳನ್ನು ಕೆತ್ತಲಾಗಿದೆ.
- ದೇವಾಲಯದ ಹೊರಭಾಗದ ಬಲಭಾಗದಲ್ಲಿ ಆಂಜನೇಯನ ಕಪ್ಪು ಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗಿದೆ.
- ದೇವಾಲಯದ ಮಹಾದ್ವಾರದಲ್ಲಿ ಶಿರಡಿಯಲ್ಲಿ ಇರುವಂತೆ ಅಮೃತಶಿಲೆಯ ನಂದಿ ಮತ್ತು ಆಮೆಯ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.
- ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವು ಮಂದಿರದಲ್ಲಿ ರಾರಾಜಿಸುತ್ತಿದೆ.
- ಶಿರಡಿ ಸಾಯಿಬಾಬಾರವರ ವಿಗ್ರಹದ ಅಡಿಯಲ್ಲಿ ಸುಂದರ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.
- ಸಾಯಿಬಾಬಾರವರ ವಿಗ್ರಹದ ಎಡಭಾಗದಲ್ಲಿ ಗಣೇಶ, ಸುಬ್ರಮಣ್ಯ ದೇವರುಗಳ ಅಮೃತ ಶಿಲೆಯ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಈ ವಿಗ್ರಹಗಳ ಹಿಂಭಾಗದಲ್ಲಿ ಶಿವ ಪಾರ್ವತಿಯ ಪೋಟೋವನ್ನು ಇರಿಸಲಾಗಿದೆ.
- ಸಾಯಿಬಾಬಾರವರ ವಿಗ್ರಹದ ಬಲಭಾಗದಲ್ಲಿ ದತ್ತಾತ್ರೇಯ ಮತ್ತು ಕೃಷ್ಣ ದೇವರುಗಳ ಅಮೃತ ಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ವಿಗ್ರಹಗಳ ಹಿಂಭಾಗದಲ್ಲಿ ಸತ್ಯನಾರಾಯಣ ಸ್ವಾಮಿಯ ಪೋಟೋವನ್ನು ಇರಿಸಲಾಗಿದೆ.
- 1916 ರಲ್ಲಿ ತೆಗೆಯಲಾದ ಸಾಯಿಬಾಬಾರವರ ಚಿತ್ರ, ಕಲ್ಲಿನ ಮೇಲೆ ದ್ವಾರಕಾಮಾಯಿಯಲ್ಲಿ ಕುಳಿತಿರುವ ಸಾಯಿಬಾಬಾರವರ ಚಿತ್ರ, ಶ್ಯಾಮರಾವ್ ಜಯಕರ್ ರವರು ಚಿತ್ರಿಸಿದ ದ್ವಾರಕಾಮಾಯಿ ಸಾಯಿಬಾಬಾ ರವರ ಆಳೆತ್ತರದ ಚಿತ್ರಗಳನ್ನು ಮಂದಿರದ ಒಳಗಡೆ ನೋಡಬಹುದು.
- ಸುಂದರ ಪಂಚಲೋಹದ ಸಾಯಿಬಾಬಾರವರ ವಿಗ್ರಹವಿದ್ದು ಅದನ್ನು ಉತ್ಸವದ ಸಂದರ್ಭಗಳಲ್ಲಿ ಬಳಸಲಾಗುತ್ತದೆ.
- ಪವಿತ್ರ ಧುನಿಯನ್ನು ದೇವಾಲಯದ ಹೊರಭಾಗದಲ್ಲಿ ಸ್ಥಾಪಿಸಲಾಗಿದೆ.
ದೇವಾಲಯದ ಹೊರನೋಟ
ನಿಂತಿರುವ ಸಾಯಿಬಾಬಾರವರ ವಿಗ್ರಹ ಮತ್ತು ಸಾಯಿಬಾಬಾರವರ ವಚನಗಳನ್ನು ಕೆತ್ತಲಾಗಿರುವ ಕಪ್ಪು ಶಿಲೆ
ಆಂಜನೇಯನ ಕಪ್ಪುಶಿಲೆಯ ವಿಗ್ರಹ
ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹ
ಗಣೇಶ, ಸುಬ್ರಮಣ್ಯ ದೇವರ ವಿಗ್ರಹ ಮತ್ತು ಶಿವ ಪಾರ್ವತಿಯ ಚಿತ್ರಪಟ
ದತ್ತಾತ್ರೇಯ, ಕೃಷ್ಣ ದೇವರ ವಿಗ್ರಹಗಳು ಮತ್ತು ಸತ್ಯನಾರಾಯಣ ಸ್ವಾಮಿಯ ಚಿತ್ರಪಟ
ಪವಿತ್ರ ಧುನಿ ಮಾ
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ
ಆರತಿ | ಸಮಯ |
ಕಾಕಡಾ ಆರತಿ | 7:00 AM |
ಮಧ್ಯಾನ್ಹ ಆರತಿ | 12:00 PM |
ಧೂಪಾರತಿ | 6:00 PM |
ಶೇಜಾರತಿ | 8:00 PM |
ವಿಶೇಷ ದಿನಗಳು:
- ತಿಂಗಳ ಪ್ರತಿ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ.
- ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ವಿಶೇಷ ದಿನಗಳಲ್ಲಿ ಮತ್ತು ಉತ್ಸವದ ದಿನಗಳಲ್ಲಿ ಅಭಿಷೇಕವನ್ನು ಮಾಡಲಾಗುತ್ತದೆ.
- ಗುರುಪೂರ್ಣಿಮೆ
- ದೀಪಾವಳಿ
- ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ ಮತ್ತು ದೇವಾಲಯದ ವಾರ್ಷಿಕೋತ್ಸವದ ದಿವಸ)
- ಶ್ರೀರಾಮನವಮಿ
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ವಿಳಾಸ:
ಶ್ರೀ ಸಾಯಿಬಾಬಾ ಪ್ರೇಮಮಯಿ ಮಂದಿರ,
ನಂ.46, ಮಾರುತಿನಗರ, ಭೀಮನಹಳ್ಳಿ,
ಈಗಲ್ ಟನ್ ಗಾಲ್ಫ್ ಕ್ಲಬ್ ಪಕ್ಕ, ಬಿಡದಿ ಹೋಬಳಿ,
ರಾಮನಗರ ತಾಲ್ಲೂಕು ಮತ್ತು ಜಿಲ್ಲೆ.
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಎ.ಕೆ.ಗೋವಿಂದ್ / ಶ್ರೀ.ಜೆ.ಸುರೇಶ / ಶ್ರೀ.ಎ.ಡಿ.ಧ್ರುವಕುಮಾರ್
ದೂರವಾಣಿ ಸಂಖ್ಯೆಗಳು:
98440 32237 / 98440 82877 / 98450 91184
ಈ ಮೇಲ್ ವಿಳಾಸ:
ಮಾರ್ಗಸೂಚಿ:
ಬೆಂಗಳೂರಿನಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ "ಕಾಡು ಮನೆ" ಬಸ್ ನಿಲ್ದಾಣದ ನಂತರ ಸಿಗುವ ಎಡ ತಿರುವಿನಲ್ಲಿ ಸುಮಾರು 1.5 ಕಿಲೋಮೀಟರ್ ಕ್ರಮಿಸಿದರೆ ಸಿಗುತ್ತದೆ. ಈ ಮಂದಿರವು ಈಗಲ್ ಟನ್ ಗಾಲ್ಫ್ ಕ್ಲಬ್ ಪಕ್ಕದಲ್ಲಿ ಇದೆ. ಬೆಂಗಳೂರು ಬಸ್ ನಿಲ್ದಾಣದಿಂದ, ಶಿವಾಜಿನಗರದಿಂದ ಮತ್ತು ಕೆ.ಆರ್.ಮಾರುಕಟ್ಟೆಯಿಂದ ಬಿಡದಿಗೆ ಹೋಗುವ ಎಲ್ಲಾ ಬಸ್ ಗಳಿಗೆ "ಕಾಡುಮನೆ" ಬಸ್ ನಿಲ್ದಾಣದಲ್ಲಿ ನಿಲುಗಡೆ ಇದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment