Monday, November 22, 2010

ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನ ಮತ್ತು ಶ್ರೀ ಶಿರಡಿ ಸಾಯಿಬಾಬಾ ಆಶ್ರಮ ಟ್ರಸ್ಟ್, ಅರಕೆರೆ ಗೇಟ್, ಬನ್ನೇರುಘಟ್ಟ ಮುಖ್ಯ ರಸ್ತೆ, ಐ.ಐ.ಎಂ.ಪೋಸ್ಟ್, ಬೆಂಗಳೂರು-560 076.- ಕೃಪೆ : ಸಾಯಿಅಮೃತಧಾರಾ.ಕಾಂ

ಈ ಮಂದಿರವು ಬೆಂಗಳೂರಿನ ದಕ್ಷಿಣ ಭಾಗದ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಅರಕೆರೆ ಗೇಟ್ ನ ಬಳಿ ಇರುತ್ತದೆ. ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.


ದೇವಾಲಯದ ವಿಶೇಷತೆಗಳು: 

  • ಈ ದೇವಾಲಯದ ಭೂಮಿಪೂಜೆಯನ್ನು 4ನೇ ಅಕ್ಟೋಬರ್ 1980 ರಂದು ನೆರವೇರಿಸಲಾಯಿತು. 
  • ಮೊದಲ ದೇವಾಲಯವಾದ ಶ್ರೀ ಆನೆಗುಡ್ಡೆ ವಿನಾಯಕ ದೇವಾಲಯವನ್ನು 22ನೇ ಮೇ 1985 ರಲ್ಲಿ ಪ್ರಾರಂಭಿಸಲಾಯಿತು. ಎರಡನೇ ಮಂದಿರವಾದ ಶಿರಡಿ ಸಾಯಿಬಾಬಾರವರ ಮಂದಿರವನ್ನು ಮಾರ್ಚ್ 2005 ರಲ್ಲಿ ಶ್ರೀ.ಸಿ.ನಾರಾಯಣ ರೆಡ್ಡಿ ಯವರು ಉದ್ಘಾಟಿಸಿದರು. 
  • ಈ ದೇವಾಲಯದ ಆವರಣದಲ್ಲಿ ಅನೇಕ ದೇವಾಲಯಗಳಿವೆ. ದೇವಾಲಯದ ಆವರಣದ ಮಧ್ಯಭಾಗದಲ್ಲಿ ಶ್ರೀ.ಆನೆಗುಡ್ಡೆ ವಿನಾಯಕ ದೇವರ ಆಲಯವಿದೆ. ಇಲ್ಲಿ ಕಪ್ಪು ಶಿಲೆಯ ಸುಂದರ ಗಣಪತಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.ಗಣೇಶ ದೇವಾಲಯದ ಎದುರುಗಡೆ ಗರುಡಗಂಭವಿದೆ.
  • ಗಣೇಶ ದೇವಾಲಯದ ಬಲಭಾಗಕ್ಕೆ ಎಡಭಾಗಕ್ಕೆ ಶಿರಡಿ ಸಾಯಿಬಾಬಾರವರ ದೇವಾಲಯವಿದ್ದು ಇಲ್ಲಿ ಅಮೃತ ಶಿಲೆಯ ಸಾಯಿಬಾಬಾರವರ ಸುಂದರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 
  • ಗಣೇಶ ದೇವಾಲಯದ ಬಲಭಾಗಕ್ಕೆ ಕಾಶೀ ವಿಶ್ವನಾಥ ಮತ್ತು ವಿಶಾಲಾಕ್ಷಿ ಅಮ್ಮನವರ ಎರಡು ದೇವಾಲಯಗಳಿವೆ. 
  • ಕಾಶಿ ವಿಶ್ವನಾಥ ದೇವಾಲಯದ ಎದುರುಗಡೆ ದತ್ತಾತ್ರೇಯ, ವೀರಾಂಜನೇಯ ದೇವರ ಗುಡಿಗಳಿವೆ. 
  • ವೀರಾಂಜನೇಯ ದೇವಾಲಯದ ಎಡಭಾಗದಲ್ಲಿ ನಾಗ ದೇವರುಗಳು, ನಾಗ ದೇವತೆಗಳು, ಸಪ್ತ ಮಾತೃಕೆಯರು ಮತ್ತು ಸುಬ್ರಹ್ಮಣ್ಯೇಶ್ವರ ದೇವರುಗಳನ್ನು ಅರಳಿ ಮರದ ಕೆಳಗಡೆಯಲ್ಲಿ ಸ್ಥಾಪಿಸಲಾಗಿದೆ. 
  • ಗಣೇಶ ದೇವಾಲಯದ ಮತ್ತು ಸಾಯಿಬಾಬಾ ದೇವಾಲಯದ ಮಧ್ಯಭಾಗದಲ್ಲಿ ನವಗ್ರಹ ದೇವರುಗಳನ್ನು ಸ್ಥಾಪಿಸಲಾಗಿದೆ. 
  • ಕಾಶೀ ವಿಶಾಲಾಕ್ಷಿ ದೇವಾಲಯದ ಹಿಂಭಾಗದಲ್ಲಿ ದಕ್ಷಿಣಾಮುರ್ತಿ ಮತ್ತು ಕಾಲಭೈರವೇಶ್ವರ ದೇವರುಗಳನ್ನು ಒಟ್ಟಿಗೆ ಇರುವಂತೆ ಸ್ಥಾಪಿಸಲಾಗಿದೆ.
  • ಶನೇಶ್ವರ, ನಂದೀಶ ದೇವರ ದೇವಾಲಯವನ್ನು ಕೂಡ ಕಾಶೀ ವಿಶಾಲಾಕ್ಷಿ ದೇವಾಲಯದ ಹಿಂಭಾಗದಲ್ಲಿ ಸ್ಥಾಪಿಸಲಾಗಿದೆ.
  • ದೇವಾಲಯದ ಹಿಂಭಾಗದಲ್ಲಿ ಪವಿತ್ರ ಬನ್ನಿ ಮರವನ್ನು ಸ್ಥಾಪಿಸಲಾಗಿದೆ. 

ದೇವಾಲಯದ ನಾಮಫಲಕ

ದೇವಾಲಯದ ನಾಮಫಲಕ 

ದೇವಾಲಯದ ಹೊರನೋಟ

ದೇವಾಲಯದ ರಾಜಗೋಪುರ

ಆನೆಗುಡ್ಡೆ ವಿನಾಯಕನ ಸುಂದರ ವಿಗ್ರಹ

ಶಿರಡಿ ಸಾಯಿಬಾಬಾರವರ ಸುಂದರ ವಿಗ್ರಹ

ಸಾಯಿಬಾಬಾರವರ ಪವಿತ್ರ ಪಾದುಕೆಗಳು

ಕಾಶೀ ವಿಶ್ವನಾಥ

 
ವಿಶಾಲಾಕ್ಷಿ ಅಮ್ಮನವರು


ದತ್ತಾತ್ರೇಯ ದೇವರು

ವೀರಾಂಜನೇಯ ಸ್ವಾಮಿ

ಸಪ್ತಮಾತೃಕೆಯರು ಮತ್ತು ನಾಗ ದೇವರುಗಳು

ದೇವಾಲಯದ ಕಾರ್ಯಚಟುವಟಿಕೆಗಳು: 

ದೈನಂದಿನ ಕಾರ್ಯಕ್ರಮಗಳು: 

ಆರತಿಯ ಸಮಯ
ಆರತಿ
ಸಮಯ
ಬೆಳಿಗ್ಗೆ
6:45 AM
ಸಂಜೆ
6:00 PM


  1. ಪ್ರತಿ ತಿಂಗಳ ಸಂಕಷ್ಟ ಚತುರ್ಥಿಯ ದಿನ ವಿಶೇಷ ಅಭಿಷೇಕವನ್ನು ಹಮ್ಮಿಕೊಳ್ಳಲಾಗುತ್ತದೆ. ಭಕ್ತರು 101 /- ರುಪಾಯಿಗಳನ್ನು ಕೊಟ್ಟು ಸೇವೆಯಲ್ಲಿ ಪಾಲ್ಗೊಳ್ಳಬಹುದು. 
  2. ಪ್ರತಿ ತಿಂಗಳ ಸಂಕಷ್ಟ ಚತುರ್ಥಿಯ ದಿನ ವಿಶೇಷ ಗಣಪತಿ ಹೋಮವನ್ನು ಹಮ್ಮಿಕೊಳ್ಳಲಾಗುತ್ತದೆ. ಭಕ್ತರು 51 /- ರುಪಾಯಿಗಳನ್ನು ಕೊಟ್ಟು ಸೇವೆಯಲ್ಲಿ ಪಾಲ್ಗೊಳ್ಳಬಹುದು. 
  3. ಪ್ರತಿ ಶನಿವಾರ ರಾಹುಕಾಲದ ವೇಳೆಯಲ್ಲಿ ವೀರಾಂಜನೇಯನಿಗೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಭಕ್ತರು 101/- ರುಪಾಯಿಗಳನ್ನು ಕೊಟ್ಟು ಸೇವೆಯಲ್ಲಿ ಪಾಲ್ಗೊಳ್ಳಬಹುದು. 
  4. ಪ್ರತಿ ಗುರುವಾರ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಪ್ರಸಾದ ವಿತರಣೆಯ ವ್ಯವಸ್ಥೆಯನ್ನು ಮಾಡಲಾಗಿದೆ. 

ವಿಶೇಷ ಉತ್ಸವದ ದಿನಗಳು: 

  1. ಶಿವರಾತ್ರಿ 
  2. ಗಣೇಶ ಚತುರ್ಥಿ 
  3. ವಿಜಯದಶಮಿ 
  4. ಪ್ರತಿ ವರ್ಷದ 22ನೇ ಮೇ ದೇವಾಲಯದ ವಾರ್ಷಿಕೋತ್ಸವ 

 ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ವಿಳಾಸ : 

ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನ ಮತ್ತು ಶ್ರೀ ಶಿರಡಿ ಸಾಯಿಬಾಬಾ ಆಶ್ರಮ ಟ್ರಸ್ಟ್,
ಅರಕೆರೆ ಗೇಟ್, ಬನ್ನೇರುಘಟ್ಟ ಮುಖ್ಯ ರಸ್ತೆ, ಐ.ಐ.ಎಂ.ಪೋಸ್ಟ್, ಬೆಂಗಳೂರು-560 076.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಎಲ್ಲಪ್ಪ / ಶ್ರೀ.ಸುರೇಶ ಭಟ್ / ಶ್ರೀ.ರಾಘವೇಂದ್ರ ಭಟ್


ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 


080-4148 8840 / 95907 59918 / 94487 83415 / 94830 69189  

ಮಾರ್ಗಸೂಚಿ: 

ಬಿ.ಪಿ.ಎಲ್.ಗೇಟ್ ನ ಬಸ್ ನಿಲ್ದಾಣದ ಬಳಿ ಇಳಿದು 2 ನಿಮಿಷ ನಡೆದರೆ ಈ ದೇವಾಲಯ ಸಿಗುತ್ತದೆ.


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment