Thursday, November 25, 2010

ತಮಿಳುನಾಡಿನ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಮಂದಿರ, ಶೋಲಿನ್ಗರ್ ಶ್ರೀ ಶಿರಡಿ ಸಾಯಿ ಸೇವಾ ಸಮಾಜ ಟ್ರಸ್ಟ್ (ನೋಂದಣಿ), ಶ್ರೀ ಸಾಯಿಬಾಬಾ ನಗರ, ಪದ್ಮಪುರಂ, ಶೋಲಿನ್ಗರ್-631 102, ತಮಿಳುನಾಡು - ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು: 

  • ಈ ದೇವಾಲಯದ ಭೂಮಿಪೂಜೆಯನ್ನು 10ನೇ ಜೂನ್ 2007 ರಂದು ನೆರವೇರಿಸಲಾಯಿತು. 
  • ಈ ದೇವಾಲಯವನ್ನು 21ನೇ ಜೂನ್ 2010 ರಂದು ಶಿರಡಿ ಸಾಯಿ ಟ್ರಸ್ಟ್, ಚೆನ್ನೈ ಅಧ್ಯಕ್ಷ ಶ್ರೀ.ಕೆ.ವಿ.ರಮಣಿಯವರು ಉದ್ಘಾಟಿಸಿದರು. 
  • ಸಾಯಿಬಾಬಾರವರ ಅಮೃತಶಿಲೆಯ ಸುಂದರ ವಿಗ್ರಹವನ್ನು ಮಂದಿರದಲ್ಲಿ ಕಾಣಬಹುದು. ಸಾಯಿಬಾಬಾನ ವಿಗ್ರಹದ ಎದುರುಗಡೆಯಲ್ಲಿ ನಂದಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಬಲಭಾಗದಲ್ಲಿ ಅಮೃತಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. 
  • ಗುರುಸ್ಥಾನವನ್ನು ಸಾಯಿಬಾಬಾ ವಿಗ್ರಹದ ಎಡಭಾಗದಲ್ಲಿ ಸ್ಥಾಪಿಸಲಾಗಿದೆ. 
  • ಪವಿತ್ರ ಧುನಿಯನ್ನು ಸಾಯಿಬಾಬಾ ವಿಗ್ರಹದ ಬಲಭಾಗದಲ್ಲಿ ಸ್ಥಾಪಿಸಲಾಗಿದೆ. ಧುನಿಯ ಎದುರುಗಡೆಯಲ್ಲಿ ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಚಿತ್ರಪಟವನ್ನು ತೂಗುಹಾಕಲಾಗಿದೆ. 
  • ದೇವಾಲಯದ ಹೊರ ಆವರಣದಲ್ಲಿ ಸತ್ಯನಾರಾಯಣ ಸ್ವಾಮಿಯ ಸುಂದರ ಚಿತ್ರಪಟವನ್ನು ತೂಗುಹಾಕಲಾಗಿದೆ. 
  • ದೇವಾಲಯದ ಕೆಳಭಾಗದಲ್ಲಿರುವ ನೆಲಮಾಳಿಗೆಯಲ್ಲಿ ಧ್ಯಾನಮಂದಿರವನ್ನು ನಿರ್ಮಿಸಲಾಗಿದೆ. ಈ ಧ್ಯಾನಮಂದಿರದಲ್ಲಿ ಸಾಯಿಬಾಬಾರವರ ಚಿತ್ರಪಟ, ಅಕ್ಕಲಕೋಟೆ ಶ್ರೀ.ಸ್ವಾಮಿ ಸಮರ್ಥರವರ ಚಿತ್ರಪಟ, ನಂದಿಯ ಅಮೃತಶಿಲೆಯ ವಿಗ್ರಹ, ಆಮೆಯ ಅಮೃತಶಿಲೆಯ ವಿಗ್ರಹಗಳನ್ನು ಸಾಯಿಭಕ್ತರು ನೋಡಬಹುದು. 
 ದೇವಾಲಯದ ಹೊರನೋಟ 

 ಸಾಯಿಬಾಬಾ ಮತ್ತು ನಂದಿಯ ವಿಗ್ರಹ 

ಧುನಿಯ ಎದುರುಗಡೆ ಇರುವ ದ್ವಾರಕಮಾಯಿ ಸಾಯಿಬಾಬಾರವರ ಚಿತ್ರಪಟ 

ಗುರುಸ್ಥಾನ 

ನೆಲಮಾಳಿಗೆಯಲ್ಲಿರುವ ಸಾಯಿಬಾಬಾರವರ ಧ್ಯಾನಮಂದಿರ 

ದೇವಾಲಯದ ಹೊರ ಆವರಣದಲ್ಲಿರುವ ಸತ್ಯನಾರಾಯಣ ಸ್ವಾಮಿಯ ಚಿತ್ರಪಟ 


ಪವಿತ್ರ ಧುನಿ ಮಾ 

ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 


ಆರತಿಯ ಸಮಯ

ಆರತಿ
ಸಮಯ
ಕಾಕಡ ಆರತಿ
6:00 AM
ಮಧ್ಯಾನ್ಹ ಆರತಿ
12:00 PM
ಧೂಪಾರತಿ
6:00 PM
ಶೇಜಾರತಿ
8:00 PM


ಪ್ರತಿನಿತ್ಯ ಸಾಯಿಬಾಬಾರವರಿಗೆ ಬೆಳಗಿನ ಜಾವ 8 ಘಂಟೆಯಿಂದ 8:30 ರ ವರೆಗೆ ಅಭಿಷೇಕ ಕಾರ್ಯಕ್ರಮವಿರುತ್ತದೆ. ಆಸಕ್ತಿಯುಳ್ಳ ಸಾಯಿ ಭಕ್ತರು 750/- ರುಪಾಯಿಗಳನ್ನು ನೀಡಿ ಅಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. 

ಪ್ರತಿ ಉತ್ಸವದ ದಿನಗಳಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸರಿ ಸುಮಾರು 1000 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. 

ವಿಶೇಷ ಉತ್ಸವದ ದಿನಗಳು: 

  1. ಶ್ರೀರಾಮನವಮಿ 
  2. ಗುರುಪೂರ್ಣಿಮಾ 
  3. ವಿಜಯದಶಮಿ (ಸಾಯಿಬಾಬಾರವರ ಮಹಾಸಮಾಧಿ ದಿವಸ) 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ವಿಳಾಸ: 

ಶ್ರೀ ಶಿರಡಿ ಸಾಯಿ ಮಂದಿರ
ಶೋಲಿನ್ಗರ್ ಶ್ರೀ ಶಿರಡಿ ಸಾಯಿ ಸೇವಾ ಸಮಾಜ ಟ್ರಸ್ಟ್ (ನೋಂದಣಿ),
ಶ್ರೀ ಸಾಯಿಬಾಬಾ ನಗರ, ಪದ್ಮಪುರಂ, ಶೋಲಿನ್ಗರ್-631 102, ತಮಿಳುನಾಡು.

ಸಂಪರ್ಕಿಸಬೇಕಾದ ವ್ಯಕ್ತಿ: 

ಶ್ರೀ.ಎಸ್.ವಾಸುದೇವ ನಾಯ್ಡು

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 


094429 74172 / 093805 87218 / 093815 40079

ಮಾರ್ಗಸೂಚಿ: 

ಶೋಲಿನ್ಗರ್ - ವಾಲಾಜ ರಸ್ತೆ, ಪರಪೇನ್ ಕೋಲಂ ಹತ್ತಿರ

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment