ಬೆಂಗಳೂರಿನ ಸಾಯಿಬಾಬಾ ಮಂದಿರ - ಓಂ ಶ್ರೀ.ಸಾಯಿ ರಾಮ್ ಟೆಂಪಲ್ ಟ್ರಸ್ಟ್ ( ರಿ ), 4ನೇ "ಟಿ" ಬ್ಲಾಕ್ ಬಡಾವಣೆ, ಜಯನಗರ, ಬೆಂಗಳೂರು-560 041 - ಕೃಪೆ : ಸಾಯಿಅಮೃತಧಾರಾ.ಕಾಂ
ಈ ಮಂದಿರವು ಬೆಂಗಳೂರು ದಕ್ಷಿಣದ ಪ್ರತಿಷ್ಟಿತ ಬಡಾವಣೆಯಾದ ಜಯನಗರದ 4ನೇ "ಟಿ" ಬ್ಲಾಕ್ ನಲ್ಲಿದೆ. ಇದರ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
ಮಂದಿರದ ವಿಶೇಷತೆಗಳು
- ಈ ಮಂದಿರವು 10ನೇ ಮಾರ್ಚ್ 2008 ರಂದು ಯಡನೀರು ಮಠದ ಶ್ರೀ.ಶ್ರೀ.ಕೇಶವಾನಂದ ಭಾರತಿ ಸ್ವಾಮೀಜಿಯವರಿಂದ ಉದ್ಘಾಟನೆಯಾಯಿತು.
- ಈ ಮಂದಿರದ ಒಳಗಡೆ ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹ, ಗಣಪತಿ, ರಾಮ ಪರಿವಾರ, ನವಗ್ರಹ ದೇವರುಗಳ ಕಪ್ಪು ಶಿಲೆಯ ವಿಗ್ರಹಗಳಿವೆ.
- ದೇವಾಲಯದ ಹೊರಗಡೆ ಎಡಭಾಗದಲ್ಲಿ ಸಾಯಿಬಾಬಾರವರ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ.
- ದೇವಾಲಯದ ಹೊರಗಡೆ ಬಲಭಾಗದಲ್ಲಿ ತುಳಸಿ ಬೃಂದಾವನ ಸ್ಥಾಪಿಸಲಾಗಿದೆ.
- ದೇವಾಲಯದ ಹಿಂಭಾಗದಲ್ಲಿ ಪವಿತ್ರ ಅರಳಿ ಮರದ ಕೆಳಗೆ ನಾಗ ದೇವತೆಗಳ ವಿಗ್ರಹವನ್ನು ಸ್ಥಾಪಿಸಲಾಗಿದೆ.
- ಪವಿತ್ರ ಬೇವಿನ ಮರವು ಸಾಯಿಬಾಬಾ ಮಂದಿರದ ಹಿಂಭಾಗದಲ್ಲಿ ಅರಳಿ ಮರದ ಪಕ್ಕದಲ್ಲಿ ಸ್ಥಾಪಿಸಲಾಗಿದೆ.
- ಗಣಪತಿ, ಸಾಯಿಬಾಬಾ ಮತ್ತು ಶ್ರೀರಾಮ ಪರಿವಾರದ ಪಂಚಲೋಹದ ವಿಗ್ರಹಗಳು ದೇವಾಲಯದಲ್ಲಿ ಇದ್ದು ಇವುಗಳನ್ನು ವಿಶೇಷ ಉತ್ಸವದ ದಿನಗಳಲ್ಲಿ ಉತ್ಸವ ಮುರ್ತಿಗಳಂತೆ ಬಳಸಲಾಗುತ್ತದೆ.
ದೇವಾಲಯದ ಹೊರನೋಟ
ಸಾಯಿಬಾಬಾರವರ ವಿಗ್ರಹ
ಗಣಪತಿಯ ವಿಗ್ರಹ
ಶ್ರೀರಾಮ ಪರಿವಾರದ ವಿಗ್ರಹಗಳು
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ
ಆರತಿ
|
ಗುರುವಾರದ ಸಮಯ |
ಬೆಳಿಗ್ಗೆ
|
8:30 am
|
ಮಧ್ಯಾನ್ಹ
|
12:00 pm
|
ರಾತ್ರಿ |
8:00 pm
|
- ಗುರುವಾರ ಬಿಟ್ಟು ಉಳಿದ ಎಲ್ಲಾ ದಿನಗಳಲ್ಲಿ ಆರತಿಯನ್ನು ಬೆಳಗ್ಗೆ 8:30 ಕ್ಕೆ ಹಾಗೂ ರಾತ್ರಿ 8 ಘಂಟೆಗೆ ಮಾಡಲಾಗುತ್ತದೆ.
- ಶಿರಡಿ ಸಾಯಿಬಾಬಾ, ಗಣೇಶ ಮತ್ತು ಶ್ರೀರಾಮ ದೇವರುಗಳಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 2/- ರುಪಾಯಿಗಳು.
- ಪಂಚಾಮೃತ ಅಭಿಷೇಕವನ್ನು ಪ್ರತಿನಿತ್ಯ ಮಾಡಲಾಗುತ್ತದೆ. ಸೇವಾ ಶುಲ್ಕ 101 /- ರುಪಾಯಿಗಳು.
- ರುದ್ರಾಭಿಷೇಕವನ್ನು ಪ್ರತಿನಿತ್ಯ ಮಾಡಲಾಗುತ್ತದೆ. ಸೇವಾ ಶುಲ್ಕ 100 /- ರುಪಾಯಿಗಳು.
- ನವಗ್ರಹ ದೇವರುಗಳಿಗೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾಶುಲ್ಕ 101 /- ರುಪಾಯಿಗಳು.
- ಸಹಸ್ರನಾಮವನ್ನು ಪ್ರತಿನಿತ್ಯ ಮಾಡಲಾಗುತ್ತದೆ. ಸೇವಾ ಶುಲ್ಕ 25/- ರುಪಾಯಿಗಳು.
ವಿಶೇಷ ದಿನಗಳು:
- ಪ್ರತಿ ತಿಂಗಳ ಹುಣ್ಣಿಮೆಯ ದಿನ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುವುದು. ಸೇವಾ ಶುಲ್ಕ 101/- ರುಪಾಯಿಗಳು.
- ಸಂಕಷ್ಟ ಚತುರ್ಥಿಯನ್ನು ಪ್ರತಿ ತಿಂಗಳು ಮಾಡಲಾಗುವುದು. ಸೇವಾ ಶುಲ್ಕ 51/- ರುಪಾಯಿಗಳು.
ವಿಶೇಷ ಉತ್ಸವದ ದಿನಗಳು
- ಪ್ರತಿ ವರ್ಷದ 10ನೇ ಮಾರ್ಚ್ ದೇವಾಲಯದ ವಾರ್ಷಿಕೋತ್ಸವ.
- ಗುರು ಪೂರ್ಣಿಮೆ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ವಿಳಾಸ :
ಓಂ ಶ್ರೀ.ಸಾಯಿ ರಾಮ್ ಟೆಂಪಲ್ ಟ್ರಸ್ಟ್ ( ರಿ )
ನಂ.1/1, 18ನೇ ಮುಖ್ಯ ರಸ್ತೆ, ಜಿ.ಎನ್.ಆರ್ ಕಲ್ಯಾಣಮಂಟಪದ ಪಕ್ಕ,
4ನೇ "ಟಿ" ಬ್ಲಾಕ್ ಬಡಾವಣೆ, ಜಯನಗರ, ಬೆಂಗಳೂರು-560 041.
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಎಸ್.ಎನ್.ಮೋಹನ್ ಕುಮಾರ್ / ಶ್ರೀ.ಎಸ್.ಎನ್.ಶೇಖರ್
ದೂರವಾಣಿ ಸಂಖ್ಯೆಗಳು:
94483
85596 / 98451 90322
ಮಾರ್ಗ ಸೂಚಿ:
ಜಯನಗರ 9ನೇ ಬಡಾವಣೆಯ ಕೊನೆಯ ಬಸ್ ನಿಲ್ದಾಣದ ಹಿಂಭಾಗ 2 ನಿಮಿಷ ನಡೆದರೆ ಈ ಮಂದಿರ ಸಿಗುತ್ತದೆ. ಈ ಮಂದಿರವು ಬಡಾವಣೆಯ ಪ್ರತಿಷ್ಟಿತ ಜಿ.ಎನ್.ಆರ್. ಕಲ್ಯಾಣ ಮಂಟಪ ಮತ್ತು ಕೃಷ್ಣ ಕಲ್ಯಾಣ ಮಂಟಪದ ಪಕ್ಕದಲ್ಲಿ ಇದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment