Sunday, January 17, 2010

ಸಾಯಿ ಮಹಾ ಭಕ್ತ - ದಾದಾ ಸಾಹೇಬ್ ಖಾಪರ್ಡೆ (ಜಿ.ಎಸ್. ಖಾಪರ್ಡೆ) - ಆಧಾರ - ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ


 ದಾದಾ ಸಾಹೇಬ್ ಖಾಪರ್ಡೆಯವರು ಮಹಾರಾಷ್ಟ್ರದ ಅಮರಾವತಿಯಲ್ಲಿ ಸುಪ್ರಸಿದ್ದ ನ್ಯಾಯಾಧೀಶರಾಗಿದ್ದರು. ಇವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಒಳ್ಳೆಯ ಭಾಷಣಕಾರರೆಂದು ಹೆಸರು ಪಡೆದಿದ್ದರು. ಇವರು ಮಹಾರಾಷ್ಟ್ರ ಸಂಸತ್ತಿನ ಸದಸ್ಯರೂ ಆಗಿದ್ದರು.  ಇವರು  ಡಿಸೆಂಬರ್  ೧೯೧೦ ರಲ್ಲಿ ಪ್ರಥಮ ಬಾರಿಗೆ ಶಿರಡಿಗೆ ಬಂದರು. ಸಾಯಿಬಾಬಾರವರು ಇವರನ್ನು ಪ್ರಾಪಂಚಿಕ ವಿಷಯಗಳಿಂದ ದೂರವಿರಿಸಿ ಪಾರಮಾರ್ಥಿಕ ಹಾಗೂ ಆಧ್ಯಾತ್ಮ ವಿಷಯಗಳ ಬಗ್ಗೆ ಆಸಕ್ತಿ ಬರುವಂತೆ ಮಾಡಿದರು. ಇವರು ಶಿರಡಿಯಲ್ಲಿ ಸಾಯಿಬಾಬಾರವರಿದ್ದಾಗ ನಡೆಯುತ್ತಿದ್ದ ಎಲ್ಲ ಘಟನೆಗಳನ್ನು ಒಂದು ಡೈರಿಯಲ್ಲಿ ಬರೆದಿಟ್ಟುಕೊಳ್ಳುವ  ಹವ್ಯಾಸ ಹೊಂದಿದ್ದರು.

ದಾದಾ ಸಾಹೇಬ್ ಖಾಪರ್ಡೆಯವರು ತಮ್ಮ ಡೈರಿಯಲ್ಲಿ ಒಂದು ಕಡೆ  "ಸಾಯಿಬಾಬಾರವರು ಸದಾ ಹಸನ್ಮುಖರಾಗಿ ಇರುತ್ತಿದ್ದರು. ಸಾಯಿಯವರ ಆ ಒಂದು ನಗುವಿಗಾಗಿ ಭಕ್ತರು ತಮ್ಮ ಜೀವಮಾನವೆಲ್ಲ ಬೇಕಾದರೆ ಕಾಯಬಹುದಾಗಿತ್ತು" ಎಂದು ಬರೆಯುತ್ತಾರೆ.

ದಾದಾ ಸಾಹೇಬ್ ಖಾಪರ್ಡೆಯವರು ಸಾಯಿ ಭಕ್ತರ ಮನದಲ್ಲಿ ಸದಾ ಉಳಿಯುತ್ತಾರೆ. ಏಕೆಂದರೆ, ಇವರು ಶಿರಡಿಯಲ್ಲಿ ಸಾಯಿಬಾಬಾರವರಿದ್ದಾಗ ನಡೆಯುತ್ತಿದ್ದ ಎಲ್ಲ ಘಟನೆಗಳನ್ನು ಒಂದು ಡೈರಿಯಲ್ಲಿ ಬರೆದು ಸಾಯಿ ಭಕ್ತರಿಗೆಲ್ಲ ಬಹಳ ಉಪಕಾರ ಮಾಡಿದ್ದಾರೆ.

No comments:

Post a Comment