ಸಾಯಿ ಮಹಾ ಭಕ್ತ - ಹರಿ ಸೀತಾರಾಮ ದೀಕ್ಷಿತ್ ( ಕಾಕಾ ಸಾಹೇಬ್ ದೀಕ್ಷಿತ್) - ಆಧಾರ - ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ
ಹರಿ ಸೀತಾರಾಮ ದೀಕ್ಷಿತ್ ರವರು ಸುಪ್ರಸಿದ್ದ ವಕೀಲರಾಗಿ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದರು. ೧೯೦೯ ರಲ್ಲಿ ಅವರ ಸ್ನೇಹಿತ ನಾನಾ ಸಾಹೇಬ್ ಚಂದೊರ್ಕರ್ ರವರು ಸಾಯಿಬಾಬಾರವರ ಬಗ್ಗೆ ತಿಳಿಯಪಡಿಸಿ ಹರಿ ಸೀತಾರಾಮ ದೀಕ್ಷಿತ್ ಶಿರಡಿಗೆ ಬರುವಂತೆ ಮಾಡಿದರು. ಲಂಡನ್ನಿನ್ನಲ್ಲಿ ಕಾನೂನು ವ್ಯಾಸಂಗ ಮಾಡುತ್ತಿರಬೇಕಾದರೆ ರೈಲು ಹತ್ತುವಾಗ ಕಾಲು ಜಾರಿ ಕಾಲಿಗೆ ಪಟ್ಟು ಬಿದ್ದು ಚಿಕಿತ್ಸೆ ಮಾಡಿದರೂ ಸರಿ ಹೋಗಲಿಲ್ಲ. ಆಗ ನಾನಾ ಸಾಹೇಬ್ ಚಂದೊರ್ಕರ್ ಇವರನ್ನು ಶಿರಡಿಗೆ ಬಂದು ಸಾಯಿಬಾಬಾರವರನ್ನು ಕಂಡರೆ ಕಾಲು ನೋವು ಗುಣವಾಗುತ್ತದೆ ಎಂದು ಹೇಳಿದರು. ಸಾಯಿಬಾಬಾರವರನ್ನು ಕಂಡ ಕೂಡಲೇ ಅವರ ಮನಸ್ಸಿನ ಚಂಚಲತೆಯೆಲ್ಲ ದೂರವಾಯಿತು. ತಮ್ಮ ಕಾಲು ನೋವಿನ ನೆನಪೇ ಬರಲಿಲ್ಲ. ಸಾಯಿಬಾಬಾರವರನ್ನು ಕಂಡ ಕೂಡಲೇ ಅವರ ಮನದಲ್ಲಿ ಒಂದು ರೀತಿಯಲ್ಲಿ ವಿಶೇಷವಾದ ಭಾವನೆ ಉಂಟಾಯಿತು. ಕೂಡಲೇ ಸ್ವಲ್ಪವೂ ತಡ ಮಾಡದೆ ಸಾಯಿಬಾಬಾರವರ ಅಪ್ಪಣೆ ಪಡೆದು ಒಂದು ವಾಡಾ ನಿರ್ಮಾಣ ಮಾಡಲು ಆರಂಭಿಸಿ ಅದನ್ನು ೧೯೧೧ ರಲ್ಲಿ ಪೂರ್ಣಗೊಳಿಸಿದರು. ಅದನ್ನೇ, ದೀಕ್ಷಿತ್ ವಾಡ ಎಂದು ಕರೆಯುತ್ತಾರೆ. ಇದನ್ನು ಶಿರಡಿಗೆ ಬರುವ ಭಕ್ತರು ವಿಶ್ರಾಂತಿ ಪಡೆಯಲು ಬಳಸಲಾಗುತ್ತಿದೆ. ದೀಕ್ಷಿತ್ ವಾಡಾದ ಮೊದಲನೇ ಮಹಡಿಯಲ್ಲಿ ಒಂದು ಸಣ್ಣ ಕೋಣೆಯಿದೆ. ಆ ಸಣ್ಣ ಕೋಣೆಯಲ್ಲಿ ಹರಿ ಸೀತಾರಾಮ ದೀಕ್ಷಿತ್ ರವರು ತಂಗಿದ್ದರು.
No comments:
Post a Comment