ಸಾಯಿ ಭಜನ ಗಾಯಕಿಯರು - ಪ್ರಿಯಾ ಸಹೋದರಿಯರು - ಕೃಪೆ - ಸಾಯಿ ಅಮೃತಧಾರಾ.ಕಾಂ
ಪ್ರಿಯಾ ಸಹೋದರಿಯರು ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹಾಗೂ ಅತಿ ಜನಪ್ರಿಯತೆಯನ್ನು ಪಡೆದಿರುವ ಸಂಗೀತಗಾರ್ತಿಯರು. ಇವರ ನಿಜ ನಾಮಧೇಯ ಶ್ರೀಮತಿ. ಷಣ್ಮುಖಪ್ರಿಯ ಹಾಗೂ ಶ್ರೀಮತಿ. ಹರಿಪ್ರಿಯ ಎಂದಿದ್ದರೂ ಕೂಡ ಪ್ರಿಯಾ ಸಹೋದರಿಯರೆಂದೇ ಎಲ್ಲೆಡೆ ಚಿರಪರಿಚಿತರಾಗಿದ್ದರೆ. ಇವರು ತಮ್ಮ ಶಾಸ್ತ್ರೀಯ ಸಂಗೀತವನ್ನು ತಮ್ಮ ತಂದೆಯವರಾದ ವಿದ್ವಾನ್ ಶ್ರೀ. ವಿ.ವಿ.ಸುಬ್ಬರಾಂ ಅವರಿಂದ ತಮ್ಮ ೫ನೇ ವಯಸ್ಸಿನಿಂದಲೇ ಕಲಿಯಲು ಆರಂಭಿಸಿದರು. ನಂತರದಲ್ಲಿ "ಕಲೈಮಾಮಣಿ" ಎಂದೇ ಖ್ಯಾತರಾದ ಶ್ರೀಮತಿ.ರಾಧ ಹಾಗೂ ಶ್ರೀಮತಿ.ಜಯಲಕ್ಷ್ಮಿಯವರಿಂದ ಸಂಗೀತದಲ್ಲಿ ಉನ್ನತ ಶಿಕ್ಷಣ ಪಡೆದರು.
ಪ್ರಿಯಾ ಸಹೋದರಿಯರು ಭಾರತದಲ್ಲಷ್ಟೇ ಅಲ್ಲದೆ ಅಮೇರಿಕಾ, ಕೆನಡಾ ಮುಂತಾದ ದೇಶಗಳಲ್ಲೂ ಕೂಡ ಸರಿ ಸುಮಾರು ೨೦೦೦ ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೆ, ಹೈದರಾಬಾದ್ ಉತ್ಸವ, ದ್ವಂದ್ವ ಉತ್ಸವಗಳು, ಶ್ರೀ.ಸತ್ಯ ಸಾಯಿ ಬಾಬಾರವರ ೬೯ನೇ ಹಾಗೂ ೭೦ನೇ ಜನ್ಮದಿನದ ಸಂಧರ್ಭಗಳು, ಅಂತರಾಷ್ಟ್ರೀಯ ತಮಿಳು ಸಮಾವೇಶ ಇನ್ನು ಮುಂತಾದ ಕಡೆಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ. ಇಷ್ಟೇ ಅಲ್ಲದೆ, ಪ್ರಿಯಾ ಸಹೋದರಿಯರು ಹಿಂದಿನ ರಾಷ್ಟ್ರಪತಿಗಳಾದ ಶ್ರೀಯುತ. ಆರ್.ವೆಂಕಟರಾಮನ್ ರ ಸಮ್ಮುಖದಲ್ಲಿ ರಾಷ್ಟ್ರಪತಿ ಭವನದಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ.
ಪ್ರಿಯಾ ಸಹೋದರಿಯರು ಪೂಜ್ಯ ಶ್ರೀ.ನರಸಿಂಹ ಸ್ವಾಮಿಗಳು ರಚಿಸಿರುವ "ಶ್ರೀ ಶಿರಡಿ ಸಾಯಿಬಾಬ ಸಹಸ್ರನಾಮ" ಕ್ಕೆ ತಮ್ಮ ಸುಮಧುರ ದ್ವನಿಯನ್ನು ನೀಡಿದ್ದಾರೆ.
ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:
ವಿಳಾಸ : ಅಪಾರ್ಟ್ ಮೆಂಟ್ ೪, ರೆಸಿಡೆನ್ಸಿ ಶಾಸ್ತ್ರ ನಿಕೇತನ, ೫೨, ೩ನೇ ಮುಖ್ಯ ರಸ್ತೆ, ಆರ್.ಎ.ಪುರಂ, ಚೆನ್ನೈ-೬೦೦ ೦೨೮.
ದೂರವಾಣಿ : ೦೦೯೧-೪೪-೨೪೯೪೨೯೫೮/೫೨೧೮೦೨೩೦ ಮೊಬೈಲ್ : ೯೧-೯೮೪೦೨ ೮೧೯೪೫
ಇ ಮೇಲ್ : mailto:priyasisters1@hotmail.com
ವೆಬ್ ಸೈಟ್ : http://priyasisters.com/
ಆಲ್ಬಮ್ : ಪೂಜ್ಯ ಶ್ರೀ.ನರಸಿಂಹ ಸ್ವಾಮಿಗಳು ರಚಿಸಿರುವ "ಶ್ರೀ ಶಿರಡಿ ಸಾಯಿಬಾಬ ಸಹಸ್ರನಾಮ"
ಇವರ ಭಜನೆಯನ್ನು youtube ನಲ್ಲಿ ವೀಕ್ಷಿಸಲು ಈ ಕೆಳಕಂಡ ಜೋಡಣೆಯನ್ನು ಕ್ಲಿಕ್ಕಿಸಿ:
http://www.youtube.com/watch?v=AGbA5MRdYtM
ಆಲ್ಬಮ್ : ಪೂಜ್ಯ ಶ್ರೀ.ನರಸಿಂಹ ಸ್ವಾಮಿಗಳು ರಚಿಸಿರುವ "ಶ್ರೀ ಶಿರಡಿ ಸಾಯಿಬಾಬ ಸಹಸ್ರನಾಮ"
ಇವರ ಭಜನೆಯನ್ನು youtube ನಲ್ಲಿ ವೀಕ್ಷಿಸಲು ಈ ಕೆಳಕಂಡ ಜೋಡಣೆಯನ್ನು ಕ್ಲಿಕ್ಕಿಸಿ:
http://www.youtube.com/watch?v=AGbA5MRdYtM
No comments:
Post a Comment