Friday, June 11, 2010

ಸಾಯಿ ಭಜನ ಗಾಯಕರು - ಶ್ರೀಮತಿ ಲತಾ ಮಂಗೇಶ್ಕರ್ - ಕೃಪೆ - ಸಾಯಿ ಅಮೃತಧಾರಾ.ಕಾಂ 

ಶ್ರೀಮತಿ ಲತಾ ಮಂಗೇಶ್ಕರ್ ರವರು ೨೮ನೆ ಸೆಪ್ಟೆಂಬರ್ ೧೯೨೯ ರಂದು ಜನಿಸಿದರು. ಇವರು ಭಾರತದ ಗಾನ ಕೋಗಿಲೆ ಎಂದೇ ಪ್ರಸಿದ್ದರಾಗಿದ್ದರೆ. ಇವರು ಹಿಂದಿ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಬಹಳ ಒಳ್ಳೆಯ ಹೆಸರು ಮಾಡಿದ್ದಾರೆ. ಇವರು ೧೯೪೨ ರಿಂದ ತಮ್ಮ ಹಿನ್ನೆಲೆ ಗಾಯನವನ್ನು ಆರಂಭಿಸಿದ್ದು ಆರು ದಶಕಕ್ಕೂ ಹೆಚ್ಚು ಕಾಲದಿಂದ ನಿರಂತರ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಇವರು ೧೦೦೦ ಕ್ಕೂ ಹೆಚ್ಚು ಹಿಂದಿ ಚಿತ್ರಗಳಿಗೆ ಹಾಡಿರುವುದೇ ಆಲ್ಲದೇ ೨೦ ಪ್ರಾದೇಶಿಕ ಭಾಷೆಗಳಲ್ಲೂ ಕೂಡ ಹಾಡಿರುತ್ತಾರೆ. ಇವರು ಪ್ರಸಿದ್ದ ಹಿಂದಿ ಗಾಯಕಿ ಆಶಾ ಭೋಂಸ್ಲೆ, ಹೃದಯನಾಥ್ ಮಂಗೇಶ್ಕರ್ , ಉಷಾ ಮಂಗೇಶ್ಕರ್  ಮತ್ತು ಮೀನಾ ಮಂಗೇಶ್ಕರ್ ಯವರ ಸಹೋದರಿಯಾಗಿರುತ್ತಾರೆ.  ಇವರು ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಶ್ರೀಮತಿ ಲತಾ ಮಂಗೇಶ್ಕರ್ ರವರು ೧೯೭೪ ರಿಂದ ೧೯೯೧ ರವರೆಗೆ ಅತಿ ಹೆಚ್ಚು ಚಲನಚಿತ್ರ ಗೀತೆಗಳನ್ನು ಹಾಡಿ ಗಿನ್ನಿಸ್ ದಾಖಲೆಯನ್ನು ಮಾಡಿರುತ್ತಾರೆ. ಈವರೆಗೂ ಇವರು ೩೦,೦೦೦ ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.



ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:

ವಿಳಾಸ : ೧೦೧, ಪ್ರಭುಕುಂಜ್ , ಪೆದ್ದರ್ ರಸ್ತೆ , ಮುಂಬೈ-೪೦೦ ೦೦೫.

ಇಮೇಲ್ : nehadesai@hotmail.com


ವೆಬ್ ಸೈಟ್ : http://members.rediff.com/lata/index.html


ಆಲ್ಬಮ್ : ಮೇರೆ ಸಾಯಿ, ಓಂ ಸಾಯಿ ರಾಮ್ (೨ ಆಡಿಯೋ ಸಿಡಿಗಳು), ಶ್ರೀ ಸಾಯಿ ಕೀ ಆರತಿಯಾನ್, ಸಾಯಿ ಸುಮಿರನ್, ಶ್ರೀ ಸಾಯಿ ಲೀಲಾ ಮತ್ತು ಇನ್ನು ಹಲವಾರು ಆಲ್ಬಮ್ ಗಳು.
 
ಶ್ರೀಮತಿ ಲತಾ ಮಂಗೇಶ್ಕರ್ ರವರ ಸಾಯಿ ಭಜನೆಯ ವೀಡಿಯೊ ವನ್ನು ನೋಡಲು ಈ ಕೆಳಕಂಡ ಜೋಡಣೆಯನ್ನು ಕ್ಲಿಕ್ಕಿಸಿ:
 
http://www.youtube.com/watch?v=FovVOzsEMrg

No comments:

Post a Comment