Thursday, June 24, 2010

ಸಾಯಿ ಭಜನ ಗಾಯಕ - ಶಂಕರ್ ಶಾನಭಾಗ್  - ಕೃಪೆ - ಸಾಯಿ ಅಮೃತಧಾರಾ.ಕಾಂ 


ಶ್ರೀ ಶಂಕರ್ ಶಾನಭಾಗ್ ರವರು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕಳಸ ಗ್ರಾಮದಲ್ಲಿ ೨೭ ನೇ ಏಪ್ರಿಲ್ ೧೯೬೩ ರಂದು ಜನಿಸಿದರು. ಇವರು ಚಿಕ್ಕಂದಿನಿಂದಲೇ ಆಧ್ಯಾತ್ಮಿಕ ಪ್ರವೃತ್ತಿಯನ್ನು ಹೊಂದಿದ್ದರು. ಇದಕ್ಕೆ ಇವರ ತಂದೆ ತಾಯಿಗಳೇ ಪ್ರೇರೇಪಣೆ. ಇವರು ಚಿಕ್ಕವರಿದ್ದಾಗ ಇವರ ತಾಯಿ ಸುಮಧುರವಾಗಿ ದಾಸರ ಪದಗಳನ್ನು ಹಾಡುತ್ತಿದ್ದರು. ಅದು ಇವರ ಮೇಲೆ ಬಹಳ ಪ್ರಭಾವವನ್ನು ಬೀರಿತು. ಇವರನ್ನು ಭಕ್ತಿ ಗೀತೆಗಳ ಪ್ರಪಂಚಕ್ಕೆ ಮೊದಲು ಪರಿಚಯ ಮಾಡಿಸಿದವರು ಶ್ರೀಯುತ.ಬಿ. ರಾಧಾಕೃಷ್ಣ ಬಾಳಿಗ. ಕಾಲಾನಂತರದಲ್ಲಿ ಇವರು ಪಂಡಿತ್ ಮಹಾಬಲೇಶ್ವರ್ ಭಾಗವತ್, ಗುರು ಮಾಧವ್ ಭಟ್, ಪಂಡಿತ್ ರಾಮರಾವ್ ನಾಯಕ್, ಪಂಡಿತ್ ರಾಜಭಾವ್ ಸೊಂಟಕ್ಕೆ ಯವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು. ಇವರ ನಿರಂತರ ಅಭ್ಯಾಸದ ಫಲವೇ ಇಂದು ನಾವು ಕಾಣುವ ಪ್ರಖ್ಯಾತ ಹಿಂದೂಸ್ತಾನಿ ಸಂಗೀತಗಾರ ಶ್ರೀ. ಶಂಕರ್ ಶಾನಭಾಗ್. ಇವರು ಹಿಂದೂಸ್ತಾನಿ ಸಂಗೀತ ಪ್ರಕಾರಗಳಾದ ಆಗ್ರಾ ಹಾಗೂ ಗ್ವಾಲಿಯರ್ ಘರಾನಾ ಎರಡರಲ್ಲೂ ಪರಿಣತಿಯನ್ನು ಹೊಂದಿದ್ದಾರೆ. ಇಷ್ಟಾದರೂ ಇವರ ಹಿಂದುಸ್ತಾನಿ ಸಂಗೀತ ಕಲಿಯುವಿಕೆಯ ದಾಹ ಇನ್ನು ಆರಿಲ್ಲ. ಈಗ ಇವರು ಪಂಡಿತ್ ಪರಮೇಶ್ವರ್ ಹೆಗ್ಡೆಯವರ ಬಳಿ ತಮ್ಮ ಕಲಿಯುವಿಕೆಯನ್ನು ಮುಂದುವರಿಸಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪಡೆದಿರುವ ಇವರು ಪ್ರಥಮ ಆದ್ಯತೆಯನ್ನು ಸಂಗೀತಕ್ಕೆ ನೀಡಿರುವುದು ವಿಶೇಷ. ಇವರ ಸಾಧನೆಗೆ ಪ್ರಮುಖ ಕಾರಣರು ಶ್ರೀಯುತ.ಬಿ.ಕೆ.ಚಂದ್ರಶೇಖರ್ ಮತ್ತು ಶ್ರೀಮತಿ. ಡಾ.ಮಾಯಾ ರಾವ್. ಶಂಕರ್ ಶಾನಭಾಗ ರವರು ಇವರಿಗೆ ಅತ್ಯಂತ ಋಣಿಯಾಗಿದ್ದಾರೆ. ಇವರು ಕೆನಡಾ, ಯುರೋಪ್, ಕೊಲ್ಲಿ ರಾಷ್ಟ್ರಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಚಲನಚಿತ್ರಗಳಿಗೆ, ಧಾರಾವಾಹಿಗಳಿಗೆ, ಸುಗಮ ಸಂಗೀತ ಹಾಗೂ ಭಕ್ತಿ ಗೀತೆಗಳ ಆಲ್ಬಮ್ ಗಳಿಗೆ ಹಾಡಿದ್ದಾರೆ. ಹಲವಾರು ನಾಟಕ, ರಂಗಭೂಮಿಯ ಬ್ಯಾಲೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನ್ಯಾಷನಲ್ ಗೇಮ್ಸ್, ಏರೋ ಇಂಡಿಯಾ ಶೋ ಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇವರು ಸಂಗೀತ ಕ್ಷೇತ್ರದ ಹೆಸರಾಂತ ದಿಗ್ಗಜರೊಂದಿಗೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ದಾಸ ಸಾಹಿತ್ಯ, ವಚನ ಸಾಹಿತ್ಯ, ಶಿರಡಿ ಸಾಯಿ ಭಜನೆಗಳು, ಭಕ್ತಿ ಗೀತೆಗಳ ಕಾರ್ಯಕ್ರಮಗಳನ್ನು ಪ್ರಪಂಚದಾದ್ಯಂತ ನೀಡುತ್ತ ಬಂದಿದ್ದಾರೆ. ಇವರ ಸಂಗೀತದ ಓಲವು ಇವರನ್ನು ಒಂದು ಗುರುಕುಲ ನಡೆಸುವಂತೆ ಪ್ರೇರೇಪಣೆ ನೀಡಿದೆ ಮತ್ತು ಅದಕ್ಕಾಗಿ ಸಕಲ ರೀತಿಯ ಸಿದ್ದತೆಗಳು ಭರದಿಂದ ಸಾಗಿದೆ.

ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:

ವಿಳಾಸ : ನಂ.೧೧೫೨, ೧ ನೇ ಮಹಡಿ, ೧೪ ನೇ ಮುಖ್ಯ ರಸ್ತೆ, ೨ ನೇ ಹಂತ, ಪಶ್ಚಿಮ ಕಾರ್ಡ್ ರಸ್ತೆ, ಬೆಂಗಳೂರು-೫೬೦ ೦೮೬.

ದೂರವಾಣಿ : ೯೯೦೦೧ ೪೦೯೯೯  / ೯೪೮೧೪ ೮೪೬೪೨

ಇ ಮೇಲ್ : singershankar@gmail.com

ವೆಬ್ ಸೈಟ್ : http://shankarshanbhogue.com/default.aspx
                
                http://www.myspace.com/shankarshanbhogue 

No comments:

Post a Comment