ಸಾಯಿ ಭಜನ ಗಾಯಕಿ - ಶ್ರೀಮತಿ.ಆರ್.ಸತ್ಯಲಕ್ಷ್ಮಿ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀಮತಿ.ಆರ್.ಸತ್ಯಲಕ್ಷ್ಮಿಯವರು 6ನೇ ಡಿಸೆಂಬರ್ 1949 ರಂದು ಕರ್ನಾಟಕದ ಹಾಸನ ಜಿಲ್ಲೆಯ ಅರಕಲಗೂಡು ಗ್ರಾಮದಲ್ಲಿ ಜನಿಸಿದರು. ಇವರ ತಂದೆಯವರು ದಿವಂಗತ ಶ್ರೀ.ಹೆಚ್.ಎಂ.ಗೋಪಾಲಕೃಷ್ಣ ಶೆಟ್ಟಿ ಮತ್ತು ತಾಯಿಯವರು ಶ್ರೀಮತಿ.ಗೌರಮ್ಮ.
ಶ್ರೀಮತಿ.ಆರ್.ಸತ್ಯಲಕ್ಷ್ಮಿಯವರು 29ನೇ ಜೂನ್ 2003 ರಿಂದ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಲು ಪ್ರಾರಂಭ ಮಾಡಿದ್ದು ಬೆಂಗಳೂರು, ಚಿಕ್ಕಬಳ್ಳಾಪುರ, ಹಿಂದೂಪುರದ ಅನೇಕ ಸಾಯಿಬಾಬಾ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ತಮ್ಮ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದುವರೆವಿಗೂ ಇವರು ಸರಿ ಸುಮಾರು 600 ಕ್ಕೂ ಹೆಚ್ಚು ಸಾಯಿಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಶ್ರೀಮತಿ.ಆರ್.ಸತ್ಯಲಕ್ಷ್ಮಿಯವರು ಬೆಂಗಳೂರಿನ ಬಳಿಯ ಮಾಗಡಿಯ ಶ್ರೀ.ರಾಘವೇಂದ್ರ ಸ್ವಾಮಿ ದೇವಾಲಯ ಮತ್ತು ಶ್ರೀ.ಶನಿ ಮಹಾತ್ಮ ದೇವಾಲಯಗಳಲ್ಲಿ ನೀಡಿದ ಭಜನೆಯ ಕಾರ್ಯಕ್ರಮಗಳಿಗಾಗಿ ಪುರಸ್ಕಾರವನ್ನು ಪಡೆದಿರುತ್ತಾರೆ.
ಅಷ್ಟೇ ಅಲ್ಲದೆ, ಶ್ರೀಮತಿ.ಆರ್.ಸತ್ಯಲಕ್ಷ್ಮಿಯವರು ಇತ್ತೀಚಿಗೆ 2011 ರಲ್ಲಿ "ಸರ್ವಂ ಸಾಯಿ ಮಂದಿರಂ ಟ್ರಸ್ಟ್" ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಈ ಸಂಸ್ಥೆಯ ಮುಖಾಂತರ ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಯಲ್ಲಿ ಭವ್ಯ ಸಾಯಿ ಮಂದಿರವನ್ನು ಕಟ್ಟಿಸಿ ಅದರ ಮುಖಾಂತರ ಸಾಯಿ ಪ್ರಚಾರವನ್ನು ಇನ್ನಷ್ಟು ಹೆಚ್ಚಾಗಿ ಮಾಡಬೇಕೆಂಬ ಹೆಬ್ಬಯಕೆಯನ್ನು ಹೊಂದಿದ್ದಾರೆ.
ಪ್ರಸ್ತುತ ಶ್ರೀಮತಿ.ಆರ್.ಸತ್ಯಲಕ್ಷ್ಮಿಯವರು ತಮ್ಮ ಪತಿ ಶ್ರೀ.ಎಲ್.ರಾಜರತ್ನಂ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ತಮ್ಮ ಹೊಸ ಗುಡ್ಡದಹಳ್ಳಿಯ ನಿವಾಸದಲ್ಲಿ ವಾಸ ಮಾಡುತ್ತಿದ್ದಾರೆ.
ಶ್ರೀಮತಿ.ಆರ್.ಸತ್ಯಲಕ್ಷ್ಮಿಯವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.
ವಿಳಾಸ:
ನಂ.2/2, ಮೊದಲನೇ ಮಹಡಿ,
ಶ್ರೇಯಶ್ರೀ ಬಹುಮಹಡಿ ಸಂಕೀರ್ಣ, ನೆಹರು ರಸ್ತೆ,
ಹೊಸ ಗುಡ್ಡದಹಳ್ಳಿ, ಬೆಂಗಳೂರು-560 026, ಕರ್ನಾಟಕ.
ದೂರವಾಣಿ:
ಶ್ರೇಯಶ್ರೀ ಬಹುಮಹಡಿ ಸಂಕೀರ್ಣ, ನೆಹರು ರಸ್ತೆ,
ಹೊಸ ಗುಡ್ಡದಹಳ್ಳಿ, ಬೆಂಗಳೂರು-560 026, ಕರ್ನಾಟಕ.
ದೂರವಾಣಿ:
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment